ಅಮೆರಿಕಾದಲ್ಲಿ ಬಿಡುಗಡೆಯಾಯ್ತು ಮೇಡ್ ಇನ್ ಇಂಡಿಯಾ ಕೆಟಿಎಂ 200 ಡ್ಯೂಕ್ ಬೈಕ್
ಕೆಟಿಎಂ ಕಂಪನಿಯು ತನ್ನ ಜನಪ್ರಿಯ 2020ರ ಕೆಟಿಎಂ 200 ಡ್ಯೂಕ್ ಬೈಕ್ ಅನ್ನು ಅಮೆರಿಕಾದಲ್ಲಿ ಬಿಡುಗಡೆಗೊಳಿಸಿದೆ. ಅಮೆರಿಕಾದಲ್ಲಿ ಬಿಡುಗಡೆಗೊಂಡ 2020ರ ಕೆಟಿಎಂ 200 ಬೈಕ್ ಮೇಡ್ ಇನ್ ಇಂಡಿಯಾ ಮಾದರಿಯಾಗಿದೆ.

ಅಮೆರಿಕಾದಲ್ಲಿ ಬಿಡುಗಡೆಗೊಂಡ 2020ರ ಕೆಟಿಎಂ 200 ಡ್ಯೂಕ್ ಬೈಕಿನ ಬೆಲೆಯು 3,999 ಡಾಲರ್ ಆಗಿದೆ. ಇದನ್ನು ಭಾರತದ ಕರೆನ್ಸಿಗೆ ಅನುವಾದಿಸಿದಾಗ ರೂ.2.98 ಲಕ್ಷಗಳಾಗಿದೆ. ಚಕನ್‌ನಲ್ಲಿರುವ ಬಜಾಜ್ ಸ್ಥಾವರದಿಂದ ರಫ್ತು ಮಾಡುವ 2020ರ ಕೆಟಿಎಂ 200 ಡ್ಯೂಕ್ ಭಾರತೀಯ ಮಾದರಿಗಿಂತ ಸ್ವಲ್ಪ ಭಿನ್ನವಾಗಿದೆ. ಇದು ಸೂಪರ್‌ಮೊಟೊ ಮೋಡ್‌ನೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಹೊಂದಿದೆ.

ಈ ಫೀಚರ್ ಪ್ರಸ್ತುತ ಭಾರತದಲ್ಲಿ ಕೆಟಿಎಂ ಸರಣಿಯ 250 ಡ್ಯೂಕ್ ಮತ್ತು 390 ಡ್ಯೂಕ್ ಬೈಕುಗಳಲ್ಲಿ ಮಾತ್ರ ಲಭ್ಯವಿದೆ. ಈ ಫೀಚರ್ ಗಳನ್ನು ಹೊರತುಪಡಿಸಿ ಉಳಿದ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ.
MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಕಂಪನಿಯು 200 ಡ್ಯೂಕ್ ಬೈಕಿನ ಉತ್ತರಾಧಿಕಾರಿ ಡ್ಯೂಕ್ 250 ಎಂದು ತಿಳಿಸಿತ್ತು. ಆದರೆ ಆಸ್ಟ್ರೀಯನ್ ಬ್ರ್ಯಾಂಡ್ ಹಳೆಯ ಡ್ಯೂಕ್ 250 ಅದರ ಮೂಲ ವಿನ್ಯಾಸದಲ್ಲಿ ಇರಿಸಲು ಬಯಸಿದ್ದರು. ಆದರೆ ಕೆಟಿಎಂ 200 ಡ್ಯೂಕ್ ಮಾದರಿಯು ಅಪಾರ ಜನಪ್ರಿಯತೆಯನ್ನು ಗಳಿಸಿತ್ತು. ಇದರಿಂದ ಕೆಟಿಎಂ 200 ಡ್ಯೂಕ್ ಬೈಕನ್ನು ಹೊಸ ಅಪ್ ಡೇಟ್ ಗಳೊಂದಿಗೆ ಬಿಡುಗಡೆಗೊಳಿಸಿತು.

ಹೊಸ ಡ್ಯೂಕ್ 200 ಬೈಕ್ ಮುಂಭಾಗ ಟ್ರೈಗಲರ್ ಹೆಡ್‍ಲ್ಯಾಂಪ್ ಅನ್ನು ಅಳವಡಿಸಲಾಗಿದೆ. ಇನ್ನು ಫುಲ್ ಎಲ್‍ಇಡಿ ಯುನಿಟ್ ಆಕರ್ಷಕವಾಗಿದೆ. ಕೆಟಿಎಂ ಕಂಪನಿಯ ಜನಪ್ರಿಯ ಡ್ಯೂಕ್ ಬೈಕಿನ ಸರಣಿಯಲ್ಲಿರುವ ಇತರ ಬೈಕ್‍ಗಳಂತೆ ಈ ಬೈಕಿನ ಫ್ಯೂಯಲ್ ಟ್ಯಾಂಕ್ ದೊಡ್ಡದಾಗಿದೆ.
MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

2020ರ ಕೆಟಿಎಂ ಡ್ಯೂಕ್ 200 ಬೈಕಿನಲ್ಲಿ ದೊಡ್ಡ ಸ್ಪ್ಲಿಟ್ ಸೀಟ್ ಮತ್ತು ಹೊಸ ಎಲ್‍ಇಡಿ ಟೇಲ್‍ಲೈಟ್‍ನೊಂದಿಗೆ ಹೊಸ ರೇರ್ ಸಬ್ ಫ್ರೇಮ್ ಅನ್ನು ಹೊಂದಿದೆ. ಈ ಬೈಕ್ ಹಳೆಯ ಡಿಜಟಲ್ ಕ್ಲಸ್ಟರ್, ಹ್ಯಾಂಡಲ್‍ಬಾರ್ ಮತ್ತು ಸ್ವಿಚ್‍ಗೇರ್ ಅನ್ನು ಹೊಂದಿದೆ.

ಹೊಸ ಕೆಟಿಎಂ ಡ್ಯೂಕ್ 200 ಬೈಕ್ 17 ಇಂಚಿನ ಅಲಾಯ್ ವ್ಹೀಲ್ ಅನ್ನು ಹೊಂದಿದೆ. ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾರೆ, 300 ಎಂಎಂ ಫ್ರಂಟ್ ಡಿಸ್ಕ್ ಮತ್ತು 230 ಎಂಎಂ ರೇರ್ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಇದರೊಂದಿಗೆ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಹೊಂದಿದೆ.
MOST READ: ಹೊಸ ಡುಕಾಟಿ ಪಾನಿಗಲೆ ವಿ2 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಈ ಬೈಕಿನಲ್ಲಿ ಸಸ್ಪೆಂಕ್ಷನ್ ಗಾಗಿ, ಮುಂಭಾಗದಲ್ಲಿ ಡಬ್ಲ್ಯೂಪಿ ಇನ್ವಟೆರ್ಡ್ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಅನ್ನು ಅಳವಡಿಸಿದೆ. ಹೊಸ ಕೆಟಿಎಂ ಡ್ಯೂಕ್ 200 ಬೈಕಿನಲ್ಲಿ 199 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಿದೆ

ಈ ಎಂಜಿನ್ 24.6 ಬಿಹೆಚ್‌ಪಿ ಪವರ್ ಮತ್ತು 19.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕೆಟಿಎಂ 200 ಡ್ಯೂಕ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ.


Click it and Unblock the Notifications








