ಮುಂದಿನ ವರ್ಷದ ಡಕಾರ್ ರ‍್ಯಾಲಿಯಲ್ಲಿ ಸ್ಪರ್ಧಿಸಲಿದ್ದಾರೆ ಈ ಭಾರತೀಯ
ಸೌದಿ ಅರೇಬಿಯಾದಲ್ಲಿ ನಡೆಯುವ ಡಕಾರ್ ಬೈಕ್ ರ‍್ಯಾಲಿ ವಿಶ್ವದ ಅತ್ಯಂತ ಕಠಿಣ ಬೈಕ್ ರ‍್ಯಾಲಿಗಳಲ್ಲಿ ಒಂದಾಗಿದೆ. ಈ ಬೈಕ್ ರ‍್ಯಾಲಿಯಲ್ಲಿ ಬೈಕ್ ಸವಾರರು ಪರ್ವತ, ಕಲ್ಲು ಹಾಗೂ ಮರಳು ಹಾದಿಗಳ ಮೂಲಕ ಸಾಗಬೇಕಾಗುತ್ತದೆ. ಈ ರ‍್ಯಾಲಿಯಲ್ಲಿ ಭಾಗವಹಿಸುವವರು ತಮ್ಮ ಸುರಕ್ಷತೆಯ ಜೊತೆಗೆ ಬೈಕಿನ ಸುರಕ್ಷತೆಯನ್ನು ಸಹ ನೋಡಿಕೊಳ್ಳಬೇಕಾಗುತ್ತದೆ.

2021ರ ಡಕಾರ್ ರ‍್ಯಾಲಿ ಜನವರಿ 3ರಿಂದ 15ರವರೆಗೆ ನಡೆಯಲಿದೆ. 2020ರ ಡಕಾರ್ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಭಾರತೀಯ ಬೈಕರ್ ಆಶಿಶ್ ರೌರನ್ ಮುಂದಿನ ವರ್ಷ ನಡೆಯಲಿರುವ ಡಕಾರ್ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಆಶಿಶ್ ಅನೇಕ ಅಂತರರಾಷ್ಟ್ರೀಯ ಬೈಕ್ ರ‍್ಯಾಲಿಗಳಲ್ಲಿ ಭಾಗವಹಿಸಿದ್ದಾರೆ. ಅವರು 2019ರಲ್ಲಿ ಬಜಾಜ್ ವಿಶ್ವ ಚಾಂಪಿಯನ್‌ಶಿಪ್ ಹಾಗೂ ಆಫ್ರಿಕಾ ಇಕೊ ರೇಸ್ ನಲ್ಲಿ ಭಾಗವಹಿಸಿದ್ದರು.

ಕರೋನಾ ವೈರಸ್ ಕಾರಣದಿಂದಾಗಿ ಈ ವರ್ಷದ ಆಫ್ರಿಕಾ ಇಕೊ ರೇಸ್ ಅನ್ನು ರದ್ದುಪಡಿಸಲಾಗಿದೆ. ಆಶಿಶ್ ಮುಂದಿನ ವರ್ಷ ನಡೆಯಲಿರುವ ಡಕಾರ್ ರ‍್ಯಾಲಿಯಲ್ಲಿ ಭಾಗವಹಿಸಲಿದ್ದು, ಮಲ್ಲೆ ಮೋಟೋ ಕ್ಲಾಸ್ ವಿಭಾಗದಲ್ಲಿ ಸೆಣೆಸಲಿದ್ದಾರೆ. ಈ ವಿಭಾಗದಲ್ಲಿ ಭಾಗವಹಿಸುವವರು ತಮ್ಮ ತಂಡದಿಂದ ಯಾವುದೇ ಸಹಾಯವನ್ನು ಪಡೆಯುವುದಿಲ್ಲ.
MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಆದರೆ ಮೆಡಿಕಲ್ ಕಿಟ್, ಇನ್ಸ್ ಟ್ರೂಮೆಂಟ್ ಕಿಟ್, ನೈಟ್ ಕ್ಯಾಂಪ್ ಕಿಟ್ ಹಾಗೂ ಬೈಕಿಗೆ ಸಂಬಂಧಿಸಿದ ಕೆಲವು ಉಪಕರಣ ಹಾಗೂ ಟಯರ್‌ಗಳನ್ನುನೀಡಲಾಗುತ್ತದೆ. ಸ್ಪರ್ಧಿಯು ಬೈಕ್‌ನ ಟೂಲ್ ಕಿಟ್, ಸಲಕರಣೆ ಹಾಗೂ ಬಿಡಿಭಾಗಗಳನ್ನು ಸ್ವಂತವಾಗಿ ಒಯ್ಯಬೇಕಾಗುತ್ತದೆ. ಅವುಗಳನ್ನು ಬೈಕಿನಲ್ಲಿರುವ ಬಾಕ್ಸ್ ನಲ್ಲಿ ಇಡಲಾಗುತ್ತದೆ.

ಸ್ಪರ್ಧೆಯಲ್ಲಿ ಬೈಕ್ ಕೆಟ್ಟು ಹೋದರೆ, ಸ್ಪರ್ಧಿಯೇ ಬೈಕ್ ಸರಿಪಡಿಸಬೇಕಾಗುತ್ತದೆ. ಈ ಕಾರಣಕ್ಕೆ ಆತನು ತನ್ನ ಬೈಕಿನ ಬಗೆ ಸಂಪೂರ್ಣ ಮಾಹಿತಿಯನ್ನು ಹೊಂದಿರಬೇಕು. ಇದರಿಂದ ಬೈಕು ದೋಷಯುಕ್ತವಾಗಿದ್ದರೆ ಅದನ್ನು ಯಾವುದೇ ಸಮಯದಲ್ಲಿ ಸರಿಪಡಿಸಬಹುದು.
MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಆಶಿಶ್ ರೌರನ್, ಈ ರ‍್ಯಾಲಿಯಲ್ಲಿ ಕೆಟಿಎಂ ಬೈಕ್ ಚಾಲನೆ ಮಾಡಲಿದ್ದಾರೆ. ತಾವು ಅನೇಕ ಬೈಕುಗಳನ್ನು ಚಾಲನೆ ಮಾಡಿದ್ದರೂ ಆ ಬೈಕುಗಳು ನಂಬಿಕಾರ್ಹವಾಗಿರಲಿಲ್ಲವೆಂದು ಹೇಳಿದ್ದಾರೆ. 2020ರ ಡಕಾರ್ ರ‍್ಯಾಲಿಯಲ್ಲಿ ಅವರು ಕೆಟಿಎಂ 450 ರ‍್ಯಾಲಿ ರೆಪ್ಲಿಕಾ ಬೈಕ್ ಚಾಲನೆ ಮಾಡಿದ ನಂತರ ಆ ಬೈಕಿನ ಮೇಲೆ ವಿಶ್ವಾಸ ಮೂಡಿದೆ.

ಮುಂದಿನ ಡಕಾರ್ ರ‍್ಯಾಲಿಯಲ್ಲೂ ಕೆಟಿಎಂ 450 ರ‍್ಯಾಲಿ ರೆಪ್ಲಿಕಾ ಚಾಲನೆ ಮಾಡುವುದಾಗಿ ಅವರು ಹೇಳಿದ್ದಾರೆ. ಈ ಬೈಕ್ ಅನ್ನು ರ‍್ಯಾಲಿಗಳಿಗಾಗಿಯೇ ವಿಶೇಷವಾಗಿ ಸೀಮಿತ ಸಂಖ್ಯೆಯಲ್ಲಿ ತಯಾರಿಸಲಾಗಿದೆ. 2021ರ ಡಕಾರ್ ರ‍್ಯಾಲಿ ಸೌದಿ ಅರೇಬಿಯಾದ ರೆಡ್ ಸೀ (ಕೆಂಪು ಸಮುದ್ರ) ಬಂದರಿನಲ್ಲಿ ಆರಂಭವಾಗಲಿದ್ದು 12 ಹಂತಗಳ ನಂತರ ಜೆಡ್ಡಾದಲ್ಲಿ ಕೊನೆಗೊಳ್ಳಲಿದೆ.


Click it and Unblock the Notifications








