ಹೊಸ ಫೀಚರ್ ಹೊಂದಲಿದೆ ಇಂಡಿಯನ್ ಮೋಟಾರ್‍ಸೈಕಲ್
ಅಮೇರಿಕಾ ಮೂಲದ ಇಂಡಿಯನ್ ಮೋಟಾರ್‍ಸೈಕಲ್ ಕಂಪನಿಯು ತನ್ನ ಸರಣಿಯಲ್ಲಿರುವ 7 ಇಂಚಿನ ರೈಡ್ ಕಮಾಂಡ್ ಸಿಸ್ಟಂ ಹೊಂದಿದ ಎಲ್ಲಾ ಬೈಕುಗಳಲ್ಲಿ ಆ್ಯಪಲ್ ಕಾರ್‌ಪ್ಲೇ ಫೀಚರ್ ಅನ್ನು ಅಳವಡಿಸಲಿದೆ. ಇಂಡಿಯನ್ ರೋಡ್ ಮಾಸ್ಟರ್ ಮತ್ತು ಇಂಡಿಯನ್ ಚಾಲೆಂಜರ್‌ನಂತಹ ಬೈಕುಗಳು ಈ ಫೀಚರು ಅನ್ನು ಪಡೆದುಕೊಳ್ಳಲಿದೆ.

ಆ್ಯಪಲ್ ಕಾರ್‌ಪ್ಲೇ ರೈಡರ್‌ನ ಐಫೋನ್ ಅನ್ನು ಬೈಕ್‌ನ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಸಂಯೋಜಿಸುತ್ತದೆ. ಸಿರಿ ಮತ್ತು ಇತರ ಐಫೋನ್ ಅಪ್ಲಿಕೇಶನ್‌ಗಳನ್ನು ಬಳಸಲು ಕೂದ ಇದು ಅನುವು ಮಾಡಿಕೊಡುತ್ತದೆ. ಸಿಸ್ಟಂ ಐಫೋನ್‌ನೊಂದಿಗೆ ಕನೆಕ್ಟ್ ಆಗಿರುವಾಗ ಮಾತ್ರ ಈ ಫೀಚರುಗಳನ್ನು ಬಳಸಲು ಸಾಧ್ಯ. ಪ್ರಪಂಚದಾದ್ಯಂತವಿರುವ ಇಂಡಿಯನ್ ಮೋಟಾರ್‍ಸೈಕಲ್ ಸರಣಿಯಲ್ಲಿರುವ 7 ಇಂಚಿನ ರೈಡ್ ಕಮಾಂಡ್ ಸಿಸ್ಟಂ ಹೊಂದಿದ ಎಲ್ಲಾ ಬೈಕುಗಳಲ್ಲಿ ಈ ಫೀಚರ್ ಲಭ್ಯವಿರಲಿದೆ.

ಇದರಲ್ಲಿ ಸುಧಾರಿತ ನ್ಯಾವಿಗೇಷನ್, ಸುಧಾರಿತ ಬೂಟ್ ಟೈಮ್, ಆಡಿಯೋ ಮ್ಯೂಟಿಂಗ್ ಮತ್ತು ಹಲವು ಕಂಟ್ರೋಲಿಂಗ್ ಫೀಚರುಗಳನ್ನು ಹೊಂದಿರಲಿದೆ ಎಂದು ವರದಿಯಾಗಿದೆ. ಈ ಫೀಚರುಗಳು ರೈಡರ್ ಗಳಿಗೆ ಹೆಚ್ಚು ಸಹಕಾರಿಯಾಗಿರಲಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಇದರೊಂದಿಗೆ ಇಂಡಿಯನ್ ಮೋಟಾರ್‍ಸೈಕಲ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿರುವ ಪ್ರೀಮಿಯಂ ಬೈಕ್ ಸೆಗ್‍ಮೆಂಟಿನಲ್ಲಿ ತನ್ನದೇ ಆದ ಛಾಪನ್ನು ಮೂಡಿಸಲು ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಾಲೆಂಜರ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಇಂಡಿಯನ್ ಚಾಲೆಂಜರ್ ಬೈಕನ್ನು ಮೊದಲ ಬಾರಿಗೆ 2019 ರಲ್ಲಿ ಅನಾವರಣಗೊಳಿಸಲಾಯಿತು. ಈ ಇಂಡಿಯನ್ ಚಾಲೆಂಜರ್ ಬೈಕ್ ಈಗಾಗಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟದಲ್ಲಿದೆ. ಭಾರತದಲ್ಲಿ ಈ ವರ್ಷದ ಆರಂಭದಲ್ಲಿ ಈ ಬೈಕಿನ ಬುಕ್ಕಿಂಗ್ ಅನ್ನು ಆರಂಭಿಸಿದ್ದರು.
MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಈ ಹೊಸ ಇಂಡಿಯನ್ ಚಾಲೆಂಜರ್ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಈ ವರ್ಷದ ಅಂತ್ಯದಲ್ಲಿ ಬಿಡುಗಡೆಯಾಗಲಿದೆ. ಇಂಡಿಯನ್ ಕಂಪನಿಯ ಚಾಲೆಂಜರ್ ಬೈಕ್ ಅನ್ನು ವಿಭಿನ್ನವಾಗಿ ವಿನ್ಯಾಸಗೊಳಿಸಲಾಗಿದೆ. ಈ ಬೈಕ್ ದೊಡ್ಡ ಗಾತ್ರದ ಹೆಡ್‍ಲೈಟ್ ಹಾಗೂ ವಿಂಡ್‍ಸ್ಕ್ರೀನ್ ಸಿಸ್ಟಂಗಳನ್ನು ಹೊಂದಿದೆ.

ಈ ಬೈಕ್ ಎಲ್‍ಇಡಿ ಹೆಡ್‍ಲೈಟ್ ಹಾಗೂ 7.0 ಇಂಚಿನ ಟಚ್‍ಸ್ಕ್ರೀನ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹೊಂದಿದ್ದು, ಬ್ಲೂಟೂತ್ ಮೂಲಕ ಕನೆಕ್ಟ್ ಮಾಡಲಾಗುತ್ತದೆ. ಈ ಬೈಕ್ ಮೂರು ರೀತಿಯ ಡ್ರೈವಿಂಗ್ ಮೋಡ್, ಕ್ರೂಸ್ ಕಂಟ್ರೋಲ್ ಸಿಸ್ಟಂ, ಕೀಲೆಸ್ ಇಗ್ನಿಷನ್ ಸಿಸ್ಟಂ, ಅಡ್ಜಸ್ಟಬಲ್ ಫೀಚರ್ಸ್ ಹೊಂದಿರುವ ವಿಂಡ್‍ಸ್ಕ್ರೀನ್‍ಗಳನ್ನು ಹೊಂದಿರಲಿದೆ.
MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಇಂಡಿಯನ್ ಚಾಲೆಂಜರ್ ಬೈಕಿನಲ್ಲಿ 1,769 ಸಿಸಿಯ ಲಿಕ್ವಿಡ್ ಕೂಲ್ ವಿ-ಟ್ವಿನ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 122 ಬಿಹೆಚ್‍ಪಿ ಪವರ್ ಹಾಗೂ 178 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ಇಂಡಿಯನ್ ಚಾಲೆಂಜರ್ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಈ ವರ್ಷದ ಅಂತ್ಯದಲ್ಲಿ ಬಿಡುಗಡೆಯಾಗಲಿದೆ. ಈ ಇಂಡಿಯನ್ ಚಾಲೆಂಜರ್ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹಾರ್ಲೆ ಡೇವಿಡ್‍ಸನ್ ಕಂಪನಿಯ ಸಿವಿಒ ಬೈಕುಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications