ಪೆರಾಕ್ ಬೈಕ್ ಖರೀದಿ ಮೇಲೆ ಭರ್ಜರಿ ಆಫರ್ ಘೋಷಿಸಿದ ಜಾವಾ
ಜಾವಾ ಮೋಟಾರ್‌ಸೈಕಲ್ ಸಂಸ್ಥೆಯು ಪೆರಾಕ್ ಬೈಕ್ ಬಿಡುಗಡೆ ಮಾಡಿದ್ದು, ಏಪ್ರಿಲ್ 1ರಿಂದ ವಿತರಣೆಗೆ ಸಿದ್ದವಾಗಿರುವ ಹೊಸ ಬೈಕಿನ ಖರೀದಿಗಾಗಿ ಇದೀಗ ಬುಕ್ಕಿಂಗ್ ಶುರು ಮಾಡಲಾಗಿದೆ. ಈ ನಡುವೆ ಜಾವಾ ಸಂಸ್ಥೆಯು ಪೆರಾಕ್ ಖರೀದಿಗಾಗಿ ಕೆಲವು ವಿಶೇಷ ಆಫರ್‌ಗಳನ್ನು ಪರಿಚಯಿಸಿದೆ.

ಹೌದು, ಪೆರಾಕ್ ಬೈಕ್ ಖರೀದಿಯ ಮೇಲೆ ಕೆಲವು ವಿಶೇಷ ಆಫರ್ ನೀಡಲು ಮುಂದಾಗಿರುವ ಜಾವಾ ಸಂಸ್ಥೆಯು ಜಿರೋ ಡೌನ್ ಪೇಮೆಂಟ್ ಜೊತೆಗೆ ಅತಿ ಕಡಿಮೆ ಬಡ್ಡಿದರದಲ್ಲಿ ರೂ.6,666(ಪ್ರತಿ ತಿಂಗಳು) ಇಎಂಐ ಮತ್ತು ರೂ.5 ಸಾವಿರ ಎಕ್ಸ್‌ಚೆಂಜ್ ಆಫರ್ ನೀಡುವುದಾಗಿ ಹೇಳಿಕೊಂಡಿದೆ. ಜಾವಾ ಅಧಿಕೃತ ಫೇಸ್‌ಬುಕ್ ಖಾತೆಯಲ್ಲೇ ಈ ಮಾಹಿತಿಯನ್ನು ಹಂಚಿಕೊಳ್ಳಲಾಗಿದ್ದು, ಕ್ಲಾಸಿಕ್ ಬೈಕ್ ಖರೀದಿದಾರರಿಗೆ ಇದು ಸಾಕಷ್ಟು ಅನುಕೂಲಕರವಾಗಲಿದೆ.

ಇನ್ನು ಕ್ಲಾಸಿಕ್ ಬೈಕ್ ಪ್ರಿಯರಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಜಾವಾ ಪೆರಾಕ್ ಬೈಕ್ ಮಾದರಿಯು ಅಂತಿಮವಾಗಿ ಗ್ರಾಹಕರ ಕೈಸೇರಲು ಸಿದ್ದವಾಗಿದ್ದು, ರೂ.10 ಸಾವಿರ ಮುಂಗಡದೊಂದಿಗೆ ಆನ್‌ಲೈನ್ ಬುಕ್ಕಿಂಗ್ ಮಾಡಬಹುದಾಗಿದೆ.

ಹೊಸ ಪೆರಾಕ್ ಬೈಕ್ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1,95,500 ಬೆಲೆ ಪಡೆದುಕೊಂಡಿದ್ದು, ಸಾಮಾನ್ಯ ಬೈಕ್ ಮಾದರಿಗಳಾದ ಜಾವಾ ಮತ್ತು ಜಾವಾ 42 ಬೈಕ್‌ಗಳಿಂತಲೂ ವಿಶೇಷ ವಿನ್ಯಾಸ ಹೊಂದಿದೆ.

1940ರ ಅವಧಿಯಲ್ಲಿನ ಬಾಬರ್ ಸ್ಟೈಲ್ ಬೈಕ್ ವಿನ್ಯಾಸವನ್ನು ಹೊತ್ತುಬಂದಿರುವ ಪೆರಾಕ್ ಬೈಕ್ ಮಾದರಿಯು ವಿಶೇಷ ಬಾಡಿ ಶೈಲಿಯೊಂದಿಗೆ ಭಾರತದಲ್ಲಿರುವ ಇತರೆ ಎಲ್ಲಾ ಬೈಕ್ ಮಾದರಿಗಳಿಂತಲೂ ಉದ್ದವಾದ ವೀಲ್ಹ್ ಬೆಸ್ ಹೊಂದಿರುವ ಮೊದಲ ಬೈಕ್ ಇದಾಗಿದೆ. ಪೆರಾಕ್ ಬೈಕ್ ಮಾದರಿಯು 2020ರ ಎಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರಲಿರುವ ಬಿಎಸ್-6 ನಿಯಮ ಅನುಸಾರ ಅಭಿವೃದ್ದಿ ಹೊಂದಿದ್ದು, 334-ಸಿಸಿ ಎಂಜಿನ್ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ 30-ಬಿಎಚ್‌ಪಿ ಮತ್ತು 31-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಪೆರಾಕ್ ಬೈಕ್ ಮಾದರಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದುಕೊಂಡಿದ್ದು, ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಮಾದರಿಗೆ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ. ಮತ್ತೊಂದು ವಿಶೇಷ ಅಂದ್ರೆ, ಪೆರಾಕ್ ಮಾದರಿಯು ಕ್ಲಾಸಿಕ್ ಲೆಜೆಂಡ್ ಕಂಪನಿಯಿಂದಲೇ ಮಾಡಿಫೈಗೊಂಡ ಬೈಕ್ ಆವೃತ್ತಿಯಾಗಲಿದ್ದು, ಡ್ಯುಯಲ್ ಚಾನೆಲ್ ಎಬಿಎಸ್, ಎರಡು ಬದಿಯ ಚಕ್ರಗಳಲ್ಲೂ ಡಿಸ್ಕ್ ಬ್ರೇಕ್, ರೌಂಡ್ ಹೆಡ್‌ಲ್ಯಾಂಪ್, ಡ್ಯಯಲ್ ಎಕ್ಸಾಸ್ಟ್ ಫೀಚರ್ಸ್‌ಗಳು ಹೊಸ ಬೈಕಿನ ಪ್ರಮುಖ ಆಕರ್ಷಣೆಯಾಗಿವೆ.

ಈ ಮೂಲಕ ದುಬಾರಿ ಬೆಲೆಯ ಹಾರ್ಲೆ ಡೇವಿಡ್ಸನ್ ಬೈಕ್ ರೈಡಿಂಗ್ ಅನುಭವ ನೀಡುವ ಪೆರಾಕ್ ಬೈಕ್‌ಗಳು ಯುವ ಸಮುದಾಯದ ನೆಚ್ಚಿನ ಬೈಕ್ ಮಾದರಿಯಾಗುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಕ್ಲಾಸಿಕ್ 350 ಮಾತ್ರವಲ್ಲದೇ ಇತ್ತೀಚೆಗೆ ಬಿಡುಗಡೆಯಾಗಲಿರುವ ಬೆನೆಲ್ಲಿ ಇಂಪೀರಿಯಲ್ 400 ಬೈಕಿಗೂ ಇದು ಪೈಪೋಟಿ ನೀಡಲಿದೆ.

ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ಸದ್ಯಕ್ಕೆ ಮೂರು ಹೊಸ ಬೈಕ್‌ಗಳನ್ನು ಹೊರತಂದಿದ್ದು, ಇದರಲ್ಲಿ ಜಾವಾ, ಜಾವಾ 42 ಬೈಕ್‌ಗಳು ಈಗಾಗಲೇ ಮಾರಾಟವಾಗುತ್ತಿದೆ. ಇದೀಗ ಬಿಡುಗಡೆಯಾಗಿರುವ ಪೆರಾಕ್ ಕಸ್ಟಮ್ ಬೈಕ್ ಮಾದರಿಯು ಕೂಡಾ ಮುಂದಿನ ಏಪ್ರಿಲ್‌ನಲ್ಲಿ ರಸ್ತೆಗಿಳಿಯಲಿದೆ.

ಜಾವಾ ಕ್ಲಾಸಿಕ್ ಬೈಕ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.64 ಲಕ್ಷಕ್ಕೆ ಮತ್ತು ಜಾವಾ 42 ಮಾದರಿಯು ರೂ. 1.55 ಲಕ್ಷಕ್ಕೆ ಖರೀದಿಗೆ ಲಭ್ಯವಿವೆ.

ಎರಡು ಬೈಕ್‌ಗಳಲ್ಲೂ 293-ಸಿಸಿ ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದೊಂದಿಗೆ 27-ಬಿಹೆಚ್‍ಪಿ ಮತ್ತು 28-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿವೆ.


Click it and Unblock the Notifications








