ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ ಜನಪ್ರಿಯ ಲೂನಾ ಮೊಪೆಡ್

ಹಲವಾರು ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಲೂನಾ ಮೊಪೆಡ್ ಮತ್ತೆ ದೇಶಿಯ ಮಾರುಕಟ್ಟೆಗೆ ಮರಳುವ ಸಾಧ್ಯತೆಗಳಿವೆ. ಲೂನಾ ಮೊಪೆಡ್‌ನ ತಯಾರಕ ಕಂಪನಿಯಾದ ಕೈನೆಟಿಕ್ ಮತ್ತೆ ಲೂನಾ ಮೊಪೆಡ್ ಅನ್ನು ಉತ್ಪಾದಿಸುವ ಯೋಜನೆಯಲ್ಲಿದೆ. ಮಾಹಿತಿಗಳ ಪ್ರಕಾರ ಕಂಪನಿಯು ಈ ಮೊಪೆಡ್ ಅನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಗೊಳಿಸಲಿದೆ.

ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ ಜನಪ್ರಿಯ ಲೂನಾ ಮೊಪೆಡ್

ಹೊಸ ಮಾಲಿನ್ಯ ನಿಯಮಗಳಿಗೆ ಅನುಸಾರವಾಗಿ ಲೂನಾವನ್ನು ಅಪ್ ಡೇಟ್ ಗೊಳಿಸದ ಕಾರಣಕ್ಕೆ ದೇಶಿಯ ಮಾರುಕಟ್ಟೆಯಲ್ಲಿ ಅದರ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಯಿತು. ಲೂನಾ 50 ಸಿಸಿ ಎಂಜಿನ್ ನೊಂದಿಗೆ ಪ್ಯಾಡಲ್ ಹೊಂದಿರುವ ಭಾರತದ ಮೊದಲ ದ್ವಿಚಕ್ರ ವಾಹನವಾಗಿದೆ. ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಭಾರತದಲ್ಲಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಕೈನೆಟಿಕ್ ಗ್ರೂಪ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಗೆ ಪುನರಾಗಮನ ಮಾಡಲು ಮುಂದಾಗಿದೆ.

ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ ಜನಪ್ರಿಯ ಲೂನಾ ಮೊಪೆಡ್

ಕಂಪನಿಯು ಎಲೆಕ್ಟ್ರಿಕ್ ಬೈಕ್ ಅಥವಾ ಸ್ಕೂಟರ್ ಅನ್ನು ಉತ್ಪಾದಿಸುವ ನಿರೀಕ್ಷೆಗಳಿವೆ. ಇದರಿಂದಾಗಿ ಈ ಐಕಾನಿಕ್ ಮೊಪೆಡ್ ಸ್ಕೂಟರ್ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ. ಸದ್ಯಕ್ಕೆ ಕೈನೆಟಿಕ್ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಹಾಗೂ ಎಲೆಕ್ಟ್ರಿಕ್ ರಿಕ್ಷಾಗಳನ್ನು ಉತ್ಪಾದಿಸುತ್ತಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ ಜನಪ್ರಿಯ ಲೂನಾ ಮೊಪೆಡ್

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಶೀಘ್ರದಲ್ಲೇ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸೆಗ್ ಮೆಂಟಿಗೆ ಕಾಲಿಡುವ ಸಾಧ್ಯತೆಗಳಿವೆ.

ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ ಜನಪ್ರಿಯ ಲೂನಾ ಮೊಪೆಡ್

ವರದಿಯ ಪ್ರಕಾರ, ಎಲೆಕ್ಟ್ರಿಕ್ ಲೂನಾ ಮೊಪೆಡ್ ನಲ್ಲಿ 1 ಕಿ.ವ್ಯಾನ ಎಲೆಕ್ಟ್ರಿಕ್ ಮೋಟರ್ ಹಾಗೂ ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗುವುದು. ಈ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದ ನಂತರ 70-80 ಕಿ.ಮೀಗಳವರೆಗೆ ಚಲಿಸಲಿದೆ. ಈ ಎಲೆಕ್ಟ್ರಿಕ್ ಮೊಪೆಡ್ ನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 25-30 ಕಿ.ಮೀಗಳಾಗಿರಲಿದೆ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ ಜನಪ್ರಿಯ ಲೂನಾ ಮೊಪೆಡ್

ಈ ಮೊಪೆಡ್ ಅನ್ನು ಲೋ ಸ್ಪೀಡ್ ಸೆಗ್ ಮೆಂಟಿನಲ್ಲಿ ಬಿಡುಗಡೆಗೊಳಿಸಲಾಗುವುದು. ಇದರಿಂದಾಗಿ ಯಾವುದೇ ರಿಜಿಸ್ಟ್ರೇಷನ್ ಹಾಗೂ ಲೈಸೆನ್ಸ್ ನ ಅಗತ್ಯವಿಲ್ಲದೇ ಈ ಮೊಪೆಡ್ ಚಲಾಯಿಸಬಹುದು. ಲೂನಾ ಎಲೆಕ್ಟ್ರಿಕ್ ಮೊಪೆಡ್ ನ ಬೆಲೆ ರೂ.50,000ಗಳಾಗುವ ಸಾಧ್ಯತೆಗಳಿವೆ. ಈ ಮೊಪೆಡ್‌ನಲ್ಲಿ ಎಲ್‌ಇಡಿ ಹೆಡ್‌ಲೈಟ್, ಡೇಟೈಮ್ ರನ್ನಿಂಗ್ ಲೈಟ್, ಥಂಬ್ ಸ್ಟಾರ್ಟರ್ ಗಳಿರಲಿವೆ.

ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ ಜನಪ್ರಿಯ ಲೂನಾ ಮೊಪೆಡ್

ಕಂಪನಿಯು ಈ ಮೊಪೆಡ್ ನಲ್ಲಿ ಯಾವ ಫೀಚರ್ ಗಳಿರಲಿವೆ ಎಂಬುದನ್ನು ಅಧಿಕೃತವಾಗಿ ಘೋಷಿಸಿಲ್ಲ. ಟಿವಿಎಸ್ ಎಕ್ಸ್‌ಎಲ್ 100 ಮೊಪೆಡ್ ಹಲವಾರು ದಶಕಗಳಿಂದ ದೇಶಿಯ ಮಾರುಕಟ್ಟೆಯಲ್ಲಿದೆ. ಸದ್ಯಕ್ಕೆ ಜಿಮೋಪೈ ಮಿಸೊ ಮಾತ್ರ ದೇಶಿಯ ಮಾರುಕಟ್ಟೆಯಲ್ಲಿರುವ ಕಡಿಮೆ ತೂಕದ ಎಲೆಕ್ಟ್ರಿಕ್ ಸ್ಕೂಟರ್‌ ಆಗಿದೆ. ಕೈನೆಟಿಕ್ ಲೂನಾದ ಉತ್ಪಾದನೆಯನ್ನು ಯಾವಾಗ ಆರಂಭಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

Most Read Articles

Kannada
English summary
Kinetic to launch Luna in electric version. Read in Kannada.
Story first published: Tuesday, July 21, 2020, 12:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X