390 ಅಡ್ವೆಂಚರ್ ಬೈಕ್‍ಗಾಗಿ ಹೊಸ ಸ್ಪೋಕ್ ವ್ಹೀಲ್‌ಗಳನ್ನು ಪರಿಚಯಿಸಿದ ಕೆಟಿಎಂ
ಆಸ್ಟ್ರಿಯಾದ ಬೈಕ್ ತಯಾರಕ ಕಂಪನಿಯಾದ ಕೆಟಿಎಂ ತನ್ನ 390 ಅಡ್ವೆಂಚರ್ ಬೈಕ್‍ಗಾಗಿ ಹೊಸ ಸ್ಪೋಕ್ ವ್ಹೀಲ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಕೆಟಿಎಂ 390 ಅಡ್ವೆಂಚರ್ ಬೈಕಿನ ಹೊಸ ಸ್ಪೋಕ್ ವ್ಹೀಲ್‌ಗಳು ಕೆಟಿಎಂನ ಪವರ್ ಪಾರ್ಟ್ಸ್ ಕ್ಯಾಟಲಾಗ್ ಅಡಿಯಲ್ಲಿ ಲಭ್ಯವಿರುತ್ತದೆ.

ಆದರೆ ಕೆಟಿಎಂ 390 ಅಡ್ವೆಂಚರ್ ಬೈಕಿನ ಹೊಸ ಸ್ಪೋಕ್ ವ್ಹೀಲ್‌ಗಳ ಬೆಲೆಯನ್ನು ಇನ್ನೂ ಘೋಷಿಸಲಾಗಿಲ್ಲ. ಸ್ಪೋಕ್ ವ್ಹೀಲ್ ಕಿಟ್ ಸ್ಟಾಕ್ ಕಾಸ್ಟ್ ಅಲಾಯ್ ವ್ಹೀಲ್‌ಗಳಿಂದ ಸ್ಟೀಲ್ ಸ್ಪೋಕ್ ರಿಮ್‌ಗಳಿಗೆ ಪರಿವರ್ತಿಸಲು ಅಗತ್ಯವಿರುವ ಎಲ್ಲಾ ಹೆಚ್ಚುವರಿ ಪಾರ್ಟ್ಸ್ ಗಳನ್ನು ನೀಡುತ್ತದೆ. ಸ್ಪೋಕ್ ರಿಮ್ಸ್ ಜೊತೆಗೆ, ಕೆಟಿಎಂ ಮುಂಭಾಗದ ಮತ್ತು ಹಿಂಭಾಗದ ಡಿಸ್ಕ್ ಮತ್ತು ಪ್ಯಾಕೇಜ್ನ ಭಾಗವಾಗಿ ಸ್ಪ್ರಾಕೆಟ್ ಅನ್ನು ಸಹ ನೀಡುತ್ತದೆ.

ಕ್ಯಾಸ್ಟ್ ವ್ಹೀಲ್ ಗಳಿಂದ ಸ್ಪೋಕ್ ರಿಮ್‌ಗಳಿಗೆ ಬದಲಾವಣೆಯು ಕೆಟಿಎಂ 390 ಅಡ್ವೆಂಚರ್ ಆಫ್-ಟಾರ್ಮ್ಯಾಕ್ ರೈಡ್ ಮಾಡುವಾಗ ಉತ್ತಮ ಕಂಟ್ರೋಲ್ ಮತ್ತು ಹೆಚ್ಚಿನ ಆತ್ಮವಿಶ್ವಾಸವನ್ನು ನೀಡುತ್ತದೆ. ಕ್ಯಾಸ್ಟ್ ರಿಮ್ ಅದರ ಆಫ್-ರೋಡಿಂಗ್ ಸಾಮರ್ಥ್ಯಗಳ ದೃಷ್ಟಿಯಿಂದ 390 ಅಡ್ವೆಂಚರ್ ಸೀಮಿತಗೊಳಿಸುವ ಅಂಶವಾಗಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಹೊಸ ಸ್ಪೋಕ್ ರಿಮ್ ಪ್ಯಾಕೇಜ್ ಹೊರತುಪಡಿಸಿ, ಬೇರೆ ಯಾವುದೇ ಬದಲಾವಣೆಗಳನ್ನು ಪರಿಚಯಿಸಲಾಗಿಲ್ಲ. ಕೆಟಿಎಂ 390 ಅಡ್ವೆಂಚರ್ ಹಲವಾರು ಇತರ ಅಕ್ಸೆಸರೀಸ್ ಮತು ಪಾರ್ಟ್ ಗಳನ್ನು ಸಹ ನೀಡುತ್ತದೆ. ಇವುಗಳಲ್ಲಿ ಪ್ಯಾನಿಯರ್‌ಗಳು, ಟ್ಯಾಂಕ್ ಬ್ಯಾಗ್, ಟಾಪ್ ಬಾಕ್ಸ್, ರಿಯರ್ ರ್ಯಾಕ್, ಸ್ಯಾಡಲ್ ಬ್ಯಾಗ್‌ಗಳು ಮತ್ತು ಇನ್ನಿತರ ಅಕ್ಸೆಸರೀಸ್ ಸೇರಿವೆ.

ಕೆಟಿಎಂ 390 ಅಡ್ವೆಂಚರ್ ಬೈಕ್ ಆಫ್ ರೋಡ್ ಟೂರರ್ ಆಗಿದ್ದು, ಈ ಬೈಕ್ 390 ಡ್ಯೂಕ್ ಸ್ಟ್ರೀಟ್ ಫೈಟರ್ ಅನ್ನು ಆಧರಿಸಿದೆ. ಈ ಬೈಕ್ ಕೆಟಿಎಂ 790 ಅಡ್ವೆಂಚರ್ ಬೈಕಿನಿಂದಲೂ ವಿನ್ಯಾಸದ ಕೆಲವು ಅಂಶಗಳನ್ನು ಎರವಲು ಪಡೆದಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಕೆಟಿಎಂ 390 ಅಡ್ವೆಂಚರ್ ಬೈಕಿನಲ್ಲಿ 200 ಗ್ರೌಂಡ್ ಕ್ಲಿಯರೆನ್ಸ್ ಎಂಎಂ ಮತ್ತು 855 ಸೀಟ್ ಎತ್ತರವನ್ನು ಹೊಂದಿದೆ. ಈ ಬೈಕಿನಲ್ಲಿ ಡ್ಯೂಕ್ 390 ಬೈಕಿನಲ್ಲಿರುವಂತಹ 373.2 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 43 ಬಿಹೆಚ್‍ಪಿ ಪವರ್ ಹಾಗೂ 37 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ 6 ಸ್ಪೀಡಿನ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ

ಕೆಟಿಎಂ 390 ಅಡ್ವೆಂಚರ್ ಬೈಕಿನಲ್ಲಿ ಎಡಿವಿ ಸ್ಪೋರ್ಟ್ಸ್ ಸ್ಪ್ಲಿಟ್ ಎಲ್‍ಇಡಿ ಹೆಡ್‍ಲ್ಯಾಂಪ್, ಎಲ್‍ಇಡಿ ಟರ್ನ್ ಇಂಡಿಕೇಟರ್‍ಗಳು ಮತ್ತು ಬ್ಲೂಟೂತ್ ಕನೆಕ್ಟಿವಿಟಿಯನ್ನು ಹೊಂದಿರುವ ಬಣ್ಣದಿಂದ ಕೂಡಿದ ಆಕರ್ಷಕ ಟಿಎಫ್‍ಟಿ ಡಿಸ್‍ಪ್ಲೇ ಅನ್ನು ಅಳವಡಿಸಲಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಕೆಟಿಎಂ 390 ಅಡ್ವೆಂಚರ್ ಬೈಕಿನಲ್ಲಿ ಅಲ್ಯೂಮಿನಿಯಂ ಹ್ಯಾಂಡಲ್‍ಬಾರ್‍ಗಳು ಸ್ಪ್ಲಿಟ್ ಸೀಟುಗಳು ಮತ್ತು ಫ್ಯೂಯಲ್ ಟ್ಯಾಂಕ್ ಸ್ಪಾಯ್ಲರ್‍ಗಳನ್ನು ಕೂಡ ಅಳವಡಿಸಲಾಗಿದೆ. ಫ್ಯೂಯಲ್ ಟ್ಯಾಂಕ್‍ನ ಸೀಟುಗಳು ವಿಸ್ತರಿಸಿದಾಗ ಹ್ಯಾಂಡಲ್ ಬಾರ್‍ಗಳನ್ನು ಹೆಚ್ಚಿಸಲಾಗಿದೆ.

ಈ ಬಿಎಸ್-6 ಕೆಟಿಎಂ 390 ಅಡ್ವೆಂಚರ್ ಬೈಕ್ ಟ್ರಾ ಕ್ಷನ್ ಕಂಟ್ರೂಲ್ ಮತ್ತು ಎಬಿಎಸ್ ನಂತಹ ಹೊಸ ಫೀಚರ್ಸ್‍ಗಳನ್ನು ಹೊಂದಿದೆ. ಈ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಹಾಗೂ ಬಿಎಂಡಬ್ಲ್ಯು ಮೋಟೊರಾಡ್ ಜಿ310ಜಿಎಸ್ ಬೈಕುಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications








