ಬಿಎಸ್-6 ಜಾರಿಗೆ ದಿನಗಣನೆ- ಹೊಸ ಬೈಕ್ ಮಾರಾಟಕ್ಕೆ ಕೆಟಿಎಂ ಭರ್ಜರಿ ಸಿದ್ದತೆ

ಬಿಎಸ್-6 ನಿಯಮ ಜಾರಿಗೆ ದಿನಗಣನೆ ಶುರುವಾಗಿದ್ದು, ಹೊಸ ನಿಯಮ ಅನುಸಾರ ಕೆಟಿಎಂ ಸಂಸ್ಥೆಯು ಬಿಎಸ್-6 ಬೈಕ್ ಬಿಡುಗಡೆಯ ಸುಳಿವು ನೀಡಿದೆ. ಹಾಗಾದ್ರೆ ಹೊಸ ನಿಯಮದಿಂದಾಗಿ ಬೈಕ್ ಮಾರಾಟದಲ್ಲಿ ಯಾವೆಲ್ಲಾ ಬದಲಾವಣೆಗಳಾಗಲಿವೆ ಎಂಬ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಬಿಎಸ್-6 ಜಾರಿಗೆ ದಿನಗಣನೆ- ಹೊಸ ಬೈಕ್ ಮಾರಾಟಕ್ಕೆ ಕೆಟಿಎಂ ಭರ್ಜರಿ ಸಿದ್ದತೆ

ಏಪ್ರಿಲ್ 1ರಿಂದ ಬಿಎಸ್-6 ನಿಯಮವು ಕಡ್ಡಾಯವಾಗಿ ಜಾರಿಗೆ ಬರುತ್ತಿದ್ದು, ಈಗಾಗಲೇ ಹೊಸ ನಿಯಮ ಅನುಸಾರವಾಗಿ ಹಲವು ವಾಹನ ಉತ್ಪಾದನಾ ಸಂಸ್ಥೆಗಳು ಹೊಸ ವಾಹನ ಮಾದರಿಗಳ ಮಾರಾಟವನ್ನು ಆರಂಭಿಸಿವೆ. ಇದೀಗ ಕೆಟಿಎಂ ಸಂಸ್ಥೆಯು ಇದೇ ತಿಂಗಳ ಕೊನೆಯಲ್ಲಿ ಬಿಎಸ್-6 ಬೈಕ್ ಮಾದರಿಗಳ ಮಾರಾಟವನ್ನು ಆರಂಭಿಸುವುದಾಗಿ ಸುಳಿವು ನೀಡಿದ್ದು, ಮೊದಲ ಹಂತವಾಗಿ ಡ್ಯೂಕ್ 250, ಆರ್‌ಸಿ 390 ಮತ್ತು ಡ್ಯೂಕ್ 390 ಬೈಕ್‌ಗಳ ಮಾರಾಟಕ್ಕೆ ಚಾಲನೆ ನೀಡಲಿದೆ.

ಬಿಎಸ್-6 ಜಾರಿಗೆ ದಿನಗಣನೆ- ಹೊಸ ಬೈಕ್ ಮಾರಾಟಕ್ಕೆ ಕೆಟಿಎಂ ಭರ್ಜರಿ ಸಿದ್ದತೆ

ಬಿಎಸ್-6 ನಿಯಮದಿಂದಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ವಾಹನ ಮಾದರಿಗಳು ಹೊಸ ತಂತ್ರಜ್ಞಾನ ಪ್ರೇರಿತ ಎಂಜಿನ್ ಪಡೆದುಕೊಳ್ಳಲಿದ್ದು, ಮಾಲಿನ್ಯ ಹೊರಸೂಸುವಿಕೆಯಲ್ಲಿ ಸಾಕಷ್ಟು ಸುಧಾರಣೆ ಕಂಡಿವೆ.

ಬಿಎಸ್-6 ಜಾರಿಗೆ ದಿನಗಣನೆ- ಹೊಸ ಬೈಕ್ ಮಾರಾಟಕ್ಕೆ ಕೆಟಿಎಂ ಭರ್ಜರಿ ಸಿದ್ದತೆ

ಹೊಸ ನಿಯಮದಿಂದಾಗಿ ಬಿಎಸ್-6 ವಾಹನಗಳ ಬೆಲೆಯಲ್ಲೂ ಹೆಚ್ಚಳವಾಗಲಿದ್ದು, ಇದು ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಲಿದೆ. ಮಾಹಿತಿಗಳ ಪ್ರಕಾರ ಸದ್ಯ ಮಾರುಕಟ್ಟೆಯಲ್ಲಿನ ಬೆಲೆಗಿಂತಲೂ ಬಿಎಸ್-6 ಬೈಕ್‌ಗಳ ಬೆಲೆಯಲ್ಲಿ ರೂ.6 ಸಾವಿರದಿಂದ ರೂ.15 ಸಾವಿರ ತನಕ ದುಬಾರಿಯಾಗಲಿರವೆ.

ಬಿಎಸ್-6 ಜಾರಿಗೆ ದಿನಗಣನೆ- ಹೊಸ ಬೈಕ್ ಮಾರಾಟಕ್ಕೆ ಕೆಟಿಎಂ ಭರ್ಜರಿ ಸಿದ್ದತೆ

125 ಸಿಸಿ ಒಳಗಿನ ಸ್ಕೂಟರ್ ಮತ್ತು ಬೈಕ್ ಮಾದರಿಗಳ ಬೆಲೆಯು ರೂ.4 ಸಾವಿರದಿಂದ ರೂ.8 ಸಾವಿರ ತನಕ, 125 ಸಿಸಿಯಿಂದ 150ಸಿಸಿ ಸ್ಕೂಟರ್ ಮತ್ತು ಬೈಕ್‌ಗಳ ಬೆಲೆಯಲ್ಲಿ ರೂ.6 ಸಾವಿರದಿಂದ 10 ಸಾವಿರ, 150 ಸಿಸಿಯಿಂದ 200 ಸಿಸಿ ಒಳಗಿನ ಬೈಕ್‌ಗಳ ಬೆಲೆಯಲ್ಲಿ ರೂ. 5 ಸಾವಿರದಿಂದ ರೂ. 10 ಸಾವಿರ, 200ಸಿಸಿಯಿಂದ 350 ಸಿಸಿ ಬೈಕ್ ಮಾದರಿಗಳ ಬೆಲೆಯು ರೂ. 7 ಸಾವಿರ ರೂ.12 ಸಾವಿರ ಮತ್ತು 350 ಸಿಸಿ ಮೇಲ್ಪಟ್ಟ ಬೈಕ್ ಮಾದರಿಗಳ ಬೆಲೆಯು ರೂ.10 ಸಾವಿರದಿಂದ ರೂ.15 ಸಾವಿರ ತನಕ ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿವೆ.

ಬಿಎಸ್-6 ಜಾರಿಗೆ ದಿನಗಣನೆ- ಹೊಸ ಬೈಕ್ ಮಾರಾಟಕ್ಕೆ ಕೆಟಿಎಂ ಭರ್ಜರಿ ಸಿದ್ದತೆ

ಕೆಟಿಎಂ ನಿರ್ಮಾಣದ ಬೈಕ್‌ಗಳು ಕೂಡಾ ಪ್ರೀಮಿಯಂ ಫೀಚರ್ಸ್‌ಗಳಿಂದಾಗಿ ಸಾಮಾನ್ಯ ಬೈಕ್‌ಗಳಿಂತಲೂ ತುಸು ದುಬಾರಿ ಎನ್ನಿಸಲಿದ್ದು, ಬಿಎಸ್-6 ಜಾರಿ ನಂತರ ರೂ.7 ಸಾವಿರ ರೂ.10 ಸಾವಿರ ತನಕ ಹೆಚ್ಚುವರಿ ದರ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಬಿಎಸ್-6 ಜಾರಿಗೆ ದಿನಗಣನೆ- ಹೊಸ ಬೈಕ್ ಮಾರಾಟಕ್ಕೆ ಕೆಟಿಎಂ ಭರ್ಜರಿ ಸಿದ್ದತೆ

ಕೆಟಿಎಂ ಸದ್ಯ ಭಾರತದಲ್ಲಿ ಡ್ಯೂಕ್ 125, ಆರ್‌ಸಿ 125, ಡ್ಯೂಕ್ 200, ಆರ್‌ಸಿ 200, ಡ್ಯೂಕ್ 250, ಡ್ಯೂಕ್ 390, ಆರ್‌ಸಿ 390, ಡ್ಯೂಕ್ 790 ಬೈಕ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಆನ್ ರೋಡ್ ಪ್ರಕಾರ ಆರಂಭಿಕ ಬೈಕ್ ಆವೃತ್ತಿಯು ರೂ. 1.43 ಲಕ್ಷದಿಂದ ಟಾಪ್ ಬೈಕ್ ಆವೃತ್ತಿಯು ರೂ.9.28 ಲಕ್ಷ ಬೆಲೆ ಹೊಂದಿವೆ.

ಬಿಎಸ್-6 ಜಾರಿಗೆ ದಿನಗಣನೆ- ಹೊಸ ಬೈಕ್ ಮಾರಾಟಕ್ಕೆ ಕೆಟಿಎಂ ಭರ್ಜರಿ ಸಿದ್ದತೆ

ಇತ್ತೀಚೆಗೆ ಬಿಡುಗಡೆಯಾಗಿರುವ ಡ್ಯೂಕ್ 790 ಬೈಕ್ ಸಹ ಬಿಎಸ್-4 ನಿಯಮ ಎಂಜಿನ್‌ನೊಂದಿಗೆ ಬಿಡುಗಡೆಯಾಗಿದ್ದು, ಹೊಸ ಬೈಕ್ ಸಹ ಮುಂದಿನ ಕೆಲವೇ ದಿನಗಳಲ್ಲಿ ಬಿಎಸ್-6 ಎಂಜಿನ್‌ನೊಂದಿಗೆ ಉನ್ನತೀಕರಣಗೊಳ್ಳಬೇಕಿದೆ.

ಬಿಎಸ್-6 ಜಾರಿಗೆ ದಿನಗಣನೆ- ಹೊಸ ಬೈಕ್ ಮಾರಾಟಕ್ಕೆ ಕೆಟಿಎಂ ಭರ್ಜರಿ ಸಿದ್ದತೆ

ಹೀಗಾಗಿ ಸದ್ಯ ಬಿಡುಗಡೆಯಾಗಬೇಕಿದ್ದ 390 ಅಡ್ವೆಂಚರ್ ಬೈಕ್ ಆವೃತ್ತಿಯ ಬಿಡುಗಡೆಯನ್ನು ತಾತ್ಕಲಿಕವಾಗಿ ಮುಂದೂಡಿರುವ ಕೆಟಿಎಂ ಸಂಸ್ಥೆಯು ಬಿಎಸ್-6 ನಿಯಮದಂತೆಯೇ ಹೊಸ ಬೈಕ್ ಅನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.

Article Published On: Thursday, January 16, 2020, 13:38 [IST]
English summary
KTM India is all set to launch the BS6 versions bikes. Read in Kannada.
Read more on ಕೆಟಿಎಂ ktm
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+