ಲಾಕ್‌ಡೌನ್ ಸಡಿಲಿಕೆ: ಡೀಲರ್‌ಶಿಪ್‌ಗಳನ್ನು ತೆರೆದ ಕೆಟಿಎಂ ಹಸ್ಕ್‌ವರ್ನಾ
ದೇಶದ ಅನೇಕ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಉತ್ಪಾದನೆ ಹಾಗೂ ಮಾರಾಟವನ್ನು ಪುನರಾರಂಭಿಸಿವೆ. ಈಗ ಕೆಟಿಎಂ ಕಂಪನಿಯು ಸರ್ಕಾರದಿಂದ ಅನುಮತಿ ಪಡೆದ ನಂತರ ತನ್ನ ಡೀಲರ್‌ಶಿಪ್‌ಗಳನ್ನು ತೆರೆದಿದೆ. ಕೆಟಿಎಂ ಕಂಪನಿಯು ಹಸ್ಕ್‌ವರ್ನಾ ಕಂಪನಿಯೊಂದಿಗೆ ತನ್ನ ಡೀಲರ್‌ಶಿಪ್‌ಗಳನ್ನು ಹಂಚಿಕೊಂಡಿದೆ.

ದೇಶದಲ್ಲಿ ಗ್ರೀನ್ ಝೋನ್ ಹಾಗೂ ಆರೇಂಜ್ ಝೋನ್‌ಗಳಲ್ಲಿ ಕಾರ್ಯ ನಿರ್ವಹಿಸಲು ಕೇಂದ್ರ ಸರ್ಕಾರವು ಆಟೋಮೊಬೈಲ್ ಕಂಪನಿಗಳಿಗೆ ಅನುಮತಿ ನೀಡಿದೆ. ಈ ಕಾರಣಕ್ಕೆ ಕೆಟಿಎಂ ಹಾಗೂ ಹಸ್ಕ್‌ವರ್ನಾ ತಮ್ಮ ಮಾರಾಟ ಮಳಿಗೆಗಳನ್ನು ತೆರೆದಿವೆ. ಕಂಪನಿಯು ಸಾಮಾಜಿಕ ಜಾಲತಾಣಗಳ ಮೂಲಕ ದೇಶದ ಆಯ್ದ ನಗರಗಳಲ್ಲಿ ಡೀಲರ್‌ಶಿಪ್‌ಗಳನ್ನು ತೆರೆಯಲಾಗಿದೆ ಎಂದು ತಿಳಿಸಿದೆ.

ಬಜಾಜ್‌ನ ಚಕನ್ ಘಟಕದಲ್ಲಿ ಉತ್ಪಾದನೆಯನ್ನು ಆರಂಭಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಘಟಕದಲ್ಲಿ ಕೆಟಿಎಂ ಹಾಗೂ ಹಸ್ಕ್‌ವರ್ನಾ ಬೈಕುಗಳನ್ನು ಉತ್ಪಾದಿಸಲಾಗುತ್ತದೆ. ಡೀಲರ್‌ಶಿಪ್‌ಗಳನ್ನು ಗ್ರೀನ್ ಝೋನ್ ಹಾಗೂ ಆರೇಂಜ್ ಝೋನ್‌ಗಳಲ್ಲಿ ತೆರೆಯಲಾಗಿದ್ದು, ಸರ್ಕಾರದ ಸುರಕ್ಷತಾ ಮಾನದಂಡಗಳನ್ನು ಅನುಸರಿಸಲಾಗುತ್ತಿದೆ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕೆಟಿಎಂ ಡೀಲರ್‌ಗಳ ಆರೋಗ್ಯ ಹಾಗೂ ಸುರಕ್ಷತೆಗೆ ನಿಯಮಗಳನ್ನು ಪಾಲಿಸಲಾಗುತ್ತಿದ್ದು, ಗ್ರಾಹಕರು ಮತ್ತು ನೌಕರರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರ ಜೊತೆಗೆ ಮಳಿಗೆಗಳನ್ನು ನಿರಂತರವಾಗಿ ಸ್ವಚ್ವಗೊಳಿಸಲಾಗುವುದು.

ಕೆಲವು ಡೀಲರ್‌ಗಳು ಮಾರಾಟವನ್ನು ಮಾತ್ರ ಆರಂಭಿಸಿದ್ದರೆ, ಇನ್ನೂ ಕೆಲವು ಡೀಲರ್‌ಗಳು ಮಾರಾಟ ಹಾಗೂ ಸರ್ವಿಸ್ ಎರಡನ್ನೂ ಆರಂಭಿಸಿದ್ದಾರೆ. ಮುಂಬರುವ ದಿನಗಳಲ್ಲಿ ಕೆಟಿಎಂ ಕಂಪನಿಯು ತನ್ನ ಎಲ್ಲಾ ಡೀಲರ್‌ಗಳನ್ನು ತೆರೆಯುವ ಸಾಧ್ಯತೆಗಳಿವೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಕೆಟಿಎಂ ಕಂಪನಿಯು ಇತ್ತೀಚೆಗಷ್ಟೇ ತನ್ನ ವಾಹನಗಳ ವಾರಂಟಿ ಹಾಗೂ ಸರ್ವಿಸ್ ಅವಧಿಯನ್ನು ವಿಸ್ತರಿಸಿ, ಕರೋನಾ ವೈರಸ್‌ನಿಂದ ಉಂಟಾಗಿರುವ ಬಿಕ್ಕಟ್ಟಿಗೆ ಗ್ರಾಹಕರಿಗೆ ಪರಿಹಾರ ನೀಡುತ್ತಿದೆ. ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ಕಂಪನಿಯು ವಾರಂಟಿ ಹಾಗೂ ಸರ್ವಿಸ್ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಿದೆ.

ಕಳೆದ ತಿಂಗಳು ಕೆಟಿಎಂ ಕಂಪನಿಯ ಯಾವುದೇ ವಾಹನಗಳು ಮಾರಾಟವಾಗಿರಲಿಲ್ಲ. ಈಗ ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ. ಈ ತಿಂಗಳಲ್ಲಿ ವಾಹನಗಳು ಮಾರಾಟವಾದರೂ ಅವುಗಳ ಸಂಖ್ಯೆ ಕಡಿಮೆಯಿರಲಿದೆ ಎಂದು ಅಂದಾಜಿಸಲಾಗಿದೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಲಾಕ್‌ಡೌನ್ ಮುಗಿದ ನಂತರ ಕೆಟಿಎಂ ಕಂಪನಿಯು ಭಾರತದಲ್ಲಿ ಹೊಸ ಬೈಕ್ ಅನ್ನು ಬಿಡುಗಡೆಗೊಳಿಸಲಿದೆ. ಲಾಕ್‌ಡೌನ್‌ಗೂ ಮುನ್ನ ಕಂಪನಿಯು ಕೆಟಿಎಂ 390 ಅಡ್ವೆಂಚರ್ ಬೈಕ್ ಅನ್ನು ಬಿಡುಗಡೆಗೊಳಿಸಿತ್ತು.


Click it and Unblock the Notifications








