Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಾರು, ಬೈಕುಗಳಿಗಿಂತ ದುಬಾರಿ ಬೆಲೆಯ ಸೈಕಲ್ ಬಿಡುಗಡೆಗೊಳಿಸಿದ ಲ್ಯಾಂಬೊರ್ಗಿನಿ
ಪ್ರಮುಖ ಐಷಾರಾಮಿ ಕಾರು ತಯಾರಕ ಕಂಪನಿಯಾದ ಲ್ಯಾಂಬೊರ್ಗಿನಿ ತನ್ನ ಬ್ರಾಂಡ್ ಹೆಸರಿನಲ್ಲಿ ಹೊಸ ಸರಣಿಯ ಸೈಕಲ್‌ಗಳನ್ನು ಬಿಡುಗಡೆಗೊಳಿಸಿದೆ. ಸೆರ್ವಿಲ್ಲೊ ಬೈಸಿಕಲ್ಸ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದ ವಿಶ್ವದ ಅತ್ಯಂತ ದುಬಾರಿ ಸೈಕಲ್ ಅನ್ನು ಲ್ಯಾಂಬೊರ್ಗಿನಿ ಬಿಡುಗಡೆಗೊಳಿಸಿದೆ.

ಈ ಹೊಸ ಸೈಕಲ್ ಲ್ಯಾಂಬೊರ್ಗಿನಿ ಅವೆಂಟಡಾರ್ ಎಸ್‌ವಿಜೆ ಸ್ಪೋರ್ಟ್ಸ್ ಕಾರ್ ಮಾದರಿಯನ್ನು ಆಧರಿಸಿದೆ ಎಂದು ಹೇಳಲಾಗಿದೆ. ಈ ಕಾರಣಕ್ಕೆ ಈ ಸೈಕಲ್ ಹಲವಾರು ಫೀಚರ್ ಗಳನ್ನು ಹೊಂದಿದೆ ಎಂದು ಸಹ ಹೇಳಲಾಗಿದೆ. ಈ ಸೈಕಲ್ ಸಾಂಪ್ರದಾಯಿಕ ಮಾದರಿಯ ಸೈಕಲ್‌ಗಳಿಗಿಂತ ತಾಂತ್ರಿಕವಾಗಿ ಹೆಚ್ಕು ಸುಧಾರಿತವಾಗಿದೆ.

ಈ ಕಾರಣಕ್ಕೆ ಕಂಪನಿಯು ಈ ಸೈಕಲ್‌ಗೆ ದುಬಾರಿ ಬೆಲೆಯನ್ನು ನಿಗದಿಪಡಿಸಿದೆ. ಈ ಸೈಕಲ್ಲಿನ ಬೆಲೆ ರೂ.13.2 ಲಕ್ಷಗಳಾಗಿದೆ. ಲ್ಯಾಂಬೊರ್ಗಿನಿ ಹಾಗೂ ಸೆರ್ವಿಲ್ಲೊ ಕಂಪನಿಗಳು ಈ ಸೈಕಲ್ಲಿಗೆ ದುಬಾರಿ ಬೆಲೆಯನ್ನು ನಿಗದಿಪಡಿಸಿವೆ.
MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಈ ಸೈಕಲ್ ಮಾರುತಿ ಸುಜುಕಿ ಕಂಪನಿಯ ಕಾರುಗಳಿಗಿಂತ, ರಾಯಲ್ ಎನ್ ಫೀಲ್ಡ್ ಕಂಪನಿಯ ಬೈಕುಗಳಿಗಿಂತ ಹೆಚ್ಚಿನ ಬೆಲೆಯನ್ನು ಹೊಂದಿದೆ. ಲ್ಯಾಂಬೊರ್ಗಿನಿ ಕಂಪನಿಯು ಅತ್ಯಂತ ಆಕರ್ಷಕವಾದ, ಸಂಪೂರ್ಣವಾಗಿ ವಿಭಿನ್ನವಾದ ವಾಹನಗಳನ್ನು ಉತ್ಪಾದಿಸುತ್ತದೆ.

ಇದರ ಜೊತೆಗೆ ಲ್ಯಾಂಬೊರ್ಗಿನಿ ಕಂಪನಿಯು ಕೆಲವು ವಾಹನಗಳನ್ನು ಸೀಮಿತ ಸಂಖ್ಯೆಯಲ್ಲಿ ಉತ್ಪಾದಿಸುತ್ತದೆ. ಅಂತಹ ವಾಹನಗಳಲ್ಲಿ ಈಗ ಬಿಡುಗಡೆಯಾಗಿರುವ ಸೈಕಲ್ ಸಹ ಒಂದು.
MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಈ ಸೈಕಲ್ ಅನ್ನು ಸಹ ಸೀಮಿತ ಸಂಖ್ಯೆಯಲ್ಲಿ ಮಾರಾಟ ಮಾಡುವುದಾಗಿ ಲ್ಯಾಂಬೊರ್ಗಿನಿ ತಿಳಿಸಿದೆ. ಲ್ಯಾಂಬೊರ್ಗಿನಿ ಕಂಪನಿಯು ಈ ಸೈಕಲಿನ ಕೇವಲ 63 ಯುನಿಟ್ ಗಳನ್ನು ಮಾತ್ರ ಉತ್ಪಾದಿಸಲಿದೆ.

ಸೆರ್ವಿಲ್ಲೊ ಆರ್ 5 ಸೈಕಲ್ ಅನ್ನು ಸ್ಪೋರ್ಟಿಯಾಗಿ ಹಾಗೂ ಪ್ರೀಮಿಯಂ ಆಗಿ ವಿನ್ಯಾಸಗೊಳಿಸಲಾಗಿದೆ. ಈ ಸೈಕಲ್ ಅನ್ನು ಇಟಲಿಯಲ್ಲಿ ತಯಾರಿಸಿದ ಯುನಿಟ್ ಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ಈ ಸೈಕಲ್ ನಲ್ಲಿ ಕ್ಯಾಂಪೆಕ್ನೋಲಾ ಬೋರಾ ಒನ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ. ಈ ವ್ಹೀಲ್ ಗಳಿಗೆ ವಿಟ್ಟೋರಿಯಾ ಕೊರ್ಸಾ ಪ್ರೊ ಟಯರ್‌ಗಳನ್ನು ಅಳವಡಿಸಲಾಗಿದೆ.
MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಆರಾಮದಾಯಕ ಸವಾರಿಗಾಗಿ ಫಿಸಿಕ್ ಅಲಿಯಾಂಟ್ ಸೀಟ್ ಅನ್ನು ಅಳವಡಿಸಲಾಗಿದೆ. ಈ ಸೈಕಲ್ ನಲ್ಲಿರುವ ವ್ಹೀಲ್ ನಲ್ಲಿ ಹಲವಾರು ವಿಶೇಷ ಘಟಕಗಳನ್ನು ಬಳಸಲಾಗಿದೆ. ಈ ಸೈಕಲ್ ವಿಶೇಷ ಫೀಚರ್ ಗಳನ್ನು ಹೊಂದಿದೆ.

ಲ್ಯಾಂಬೊರ್ಗಿನಿ ಕಂಪನಿಯು ದುಬಾರಿ ಬೆಲೆಯ ಸೈಕಲ್ ಗಳನ್ನು ಬಿಡುಗಡೆಗೊಳಿಸುತ್ತಿರುವುದು ಇದೇ ಮೊದಲ ಬಾರಿಯಲ್ಲ. ಲ್ಯಾಂಬೊರ್ಗಿನಿ ಕೆಲವು ತಿಂಗಳ ಹಿಂದೆ ರೂ.11.23 ಲಕ್ಷ ಬೆಲೆಯ ಸೆರ್ವಿಲ್ಲೊ ಪಿ 5 ಎಕ್ಸ್ ಸೈಕಲ್ ಅನ್ನು ಬಿಡುಗಡೆಗೊಳಿಸಿತ್ತು.
MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಲ್ಯಾಂಬೊರ್ಗಿನಿ ಕಂಪನಿಯು ಈ ಸೈಕಲ್ ಅನ್ನು ಸಹ ಸೀಮಿತ ಸಂಖ್ಯೆಯಲ್ಲಿ ಮಾರಾಟ ಮಾಡಿತ್ತು. ಕೇವಲ 25 ಯುನಿಟ್ ಗಳನ್ನು ಬಿಡುಗಡೆಗೊಳಿಸಲಾಗಿತ್ತು. ವರದಿಗಳ ಪ್ರಕಾರ, ಬಿಡುಗಡೆಯಾದ ಎಲ್ಲಾ 25 ಯುನಿಟ್ ಗಳು ಮಾರಾಟವಾಗಿವೆ.