ಮುಂಬೈ ಪೊಲೀಸರಿಗೆ ಮಾಡಿಫೈಗೊಳಿಸಿದ ಬೈಕ್ ನೀಡಿದ ಸುಜುಕಿ

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು, ಸಿಎಸ್ಆರ್ ಯೋಜನೆಯ ಭಾಗವಾಗಿ ತನ್ನ ಸರಣಿಯಲ್ಲಿರುವ ಜಿಕ್ಸರ್ 250 ಎಸ್‍ಎಫ್ ಬೈ‍ಕ್‍‍ಗಳನ್ನು ಮುಂಬೈ ಪೊಲೀಸರಿಗೆ ನೀಡಿದೆ. ವಿಶೇಷವಾಗಿ ಮಾಡಿಫೈ ಮಾಡಲಾದ 10 ಜಿಕ್ಸರ್ 250 ಎಸ್ಎಫ್ ಬೈಕ್‍‍ಗಳನ್ನು ಪೊಲೀಸರಿಗೆ ಸುಜುಕಿ ಕಂಪನಿಯು ಹಸ್ತಾಂತರಿಸಿದೆ.

ಮುಂಬೈ ಪೊಲೀಸರಿಗೆ ಮಾಡಿಫೈಗೊಳಿಸಿದ ಬೈಕ್ ನೀಡಿದ ಸುಜುಕಿ

ಈ ಹಿಂದೆ ಸುಜುಕಿ ಕಂಪನಿಯು ಮಾಡಿಫೈ ಮಾಡಲಾದ ಜಿಕ್ಸರ್ 250 ಎಸ್ಎಫ್ ಬೈಕ್‍‍ಗಳನ್ನು ಗುರಗಾಂವ್ ಮತ್ತು ಸೂರತ್‌ ಪೊಲೀಸರಿಗೆ ನೀಡಿದ್ದರು. ಪೊಲೀಸರಿಗೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಆತ್ಯಾಧುನಿಕ ವಾಹನಗಳ ಅಗತ್ಯವಿರುತ್ತದೆ. ಎಲ್ಲಾ ಆದ ಮೇಲೆ ಪೊಲೀಸರು ಬರುತ್ತಾರೆ ಎಂಬ ಅಪವಾದವಿದೆ ಪೊಲೀಸರ ಮೇಲೆ ಇದೆ. ಇಂತಹ ಸೂಪರ್ ಪಾಸ್ಟ್ ಬೈಕ್‍‍ಗಳನ್ನು ಹೊಂದಿದಾಗ ಪೊಲೀಸರು ಘಟನಾ ಸ್ಥಳಕ್ಕೆ ವೇಗವಾಗಿ ತಲುಪಬಹುದು.

ಮುಂಬೈ ಪೊಲೀಸರಿಗೆ ಮಾಡಿಫೈಗೊಳಿಸಿದ ಬೈಕ್ ನೀಡಿದ ಸುಜುಕಿ

ಇದನ್ನು ಪೊಲೀಸರಿಗಾಗಿ ವಿಶೇಷವಾಗಿ ಮಾಡಿಫೈ ಮಾಡಲಾಗಿದೆ. ಆದರೆ ಎಂಜಿನ್‍‍ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಪೊಲೀಸರಿಗೆ ನೀಡಿದ ಬೈಕಿನ ಮುಂಭಾಗದಲ್ಲಿ ಕೆಂಪು ಮತ್ತು ನೀಲಿ ಬೀಕನ್‍ಗಳನ್ನು ಒಳಗೊಂಡಿದೆ. ಇದರೊಂದಿಗೆ ಬೈಕಿನಲ್ಲಿ ಸೈಡ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಮುಂಬೈ ಪೊಲೀಸರಿಗೆ ಮಾಡಿಫೈಗೊಳಿಸಿದ ಬೈಕ್ ನೀಡಿದ ಸುಜುಕಿ

ಬಾಡಿ ಪ್ಯಾನೆಲ್, ಸೈಡ್ ಬಾಕ್ಸ್ ಮತ್ತು ವಿಂಡ್‍‍ಷೀಲ್ಡ್ ಗಳಲ್ಲಿ ಪೊಲೀಸ್ ಎಂಬ ಸ್ಟಿಕ್ಕರಿಂಗ್ ಅನ್ನು ಅಂಟಿಸಿದ್ದಾರೆ. ಹಿಂಭಾಗದಲ್ಲಿ ಲಾಠಿ ಇಡಲು ಬ್ಯಾಟನ್ ಅನ್ನು ಅಳವಡಿಸಲಾಗಿದೆ. ಪೊಲೀಸರಿಗೆ ನೀಡಲಾದ ಈ ಬಿಳಿ ಬಣ್ಣದ ಬೈಕ್ ಡೀಲರ್‍‍ಗಳ ಬಳಿ ಲಭ್ಯವಿರುವುದಿಲ್ಲ

ಮುಂಬೈ ಪೊಲೀಸರಿಗೆ ಮಾಡಿಫೈಗೊಳಿಸಿದ ಬೈಕ್ ನೀಡಿದ ಸುಜುಕಿ

ಈ ಬೈಕುಗಳನ್ನು ಪೊಲೀಸರಿಗಾಗಿ ವಿಶೇಷವಾಗಿ ಮಾಡಿಫೈಗೊಳಿಸಿದ್ದಾರೆ. ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಕಳೆದ ಬಾರಿ ತನ್ನ 5 ಜಿಕ್ಸರ್ 250 ಎಸ್‍ಎಫ್ ಬೈಕ್‍‍ಗಳನ್ನು ಸೂರತ್‌ನ ಪೊಲೀಸರಿಗೆ ನೀಡಿದ್ದರು.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಮುಂಬೈ ಪೊಲೀಸರಿಗೆ ಮಾಡಿಫೈಗೊಳಿಸಿದ ಬೈಕ್ ನೀಡಿದ ಸುಜುಕಿ

ಅಲ್ಲದೇ ಗುರಗಾಂವ್ ಪೊಲೀಸರಿಗೂ ಕೂಡ ಕಳೆದ ಬಾರಿ ಜಿಕ್ಸರ್ 250 ಎಸ್‍ಎಫ್ ಮಾದರಿಯ 155 ಬೈಕ್‍‍ಗಳನ್ನು ನೀಡಿದ್ದರು. ಈ ಬೈಕ್‍ಗಳನ್ನು ಕೂಡ ವಿಶೇಷವಾಗಿ ಮಾಡಿಫೈಗೊಳಿಸಲಾಗಿತ್ತು.

ಮುಂಬೈ ಪೊಲೀಸರಿಗೆ ಮಾಡಿಫೈಗೊಳಿಸಿದ ಬೈಕ್ ನೀಡಿದ ಸುಜುಕಿ

ಜಿಕ್ಸರ್ 250 ಎಸ್ಎಫ್ ಬೈಕಿನಲ್ಲಿ 249 ಸಿಸಿ ಸಿಂಗಲ್ ಸಿಲಿಂಡರ್ ಆಯಿಲ್-ಕೂಲ್ಡ್ ಎಂಜಿನ್‌ ಅಳವಡಿಸಲಾಗಿದೆ. ಈ ಎಂಜಿನ್ 9000 ಆರ್‍‍ಪಿ‍ಎಂನಲ್ಲಿ 26.5 ಬಿ‍‍ಹೆ್ಚ್‍‍ಪಿ ಪವರ್ ಹಾಗೂ 7500 ಆರ್‍‍ಪಿ‍ಎಂನಲ್ಲಿ 22.6 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ ಆರು ಸ್ಪೀಡ್‍‍ನ ಗೇರ್‌ಬಾಕ್ಸ್‌ ಅನ್ನು ಅಳವಡಿಸಲಾಗಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಮುಂಬೈ ಪೊಲೀಸರಿಗೆ ಮಾಡಿಫೈಗೊಳಿಸಿದ ಬೈಕ್ ನೀಡಿದ ಸುಜುಕಿ

ಜಿಕ್ಸರ್ ಎಸ್‌ಎಫ್ 250 ಬೈಕ್, ಸ್ಟ್ಯಾಂಡರ್ಡ್ ಮಾದರಿಯ ಬೈಕಿನಲ್ಲಿರುವಂತಹ ಸಸ್ಪೆಂಷನ್ ಹಾಗೂ ಬ್ರೇಕ್‌ಗಳನ್ನು ಹೊಂದಿದೆ. ಈ ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗದಲ್ಲಿ ಮೊನೊ ಶಾಕ್‍‍ಗಳಿವೆ. ಈ ಬೈಕಿನಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಅಳವಡಿಸಲಾಗಿದೆ.

ಮುಂಬೈ ಪೊಲೀಸರಿಗೆ ಮಾಡಿಫೈಗೊಳಿಸಿದ ಬೈಕ್ ನೀಡಿದ ಸುಜುಕಿ

ಸುಜುಕಿ ಜಿಕ್ಸರ್ ಎಸ್‌ಎಫ್ 250 ಬೈಕಿನಲ್ಲಿ ಹಲವಾರು ಫೀಚರ್‍‍ಗಳನ್ನು ಅಳವಡಿಸಲಾಗಿದೆ. ಇವುಗಳು ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಟೇಲ್‌ಲೈಟ್, ಸ್ಪೋರ್ಟಿ ಡ್ಯುಯಲ್ ಮಫ್ಲರ್ ಮತ್ತು ಪೂರ್ಣ ಪ್ರಮಾಣದ ಡಿಜಿಟಲ್ ಸ್ಪೀಡೊಮೀಟರ್‍‍ಗಳಾಗಿವೆ.

More from DriveSpark

Article Published On: Tuesday, July 21, 2020, 17:32 [IST]
English summary
Suzuki Gixxer 250 Added To Mumbai Police Fleet. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+