ಬಿಡುಗಡೆಯಾದ ಸೆಕೆಂಡುಗಳಲ್ಲಿ ಎಂವಿ ಅಗಸ್ಟಾ ಬೈಕ್ ಸೋಲ್ಡ್ ಔಟ್

ಎಂವಿ ಅಗಸ್ಟಾ ಕಂಪನಿಯು ತನ್ನ 75ನೇ ವಾರ್ಷಿಕೋತ್ಸದ ಪ್ರಯುಕ್ತ ಎಂವಿ ಅಗಸ್ಟಾ ಕಂಪನಿಯು ಸೂಪರ್‌ವೆಲೋಸ್ 75 ಆನಿವರ್ಸರಿಯೊ ಲಿಮಿಟೆಡ್ ಎಡಿಷನ್ ಅನ್ನು ಬಿಡುಗಡೆಗೊಳಿಸಿತ್ತು. ಈ ಲಿಮಿಟೆಡ್ ಎಡಿಷನ್ ಸ್ಟ್ಯಾಂಡರ್ಡ್ ಸೂಪರ್‌ವೆಲೋಸ್ ಅನ್ನು ಆಧರಿಸಿದೆ.

ಬಿಡುಗಡೆಯಾದ ಸೆಕೆಂಡುಗಳಲ್ಲಿ ಎಂವಿ ಅಗಸ್ಟಾ ಬೈಕ್ ಸೋಲ್ಡ್ ಔಟ್

ಇದರ ವಿಶೇಷವೆಂದರೆ ಎಂವಿ ಅಗಸ್ಟಾ ಕಂಪನಿಯ ಸೂಪರ್‌ವೆಲೋಸ್ 75 ಆನಿವರ್ಸರಿಯೊ ಲಿಮಿಟೆಡ್ ಎಡಿಷನ್ ಮಾದರಿಯ 75 ಯುನಿಟ್ ಗಳನ್ನು ಮಾತ್ರ ಬಿಡುಗಡೆಗೊಳಿಸಿತ್ತು. ನವೆಂಬರ್ 14 ರಿಂದ 75 ಗಂಟೆಗಳ ಕಾಲ ಮಾರಾಟವಾಗಲಿದೆ ಎಂದು ಬಿಡುಗಡೆಗೊಳಿಸಲಾಯಿತು. ಎಲ್ಲಾ 75 ಯುನಿಟ್ ಗಳು ಬಿಡುಗಡೆಯಾದ ಸೆಕೆಂಡುಗಳಲ್ಲಿ ಮಾರಾಟವಾದವು. ಸೂಪರ್‌ವೆಲೋಸ್‌ 75ನೇ ಆನಿವರ್ಸರಿ ಲಿಮಿಟೆಡ್ ಎಡಿಷನ್ ನಲ್ಲಿ 75 ಸಂಖ್ಯೆಯ ಗ್ರಾಫಿಕ್ಸ್ ಅನ್ನು ಕಾಣಬಹುದಾಗಿದೆ.

ಬಿಡುಗಡೆಯಾದ ಸೆಕೆಂಡುಗಳಲ್ಲಿ ಎಂವಿ ಅಗಸ್ಟಾ ಬೈಕ್ ಸೋಲ್ಡ್ ಔಟ್

ಸೂಪರ್‌ವೆಲೋಸ್‌ 75 ಆನಿವರ್ಸರಿಯೊ ಎಡಿಷನ್ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಈ ಬೈಕಿನಲ್ಲಿ ಅದರ ಫೇರಿಂಗ್, ಗೋಲ್ಡನ್ ವ್ಹೀಲ್ಸ್, ರೆಡ್ ಅಲ್ಕಾಂಟರಾ ಸೀಟ್, ಸ್ಟೀರಿಂಗ್ ಹೆಡ್‌ನಲ್ಲಿ ಖ್ಯೆಯ ಅಲ್ಯೂಮಿನಿಯಂ ಪ್ಲೇಟ್ ಮತ್ತು ಬೈಕ್‌ಗೆ ವಿಶೇಷ ಕವರ್ ಅನ್ನು ಹೊಂದಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಬಿಡುಗಡೆಯಾದ ಸೆಕೆಂಡುಗಳಲ್ಲಿ ಎಂವಿ ಅಗಸ್ಟಾ ಬೈಕ್ ಸೋಲ್ಡ್ ಔಟ್

ಈ ಬೈಕಿನಲ್ಲಿ 798 ಸಿಸಿ ಇನ್-ಲೈನ್ ಮೂರು ಸಿಲಿಂಡರ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 13,000 ಆರ್‌ಪಿಎಂನಲ್ಲಿ 145 ಬಿಹೆಚ್‌ಪಿ ಪವರ್ ಮತ್ತು 10,600 ಆರ್‌ಪಿಎಂನಲ್ಲಿ 88 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರಲ್ಲಿರುವ ಎಕ್ಸಾಸ್ಟ್ ಸಿಸ್ಟಂ 13,250 ಆರ್‌ಪಿಎಂನಲ್ಲಿ 150 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಬಿಡುಗಡೆಯಾದ ಸೆಕೆಂಡುಗಳಲ್ಲಿ ಎಂವಿ ಅಗಸ್ಟಾ ಬೈಕ್ ಸೋಲ್ಡ್ ಔಟ್

ಈ ಬೈಕಿನ ಎಂಜಿನ್ ನೊಂದಿಗೆ ಆರು-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ಪರ್ ಅಸಿಸ್ಟ್ ಕ್ಲಚ್ ಮತ್ತು ಕ್ಲಚ್‌ಲೆಸ್ ಶಿಫ್ಟಿಂಗ್‌ಗಾಗಿ ಕ್ವಿಕ್ ಶಿಫ್ಟರ್ ಅನ್ನು ಅಳವಡಿಸಿದೆ. ಈ ಬೈಕ್ ಎಲೆಕ್ಟ್ರಾನಿಕ್ ರೈಡರ್ ಏಡ್ಸ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಬಿಡುಗಡೆಯಾದ ಸೆಕೆಂಡುಗಳಲ್ಲಿ ಎಂವಿ ಅಗಸ್ಟಾ ಬೈಕ್ ಸೋಲ್ಡ್ ಔಟ್

ಇವುಗಳಲ್ಲಿ ನಾಲ್ಕು ಪವರ್ ಮೋಡ್‌ಗಳು, ಎಂಟು ಹಂತದ ಟ್ರಾಕ್ಷನ್ ಕಂಟ್ರೋಲ್, ಮತ್ತು ರೇಸ್ ಮೋಡ್ ಮತ್ತು ರೇರ್-ವೀಲ್ ಲಿಫ್ಟ್ ನೊಂದಿಗೆ ಬಾಷ್ 9 ಪ್ಲಸ್ ಎಬಿಎಸ್ ಸೇರಿವೆ. ಎಂವಿ ಅಗಸ್ಟಾ ಸೂಪರ್ ವೆಲೋಸ್ ಬೈಕಿನಲ್ಲಿ ಸಸ್ಪೆಂಷನ್ ಗಾಗಿ 43 ಎಂಎಂ ಯುಎಸ್‌ಡಿ ಫೋರ್ಕ್ ಅಳವಡಿಸಿದೆ.

ಬಿಡುಗಡೆಯಾದ ಸೆಕೆಂಡುಗಳಲ್ಲಿ ಎಂವಿ ಅಗಸ್ಟಾ ಬೈಕ್ ಸೋಲ್ಡ್ ಔಟ್

ಇದರೊಂದಿಗೆ ರಿಬೌಂಡ್-ಡ್ಯಾಂಪಿಂಗ್ ಮತ್ತು ಸ್ಪ್ರಿಂಗ್-ಪ್ರೀಲೋಡ್ ಮತ್ತು ಹಿಂಭಾಗದಲ್ಲಿ ಸ್ಯಾಚ್ಸ್‌ನಿಂದ ಸಂಪೂರ್ಣವಾಗಿ ಹೊಂದಾಣಿಕೆ ಮಾಡಬಹುದಾದ ಮೊನೊ ಶಾಕ್ ಸೆಟಪ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಬಿಡುಗಡೆಯಾದ ಸೆಕೆಂಡುಗಳಲ್ಲಿ ಎಂವಿ ಅಗಸ್ಟಾ ಬೈಕ್ ಸೋಲ್ಡ್ ಔಟ್

ಈ ಬೈಕಿನ ಬ್ರೇಕಿಂಗ್ ಬಗ್ಗೆ ಹೇಳುವುದಾದರೆ, 320 ಎಂಎಂ ಫ್ಲೋಟಿಂಗ್ ಡಿಸ್ಕ್ ಮತ್ತು ಮುಂಭಾಗದಲ್ಲಿ ರೇಡಿಯಲ್-ಮೌಂಟೆಡ್ ನಾಲ್ಕು-ಪಿಸ್ಟನ್ ಬ್ರೆಂಬೊ ಮೊನೊಬ್ಲಾಕ್ ಕ್ಯಾಲಿಪರ್ಸ್ ಮತ್ತು ಹಿಂಭಾಗದಲ್ಲಿ ಎರಡು-ಪಿಸ್ಟನ್ ಬ್ರೆಂಬೊ ಕ್ಯಾಲಿಪರ್ನೊಂದಿಗೆ 220 ಎಂಎಂ ಡಿಸ್ಕ್ ಅನ್ನು ಹೂಂದಿದೆ.

ಬಿಡುಗಡೆಯಾದ ಸೆಕೆಂಡುಗಳಲ್ಲಿ ಎಂವಿ ಅಗಸ್ಟಾ ಬೈಕ್ ಸೋಲ್ಡ್ ಔಟ್

ಇನ್ನು ಸ್ಟ್ಯಾಂಡರ್ಡ್ ಎಂವಿ ಅಗಸ್ಟಾ ಸೂಪರ್ ವೆಲೋಸ್ 800 ಸೆರಿ ಓರೊ ಬೈಕ್ 2018ರ ಇಐಸಿಎಂಎನಲ್ಲಿ ಪ್ರದರ್ಶಿಸಿದ ನಂತರ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ .ಈ ಬೈಕ್ ಮಾರ್ಡಾನ್-ರೆಟ್ರೊ ವಿನ್ಯಾಸದಿಂದ ಅನೇಕ ಪ್ರಶಸ್ತಿಯನ್ನು ಗೆದ್ದಿದೆ.

More from DriveSpark

Article Published On: Thursday, November 19, 2020, 16:28 [IST]
English summary
MV Agusta Superveloce 75 Anniversario Sold Out Within Seconds. Read In Kananda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+