Just In
- 1 hr ago Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- 14 hrs ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 16 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 16 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
Don't Miss!
- Movies 'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
- News ಲೋಕಸಭೆ ಚುನಾವಣೆ : ಶೇ 100ರಷ್ಟು ಮತದಾನವಾದರೆ ಸಿಗಲಿದೆ ಪ್ರಶಸ್ತಿ
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎರಡು ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಯಗಲಿದೆ ಎಪ್ರಿಲಿಯಾ ಎಸ್ಎಕ್ಸ್ಆರ್ 160 ಸ್ಕೂಟರ್
ಪಿಯಾಜಿಯೊ ಇಂಡಿಯಾ ಕಂಪನಿಯು ತನ್ನ ಎಪ್ರಿಲಿಯಾ ಎಸ್ಎಕ್ಸ್ಆರ್ 160 ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಎಪ್ರಿಲಿಯಾ ಎಸ್ಎಕ್ಸ್ಆರ್ 160 ಸ್ಕೂಟರ್ ಅನ್ನು ಮೊದಲ ಬಾರಿಗೆ ದೆಹಲಿಯಲ್ಲಿ ನಡೆದ 2020ರ ಆಟೋ ಎಕ್ಸ್ಪೋದಲ್ಲಿ ಅನಾವರಣಗೊಳಿಸಿತ್ತು.
ಎಪ್ರಿಲಿಯಾ ಎಸ್ಎಕ್ಸ್ಆರ್ 160 ಸ್ಕೂಟರ್ ಉತ್ಪಾದನೆಯನ್ನು ಭಾರತದಲ್ಲಿ ಪ್ರಾರಂಭವಾಗಲಿದೆ. ಬಾರಾಮತಿಯ ಪಿಯಾಜಿಯೊ ಇಂಡಿಯಾದ ಸ್ಥಾವರದಲ್ಲಿ ಎಪ್ರಿಲಿಯಾ ಎಸ್ಎಕ್ಸ್ಆರ್ 160 ಸ್ಕೂಟರ್ ಉತ್ಪಾದಿಸಲಾಗುತ್ತದೆ. ಹೊಸ ಎಸ್ಎಕ್ಸ್ಆರ್ 160 ಸ್ಕೂಟರ್ ಗಾಗಿ ಕೆಲವು ಡೀಲರುಗಳು ಅನಧಿಕೃತವಾಗಿ ಬುಕ್ಕಿಂಗ್ ಸ್ಬೀಕರಿಸಲು ಪ್ರಾರಂಭಿಸಿದ್ದಾರೆ. ಎಪ್ರಿಲಿಯಾ ಎಸ್ಎಕ್ಸ್ಆರ್ 160 ಪ್ರೀಮಿಯಂ ಸ್ಕೂಟರ್ ಆಗಿದೆ. ಎಪ್ರಿಲಿಯಾ ಎಸ್ಎಕ್ಸ್ಆರ್ 160 ಸ್ಕೂಟರ್ ಈಗಾಗಲೇ ಅನಾವರಣಗೊಳಿಸಿದ ಕೆಂಪು ಬಣ್ಣದ ಜೋತೆಗೆ ಹೊಸ ನೀಲಿ ಬಣ್ಣಗಳಲ್ಲಿಯು ಲಭ್ಯವಿರಲಿದೆ.
ಕೆಲವು ಡೀಲರು ಟೋಕನ್ ಮೊತ್ತ ರೂ.5,000 ಗಳಿಗೆ ಬುಕ್ಕಿಂಗ್ ಅನ್ನು ಸ್ವೀಕರಿಸಲಾಗುತ್ತಿದೆ. ಈ ಹೊಸ ಎಪ್ರಿಲಿಯಾ ಹೊಸ ಎಸ್ಎಕ್ಸ್ಆರ್ 160 ಸ್ಕೂಟರ್ ಮುಂದಿನ ವಾರ ಅಥಾವ ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ಬಿಡುಗಡೆಯಾಗಬಹುದೆಂದು ನಿರೀಕ್ಷಿಸುತ್ತೇವೆ. ಭಾರತದಲ್ಲಿ ಆಟೋಮ್ಯಾಟಿಕ್ ಸ್ಕೂಟರ್ಗಳಿಗೆ ಹೆಚ್ಚಿನ ಬೇಡಿಕೆಯಿದೆ.
MOST
READ:
ದುಬಾರಿಯಾಯ್ತು
ಬಿಎಸ್-6
ಟಿವಿಎಸ್
ಎನ್ಟಾರ್ಕ್
125
ಸ್ಕೂಟರ್
ಇದರ ಜೊತೆಗೆ ಗ್ರಾಹಕರು ಹೆಚ್ಚು ಸಾಮರ್ಥ್ಯವನ್ನು ಹೊಂದಿರುವ ವಿಶಿಷ್ಟ ವಿನ್ಯಾಸದ ಸ್ಕೂಟರ್ಗಳಿಗೆ ಹೆಚ್ಚು ಗಮನವನ್ನು ನೀಡುತ್ತಿದ್ದಾರೆ. ಈ ಕಾರಣಕ್ಕಾಗಿ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಎಪ್ರಿಲಿಯಾ ತನ್ನ ಮ್ಯಾಕ್ಸಿ ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಮುಂದಾಗಿದೆ.
ಈ ಎಸ್ಎಕ್ಸ್ಆರ್ 160 ಸ್ಕೂಟರ್ ಸೈಡ್ ಹಾಗೂ ಹಿಂಭಾಗದಲ್ಲಿರುವ ಸ್ಟೈಲಿಶ್ ಲುಕ್ನ ಬಾಡಿ ಗ್ರಾಫಿಕ್ಸ್ ಹಾಗೂ ಡಿಸೈನ್ಗಳು ಈ ಸ್ಕೂಟರ್ಗಳಿಗೆ ಸ್ಪೋರ್ಟಿ ಲುಕ್ ನೀಡುತ್ತವೆ. ಎಪ್ರಿಲಿಯಾ ಎಸ್ಎಕ್ಸ್ಆರ್ 160 ಮ್ಯಾಕ್ಸಿ-ಸ್ಕೂಟರ್ ಯುರೋಪಿಯನ್ ಮತ್ತು ಆಗ್ನೇಯ ಏಷ್ಯಾದ ಮಾರುಕಟ್ಟೆಗಳಲ್ಲಿ ಜನಪ್ರಿಯ ಮಾದರಿಯಾಗಿದೆ.
MOST READ: ಎಪ್ರಿಲಿಯಾ ಎಸ್ಎಕ್ಸ್ಆರ್ 160 ಸ್ಕೂಟರ್ ಟೀಸರ್ ಚಿತ್ರ ಬಿಡುಗಡೆ
ಕರೋನಾ ಸೋಂಕಿನ ಭೀತಿಯಿಂದಾಗ ಎಪ್ರಿಲಿಯಾ ಎಸ್ಎಕ್ಸ್ಆರ್ 160 ಸ್ಕೂಟರ್ ಭಾರತದಲ್ಲಿ ಬಿಡುಗಡೆಯಾಗುವುದು ವಿಳಂಬವಾಗಿದೆ. ಎಸ್ಎಕ್ಸ್ಆರ್ 160 ಸ್ಕೂಟರ್ ಅನ್ನು ಕ್ರಾಸ್ಒವರ್ ಸ್ಕೂಟರ್ ರೀತಿಯಲ್ಲಿ ಕಾಣುವಂತೆ ವಿನ್ಯಾಸಗೊಳಿಸಲಾಗಿದೆ. ಈ ಸ್ಕೂಟರ್ನಲ್ಲಿ ಡ್ಯುಯಲ್ ಎಲ್ಇಡಿ ಹೆಡ್ಲೈಟ್, ಡ್ಯುಯಲ್ ಎಲ್ಇಡಿ ಟೇಲ್ ಲೈಟ್ ಕ್ಲಸ್ಟರ್ಗಳಿವೆ.
ದೊಡ್ಡ ಗಾತ್ರದ ವಿಂಡ್ಸ್ಕ್ರೀನ್ ಸಿಸ್ಟಂ, ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಸೀಟಿನ ಕೆಳಗಿರಿಸಲಾಗಿದೆ. ಎಪ್ರಿಲಿಯಾ ಎಸ್ಎಕ್ಸ್ಆರ್ 160 ಸ್ಕೂಟರ್ನಲ್ಲಿ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅಳವಡಿಸಲಾಗಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್
ಎಪ್ರಿಲಿಯಾ ಎಸ್ಎಕ್ಸ್ಆರ್ 160 ಪ್ರೀಮಿಯಂ ಸ್ಕೂಟರ್ ಬೆಲೆಯು ಸುಮಾರು ರೂ.1.5 ಲಕ್ಷಗಳಾಗಿರಬಹುದು ಎಂದು ನಿರೀಕ್ಷಿಸುತ್ತೇವೆ. ಹೊಸ ಎಪ್ರಿಲಿಯಾ ಎಸ್ಎಕ್ಸ್ಆರ್ 160 ಪ್ರೀಮಿಯಂ ಸ್ಕೂಟರ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಸ್ಕೋಟರ್ ಅನ್ನು ಸ್ಥಳೀಯವಾಗಿ ಅಭಿವೃದ್ದಿಪಡಿಸಲಾಗುತ್ತದೆ.
ಈ ಸ್ಕೂಟರಿನ ಸೈಡ್ ಹಾಗೂ ಹಿಂಭಾಗದಲ್ಲಿರುವ ಸ್ಟೈಲಿಶ್ ಲುಕ್ನ ಬಾಡಿ ಗ್ರಾಫಿಕ್ಸ್ ಹಾಗೂ ಡಿಸೈನ್ಗಳು ಸಹ ಈ ಸ್ಕೂಟರಿಗೆ ಸ್ಪೋರ್ಟಿ ಲುಕ್ ನೀಡುತ್ತವೆ. ಸ್ಕೂಟರ್ ಸವಾರ ಹಾಗೂ ಹಿಂಬದಿಯ ಪ್ರಯಾಣಿಕರಿಗೆ ಆರಾಮದಾಯಕವಾಗಿರುವ ಸೀಟ್ಗಳನ್ನು ನೀಡಲಾಗಿದೆ.
ಎಪ್ರಿಲಿಯಾ ಎಸ್ಎಕ್ಸ್ಆರ್ 160 ಸ್ಕೂಟರ್ 160 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಇದು 3-ವ್ಯಾಲ್ಯೂ ಫ್ಯೂಯಲ್ ಇಂಜೆಕ್ಷನ್ ಅನ್ನು ಹೊಂದಿದೆ. ಈ ಎಂಜಿನ್ 11 ಬಿಹೆಚ್ಪಿ ಪವರ್ ಮತ್ತು 11.6 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಶೀಘ್ರದಲ್ಲೇ ಈ ಹೊಸ ಎಪ್ರಿಲಿಯಾ ಎಸ್ಎಕ್ಸ್ಆರ್ 160 ಸ್ಕೂಟರ್ ಭಾರತದಲ್ಲಿ ಬಿಡುಗಡೆಯಾಗಲಿದೆ.