ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಖರೀದಿಗೆ ಬುಕ್ಕಿಂಗ್ ಆರಂಭ
ಪಿಯಾಜಿಯೊ ಕಂಪನಿಯು ತನ್ನ ಹೊಸ ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ ಪಿಯಾಜಿಯೊ ತನ್ನ ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಗಾಗಿ ಭಾರತೀಯ ಮಾರುಕಟ್ಟೆಯಲ್ಲಿ ಪ್ರಿ-ಬುಕ್ಕಿಂಗ್ ಅನ್ನು ಆರಂಭಿಸಿದೆ.

ಈ ಹೊಸ ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಖರೀದಿಸಲು ಬಯಸುವ ಗ್ರಾಹಕರು ರೂ.5,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಬಾರಾಮತಿಯ ಪಿಯಾಜಿಯೊ ಇಂಡಿಯಾದ ಸ್ಥಾವರದಲ್ಲಿ ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಅನ್ನು ಉತ್ಪಾದನೆಯನ್ನು ಈಗಾಗಲೇ ಆರಂಭಿಸಿದೆ. ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರಲಿದೆ. ಈ ಹೊಸ ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಅನ್ನು ಮೊದಲ ಬಾರಿಗೆ ದೆಹಲಿಯಲ್ಲಿ ನಡೆದ 2020ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿತ್ತು.

ಈ ಹೊಸ ಎಪ್ರಿಲಿಯಾ ಹೊಸ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಇದೇ ತಿಂಗಳು ಭಾರತೀಯ ಮಾರುಕಟ್ಟೆ ಬಿಡುಗಡೆಯಾಗಲಿದೆ. ಇನ್ನು ಜನವರಿ ಮೊದಲ ವಾರದಲ್ಲಿ ಈ ಹೊಸ ಸ್ಕೂಟರ್ ವಿತರಣೆಗಳು ಪ್ರಾರಂಭವಾಗುತ್ತವೆ. ಭಾರತದಲ್ಲಿ ಆಟೋಮ್ಯಾಟಿಕ್ ಸ್ಕೂಟರ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಇದರ ಜೊತೆಗೆ ಗ್ರಾಹಕರು ಹೆಚ್ಚು ಸಾಮರ್ಥ್ಯವನ್ನು ಹೊಂದಿರುವ ವಿಶಿಷ್ಟ ವಿನ್ಯಾಸದ ಸ್ಕೂಟರ್‍ಗಳಿಗೆ ಹೆಚ್ಚು ಗಮನವನ್ನು ನೀಡುತ್ತಿದ್ದಾರೆ. ಈ ಕಾರಣಕ್ಕಾಗಿ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಎಪ್ರಿಲಿಯಾ ತನ್ನ ಮ್ಯಾಕ್ಸಿ ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಮುಂದಾಗಿದೆ.

ಈ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಸೈಡ್ ಹಾಗೂ ಹಿಂಭಾಗದಲ್ಲಿರುವ ಸ್ಟೈಲಿಶ್ ಲುಕ್‍ನ ಬಾಡಿ ಗ್ರಾಫಿಕ್ಸ್ ಹಾಗೂ ಡಿಸೈನ್‍ಗಳು ಈ ಸ್ಕೂಟರ್‍ಗಳಿಗೆ ಸ್ಪೋರ್ಟಿ ಲುಕ್ ನೀಡುತ್ತವೆ. ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಮ್ಯಾಕ್ಸಿ-ಸ್ಕೂಟರ್ ಯುರೋಪಿಯನ್ ಮತ್ತು ಆಗ್ನೇಯ ಏಷ್ಯಾದ ಮಾರುಕಟ್ಟೆಗಳಲ್ಲಿ ಜನಪ್ರಿಯ ಮಾದರಿಯಾಗಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಕರೋನಾ ಸೋಂಕಿನ ಭೀತಿಯಿಂದಾಗ ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಭಾರತದಲ್ಲಿ ಬಿಡುಗಡೆಯಾಗುವುದು ವಿಳಂಬವಾಗಿದೆ. ಎಸ್‌ಎಕ್ಸ್‌ಆರ್ 160 ಸ್ಕೂಟರ್ ಅನ್ನು ಕ್ರಾಸ್ಒವರ್ ಸ್ಕೂಟರ್ ರೀತಿಯಲ್ಲಿ ಕಾಣುವಂತೆ ವಿನ್ಯಾಸಗೊಳಿಸಲಾಗಿದೆ. ಈ ಸ್ಕೂಟರ್‌ನಲ್ಲಿ ಡ್ಯುಯಲ್ ಎಲ್‌ಇಡಿ ಹೆಡ್‌ಲೈಟ್, ಡ್ಯುಯಲ್ ಎಲ್‌ಇಡಿ ಟೇಲ್ ಲೈಟ್ ಕ್ಲಸ್ಟರ್‌ಗಳಿವೆ.

ದೊಡ್ಡ ಗಾತ್ರದ ವಿಂಡ್‌ಸ್ಕ್ರೀನ್ ಸಿಸ್ಟಂ, ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಸೀಟಿನ ಕೆಳಗಿರಿಸಲಾಗಿದೆ. ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್‌ನಲ್ಲಿ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅಳವಡಿಸಲಾಗಿದೆ.
MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಪ್ರೀಮಿಯಂ ಸ್ಕೂಟರ್ ಬೆಲೆಯು ಸುಮಾರು ರೂ.1.27 ಲಕ್ಷಗಳಾಗಿರಬಹುದು ಎಂದು ನಿರೀಕ್ಷಿಸುತ್ತೇವೆ. ಹೊಸ ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಪ್ರೀಮಿಯಂ ಸ್ಕೂಟರ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಸ್ಕೋಟರ್ ಅನ್ನು ಸ್ಥಳೀಯವಾಗಿ ಅಭಿವೃದ್ದಿಪಡಿಸಲಾಗುತ್ತದೆ.

ಸ್ಕೂಟರ್ ಸವಾರ ಹಾಗೂ ಹಿಂಬದಿಯ ಪ್ರಯಾಣಿಕರಿಗೆ ಆರಾಮದಾಯಕವಾಗಿರುವ ಸೀಟ್‍ಗಳನ್ನು ನೀಡಲಾಗಿದೆ. ಈ ಸ್ಕೂಟರಿನ ಸೈಡ್ ಹಾಗೂ ಹಿಂಭಾಗದಲ್ಲಿರುವ ಸ್ಟೈಲಿಶ್ ಲುಕ್‍ನ ಬಾಡಿ ಗ್ರಾಫಿಕ್ಸ್ ಹಾಗೂ ಡಿಸೈನ್‍ಗಳು ಸಹ ಈ ಮ್ಯಾಕ್ಸಿ ಸ್ಕೂಟರಿಗೆ ಸ್ಪೋರ್ಟಿ ಲುಕ್ ನೀಡುತ್ತವೆ. ಹೆಚ್ಚಾಗಿ ಯುವಗ್ರಾಹಕರನ್ನು ಈ ಸ್ಕೂಟರ್ ಆಕರ್ಷಿಸಬಹುದು ಎಂದು ನಿರೀಕ್ಷಿಸುತ್ತೇವೆ. ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಭಾರತೀಯ ಮಾರುಕಟ್ಟೆಯಲ್ಲಿ ಬಹು ನಿರೀಕ್ಷಿತ ಪ್ರೀಮಿಯಂ ಸ್ಕೂಟರ್‌ಗಳಲ್ಲಿ ಒಂದಾಗಿದೆ


Click it and Unblock the Notifications








