ಬಹಿರಂಗವಾಯ್ತು ಬಿಎಸ್-6 ಬಜಾಜ್ ಡೋಮಿನಾರ್ 400 ಬೈಕಿನ ದರ
ಬಜಾಜ್ ಆಟೋ ಕಂಪನಿಯು ತನ್ನ ಡೋಮಿನಾರ್ 400 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ ಈ ಸ್ಪೋರ್ಟ್ ಟೂರರ್ ಬೈಕಿನ ಬೆಲೆಯು ಬಹಿರಂಗವಾಗಿದೆ.

ಬಿಎಎಸ್-6 ಡೋಮಿನಾರ್ 400 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1,91,751 ಲಕ್ಷಗಳಾಗಿದೆ. ಬಿಎಸ್-6 ಡೋಮಿನಾರ್ 400 ಬೈಕಿನ ಬೆಲೆಗೆ ಹೋಲಿಸಿದರೆ ರೂ.1,749 ರಷ್ಟು ಹೆಚ್ಚಿಸಲಾಗಿದೆ. ಹೊಸ ಡೋಮಿನಾರ್ ಬೈಕ್ ಆಕಷರ್ಕಕ ಲುಕ್ ಅನ್ನು ಹೊಂದಿರಲಿದೆ. ಡೋಮಿನಾರ್ 400, ಬೈಕಿನಲ್ಲಿ 373.3 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, ಡಿಒಹೆಚ್‍ಸಿ ಎಂಜಿನ್ ಅನ್ನು ಹೊಂದಿರಲಿದೆ.

ಈ ಎಂಜಿನ್ 8800 ಆರ್‍ಪಿಎಂನಲ್ಲಿ 39.4 ಬಿಹೆಚ್‍ಪಿ ಪವರ್ ಮತ್ತು 7000 ಆರ್‍ಪಿಎಂನಲ್ಲಿ 35 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 6 ಸ್ಪೀಡ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಬಜಾಜ್ ಆಟೋ ಕಂಪನಿಯು 2019ರ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಹಿಂದಿನ ಮಾದರಿ ಡೋಮಿನಾರ್ 400 ಬೈಕಿನ ಬೆಲೆಯನ್ನು ಸುಮಾರು ರೂ,10,000ಗಳವರೆಗೆ ಹೆಚ್ಚಿಸಿದರು.

ನಂತರದ ದಿನಗಳಲ್ಲಿ ಇದೇ ಬೈಕಿನ ಬೆಲೆಯನ್ನು ಮತ್ತೆ ರೂ.6,000 ಗಳವರೆಗೆ ಹೆಚ್ಚಿಸಲಾಗಿತ್ತು. ಬಿಎಸ್-6 ಬಜಾಜ್ ಡೋಮಿನಾರ್ 400 ಬೈಕಿನಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್ ಮತ್ತು ಡ್ಯುಯಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅಳವಡಿಸಲಾಗುತ್ತದೆ.

ಹೊಸ ಬಜಾಜ್ ಡೋಮಿನಾರ್ 400 ಬೈಕ್ ಬ್ಲ್ಯಾಕ್ ಮತ್ತು ಗ್ರೀನ್ ಬಣ್ಣಗಳಲ್ಲಿ ಲಭ್ಯವಿರಲಿದೆ. ರೆಡ್ ಮತ್ತು ವೈಟ್ ಬಣ್ಣಗಳ ಆಯ್ಕೆಯನ್ನು ಹೊಂದಿರುವ ಬೈಕ್ ಅನ್ನು ಬಿಎಸ್-6 ನಿಯಮಕ್ಕೆ ಅನುಗುಣವಾಗಿ ನವೀಕರಿಸುವುದಿಲ್ಲ.

ಬಜಾಜ್ ಡೋಮಿನಾರ್ ಬೈಕಿನ ಮಾರಾಟದಲ್ಲಿ ಇಳಿಕೆಯಾಗಿದೆ. ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಈ ಡೋಮಿನಾರ್ ಬೈಕಿನ 180 ಯುನಿಟ್‍ಗಳು ಮಾತ್ರ ಮಾರಾಟವಾಗಿವೆ. ಬಜಾಜ್ ಕಂಪನಿಯ ಸರಣಿಯಲ್ಲಿ ಅತಿ ಕಡೆಮೆ ಮಾರಾಟವಾಗುವ ಬೈಕ್‍ಗಳಲ್ಲಿ ಒಂದಾಗಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಬಜಾಜ್ ಡೊಮಿನಾರ್ 250 ಬೈಕಿನಲ್ಲಿ 248.8 ಸಿಸಿಯ ಲಿಕ್ವಿಡ್ ಕೂಲ್ ಬಿಎಸ್ 6 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 27 ಬಿಹೆಚ್‍ಪಿ ಪವರ್ ಹಾಗೂ 23.5 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ 6 ಸ್ಪೀಡಿನ ಗೇರ್‍ಬಾಕ್ಸ್ ಅಳವಡಿಸಲಾಗಿದೆ.

ಬಜಾಜ್ ಡೋಮಿನಾರ್ ಬಿಎಸ್-6 ಆವೃತ್ತಿಯಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ. ಬಿಎಸ್-6 ಡೋಮಿನಾರ್ 400 ಬೈಕ್ ಭಾರತದಲ್ಲಿ ಬಿಡುಗಡೆಯಾದ ಬಳಿಕ ಜಾವಾ, ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಮತ್ತು ಮೊಜೊ 300 ಬೈಕ್‍ಗಳಿಗೆ ಪೈಪೋಟಿಯನ್ನು ನೀಡುತ್ತದೆ.


Click it and Unblock the Notifications