Just In
Don't Miss!
- Sports
ಯುಎಇ ಆಟಗಾರರಿಂದ ಮ್ಯಾಚ್ ಫಿಕ್ಸಿಂಗ್; ಅಮಾನತು ಮಾಡಿದ ಐಸಿಸಿ
- Movies
'ಬೆಲ್ ಬಾಟಂ-2' ಟೈಟಲ್ ಪೋಸ್ಟರ್ ಅನಾವರಣ: ಡಿಟೆಕ್ಟಿವ್ ದಿವಾಕರ್ ಈಸ್ ಬ್ಯಾಕ್
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- News
ಶಶಿಕಲಾ ಈಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾಮಾನ್ಯ ರೋಗಿ
- Finance
ಹೊಸ ಸಾರ್ವಕಾಲಿಕ ದಾಖಲೆ ಬರೆದ ಪೆಟ್ರೋಲ್- ಡೀಸೆಲ್ ದರ; ಯಾವ ನಗರದಲ್ಲಿ ಎಷ್ಟು?
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೈಗೆಟುಕುವ ದರದಲ್ಲಿ ಹೊಸ ಬಜಾಜ್ ಪ್ಲಾಟಿನಾ 100 ಕೆಎಸ್ ಬೈಕ್ ಬಿಡುಗಡೆ
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್ ಆಟೋ ತನ್ನ ಪ್ಲಾಟಿನಾ 100 ಕಿಕ್ ಸ್ಟಾರ್ಟ್(ಕೆಎಸ್) ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಬಜಾಜ್ ಪ್ಲಾಟಿನಾ 100 ಕಿಕ್ ಸ್ಟಾರ್ಟ್ ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.51,667 ಗಳಾಗಿದೆ.

ಹೊಸ ಬಜಾಜ್ ಪ್ಲಾಟಿನಾ 100 ಕೆಎಸ್ ಹಲವಾರು ಫೀಚರ್ ಮತ್ತು ಉಪಕರಣಗಳನ್ನು ಒಳಗೊಂಡಿದೆ. ಜೊತೆಗೆ ರಿಫ್ರೆಶ್ ಸ್ಟೈಲಿಂಗ್ ಅಂಶಗಳೂ ಸಹ ಇವೆ. ಹೊಸ ಪ್ಲಾಟಿನಾ 100 ಕೆಎಸ್ ಕಾಕ್ಟೇಲ್ ವೈನ್ ರೆಡ್ ಮತ್ತು ಎಬೊನಿ ಬ್ಲ್ಯಾಕ್ ಸಿಲ್ವರ್ ಡೆಕಲ್ಸ್ ಎಂಬ ಎರಡು ಹೊಸ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಈ ಹೊಸ ಬಜಾಜ್ ಪ್ಲಾಟಿನಾ 100 ಕೆಎಸ್ ಬೈಕ್ ಸರಳ ವಿನ್ಯಾಸದೊಂದಿಗೆ ನೋಡಲು ಆಕರ್ಷಕವಾಗಿದೆ.

ಹೊಸ ಬಜಾಜ್ ಪ್ಲಾಟಿನಾ 100 ಕೆಎಸ್ ಕಮ್ಯೂಟರ್ ಬೈಕಿನಲ್ಲಿ ಹೆಡ್‌ಲ್ಯಾಂಪ್ ಕ್ಲಸ್ಟರ್‌ನಲ್ಲಿ ಎಲ್ಇಡಿ ಡಿಆರ್‌ಎಲ್, ಕ್ವಿಲ್ಟೆಡ್ ಸೀಟುಗಳು, ಹೊಸದಾಗಿ ವಿನ್ಯಾಸಗೊಳಿಸಲಾದ ಟರ್ನ್ ಇಂಡಿಕೇಟರ್ಸ್. ಮೀರರ್ಸ್, ಹ್ಯಾಂಡ್‌ಗಾರ್ಡ್, ಪ್ರೊಟೆಕ್ಟಿವ್ ಟ್ಯಾಂಕ್ ಪ್ಯಾಡ್, ವೈಡ್ ರಬ್ಬರ್ ಫುಟ್‌ಪ್ಯಾಡ್‌ಗಳು ಮತ್ತು ಕೆಲವು ಇತರವುಗಳನ್ನು ಒಳಗೊಂಡಿವೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಹೊಸ ಬಜಾಜ್ ಪ್ಲಾಟಿನಾ 100 ಕೆಎಸ್ ಬೈಕಿನಲ್ಲಿ 102 ಸಿಸಿಯ ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 7.7 ಬಿಹೆಚ್‌ಪಿ ಪವರ್ ಹಾಗೂ 8.34 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 4-ಸ್ಪೀಡಿನ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ

ಹೊಸ ಬಜಾಜ್ ಪ್ಲಾಟಿನಾ 100 ಕೆಎಸ್ ಬೈಕ್ 11 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯದೊಂದಿಗೆ ಬರುತ್ತದೆ. ಇನ್ನು ಈ ಹೊಸ ಬೈಕ್ 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಇದರೊಂದಿಗೆ ಈ ಹೊಸ ಬಜಾಜ್ ಪ್ಲಾಟಿನಾ 100 ಕೆಎಸ್ ಬೈಕ್ 117 ತೂಕವನ್ನು ಹೊಂದಿದೆ. ಇನ್ನು ಈ ಹೊಸ ಕಮ್ಯೂಟರ್ ಬೈಕಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 90 ಕಿ.ಮೀಗಳಾಗಿದೆ. ಅಲ್ಲದೇ ಉತ್ತಮ ಕಂಫರ್ಟ್ ರೈಡಿಂಗ್ ಅನುಭವವನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಹೊಸ ಬಜಾಜ್ ಪ್ಲಾಟಿನಾ 100 ಕೆಎಸ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಹೈಡ್ರಾಲಿಕ್ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಡ್ಯುಯಲ್ ಕಾಯಿಲ್-ಸ್ಪ್ರಿಂಗ್ಸ್ ಶಾಕ್ ಅಬ್ಸಾರ್ಬರ್‌ಗಳನ್ನು ಹೊಂದಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಇನ್ನು ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಹೊಸ ಬಜಾಜ್ ಪ್ಲಾಟಿನಾ 100 ಕೆಎಸ್ ಬೈಕಿನಲ್ಲಿ ಮುಂಭಾಗ 130 ಎಂಎಂ ಡ್ರಮ್ ಬ್ರೇಕ್ ಮತ್ತು ಹಿಂಭಾಗದಲ್ಲಿ 110 ಎಂಎಂ ಡ್ರಮ್ ಬೈಕನ್ನು ಅಳವಡಿಸಲಾಗಿದೆ. ಇದರೊಂದಿಗೆ ಕಾಂಬಿ-ಬ್ರೇಕಿಂಗ್ ಸಿಸ್ಟಂ ಅನ್ನು ಹೊಂದಿದೆ.

ಬಜಾಜ್ ಆಟೋ ಲಿಮಿಟೆಡ್‌ನ ಮಾರ್ಕೆಟಿಂಗ್ ಮುಖ್ಯಸ್ಥ ನಾರಾಯಣ್ ಸುಂದರರಾಮನ್ ಅವರು ಮಾತನಾಡಿ, "ಪ್ಲ್ಯಾಟಿನಾ" ಬ್ರ್ಯಾಂಡ್ ತನ್ನ ಸಾಟಿಯಿಲ್ಲದ ಕಂಫರ್ಟ್ ನೊಂದಿಗೆ ಗ್ರಾಹಕರ ಮೆಚ್ಚಿನ ಆಯ್ಕೆಯಾಗಿದ್ದು, ಪ್ರಯಾಣಿಕರ ದ್ವಿಚಕ್ರ ವಾಹನಗಳ ವಿಭಾಗದಲ್ಲಿ ಅತ್ಯುತ್ತಮ ಬೈಕುಗಳಲ್ಲಿ ಒಂದಾಗಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಕಳೆದ 15 ವರ್ಷಗಳಲ್ಲಿ ಪ್ಲಾಟಿನಾ ಸರಣಿಯ 72 ಲಕ್ಷ ಬೈಕುಗಳನ್ನು ಮಾರಾಟಗೊಳಿಸಿವೆ. ಹೊಸ ಪ್ಲಾಟಿನಾ 100 ಕೆಎಸ್ ಬೈಕ್ ಪ್ಲಾಟಿನಾ ಸರಣಿಗೆ ಉತ್ತಮ ಸೇರ್ಪಡೆಯಾಗಲಿದ್ದು, ಅಪ್ರತಿ ಕಂಫರ್ಟ್, ಹೆಚ್ಚಿನ ಫೀಚರ್ ಮತ್ತು ಉತ್ತಮ ಮೈಲೇಜ್ ನೀಡುವ ಬೈಕ್ ಆಗಿದೆ ಎಂದು ಹೇಳಿದರು.

ಇನ್ನು ಬಜಾಜ್ ಕಂಪನಿಯು ತನ್ನ ಪಲ್ಸರ್ ಸರಣಿಯಲ್ಲಿರುವ ಎಲ್ಲಾ ಬೈಕುಗಳ ಬೆಲೆಯನ್ನು ಹೆಚ್ಚಿಸಿದೆ. ಪಲ್ಸರ್ ಬ್ರ್ಯಾಂಡ್ ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಹೊಂದಿದೆ. ಪಲ್ಸರ್ ಸರಣಿಯ ಬೈಕುಗಳ ಮಾರಾಟದಲಿ ಚೇತರಿಕೆಯನ್ನು ಕಾಣುತ್ತಿದೆ. ಇದರ ನಡುವೆ ಬಜಾಜ್ ಕಂಪನಿಯು ಎಲ್ಲಾ ಪಲ್ಸರ್ ಬೈಕುಗಳ ದರವನ್ನು ಹೆಚ್ಚಿಸಿದೆ.

ಬಜಾಜ್ ಪ್ಲಾಟಿನಾ 100 ಸರಣಿಯ ಬೈಕುಗಳು ಹೆಚ್ಚು ಕಂಫರ್ಟ್ ಮತ್ತು ಅಧಿಕ ಮೈಲೇಜ್ ವಿಷಯದಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ. ಈ ಹೊಸ ಬಜಾಜ್ ಪ್ಲಾಟಿನಾ 100 ಕೆಎಸ್ ಭಾರತೀಯ ಮಾರುಕಟ್ಟೆಯಲ್ಲಿ ಹೀರೋ ಸ್ಪ್ಲೆಂಡರ್ ಬೈಕಿಗೆ ಪೈಪೋಟಿ ನೀಡುತ್ತದೆ.