ಬಿಡುಗಡೆಯಾಗಲಿದೆ ಹೊಸ ಸಿಎಫ್‌ಮೊಟೊ 300 ಎಸ್‌ಆರ್ ಬೈಕ್
ಬಹುನಿರೀಕ್ಷಿತ ಸಿಎಫ್‌ಮೊಟೊ 300 ಎಸ್‌ಆರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದಲ್ಲಿ ಬಿಡುಗಡೆಯಾಗಲಿದೆ. ಹೊಸ 300 ಎಸ್‌ಆರ್ ಬ್ರ್ಯಾಂಡ್‌ನ ಸರಣಿಯಲ್ಲಿರುವ 300 ಎನ್‌ಕೆ ನೇಕೆಡ್ ಫೇರ್ಡ್ ಆವೃತ್ತಿಯ ಅಪ್ಡೇಟ್ ವರ್ಷನ್ ಆಗಿದೆ.

ಸಿಎಫ್‌ಮೊಟೊ 300 ಎಸ್‌ಆರ್ ಬೈಕ್ ಈಗಾಗಲೇ ವಿಯೆಟ್ನಾಂನಂತಹ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಚೀನಾ ದೇಶದಲ್ಲಿ ಈಗಾಗಲೇ ಈ ಬೈಕಿನ ರಫ್ತನ್ನು ಪ್ರಾರಂಭಿಸಲಾಗಿದೆ. ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಸಿಎಫ್‌ಮೊಟೊ 300 ಎಸ್‌ಆರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಬಿಡುಗಡೆಯಾಗಬೇಕಿತ್ತು. ಆದರೆ ಕರೋನಾ ಸೋಂಕಿನ ಭೀತಿಯಿಂದ ಹೊಸ ಬೈಕಿನ ಬಿಡುಗಡೆಯನ್ನು ಮುಂದೂಡಲಾಗಿದೆ.

ಹೊಸ ಸಿಎಫ್‌ಮೊಟೊ 300 ಎಸ್‌ಆರ್ ಬೈಕಿನಲ್ಲಿ ಹಿಂದಿನ ಮಾದರಿಯಲ್ಲಿದ್ದ ಡಿಒಹೆಚ್‌ಸಿ ಸೆಟಪ್ ಹೊಂದಿರುವ 292.4 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಿದ್ದಾರೆ. ಈ ಎಂಜಿನ್ 8,750 ಆರ್‌ಪಿಎಂನಲ್ಲಿ ಗರಿಷ್ಠ 28 ಬಿಹೆಚ್‌ಪಿ ಪವರ್ ಮತ್ತು 7,250 ಆರ್‌ಪಿಎಂನಲ್ಲಿ 25.3 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಸ್ಟ್ಯಾಂಡರ್ಡ್ ಗೇರ್‌ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಫ್ಯೂಯಲ್-ಇಂಜೆಕ್ಷನ್ ಅನ್ನು ಸಹ ಹೊಂದಿದೆ. ಇದು ಈ ಬೈಕಿನ ಸುಗಮ ಸವಾರಿ ಮತ್ತು ಹೆಚ್ಚಿನ ಕಾರ್ಯಕ್ಷಮತೆಯನ್ನು ಒದಗಿಸಲು ನೆರವಾಗುತ್ತದೆ.

ಇನ್ನು ಈ ಬೈಕಿನ ವಿನ್ಯಾಸದ ಬಗ್ಗೆ ಹೇಳುದಾದರೆ ಸಿಎಫ್‌ಮೊಟೊ 300 ಎಸ್‌ಆರ್ ಬೈಕಿನಲ್ಲಿ ಟ್ವಿನ್ ಹೆಡ್ ಲ್ಯಾಂಪ್ ಸೆಟಪ್ ನೊಂದಿಗೆ ಅಗ್ರೇಸಿವ್ ಆಗಿ ಕಾಣುವ ಫೇರಿಂಗ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಕಾರ್ಬನ್-ಫೈಬರ್ ಫಿನಿಶ್ ಅನ್ನು ಒಳಗೊಂಡಿರುವ ಸ್ವಲ್ಪ ಟ್ರಿಮ್ ಅನ್ನು ಸಹ ಬಳಸಲಾಗಿದೆ.
MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಹೊಸ ಸಿಎಫ್‌ಮೊಟೊ 300 ಎಸ್‌ಆರ್ ಬೈಕ್ ಇಂಟಿಗ್ರೇಟೆಡ್ ಡಿಆರ್‌ಎಲ್‌ಗಳೊಂದಿಗಿನ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ. ಈ ಬೈಕಿನಲ್ಲಿ ಸ್ಪ್ಲಿಟ್ ಸೀಟ್, ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳು, ಅಂಡರ್‌ಬೆಲ್ಲಿ ಎಕ್ಸಾಸ್ಟ್ ಮತ್ತು ರೇರ್ ವ್ಯೂ ಮಿರರ್ ಅನ್ನು ಹೊಂದಿದೆ.

ಈ ಬೈಕಿನಲ್ಲಿ ಫುಲ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇನ್ನು ಇನ್ಸ್ ಟ್ರೂಮೆಂಟ್ ಕನ್ಸೋಲ್ ಬ್ಲೂಟೂತ್ ಸ್ಮಾರ್ಟ್ ಫೋನ್ ಕನೆಕ್ಟಿವಿಟಿಯನ್ನು ಹೊಂದಿರುವ ತಂತ್ರಜ್ಞಾನವನ್ನು ಒಳಗೊಂಡಿರಬಹುದು ಎಂದು ನಿರೀಕ್ಷಿಸುತ್ತೇವೆ.
MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಹೊಸ ಸಿಎಫ್‌ಮೊಟೊ 300 ಎಸ್‌ಆರ್ ಬೈಕಿನ ಮುಂಭಾಗದಲ್ಲಿ (ಯುಎಸ್‌ಡಿ) ಅಪ್-ಸೈಡ್-ಡೌನ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಪೂರ್ವ ಲೋಡ್‌ಗೆ ಹೊಂದಿಸಬಹುದಾದ ಮೊನೊ-ಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ. ಈ ಬೈಕಿನ ಎರಡು ಕಡೆಗಳಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ನೀಡಲಾಗಿದೆ.

ಹೊಸ ಸಿಎಫ್‌ಮೊಟೊ 300 ಎಸ್‌ಆರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಟಿವಿಎಸ್ ಅಪಾಚೆ ಆರ್‌ಆರ್ 310, ಕೆಟಿಎಂ ಆರ್‍ಸಿ 390 ಮತ್ತು ಕವಾಸಕಿ ನಿಂಜಾ 400 ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.


Click it and Unblock the Notifications








