ಅನಾವರಣವಾಯ್ತು ಹೊಸ ಡುಕಾಟಿ ಪಾನಿಗಲೆ ವಿ2 ಬೈಕ್
ಇಟಲಿ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಡುಕಾಟಿ ತನ್ನ ಪಾನಿಗಲೆ ವಿ2 ವೈಟ್ ರೊಸ್ಸೊ ಬೈಕನ್ನು ಅನಾವರಣಗೊಳಿಸಿದೆ. ವಿಶ್ವ ಡುಕಾಟಿ ಪ್ರೀಮಿಯರ್‌ನಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಈ ಬೈಕನ್ನು ಪ್ರದರ್ಶಿಸಲಾಗಿತ್ತು.

ಇನ್ನು ಡುಕಾಟಿ 959 ಪಾನಿಗಲೆ ಬೈಕನ್ನು ಎಂಟ್ರಿ ಲೆವಲ್ ಸೂಪರ್‌ಸ್ಪೋರ್ಟ್ ಬೈಕ್ ಆಗಿ ಬದಲಾಯಿಸಲಾಗುತ್ತದೆ, ಪಾನಿಗಲೆ ವಿ2ನ ಬಾಡಿವರ್ಕ್ ಪೆರಲ್ ವೈಟ್ ಬಣ್ಣದೊಂದಿಗೆ ಏರ್ ವೆಂಟ್ಸ್ ಮತ್ತು ಸೈಡ್ ಫೇರಿಂಗ್‌ಗಳಲ್ಲಿ ರೆಡ್ ಬಣ್ಣದ ಅಂಶಗಳನ್ನು ಒಳಗೊಂಡಿದೆ. ಈ ಪಾನಿಗಲೆ ವಿ2 ವೈಟ್ ರೊಸ್ಸೊ ಬೈಕ್ ರೆಡ್ ಬಣ್ಣದ ಅಲಾಯ್ ವ್ಹೀಲ್ ಅನ್ನು ಹೊಂದಿದೆ. ಡುಕಾಟಿ ಪಾನಿಗಲೆ ವಿ2 ವೈಟ್ ರೊಸ್ಸೊ ಬೈಕಿನಲ್ಲಿ ಇತರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಈ ಬೈಕಿನಲ್ಲಿ ಬಿಎಸ್ 6 ಪ್ರೇರಿತ 955 ಸಿಸಿ ಸೂಪರ್‌ಕ್ವಾಡ್ರೊ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 155 ಬಿಹೆಚ್‌ಪಿ ಮತ್ತು 104 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.
MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಡುಕಾಟಿ ಕಂಪನಿಯು ಭಾರತದಲ್ಲಿ ಪಾನಿಗಲೆ ವಿ2 ಬೈಕನ್ನು ಬಿಡುಗಡೆಗೊಳಿಸಲಿದೆ. ಆದರೆ ಈ ಬೈಕನ್ನು ಭಾರತದಲ್ಲಿ ಯಾವಗ ಬಿಡುಗಡೆಗೊಳಿಸುತ್ತಾರೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ವೈಟ್ ರೊಸ್ಸೊ ಬಣ್ಣದ ಆಯ್ಕೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಪ್ಯಾನಿಗಲೆ ವಿ2 ಬೈಕನ್ನು ಬಿಡುಗಡೆಗೊಳಿಸುವ ಸಾಧ್ಯತೆ ಕಡಿಮೆಯಾಗಿದೆ.

ಡುಕಾಟಿ 959 ಪಾನಿಗಲೆ ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.15.30 ಲಕ್ಷಗಳಾಗಿದೆ. ಇನ್ನು ಹೊಸ ಡುಕಾಟಿ ಪಾನಿಗಲೆ ವಿ2 ಬೈಕಿನ ಬೆಲೆಯು ಇದಗಿಂತ ತುಸು ದುಬಾರಿಯಾಗಿರಲಿದೆ. ಈ ಡುಕಾಟಿ ಪಾನಿಗಲೆ ವಿ2 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.16.50 ಲಕ್ಷಗಳಾಗಿರಬಹುದು ಎಂದು ನಿರೀಕ್ಷಿಸುತ್ತೇವೆ.
MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಇದರೊಂದಿಗೆ ಡುಕಾಟಿ ಕಂಪನಿಯು ಸ್ಕ್ರ್ಯಾಂಬ್ಲರ್ 1100 ಸ್ಪೋರ್ಟ್ ಪ್ರೊ ಎಂಬ ಲಿಮಿಟೆಡ್ ಎಡಿಷನ್ ಬೈಕನ್ನು ಇತ್ತೀಚೆಗೆ ಅನಾವರಣಗೊಳಿಸಿತ್ತು. ಈ ಬೈಕನ್ನು ಕೇವಲ ಇಟಲಿಯ ಸ್ಕುಡೆರಿಯಾ ಕ್ಲಬ್ ಸದಸ್ಯರಿಗಾಗಿ ತಯಾರಿಸಲಾಗಿದೆ.

ಸ್ಕುಡೆರಿಯಾ ಇಟಲಿ ದೇಶದ ರೇಸ್ ಕಾರು ಮಾಲೀಕರು ಮತ್ತು ಸ್ಪೋರ್ಟ್ಸ್ ಕಾರುಗಳ ಬಗ್ಗೆ ಹೆಚ್ಚು ಕ್ರೇಜ್ ಹೊಂದಿರುವ ಸದ್ಯಸರ ಕ್ಲಬ್ ಆಗಿದೆ. ಈ ಸ್ಕ್ರ್ಯಾಂಬ್ಲರ್ 1100 ಸ್ಪೋರ್ಟ್ ಪ್ರೊ ಲಿಮಿಟೆಡ್ ಎಡಿಷನ್ ಬೈಕ್ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ.
MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಡುಕಾಟಿ ಸ್ಕ್ರ್ಯಾಂಬ್ಲರ್ 1100 ಸ್ಪೋರ್ಟ್ ಪ್ರೊ ಬೈಕಿನಲ್ಲಿ 1,079 ಸಿಸಿ, ಎಲ್-ಟ್ವಿನ್ ಡೆಸ್ಮೋಡ್ರೊಮಿಕ್ ವಾಲ್ವ್ ಟೈಮಿಂಗ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7,250 ಆರ್‌ಪಿಎಂನಲ್ಲಿ 86 ಬಿಹೆಚ್‌ಪಿ ಪವರ್ ಮತ್ತು 4,750 ಆರ್‌ಪಿಎಂನಲ್ಲಿ 90 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ.

ಈ ಹೊಸ ಪ್ಯಾನಿಗಲೆ ವಿ2 ಬೈಕ್ ಹಿಂದಿನ ಮಾದರಿಗಿಂತ ಹೆಚ್ಚು ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಕಸ್ಟಮೈಸ್ ಮಾಡಲು ಬಯಸುವವರಿಗೆ ಈ ಪ್ಯಾನಿಗಲೆ ವಿ2 ಬೈಕ್ ಉತ್ತಮ ಆಯ್ಕೆಯಾಗಿದೆ.


Click it and Unblock the Notifications