ಬಿಡುಗಡೆಯಾಯ್ತು ಹೊಸ ಹೀರೋ ಮೆಸ್ಟ್ರೋ ಎಡ್ಜ್ 125 ಸ್ಟೆಲ್ತ್ ಸ್ಕೂಟರ್

ಹೀರೋ ಮೋಟೊಕಾರ್ಪ್ ತನ್ನ ಬಿಎಸ್-6 ಮೆಸ್ಟ್ರೋ ಎಡ್ಜ್ 125 ಸ್ಟೆಲ್ತ್ ಸ್ಕೂಟರ್ ಅನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಬಿಎಸ್-6 ಹೀರೋ ಮೆಸ್ಟ್ರೋ ಎಡ್ಜ್ 125 ಸ್ಟೆಲ್ತ್ ಸ್ಕೂಟರ್ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.72,950 ಗಳಾಗಿದೆ.

ಬಿಡುಗಡೆಯಾಯ್ತು ಹೊಸ ಹೀರೋ ಮೆಸ್ಟ್ರೋ ಎಡ್ಜ್ 125 ಸ್ಟೆಲ್ತ್ ಸ್ಕೂಟರ್

ಮೆಸ್ಟ್ರೋ ಎಡ್ಜ್ 25 ಸ್ಟೆಲ್ತ್ ಕಂಪನಿಯ ಪ್ರೀಮಿಯಂ ಸ್ಕೂಟರ್ ಪೋರ್ಟ್ಫೋಲಿಯೊಗೆ ಹೊಸ ಸೇರ್ಪಡೆಯಾಗಿದೆ. ಹೀರೋ ಕಂಪನಿಯು ಈ ವರ್ಷದ ಆರಂಭದಲ್ಲಿ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂನೊಂದಿಗೆ ಬಿಎಸ್ 6 ಮೆಸ್ಟ್ರೋ ಎಡ್ಜ್ ಬಿಡುಗಡೆಗೊಳಿಸಿತ್ತು. ಈ ಹೊಸ ಮೆಸ್ಟ್ರೋ ಎಡ್ಜ್ 125 ಸ್ಟೆಲ್ತ್‌ನಲ್ಲಿ ಪ್ಯಾರಮೆಟ್ರಿಕ್ ಪ್ಯಾಟರ್ನ್ಸ್, ಉತ್ತಮ ಮೆಟೀರಿಯಲ್ ಫಿನಿಶ್, ಪ್ರೀಮಿಯಂ ‘ಸ್ಟೆಲ್ತ್' ಕ್ರೆಸ್ಟ್ ಬ್ಯಾಡ್ಜಿಂಗ್, ಕಾರ್ಬನ್ ಫೈಬರ್ ಟೆಕ್ಸ್ಚರ್ಡ್ ಸ್ಟ್ರಿಪ್ಸ್, ವೈಟ್ ಅಸೆಂಟ್ ಗಳು ಮತ್ತು ಟೋನ್-ಆನ್-ಟೋನ್ ಸ್ಟ್ರೈಪ್ಸ್ ಶಾರ್ಪ್ ಅಸೆಂಟ್ ಗಳನ್ನು ಹೊಂದಿರುತ್ತದೆ. ಈ ಹೊಸ ಸ್ಕೂಟರ್ ವಿಶೇಷ ಮ್ಯಾಟ್ ಗ್ರೇ ಬಣ್ಣದಲ್ಲಿ ಲಭ್ಯವಿರುತ್ತದೆ.

ಬಿಡುಗಡೆಯಾಯ್ತು ಹೊಸ ಹೀರೋ ಮೆಸ್ಟ್ರೋ ಎಡ್ಜ್ 125 ಸ್ಟೆಲ್ತ್ ಸ್ಕೂಟರ್

ಹೀರೋ ಮೊಟೊಕಾರ್ಪ್‌ನ ಸೇಲ್ಸ್ ವಿಭಾಗದ ಮುಖ್ಯಸ್ಥ ನವೀನ್ ಚೌಹಾನ್ ಅವರು ಮಾತನಾಡಿ, ಹೊಸ ಮೆಸ್ಟ್ರೋ ಎಡ್ಜ್ 125 ಸ್ಟೆಲ್ತ್‌ನೊಂದಿಗೆ ನಮ್ಮ ಫೆಸ್ಟಿವಲ್ ಕ್ಯಾಂಪನ್ ಅನ್ನು ಪ್ರಾರಂಭಿಸಲು ನಾವು ಸಂತೋಷಪಡುತ್ತೇವೆ, ಇದು ಅತ್ಯಂತ ಉತ್ತಮ ಮಾದರಿಯಾಗಿದೆ.

MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಬಿಡುಗಡೆಯಾಯ್ತು ಹೊಸ ಹೀರೋ ಮೆಸ್ಟ್ರೋ ಎಡ್ಜ್ 125 ಸ್ಟೆಲ್ತ್ ಸ್ಕೂಟರ್

ನಮ್ಮ ಸ್ಕೂಟರ್ ಬ್ರ್ಯಾಂಡ್ ಮೆಸ್ಟ್ರೋ ಎಡ್ಜ್ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ. ಈ ಹೊಸ ಸೇರ್ಪಡೆ ಬ್ರ್ಯಾಂಡ್‌ನ ಆಕರ್ಷಣೆಯನ್ನು ಮತಷ್ಟು ಹೆಚ್ಚಿಸುತ್ತದೆ. ಮುಂಬರುವ ವಾರಗಳಲ್ಲಿ ನಾವು ಹಲವಾರು ಹೊಸ ಮಾದರಿಗಳನ್ನು ಬಿಡುಗಡೆಗೊಳಿಸುತ್ತೇವೆ ಎಂದು ಹೇಳಿದರು.

ಬಿಡುಗಡೆಯಾಯ್ತು ಹೊಸ ಹೀರೋ ಮೆಸ್ಟ್ರೋ ಎಡ್ಜ್ 125 ಸ್ಟೆಲ್ತ್ ಸ್ಕೂಟರ್

ಬಿಎಸ್-6 ಹೀರೋ ಮೆಸ್ಟ್ರೋ ಎಡ್ಜ್ 125 ಸ್ಟೆಲ್ತ್ ಸ್ಕೂಟರ್ ನಲ್ಲಿ ಫ್ಯೂಯಲ್-ಫಿಲ್ಲರ್ ಕ್ಯಾಪ್, ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಸೈಡ್-ಸ್ಟ್ಯಾಂಡ್ ಮತ್ತು ಸರ್ವಿಸ್ ಇಂಡಿಕೇಟರ್ ಗಳನ್ನು ಒಳಗೊಂಡಿವೆ. ಈ ಕ್ಸೂಟರ್ ಐ3 ಎಸ್ - ಹೀರೋನ ಸ್ಟಾರ್ಟ್-ಸ್ಟಾಪ್ ತಂತ್ರಜ್ಞಾನ ಮತ್ತು ಅಂಡರ್-ಸೀಟ್ ಯುಎಸ್ಬಿ ಪೋರ್ಟ್ ಅನ್ನು ಹೊಂದಿದ್ದು, ಇದರಿಂದ ಚಲಿಸುವಾಗ ಸವಾರರು ತಮ್ಮ ಸ್ಮಾರ್ಟ್ ಫೋನ್ ಗಳನ್ನು ಚಾರ್ಜ್ ಮಾಡಬಹುದಾಗಿದೆ.

MOST READ: ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಟೀಸರ್ ಚಿತ್ರ ಬಿಡುಗಡೆ

ಬಿಡುಗಡೆಯಾಯ್ತು ಹೊಸ ಹೀರೋ ಮೆಸ್ಟ್ರೋ ಎಡ್ಜ್ 125 ಸ್ಟೆಲ್ತ್ ಸ್ಕೂಟರ್

ಬಿಎಸ್-6 ಹೀರೋ ಮೆಸ್ಟ್ರೋ ಎಡ್ಜ್ 25 ಸ್ಟೆಲ್ತ್ ಸ್ಕೂಟರ್ ನಲ್ಲಿ 124.6 ಸಿಸಿ ಪ್ರೊಗ್ರಾಮ್ಡ್ ಫ್ಯೂಯಲ್ ಇಂಜೆಕ್ಷನ್ ಎಂಜಿನ್‌ನೊಂದಿಗೆ ಎಕ್ಸ್‌ಸೆನ್ಸ್ ಟೆಕ್ನಾಲಜಿ ಹೊಂದಿದೆ. ಈ ಎಂಜಿನ್ 7000 ಆರ್‌ಪಿಎಂನಲ್ಲಿ 9 ಬಿಹೆಚ್‍ಪಿ ಪವರ್ ಮತ್ತು 5500 ಆರ್‌ಪಿಎಂನಲ್ಲಿ 10.4 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ

ಬಿಡುಗಡೆಯಾಯ್ತು ಹೊಸ ಹೀರೋ ಮೆಸ್ಟ್ರೋ ಎಡ್ಜ್ 125 ಸ್ಟೆಲ್ತ್ ಸ್ಕೂಟರ್

ಬಿಎಸ್-6 ಹೀರೋ ಮೆಸ್ಟ್ರೋ ಎಡ್ಜ್ 25 ಸ್ಟೆಲ್ತ್ ಸ್ಕೂಟರ್ ಸಸ್ಪೆಂಕ್ಷನ್ ಗಳಿಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ನೀಡಿದೆ. ಇನ್ನು ಬ್ಲ್ಯಾಕ್ ಅಲಾ ವ್ಹೀಲ್ ಸಹ ಪಡೆಯುತ್ತದೆ. ಇನ್ನು ಬ್ರೇಕಿಂಗ್ ಸಿಸ್ಟಂಗಾಗಿ ಮುಂಭಾಗದಲ್ಲಿ ಸಿಂಗಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಸೆಟಪ್ ಅನ್ನು ಹೊಂದಿರುತ್ತದೆ.

ಬಿಡುಗಡೆಯಾಯ್ತು ಹೊಸ ಹೀರೋ ಮೆಸ್ಟ್ರೋ ಎಡ್ಜ್ 125 ಸ್ಟೆಲ್ತ್ ಸ್ಕೂಟರ್

ಸ್ಟ್ಯಾಂಡರ್ಡ್ ಮೆಸ್ಟ್ರೋ ಎಡ್ಜ್ 125 ಬಹಳ ಟ್ರೆಂಡಿ ಸ್ಕೂಟರ್ ಮತ್ತು ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ, ಮೆಸ್ಟ್ರೋ ಎಡ್ಜ್ 125 ಸ್ಟೆಲ್ತ್ ಸ್ಕೂಟರ್ ಆಕರ್ಷಕ ಲುಕ್ ನಿಂದ ವಿಶೇಷವಾಗಿ ಯುವಕರನ್ನು ಸೆಳೆಯುತ್ತದೆ ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Hero Maestro Edge 125 Stealth Launched In India. Read In Kannada.
Story first published: Wednesday, October 7, 2020, 20:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X