ಅನಾವರಣವಾಯ್ತು 2021ರ ಹೋಂಡಾ ಸಿಬಿ1000ಆರ್ ಬೈಕ್

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ತನ್ನ 2021ರ ಸಿಬಿ1000ಆರ್ ಸ್ಟ್ರೀಟ್‌ಫೈಟರ್ ಬೈಕನ್ನು ಜಾಗತಿಕ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಹೊಂಡಾ ಕಂಪನಿಯು ಈ ಹೊಸ 2021ರ ಸಿಬಿ1000ಆರ್ ಬೈಕನ್ನು ವಿನ್ಯಾಸದಲ್ಲಿ ಕೆಲವು ನವೀಕರಣಗಳನ್ನು ನಡೆಸಿ ಅನಾವರಣಗೊಳಿಸಲಾಗಿದೆ.

ಅನಾವರಣವಾಯ್ತು 2021ರ ಹೋಂಡಾ ಸಿಬಿ1000ಆರ್ ಬೈಕ್

2021ರ ಹೋಂಡಾ ಸಿಬಿ1000ಆರ್ ಬೈಕಿನ ಹಿಂದಿನ ಮಾದರಿಯಲ್ಲಿ ಕಂಡು ಬಂದ ಅದೇ ಎಲ್ಇಡಿ ಹೆಡ್ ಲೈಟ್ ಅನ್ನು ಹೊಂದಿದೆ. ಇನ್ನು ಎಲ್ಇಡಿ ಡಿಆರ್ಎಲ್ ಅನ್ನು ಕೂಡ ಅಳವಡಿಸಲಾಗಿದೆ. ಹೋಂಡಾ ಕಂಪನಿಯು 2021ರ ಸಿಬಿ1000ಆರ್ ಬೈಕಿನ ಎಲ್ಇಡಿ ಹೆಡ್ ಲೈಟ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಹೆಡ್‌ಲೈಟ್ ಜೋಡಣೆಯನ್ನು ಆಂಗಲ್ ಆಗಿ ಇರಿಸಲಾಗಿದೆ. ಹೋಂಡಾ ರೇಡಿಯೇಟರ್ ಮತ್ತು ಸೈಡ್ ಪ್ಲೇಟ್‌ಗಳ ವಿನ್ಯಾಸವನ್ನು ಪರಿಷ್ಕರಿಸಿದೆ.

ಅನಾವರಣವಾಯ್ತು 2021ರ ಹೋಂಡಾ ಸಿಬಿ1000ಆರ್ ಬೈಕ್

2021ರ ಹೋಂಡಾ ಸಿಬಿ1000ಆರ್ ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಹೊಸ ಹೋಂಡಾ ಸಿಬಿ1000ಆರ್ ಬೈಕ್ ಶಾರ್ಟ್ ಫ್ಲೈಸ್ಕ್ರೀನ್ ಅನ್ನು ಸಹ ಬಳಸಿದೆ. ಇದು 2021ರ ಸಿಬಿ1000ಆರ್ ಬೈಕಿಗೆ ಮತ್ತಷ್ಟು ಆಕರ್ಷಕ ಲುಕ್ ಅನ್ನು ನೀಡಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಅನಾವರಣವಾಯ್ತು 2021ರ ಹೋಂಡಾ ಸಿಬಿ1000ಆರ್ ಬೈಕ್

ಇನ್ನು ಈ ಹೊಸ ಬೈಕಿನಲ್ಲಿ ಸಿಲ್ವರ್ ಬದಲು ಫೋರ್ಕ್ ಕ್ಲ್ಯಾಂಪ್ಸ್ ಈಗ ಬ್ಲ್ಯಾಕ್ ಬಣ್ಣದ್ದಾಗಿವೆ ಮತ್ತು ರೇಡಿಯೇಟರ್ ಅನ್ನು ಫ್ರೇಮ್ ಮಾಡುವ ಮತ್ತು ಫ್ಯೂಯಲ್ ಟ್ಯಾಂಕ್ ಅನ್ನು ಅಂಡರ್ಲೈನ್ ಮಾಡುವ ಸೈಡ್ ಪ್ಲೇಟ್‌ಗಳ ಆಕಾರವನ್ನು ಸಹ ಬದಲಾಯಿಸಲಾಗಿದೆ.

ಅನಾವರಣವಾಯ್ತು 2021ರ ಹೋಂಡಾ ಸಿಬಿ1000ಆರ್ ಬೈಕ್

ಇನ್ನು 2021ರ ಹೋಂಡಾ ಸಿಬಿ1000ಆರ್ ಬೈಕಿನಲ್ಲಿ ಡಬ್ಲ್ಯೂ-ಸ್ಪೋಕ್ ಅಲಾಯ್ ವ್ಹೀಲ್ ಅನ್ನು ಹೊಂದಿದೆ. ಇನ್ನು ಈ ಹೊಸ 2021ರ ಹೋಂಡಾ ಸಿಬಿ1000ಆರ್ ಉತ್ತಮ ಪರ್ಫಾಮೆನ್ಸ್ ಮಾದರಿಯಾಗಿರಲಿದೆ.

MOST READ: ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಟೀಸರ್ ಚಿತ್ರ ಬಿಡುಗಡೆ

ಅನಾವರಣವಾಯ್ತು 2021ರ ಹೋಂಡಾ ಸಿಬಿ1000ಆರ್ ಬೈಕ್

ಈ ಹೊಸ ಸಿಬಿ1000ಆರ್ ಬೈಕಿನಲ್ಲಿ ಲೀಟರ್-ಕ್ಲಾಸ್ 998ಸಿಸಿ ಇನ್ ಲೈನ್ 4-ಸಿಲಿಂಡರ್ ಎಂಜಿನ್ ಅನ್ನು ಹೊಂದಿರಲಿದೆ, ಈ ಎಂಜಿನ್ 10,500 ಆರ್‌ಪಿಎಂನಲ್ಲಿ 143 ಬಿಹೆಚ್‍ಪಿ ಪವರ್ ಮತ್ತು 8,250 ಆರ್‌ಪಿಎಂನಲ್ಲಿ 104 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅನಾವರಣವಾಯ್ತು 2021ರ ಹೋಂಡಾ ಸಿಬಿ1000ಆರ್ ಬೈಕ್

2021ರ ಹೋಂಡಾ ಸಿಬಿ1000ಆರ್ ಬೈಕಿನಲ್ಲಿ ಯುಎಸ್ಬಿ ಪೋರ್ಟ್ ಅನ್ನು ಸೀಟ್ ಕೆಳಗೆ ನೀಡಲಾಗಿದೆ. ಇನ್ನು ಈ ಬೈಕಿನಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಐದು ಇಂಚಿನ ಕಲರ್ ಟಿಎಫ್ಟಿ ಡಿಸ್ ಪ್ಲೇಯನ್ನು ಹೊಂದಿದೆ. ಇದರೊಂದಿಗೆ ಸ್ಮಾರ್ಟ್ ಫೋನ್ ವಾಯ್ಸ್ ಕಂಟ್ರೋಲ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಅನಾವರಣವಾಯ್ತು 2021ರ ಹೋಂಡಾ ಸಿಬಿ1000ಆರ್ ಬೈಕ್

ಇದರೊಂದಿಗೆ ಹೋಂಡಾ ಕಂಪನಿಯು ಹೊಸ ಸಿಬಿಆರ್650ಆರ್ ಬೈಕ್ ಶೀಘ್ರದಲ್ಲೇ ಯುರೋಪಿಯನ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಈ ಸಿಬಿಆರ್650ಆರ್ ಬೈಕ್ ಭಾರತದಲ್ಲಿ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿದೆ.

ಅನಾವರಣವಾಯ್ತು 2021ರ ಹೋಂಡಾ ಸಿಬಿ1000ಆರ್ ಬೈಕ್

ಇನ್ನು 2021ರ ಹೋಂಡಾ ಸಿಬಿ1000ಆರ್ ಬೈಕ್ ಈ ವರ್ಷದ ಕೊನೆಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಈ ಹೊಸ ಹೋಂಡಾ ಸಿಬಿ1000ಆರ್ ಬೈಕ್ ಮುಂದಿನ ವರ್ಷ ಬಿಡುಗಡೆಯಾಗಬಹುದೆಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
2021 Honda CB1000R Unveiled. Reada In Kannada.
Story first published: Wednesday, November 11, 2020, 20:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X