ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಫೋರ್ಜಾ ಸ್ಕೂಟರ್‌ಗಳು

ಹೋಂಡಾ ಮೋಟಾರ್‌ಸೈಕಲ್ ಅಂಡ್ ಸ್ಕೂಟರ್ ಕಂಪನಿಯು ತನ್ನ ಫೋರ್ಜಾ 750 ಮ್ಯಾಕ್ಸಿ ಸ್ಕೂಟರ್ ಅನ್ನು ಇತ್ತೀಚೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿತ್ತು. ಇದೀಗ ಜಪಾನಿನ ದ್ವಿಚಕ್ರ ವಾಹನ ತಯಾರಕ ಕಂಪನಿ ಹೋಂಡಾ ತನ್ನ ಫೋರ್ಜಾ ಸರಣಿಯಲ್ಲಿರುವ ಎಲ್ಲಾ ಸ್ಕೂಟರ್‌ಗಳನ್ನು ಅನಾವರಣಗೊಳಿಸಿದೆ.

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಫೋರ್ಜಾ ಸ್ಕೂಟರ್‌ಗಳು

ಇದರಲ್ಲಿ ಕಿರಿಯ ಸಹೋದರರಾದ ಫೋರ್ಜಾ 350 ಮತ್ತು ಫೋರ್ಜಾ 125 ಅನ್ನು ಒಳಗೊಂಡಿದೆ ಫೋರ್ಜಾ 300 ಅನ್ನು ಬದಲಾಯಿಸಿ ಫೋರ್ಜಾ 350 ಮಾದರಿಯನ್ನು ಪರಿಚಯಿಸಿದೆ. ಇನ್ನು ಹೋಂಡಾದ ಪೋರ್ಟ್ಫೋಲಿಯೊದಲ್ಲಿ ಫೋರ್ಜಾ 125 ಎಂಟ್ರಿ ಲೆವೆಲ್ ಪವರ್ ಸ್ಕೂಟರ್ ಆಗಿ ಕಾರ್ಯನಿರ್ವಹಿಸಲಿದೆ. ಈ ವರ್ಷದ ಜುಲೈನಲ್ಲಿ ನಡೆದ ಬ್ಯಾಂಕಾಕ್ ಅಂತರರಾಷ್ಟ್ರೀಯ ಮೋಟಾರ್ ಶೋನಲ್ಲಿ 2021 ಫೋರ್ಜಾ 350 ಅನ್ನು ಮೊದಲ ಬಾರಿಗೆ ಪ್ರದರ್ಶಿಸಿತ್ತು. ಈ ಎರಡು ಸ್ಕೂಟರ್‌ಗಳು ಭವಿಷ್ಯದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ವರದಿಗಳಾಗಿದೆ.

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಫೋರ್ಜಾ ಸ್ಕೂಟರ್‌ಗಳು

ಮೊದಲಿಗೆ ಎಂಟ್ರಿ ಲೆವೆಲ್ ಹೋಂಡಾ ಫೋರ್ಜಾ 125 ಸ್ಕೂಟರ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಮರುವಿನ್ಯಾಸಗೊಳಿಸಲಾದ ಮುಂಭಾಗದಲ್ಲಿ ಫೇರಿಂಗ್ ಹೊಂದಿದೆ. ಹೊಸ ಎಂಜಿನ್ ಕವರ್ ಮತ್ತು ರಿಯರ್‌ವ್ಯೂ ಮೀರರ್ ಗಳು ಹೊಂದಿವೆ.

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಫೋರ್ಜಾ ಸ್ಕೂಟರ್‌ಗಳು

ಹೋಂಡಾ ಫೋರ್ಜಾ 125 ಸ್ಕೂಟರ್ ಪರ್ಲ್ ಕೂಲ್ ವೈಟ್, ಮ್ಯಾಟ್ ಸಿನೋಸ್ ಗ್ರೇ ಮೆಟಾಲಿಕ್, ಮ್ಯಾಟ್ ಕಾರ್ನೆಲಿಯನ್ ರೆಡ್ ಮೆಟಾಲಿಕ್, ಲ್ಯೂಸೆಂಟ್ ಸಿಲ್ವರ್ ಮೆಟಾಲಿಕ್ ಮತ್ತು ಪರ್ಲ್ ನೈಟ್‌ಸ್ಟಾರ್ ಬ್ಲ್ಯಾಕ್ ಎಂಬ ಐದು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರಲಿದೆ.

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಫೋರ್ಜಾ ಸ್ಕೂಟರ್‌ಗಳು

ನವೀಕರಿಸಿದ ಫೋರ್ಜಾ 125 ಸ್ಕೂಟರ್ 124.9 ಸಿಸಿ ಲಿಕ್ವಿಡ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 8,750 ಆರ್‌ಪಿಎಂನಲ್ಲಿ 14.75 ಬಿಹೆಚ್‌ಪಿ ಮತ್ತು 6,500 ಆರ್‌ಪಿಎಂನಲ್ಲಿ 12.2 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಫೋರ್ಜಾ ಸ್ಕೂಟರ್‌ಗಳು

ಹೊಸ ಹೋಂಡಾ ಫೋರ್ಜಾ 125 ಸ್ಕೂಟರ್ ಪೂರ್ಣ ಎಲ್ಇಡಿ ಲೈಟಿಂಗ್, ಐಡ್ಲಿಂಗ್ ಸ್ಟಾಪ್ ಸಿಸ್ಟಮ್, ಸ್ಮಾರ್ಟ್ ಕೀ ಇಗ್ನಿಷನ್ ಮತ್ತು ಎಸಿಜಿ ಸ್ಟಾರ್ಟರ್ ಅನ್ನು ಒಳಗೊಂಡಿದೆ. 2021ರ ಫೋರ್ಜಾ 125 ನವೀಕರಿಸಿದ ಎಲೆಕ್ಟ್ರಿಕ್ ವಿಂಡ್‌ಸ್ಕ್ರೀನ್ ಅನ್ನು ಪಡೆಯುತ್ತದೆ,

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಫೋರ್ಜಾ ಸ್ಕೂಟರ್‌ಗಳು

ಹೋಂಡಾ ಫೋರ್ಜಾ 350 ಸ್ಕೂಟರ್ ಬಗ್ಗೆ ಹೇಳುವುದಾದರೆ, ಹೋಂಡಾ ಫೋರ್ಜಾ 350 ಸ್ಕೂಟರ್ ನಲ್ಲಿ 330 ಸಿಸಿ ಲಿಕ್ವಿಡ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಬಹುದು. ಈ ಎಂಜಿನ್ 7500 ಆರ್ಪಿಎಂನಲ್ಲಿ 28.8 ಬಿಹೆಚ್‍ಪಿ ಪವರ್ ಮತ್ತು 5250 ಆರ್ಪಿಎಂನಲ್ಲಿ 31.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಫೋರ್ಜಾ ಸ್ಕೂಟರ್‌ಗಳು

ಹೋಂಡಾ ಫೋರ್ಜಾ 350 ಸ್ಕೂಟರ್ ನಲ್ಲಿ ಸಿಲಿಂಡರ್‌ನ ಬೋರ್ ಮತ್ತು ಸ್ಟ್ರೋಕ್ ಅನ್ನು ಹೆಚ್ಚಿಸುವುದರ ಜೊತೆಗೆ ಹೋಂಡಾ ಎಂಜಿನ್ ದೊಡ್ಡ ಥ್ರೊಟಲ್ ಬಾಡಿ ಸಹ ಬದಲಾಯಿಸಿದೆ. ಈ ಹೊಸ ಹೋಂಡಾ ಫೋರ್ಜಾ 350 ಸ್ಕೂಟರ್ 137 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಫೋರ್ಜಾ ಸ್ಕೂಟರ್‌ಗಳು

ಎರಡು ಸ್ಕೂಟರ್‌ಗಳು 15 ಇಂಚಿನ ಮುಂಭಾಗದ ವ್ಹೀಲ್ ಮತ್ತು 14 ಇಂಚಿನ ಹಿಂಬದಿ ವ್ಹೀಲ್ ಹೊಂದಿದೆ. ಸ್ಕೂಟರ್ ಎರಡು ಕಡೆಗಳಲ್ಲಿ ಡಿಸ್ಕ್ ಬ್ರೇಕ್‌ಗಳೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ. ಸ್ಕೂಟರ್ ಸಸ್ಪಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ಸ್ ಅನ್ನು ಹೊಂದಿದೆ.

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಫೋರ್ಜಾ ಸ್ಕೂಟರ್‌ಗಳು

ಮುಂದಿನ ವರ್ಷದ ಆರಂಭದಲ್ಲಿ ಹೋಂಡಾ ಕಂಪನಿಯು ಫೋರ್ಜಾ 350 ಮತ್ತು ಫೋರ್ಜಾ 125 ಸ್ಕೂಟರ್‌ಗಳನ್ನು ಯುರೋಪಿಯನ್ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಲಿದೆ. ಈ ಎರಡು ಹೊಸ ಸ್ಕೂಟರ್‌ಗಳಳು ಮುಂದಿನ ವರ್ಷದ ಕೊನೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದೆಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
New Honda Forza 125, Forza 350 Debuts. Read In Kannada.
Story first published: Monday, October 26, 2020, 12:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X