ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹಸ್ಕ್‌ವರ್ನಾ ಸ್ವಾರ್ಟ್‍‍ಪಿಲೆನ್ 200 ಬೈಕ್

ಸ್ವೀಡನ್ ಮೂಲದ ಬೈಕ್ ತಯಾರಕ ಕಂಪನಿಯಾದ ಹಸ್ಕ್‌ವರ್ನಾ ಈ ವರ್ಷದ ಆರಂಭದಲ್ಲಿ ಸ್ವಾರ್ಟ್‍‍ಪಿಲೆನ್ 250 ಹಾಗೂ ವಿಟ್‍‍ಪಿಲೆನ್ 250 ಬೈಕ್‍‍ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಇದೀಗ ಹಸ್ಕ್‌ವರ್ನಾ ಕಂಪನಿಯು ಹೊಸ ಸ್ವಾರ್ಟ್‍‍ಪಿಲೆನ್ 200 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹಸ್ಕ್‌ವರ್ನಾ ಸ್ವಾರ್ಟ್‍‍ಪಿಲೆನ್ 200 ಬೈಕ್

ಇದರ ಭಾಗವಾಗಿ ಭಾರತದಲ್ಲಿ ಮೊದಲ ಬಾರಿಗೆ ಹಸ್ಕ್‌ವರ್ನಾ ಸ್ವಾರ್ಟ್‍‍ಪಿಲೆನ್ 200 ಬೈಕ್ ಸ್ಪಾಟ್ ಟೆಸ್ಟ್ ನಡಿಸಿದೆ. ಈ ಹೊಸ ಬೈಕ್ ಸ್ಫಾಟ್ ಟೆಸ್ಟ್ ನಡೆಸುತ್ತಿರುವುದನ್ನು 91ವ್ಹೀಲ್ಸ್ ಬಹಿರಂಗಪಡಿಸಿದೆ. ಈ ಹೊಸ ಹಸ್ಕ್‌ವರ್ನಾ ಸ್ವಾರ್ಟ್‍‍ಪಿಲೆನ್ 200 ಬೈಕಿನಲ್ಲಿ ಕೆಟಿಎಂ ಡ್ಯೂಕ್ 200 ಬೈಕಿನಲ್ಲಿರುವಂತಹ 199.5 ಸಿಸಿ, ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್‌ ಅನ್ನು ಹೊಂದಿರಬಹುದು. ಈ ಎಂಜಿನ್ ಡ್ಯೂಕ್ ಬೈಕಿನಲ್ಲಿ 25 ಬಿಹೆಚ್‍ಪಿ ಪವರ್ ಮತ್ತು 19 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹಸ್ಕ್‌ವರ್ನಾ ಸ್ವಾರ್ಟ್‍‍ಪಿಲೆನ್ 200 ಬೈಕ್

ಇನ್ನು ಹಸ್ಕ್‌ವರ್ನಾ ಸ್ವಾರ್ಟ್‍‍ಪಿಲೆನ್ 200 ಬೈಕ್ ಕೂಡ ಇದೇ ಮಾದರಿಯಲ್ಲಿ ಪವರ್ ಮತ್ತು ಟಾರ್ಕ್ ಅನ್ನು ಉತ್ಪಾದಿಸುತ್ತದೆ ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಹಸ್ಕ್‌ವರ್ನಾ ಸ್ವಾರ್ಟ್‍‍ಪಿಲೆನ್ 200 ಬೈಕಿನಲ್ಲಿ ಹಲವಾರು ಹೊಸ ಫೀಚರುಗಳನ್ನು ಹೊಂದಿರಲಿದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹಸ್ಕ್‌ವರ್ನಾ ಸ್ವಾರ್ಟ್‍‍ಪಿಲೆನ್ 200 ಬೈಕ್

ಹಸ್ಕ್‌ವರ್ನಾ ಸ್ವಾರ್ಟ್‍‍ಪಿಲೆನ್ 200 ಬೈಕಿನಲ್ಲಿ ಆಲ್-ಎಲ್ಇಡಿ ಲೈಟಿಂಗ್ ಸಿಸ್ಟಂ, ಅಪ್ ಸೈಡ್-ಫೋರ್ಕ್ಸ್, ಡ್ಯುಯಲ್-ಚಾನೆಲ್ ಎಬಿಎಸ್(ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಇತರ ಫೀಚರುಗಳನ್ನು ಹೊಂದಿರಲಿದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹಸ್ಕ್‌ವರ್ನಾ ಸ್ವಾರ್ಟ್‍‍ಪಿಲೆನ್ 200 ಬೈಕ್

ಈ ಹೊಸ ಹಸ್ಕ್‌ವರ್ನಾ ಸ್ವಾರ್ಟ್‍‍ಪಿಲೆನ್ 200 ಬೈಕನ್ನು ಭಾರತದಲ್ಲಿ ಸ್ಪರ್ಧಾತ್ಮಕ ಬೆಲೆಯಲ್ಲಿ ಬಿಡುಗಡೆ ಗೊಳಿಸಬಹುದು. ಬಜಾಜ್ ಡೋಮಿನಾರ್ ಬೈಕನ್ನು ಎಕ್ಸ್ ಶೋರೂಂ ಪ್ರಕಾರ ರೂ.1.60 ಲಕ್ಷಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿ‍ಎಸ್-6 ಬಜಾಜ್ ಪಲ್ಸರ್ ಎನ್ಎಸ್200 ಬೈಕ್

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹಸ್ಕ್‌ವರ್ನಾ ಸ್ವಾರ್ಟ್‍‍ಪಿಲೆನ್ 200 ಬೈಕ್

ಇದರಿಂದ ಈ ಹೊಸ ಹಸ್ಕ್‌ವರ್ನಾ ಸ್ವಾರ್ಟ್‍‍ಪಿಲೆನ್ 200 ಬೈಕನ್ನು ಎಕ್ಸ್ ಶೋರೂಂ ಪ್ರಕಾರ ರೂ.1.50 ಲಕ್ಷ ಬೆಲೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಇನ್ನು ಈ ವರ್ಷದ ಆರಂಭದಲ್ಲಿ ಬಿಡುಗಡೆಗೊಂಡ ಸ್ವಾರ್ಟ್‌ಪಿಲೆನ್ 250, ವಿನ್ಯಾಸದಲ್ಲಿ ಸ್ವಾರ್ಟ್‌ಪಿಲೆನ್ 401 ಬೈಕ್ ಅನ್ನು ಹೋಲುತ್ತದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹಸ್ಕ್‌ವರ್ನಾ ಸ್ವಾರ್ಟ್‍‍ಪಿಲೆನ್ 200 ಬೈಕ್

ಈ ಬೈಕಿಗೆ ಸ್ಕ್ರ್ಯಾಂಬ್ಲರ್ ರೀತಿಯ ವಿನ್ಯಾಸವನ್ನು ನೀಡಲಾಗಿದೆ. ಮುಂಭಾಗದಲ್ಲಿ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಹೊಂದಿರುವ ಸರ್ಕ್ಯುಲರ್ ಹೆಡ್‌ಲ್ಯಾಂಪ್‍‍ಗಳಿವೆ. ಅದರ ಮೇಲೆ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅಳವಡಿಸಲಾಗಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹಸ್ಕ್‌ವರ್ನಾ ಸ್ವಾರ್ಟ್‍‍ಪಿಲೆನ್ 200 ಬೈಕ್

ಫ್ಯೂಯಲ್ ಟ್ಯಾಂಕ್ ಮಸ್ಕುಲರ್ ಆಗಿದ್ದು, ದೊಡ್ಡದಾಗಿದ್ದರೆ, ಬೈಕಿನ ಹಿಂಭಾಗದ ತುದಿಯು ಚಿಕ್ಕದಾಗಿದೆ. ಸ್ವಾರ್ಟ್‌ಪಿಲೆನ್ 401 ಬೈಕ್ ವೈರ್ ಸ್ಪೋಕ್ ವ್ಹೀಲ್‌ಗಳನ್ನು ಹೊಂದಿದ್ದರೆ, 250 ಬೈಕ್ 8 ಸ್ಪೋಕ್ ಅಲಾಯ್ ವ್ಹೀಲ್‍‍ಗಳನ್ನು ಹೊಂದಿದೆ. ಈ ಬೈಕ್ ಸ್ಕ್ರ್ಯಾಂಬ್ಲರ್ ಸ್ಟೈಲಿಂಗ್ ಅನ್ನು ಹೆಚ್ಚಿಸುವ ಡ್ಯುಯಲ್ ಪರ್ಪಸ್ ಟಯರ್‍‍ಗಳನ್ನು ಹೊಂದಿದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹಸ್ಕ್‌ವರ್ನಾ ಸ್ವಾರ್ಟ್‍‍ಪಿಲೆನ್ 200 ಬೈಕ್

ವಿಭಿನ್ನವಾದ ಕೆಫೆ ರೇಜರ್ ಬೈಕ್ ಆದ ವಿಟ್‍‍ಪಿಲೆನ್ 200 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇನ್ನು ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಸ್ಪರ್ಧಾತ್ಮಕ ಬೆಲೆಯಲ್ಲಿ ಈ ಬೈಕನ್ನು ಬಿಡುಗಡೆಗೊಳಿಸಬಹುದು.

Most Read Articles

Kannada
English summary
Low-cost Husqvarna Svartpilen 200 Spied Testing. Read In Kannada.
Story first published: Tuesday, July 28, 2020, 16:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X