ಬಿಡುಗಡೆಗೆ ಸಜ್ಜಾದ ಒಕಿನಾವಾ ಎಲೆಕ್ಟ್ರಿಕ್ ಮ್ಯಾಕ್ಸಿ ಸ್ಕೂಟರ್

ಒಕಿನಾವಾ ಎಲೆಕ್ಟ್ರಿಕ್ ಮ್ಯಾಕ್ಸಿ ಸ್ಕೂಟರ್ 2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಲಿದೆ. ಒಕಿನಾವಾ ಕಂಪನಿಯು ತನ್ನ ಮೊದಲ ವಾಹನವನ್ನು 2017ರಲ್ಲಿ ಬಿಡುಗಡೆಗೊಳಿಸಿತ್ತು. ಅದಾದ ನಂತರ ಕಂಪನಿಯು ಆಕರ್ಷಕವಾಗಿ ಕಾಣುವ ವೇಗವಾಗಿ ಚಲಿಸುವ ಸ್ಕೂಟರ್‍‍ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಾ ಬಂದಿದೆ.

ಆಟೋ ಎಕ್ಸ್‌ಪೋ 2020: ಬಿಡುಗಡೆಗೆ ಸಜ್ಜಾದ ಒಕಿನಾವಾ ಎಲೆಕ್ಟ್ರಿಕ್ ಮ್ಯಾಕ್ಸಿ ಸ್ಕೂಟರ್

ಒಕಿನಾವಾ ಕಂಪನಿಯು ತನ್ನ ಸರಣಿಯಲ್ಲಿ ಎಂಟು ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಹೊಂದಿದೆ. ಈ ಸ್ಕೂಟರ್‍‍ಗಳ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.40,000 ದಿಂದ ರೂ.1.14 ಲಕ್ಷಗಳವರೆಗೂ ಇದೆ. ಎಕ್ಸ್ ಪ್ರೆಸ್ ಡ್ರೈವ್ಸ್ ವರದಿಗಳ ಪ್ರಕಾರ ಒಕಿನಾವಾ ಕಂಪನಿಯು ಈಗ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲು ಮುಂದಾಗಿದೆ.

ಆಟೋ ಎಕ್ಸ್‌ಪೋ 2020: ಬಿಡುಗಡೆಗೆ ಸಜ್ಜಾದ ಒಕಿನಾವಾ ಎಲೆಕ್ಟ್ರಿಕ್ ಮ್ಯಾಕ್ಸಿ ಸ್ಕೂಟರ್

ಒಕಿ 100 ಎಂದು ಕರೆಯಲಾಗುವ ಈ ಎಲೆಕ್ಟ್ರಿಕ್ ಕ್ರೂಸರ್ ಮ್ಯಾಕ್ಸಿ ಸ್ಕೂಟರ್ ಅನ್ನು ಒಕಿನಾವಾ ಮುಂದಿನ ತಿಂಗಳು ನಡೆಯಲಿರುವ 2020ರ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಗೊಳಿಸಲಿದೆ. ಬಿಡುಗಡೆಯಾಗಿರುವ ಟೀಸರ್ ಫೋಟೊಗಳ ಪ್ರಕಾರ ಒಕಿನಾವಾ ಹೊಸ ಸ್ಕೂಟರ್ ಸುಜುಕಿ ಬರ್ಗ್‍‍ಮನ್ ಮ್ಯಾಕ್ಸಿ ಸ್ಕೂಟರ್‍‍ನಲ್ಲಿರುವಂತಹ ಸಿಲ್‍‍ಯೊಟ್ ಹೊಂದಿರಲಿದೆ.

ಆಟೋ ಎಕ್ಸ್‌ಪೋ 2020: ಬಿಡುಗಡೆಗೆ ಸಜ್ಜಾದ ಒಕಿನಾವಾ ಎಲೆಕ್ಟ್ರಿಕ್ ಮ್ಯಾಕ್ಸಿ ಸ್ಕೂಟರ್

ಈ ಟೀಸರ್ ಚಿತ್ರದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಆರೇಂಜ್ ಬಣ್ಣವನ್ನು ಹೊಂದಿರುವುದನ್ನು ಹಾಗೂ ಹಿಂಬದಿಯ ಸವಾರರಿಗೆ ಆರಾಮದಾಯಕ ಅನುಭವವನ್ನು ನೀಡಲು ಎತ್ತರಿಸಿರುವ ಸೀಟ್ ನೀಡಿರುವುದನ್ನು ಕಾಣಬಹುದು.

ಆಟೋ ಎಕ್ಸ್‌ಪೋ 2020: ಬಿಡುಗಡೆಗೆ ಸಜ್ಜಾದ ಒಕಿನಾವಾ ಎಲೆಕ್ಟ್ರಿಕ್ ಮ್ಯಾಕ್ಸಿ ಸ್ಕೂಟರ್

ಹೆಸರೇ ಸೂಚಿಸುವಂತೆ ಈ ಮ್ಯಾಕ್ಸಿ ಸ್ಕೂಟರ್ ದೊಡ್ಡ ಗಾತ್ರವನ್ನು ಹೊಂದಿರಲಿದೆ. ಎತ್ತರವಾಗಿರುವ ಚಾಲಕರೂ ಸಹ ಆರಾಮದಾಯಕವಾಗಿ ಈ ಸ್ಕೂಟರ್ ಅನ್ನು ಸವಾರಿ ಮಾಡಬಹುದಾಗಿದೆ. ಎತ್ತರವಾಗಿರುವವರು ಸ್ಕೂಟರ್ ಚಾಲನೆ ಮಾಡುವಾಗ ಅವರ ಕಾಲುಗಳು ಹ್ಯಾಂಡಲ್‍‍ಬಾರ್‍‍ಗಳಿಗೆ ತಾಗುತ್ತವೆ. ಆದರೆ ಒಕಿನಾವಾದ ಈ ಸ್ಕೂಟರಿನಲ್ಲಿ ಈ ರೀತಿಯ ತೊಂದರೆಯಿರುವುದಿಲ್ಲ.

ಆಟೋ ಎಕ್ಸ್‌ಪೋ 2020: ಬಿಡುಗಡೆಗೆ ಸಜ್ಜಾದ ಒಕಿನಾವಾ ಎಲೆಕ್ಟ್ರಿಕ್ ಮ್ಯಾಕ್ಸಿ ಸ್ಕೂಟರ್

ಒಕಿನಾವಾ ಕ್ರೂಸ್ ಮ್ಯಾಕ್ಸಿ ಸ್ಕೂಟರ್‍‍ನಲ್ಲಿರುವ ಸ್ಪೆಸಿಫಿಕೇಶನ್‍‍ಗಳನ್ನು ಬಹಿರಂಗಪಡಿಸಿಲ್ಲವಾದರೂ ಈ ಸ್ಕೂಟರ್ ರಿಜನರೇಟಿವ್ ಬ್ರೇಕಿಂಗ್ ಟೆಕ್ನಾಲಜಿಯನ್ನು ಹೊಂದುವ ಸಾಧ್ಯತೆಗಳಿವೆ. ಉಳಿದಂತೆ ಈ ಸ್ಕೂಟರಿನ ಎರಡೂ ಬದಿಯಲ್ಲಿ ಡಿಸ್ಕ್ ಬ್ರೇಕ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಅಂಡರ್ ಸೀಟ್ ಸ್ಟೋರೇಜ್ ಹಾಗೂ ಯು‍ಎಸ್‍‍ಬಿ ಚಾರ್ಜಿಂಗ್‍‍ಗಳಿರಲಿವೆ.

ಆಟೋ ಎಕ್ಸ್‌ಪೋ 2020: ಬಿಡುಗಡೆಗೆ ಸಜ್ಜಾದ ಒಕಿನಾವಾ ಎಲೆಕ್ಟ್ರಿಕ್ ಮ್ಯಾಕ್ಸಿ ಸ್ಕೂಟರ್

ಈ ಮ್ಯಾಕ್ಸಿ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ ಸ್ವಾಪಬಲ್ ಲಿಥಿಯಂ ಐಯಾನ್ ಬ್ಯಾಟರಿ ಅಳವಡಿಸಲಾಗುವುದು. ಈ ಬ್ಯಾಟರಿಯು ಪೂರ್ತಿಯಾಗಿ ಚಾರ್ಜ್ ಆದ ನಂತರ 150 ಕಿ.ಮೀವರೆಗೂ ಚಲಿಸುತ್ತದೆ. ಈ ಸ್ಕೂಟರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 120 ಕಿ.ಮೀಗಳಾಗಿದೆ.

ಆಟೋ ಎಕ್ಸ್‌ಪೋ 2020: ಬಿಡುಗಡೆಗೆ ಸಜ್ಜಾದ ಒಕಿನಾವಾ ಎಲೆಕ್ಟ್ರಿಕ್ ಮ್ಯಾಕ್ಸಿ ಸ್ಕೂಟರ್

ಭಾರತದಲ್ಲಿರುವ ಇತರ ಎಲೆಕ್ಟ್ರಿಕ್ ದ್ವಿ ಚಕ್ರ ವಾಹನ ತಯಾರಕ ಕಂಪನಿಗಳಂತೆ ಒಕಿನಾವಾ ಸಹ ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬೇರೆ ಬೇರೆ ಹೆಸರಿನಲ್ಲಿ ಅಭಿವೃದ್ಧಿಪಡಿಸಿ, ಮಾರಾಟ ಮಾಡುತ್ತದೆ. ಇವುಗಳಲ್ಲಿ ಚೀನಾದಲ್ಲಿ ಮಾರಾಟವಾಗುವ ಝೆಜಿಯಾಂಗ್ ಲುವ್ಯಾನ್ ಎಲೆಕ್ಟ್ರಿಕ್ ಸ್ಕೂಟರ್ ಸಹ ಒಂದು.

ಆಟೋ ಎಕ್ಸ್‌ಪೋ 2020: ಬಿಡುಗಡೆಗೆ ಸಜ್ಜಾದ ಒಕಿನಾವಾ ಎಲೆಕ್ಟ್ರಿಕ್ ಮ್ಯಾಕ್ಸಿ ಸ್ಕೂಟರ್

ಒಕಿನಾವಾ ಕಂಪನಿಯ ಈ ಎಲೆಕ್ಟ್ರಿಕ್ ಸ್ಕೂಟರ್ ಸುಜುಕಿ ಬರ್ಗ್‍‍ಮನ್ ಸ್ಕೂಟರಿಗಿಂತ 50 ಎಂಎಂನಷ್ಟು ಉದ್ದವಾಗಿದೆ. ಸುಜುಕಿ ಬರ್ಗ್‍‍ಮನ್ ಸದ್ಯಕ್ಕೆ ಭಾರತದಲ್ಲಿ ಮಾರಾಟವಾಗುತ್ತಿರುವ ಏಕೈಕ ಮ್ಯಾಕ್ಸಿ ಸ್ಕೂಟರ್ ಆಗಿದೆ.

ಆಟೋ ಎಕ್ಸ್‌ಪೋ 2020: ಬಿಡುಗಡೆಗೆ ಸಜ್ಜಾದ ಒಕಿನಾವಾ ಎಲೆಕ್ಟ್ರಿಕ್ ಮ್ಯಾಕ್ಸಿ ಸ್ಕೂಟರ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಒಕಿನಾವಾ ಕಂಪನಿಯು ತನ್ನ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಡುಗಡೆಗೊಳಿಸಲು ಬಯಸಿದೆ. ಈ ರೀತಿಯ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಬಿಡುಗಡೆಯೊಂದಿಗೆ ಒಕಿನಾವಾ ಕಂಪನಿಯು ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಬಯಸಿದೆ. ಈ ಎಲೆಕ್ಟ್ರಿಕ್ ಸ್ಕೂಟರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.10 ಲಕ್ಷಗಳಾಗುವ ಸಾಧ್ಯತೆಗಳಿವೆ.

ಸೂಚನೆ: ರೆಫೆರೆನ್ಸ್ ಗಾಗಿ ಒಕಿನಾವಾ ಕಂಪನಿಯ ಇತರ ಸ್ಕೂಟರ್‍‍ಗಳ ಚಿತ್ರಗಳನ್ನು ಬಳಸಲಾಗಿದೆ.

More from DriveSpark

Article Published On: Saturday, January 25, 2020, 11:34 [IST]
English summary
Okinawa Electric Maxi Scooter To Debut At Auto Expo 2020. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+