ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಯಾಯ್ತು ಸುಜುಕಿ ಜೆಕ್ಸರ್ ಬೈಕುಗಳು
ಜಪಾನ್ ಮೂಲದ ಬೈಕ್ ತಯಾರಕ ಕಂಪನಿಯಾದ ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ತನ್ನ ಜಿಕ್ಸರ್ ಸರಣಿಯ ಬೈಕುಗಳನ್ನು ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಳಿಸಿವೆ. ಜಿಕ್ಸರ್ ಸರಣಿಯ ಬೈಕುಗಳು ಆಕರ್ಷಕ ಬಣ್ಣಗಳ ಆಯ್ಕೆಗಳನ್ನು ಪಡೆದುಕೊಂಡಿವೆ.

ಜಾಗತಿಕವಾಗಿ ಸುಜುಕಿ ಮೋಟಾರ್‌ಸೈಕಲ್ ತನ್ನ ಜನಪ್ರಿಯ ಜಿಕ್ಸರ್ ಬ್ರ್ಯಾಂಡ್‌ನ 100ನೇ ವಾರ್ಷಿಕೋತ್ಸವದ ಭಾಗವಾಗಿ ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಸುಜುಕಿ ಜಿಕ್ಸರ್ ಎಸ್‌ಎಫ್ 250 ಬೈಕ್ ಇದೀಗ ಹೊಸ ಟ್ರೈಟಾನ್ ಬ್ಲೂ/ಸಿಲ್ವರ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಈ ಬ್ಲೂ ಮತ್ತು ಸಿಲ್ವರ್ ಬಣ್ಣದ ಆಯ್ಕೆಯು 1960ರ ಸುಜುಕಿ ಆರಂಭಿಕ ಗ್ರ್ಯಾಂಡ್ ಪ್ರಿಕ್ಸ್ ಮಾದರಿಗಳನ್ನು ನೆನಪಿಸುತ್ತದೆ. ಸುಜುಕಿ ಜಿಕ್ಸರ್ ಎಸ್‌ಎಫ್ 250 ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.1.76 ಲಕ್ಷ ಗಳಾಗಿದೆ.

ಮತ್ತೊಂದೆಡೆ ಜಿಕ್ಸರ್ 250 ನೇಕೆಡ್ ಬೈಕ್ ನವೀಕರಿಸಿದ ಗ್ರಾಫಿಕ್ಸ್‌ನೊಂದಿಗೆ ಹೊಸ ಮೆಟಾಲಿಕ್ ಟ್ರೈಟಾನ್ ಬ್ಲೂ ಶೇಡ್ ಬಣ್ಣವನ್ನು ಹೊಂದಿದೆ. ಹೊಸ ಶೇಡ್ ಡ್ಯುಯಲ್-ಟೋನ್ ಬಣ್ಣದ ಜಿಕ್ಸರ್ 250 ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.1.65 ಲಕ್ಷಗಳಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಎಂಟ್ರಿ ಲೆವೆಲ್ ಸುಜುಕಿ ಜಿಕ್ಸರ್ 155 ಮತ್ತು ಜಿಕ್ಸರ್ ಎಸ್‌ಎಫ್ 155 ಸಹ ವಾರ್ಷಿಕೋತ್ಸವದ ಭಾಗವಾಗಿ ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡಿದೆ. ಇದೀಗ ಸುಜುಕಿ ಜಿಕ್ಸರ್ 155 ಮತ್ತು ಜಿಕ್ಸರ್ ಎಸ್‌ಎಫ್ 155 ಸಹ ಹೊಸ ಪರ್ಲ್ ಮೀರಾ ರೆಡ್ ಕಲರ್ ಮತ್ತು ಮೆಟಾಲಿಕ್ ಟ್ರೈಟಾನ್ ಬ್ಲೂ ಬಣ್ಣಗಳಲ್ಲಿ ಲಭ್ಯವಿದೆ.

ಹೆಚ್ಚುವರಿಯಾಗಿ ಬೈಕುಗಳು ನವೀಕರಣ ಭಾಗವಾಗಿ ಜಿಕ್ಸರ್ ಬೈಕುಗಳು ಗ್ರಾಫಿಕ್ಸ್ ಸಹ ಸ್ವೀಕರಿಸುತ್ತವೆ. ಜಿಕ್ಸರ್ 155 ಮತ್ತು ಎಸ್‌ಎಫ್ 155 ಬೈಕುಗಳ ಬೆಲೆಯು ಕ್ರಮವಾಗಿ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.1.14 ಲಕ್ಷ ಮತ್ತು ರೂ.1.24 ಲಕ್ಷಗಳಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಬಿಎಸ್-6 ಜಿಕ್ಸರ್ 250 ಮತ್ತು ಜಿಕ್ಸರ್ ಎಸ್ಎಫ್ 250 ಬೈಕುಗಳಲ್ಲಿ 249 ಸಿಸಿ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 26.1 ಬಿಹೆಚ್ಪಿ ಪವರ್ ಮತ್ತು 22.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಪ್ರಸ್ತುತ ನೇಕೆಡ್ ಆವೃತ್ತಿಯ ಸುಜುಕಿ ಜಿಕ್ಸರ್ 250 ಹೊಸದಾಗಿ ವಿನ್ಯಾಸಗೊಳಿಸಲಾದ ಟ್ಯಾಂಕಿನ ಮೇಲೆ ವಿಶಿಷ್ಟವಾದ ಬಾಡಿ ಗ್ರಾಫಿಕ್ಸ್ ಗಳಿದ್ದು, ಇದರ ಜೊತೆಗೆ ಒವಲ್ ಆಕಾರಾದ ಎಲ್ಇಡಿ ಹೆಡ್‌ಲ್ಯಾಂಪ್ ಯೂನಿಟ್‍ಗಳಿವೆ. ಜಿಕ್ಸರ್ 250 ಬೈಕಿನಲ್ಲಿ ಟಯರ್ ಹಗ್ಗರ್, ಸ್ಪ್ಲಿಟ್ ಸೀಟ್, ಕಪ್ಪು ಬಣ್ಣದ ಅಲಾಯ್ ವ್ಹೀಲ್ ಹಾಗೂ ಕ್ರೋಮ್ ಅಂಶಗಳನ್ನು ಹೊಂದಿರುವ ಡ್ಯುಯಲ್ ಮಫ್ಲರ್ ಅಂಶಗಳಿವೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಸುಜುಕಿ ಜಿಕ್ಸರ್ ಮತ್ತು ಜಿಕ್ಸರ್ ಎಸ್ಎಫ್ 155 ಬೈಕುಗಳಲ್ಲಿ 55 ಸಿಸಿ, ಏರ್-ಕೂಲ್ಡ್, ಇಂಧನ-ಇಂಜೆಕ್ಟ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 13.4 ಬಿಹೆಚ್ಪಿ ಪವರ್ ಮತ್ತು 13.8 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗುತ್ತದೆ.

ಸುಜುಕಿ ಮೋಟಾರ್‌ಸೈಕಲ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಜನಪ್ರಿಯ ಜಿಕ್ಸರ್ ಬ್ರ್ಯಾಂಡ್‌ನ 100ನೇ ವಾರ್ಷಿಕೋತ್ಸವದ ಭಾಗವಾಗಿ ಇದರ ಅಡಿಯಲ್ಲಿ ಬರುವ ಎಲ್ಲಾ ಬೈಕುಗಳು ಹೊಸ ಬಣ್ಣಗಳ ಆಯ್ಕೆಗಳನ್ನು ಪಡೆದಿವೆ. ಇದರಿಂದ ಖರೀದಿದಾರರಿಗೆ ಹೆಚ್ಚಿನ ಆಯ್ಕೆಯಲ್ಲಿ ಜಿಕ್ಸರ್ ಬೈಕುಗಳು ಲಭ್ಯವಿರಲಿದೆ.


Click it and Unblock the Notifications