ಬಿಡುಗಡೆಯಾಯ್ತು ಹೊಸ ಸುಜುಕಿ ಜಿಎಸ್ಎಕ್ಸ್-ಆರ್ 125 ಬೈಕ್
ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ಹೊಸ ಜಿಎಸ್‌ಎಕ್ಸ್-ಆರ್ 125 ಬೈಕ್ ಅನ್ನು ಜಪಾನ್‌ನಲ್ಲಿ ಬಿಡುಗಡೆಗೊಳಿಸಿದೆ, ಜಿಎಸ್‌ಎಕ್ಸ್-ಆರ್ 125 ಬೈಕನ್ನು ಟ್ರೈಟಾನ್ ಬ್ಲೂ ಮೆಟಾಲಿಕ್, ಬ್ರಿಲಿಯಂಟ್ ವೈಟ್, ಟೈಟಾನ್ ಬ್ಲ್ಯಾಕ್ ಮತ್ತು ಹೊಸ ಮೋಟೋ ಜಿಪಿ ಲಿವರಿ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಳಿಸಿದೆ.

ಈ ಹೊಸ ಸುಜುಕಿ ಜಿಎಸ್ಎಕ್ಸ್-ಆರ್ 125 ಮೋಟೋ ಜಿಪಿ ಎಡಿಷನ್ ಬೈಕ್ ಆಗಿದೆ. ಈ ಹೊಸ ಸುಜುಕಿ ಜಿಎಸ್ಎಕ್ಸ್-ಆರ್ 125 ಬೈಕಿನ ಮಾರಾಟವನ್ನು ಮುಂದಿನ ತಿಂಗಳ ಮೊದಲ ವಾರದಲ್ಲಿ ಪ್ರಾರಂಭಿಸಲಿದೆ. ಕಂಪನಿಯು 100ನೇ ವಾರ್ಷಿಕೋತ್ಸವದ ನೆನಪಿಗಾಗಿ ಈ ಬೈಕನ್ನು ಬಿಡುಗಡೆಗೊಳಿಸಲಾಗಿದೆ. ಈ ಹೊಸ ಜಿಎಸ್‌ಎಕ್ಸ್-ಆರ್ 125 ಬೈಕನ್ನು ಜಿಎಸ್ಎಕ್ಸ್-ಆರ್ಆರ್ ಮೋಟೋ ಜಿಪಿ ರೇಸ್ ಮಾದರಿಯನ್ನು ಆಧರಿಸಿ ತಯಾರಿಸಲಾಗಿದೆ. ಈ ಬೈಕಿನಲ್ಲಿ ಹೊಸ ಬಣ್ಣವನ್ನು ಹೊರತುಪಡಿಸಿ ಇತರ ಯಾವುದೇ ಬದಲಾವಣೆಗಳಿಲ್ಲ.

ಹೊಸ ಸುಜುಕಿ ಜಿಎಸ್ಎಕ್ಸ್-ಆರ್ 125 ಬೈಕ್ 124 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಡಿಒಹೆಚ್ಸಿ ಸೆಟಪ್ ಮತ್ತು ಫ್ಯೂಯಲ್-ಇಂಜೆಕ್ಷನ್ ಸಿಸ್ಟಂ ಅನ್ನು ಹೊಂದಿದೆ.
MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಈ ಎಂಜಿನ್ 10,000 ಆರ್‌ಪಿಎಂನಲ್ಲಿ 14.7 ಬಿಹೆಚ್‍ಪಿ ಪವರ್ ಮತ್ತು 11 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಹೊಸ ಸುಜುಕಿ ಜಿಎಸ್ಎಕ್ಸ್-ಆರ್ 125 ಬೈಕಿನಲ್ಲಿ ಜಿಕ್ಸರ್ ಬೈಕುಗಳಲ್ಲಿರುವಂತಹ ಎಲ್‌ಇಡಿ ಟೈಲ್ ಲ್ಯಾಂಪ್, ಕ್ಲಿಪ್-ಆನ್ ಹ್ಯಾಂಡಲ್‌ಬಾರ್ ಮತ್ತು ಗೇರ್ ಪೊಸಿಷನ್ ಇಂಡಿಕೇಟರ್ ಹೊಂದಿರುವ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.
MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಇದರೊಂದಿಗೆ ಸುಜುಕಿ ಮೋಟಾರ್‌ಸೈಕಲ್ ತನ್ನ ಹೊಸ ಸುಜುಕಿ ಜಿಎಸ್‌ಎಕ್ಸ್-ಎಸ್ 300 ಬೈಕನ್ನು ಚೀನಾ ದೇಶದ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಸುಜುಕಿ ಜಿಎಸ್‌ಎಕ್ಸ್-ಎಸ್ 300 ಬೈಕಿನ ಬೆಲೆಯು ಸುಮಾರು ರೂ.3.55 ಲಕ್ಷಗಳಾಗಿದೆ.

ಈ ಹೊಸ ಸುಜುಕಿ ಜಿಎಸ್‌ಎಕ್ಸ್-ಎಸ್ 300 ಬೈಕಿನಲ್ಲಿ 298 ಸಿಸಿ, ಟ್ವಿನ್-ಸಿಲಿಂಡರ್, ಎಸ್‌ಒಹೆಚ್‌ಸಿ, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8,500 ಆರ್‌ಪಿಎಂನಲ್ಲಿ 29.23 ಬಿಹೆಚ್‍ಪಿ ಪವರ್ ಮತ್ತು 6,500 ಆರ್‌ಪಿಎಂನಲ್ಲಿ 27.8 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಬಿಡುಗಡೆಯಾಯ್ತು ಜನಪ್ರಿಯ ಬಿಎಸ್-6 ಹೋಂಡಾ ಗ್ರಾಜಿಯಾ 125 ಸ್ಕೂಟರ್

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಅಳವಡಿಸಲಾಗಿದೆ. ಚೀನಾದ ದ್ವಿಚಕ್ರ ವಾಹನ ತಯಾರಕ ಕಂಪನಿಯೊಂದಿರ ಪಾಲುದಾರಿಕೆಯಲ್ಲಿ ಈ ಬೈಕನ್ನು ಬಿಡುಗಡೆಗೊಳಿಸಿದೆ. ಜಿಎಸ್‌ಎಕ್ಸ್-ಎಸ್ 300 ಬೈಕ್ ಚೀನಾ ಮಾರುಕಟ್ಟೆಯಲ್ಲಿ ಕವಾಸಕಿ ಝಡ್ 250, ಕೆಟಿಎಂ 390 ಡ್ಯೂಕ್ ಮತ್ತು ಯಮಹಾ ಎಂಟಿ -03 ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.

ಇನ್ನು ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ಜಿಎಸ್ಎಕ್ಸ್-ಆರ್ 125 ಬೈಕನ್ನು 100ನೇ ವಾರ್ಷಿಕೋತ್ಸವದ ನೆನಪಿಗಾಗಿ ಬಿಡುಗಡೆಗೊಳಿಸಿದೆ. ಈ ಹೊಸ ಸುಜುಕಿ ಜಿಎಸ್ಎಕ್ಸ್-ಆರ್ 125 ಬೈಕ್ ಕೆಟಿಎಂ ಆರ್‍ಸಿ 125 ಬೈಕಿಗೆ ಪೈಪೋಟಿಯನ್ನು ನೀಡುತ್ತದೆ.


Click it and Unblock the Notifications








