ಹೊಸ ಟ್ರಯಂಫ್ ಬೊನೆವಿಲ್ಲೆ ಬೈಕುಗಳ ಬಿಡುಗಡೆ ದಿನಾಂಕ ಬಹಿರಂಗ

ಟ್ರಯಂಫ್ ಕಂಪನಿಯು ತನ್ನ ಬೊನೆವಿಲ್ಲೆ ಸರಣಿಯ ಎರಡು ಹೊಸ ಮಾದರಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಸಲು ಸಜ್ಜಾಗಿದೆ. ಟ್ರಯಂಫ್ ಕಂಪನಿಯು ಈ ಹೊಸ ಎರಡು ಮಾದರಿಗಳನ್ನು ಬಿಡುಗಡೆಗೊಳಿಸುವ ದಿನಾಂಕವನ್ನು ಬಹಿರಂಗಪಡಿಸಿದೆ.

ಹೊಸ ಟ್ರಯಂಫ್ ಬೊನೆವಿಲ್ಲೆ ಬೈಕುಗಳ ಬಿಡುಗಡೆ ದಿನಾಂಕ ಬಹಿರಂಗ

ಟ್ರಯಂಫ್ ಕಂಪನಿಯು ಬೊನೆವೆಲ್ಲಿ ಟಿ100 ಬ್ಲ್ಯಾಕ್ ಮತ್ತು ಬೊನೆವಿಲ್ಲೆ ಟಿ120 ಬ್ಲ್ಯಾಕ್ ಎಂಬ ಎರಡು ಮಾದರಿಗಳನ್ನು ಬಾರತೀಯ ಮಾರುಕಟ್ಟೆಯಲ್ಲಿ ಇದೇ ತಿಂಗಳ 12 ರಂದು ಬಿಡುಗಡೆಗೊಳಿಸಲಿದೆ. ಜನಪ್ರಿಯ ಬೊನೆವಿಲ್ಲೆ ಎರಡು ಮಾದರಿಗಳಲ್ಲಿ ಕ್ರೋಮ್ ಅಂಶಗಳನ್ನು ಕಡಿಮೆಗೊಳಿಸಿ ಹಲವಾರು ಕಪ್ಪು ಎಲಿಮೆಂಟ್ ಅಂಶಗಳನ್ನು ಹೊಂದಿದೆ. ಈ ಎರಡು ಬೈಕುಗಳಲ್ಲಿ ಬ್ಲ್ಯಾಕ್ ಔಟ್ ವ್ಹೀಲ್, ಎಂಜಿನ್ ಕವರ್, ಮಿರರ್ ಮತ್ತು ಎಕ್ಸಾಸ್ಟ್ ಗಳನ್ನು ಒಳಗೊಂಡಿದೆ.

ಹೊಸ ಟ್ರಯಂಫ್ ಬೊನೆವಿಲ್ಲೆ ಬೈಕುಗಳ ಬಿಡುಗಡೆ ದಿನಾಂಕ ಬಹಿರಂಗ

ಹೊಸ ಟ್ರಯಂಫ್ ಬೊನೆವಿಲ್ಲೆ ಟಿ100 ಬ್ಲ್ಯಾಕ್ ಮತ್ತು ಬೊನೆವಿಲ್ಲೆ ಟಿ120 ಬ್ಲ್ಯಾಕ್ ಮಾದರಿಗಳು ಕೇವಲ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಈ ಬ್ಲ್ಯಾಕ್ ಮಾದರಿಗಳು ಆಕರ್ಷಕ ಲುಕ್ ಅನ್ನು ಹೊಂದಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಹೊಸ ಟ್ರಯಂಫ್ ಬೊನೆವಿಲ್ಲೆ ಬೈಕುಗಳ ಬಿಡುಗಡೆ ದಿನಾಂಕ ಬಹಿರಂಗ

ಹಿಂದಿನ ಮಾದರಿ ಟ್ರಯಂಫ್ ಬೊನೆವಿಲೆ ಟಿ100 ಬ್ಲ್ಯಾಕ್ ಮಾದರಿಯು 900 ಸಿಸಿ ಪ್ಯಾರೆಲಲ್ ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 55 ಬಿಹೆಚ್‍ಪಿ ಪವರ್ ಮತ್ತು 77 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಟ್ರಯಂಫ್ ಬೊನೆವಿಲ್ಲೆ ಬೈಕುಗಳ ಬಿಡುಗಡೆ ದಿನಾಂಕ ಬಹಿರಂಗ

ಇನ್ನು ಟ್ರಯಂಫ್ ಬೊನೆವಿಲ್ಲೆ ಟಿ120 ಬ್ಲ್ಯಾಕ್ ಮಾದರಿಯಲ್ಲಿ 1,200 ಸಿಸಿ ಪ್ಯಾರೆಲಲ್ ಟ್ವಿನ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 80 ಬಿಹೆಚ್‍ಪಿ ಪವರ್ ಮತ್ತು 105 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಹೊಸ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಆದರೆ ಪವರ್ ಮತ್ತು ಟಾರ್ಕ್ ಉತ್ಪಾದನೆ ಅಂಕಿ ಅಂಶಗಳು ಬದಲಾವಣೆಗಳಾಗುವುದಿಲ್ಲ ಎಂದು ನಿರೀಕ್ಷಿಸುತ್ತೇವೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಹೊಸ ಟ್ರಯಂಫ್ ಬೊನೆವಿಲ್ಲೆ ಬೈಕುಗಳ ಬಿಡುಗಡೆ ದಿನಾಂಕ ಬಹಿರಂಗ

ಹೊಸ ಟ್ರಯಂಫ್ ಬೊನೆವಿಲ್ಲೆ ಟಿ100 ಬ್ಲ್ಯಾಕ್ ಮತ್ತು ಬೊನೆವಿಲ್ಲೆ ಟಿ120 ಬ್ಲ್ಯಾಕ್ ಬೈಕುಗಳ ಬೆಲೆಯು ದುಬಾರಿಯಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬೊನೆವಿಲ್ಲೆ ಟಿ100 ಬ್ಲ್ಯಾಕ್ ಮಾದರಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.8.87 ಲಕ್ಷಗಳಾಗಿದ್ದರೆ, ಟಿ120 ಬ್ಲ್ಯಾಕ್‌ ಬೈಕಿನೆ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.9.97 ಲಕ್ಷಗಳಾಗಿದೆ.

ಹೊಸ ಟ್ರಯಂಫ್ ಬೊನೆವಿಲ್ಲೆ ಬೈಕುಗಳ ಬಿಡುಗಡೆ ದಿನಾಂಕ ಬಹಿರಂಗ

ಟ್ರಯಂಫ್ ಕಂಪನಿಯು ತನ್ನ ಜನಪ್ರಿಯ ಮಾದರಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸುತ್ತಿದೆ. ಟ್ರಯಂಫ್ ಕಂಪನಿಯು ತನ್ನ ಸರಣಿಯಲ್ಲಿದ್ದ ಎಲ್ಲಾ ಬಿಎಸ್-4 ಮಾದರಿಗಳನ್ನು ಮಾರಾಟ ಮಾಡಲಾಗಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಹೊಸ ಟ್ರಯಂಫ್ ಬೊನೆವಿಲ್ಲೆ ಬೈಕುಗಳ ಬಿಡುಗಡೆ ದಿನಾಂಕ ಬಹಿರಂಗ

ಇದರೊಂದಿಗೆ ಬ್ರಿಟಿಷ್ ದ್ವಿಚಕ್ರ ತಯಾರಕ ಕಂಪನಿಯಾದ ಟ್ರಯಂಫ್ ಮೋಟರ್‌ಸೈಕಲ್ ತನ್ನ ಹೊಸ ಟ್ರಯಂಫ್ ಟೈಗರ್ 900 ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಟ್ರಯಂಫ್ ಕಂಪನಿಯು ಈ ಹೊಸ ಟೈಗರ್ 900 ಬೈಕನ್ನು ಭಾರತದಲ್ಲಿ ಮೂರು ರೂಪಾಂತರಗಳಲ್ಲಿ ಬಿಡುಗಡೆಗೊಳಿಸುತ್ತಿದೆ.

ಹೊಸ ಟ್ರಯಂಫ್ ಬೊನೆವಿಲ್ಲೆ ಬೈಕುಗಳ ಬಿಡುಗಡೆ ದಿನಾಂಕ ಬಹಿರಂಗ

ಟ್ರಯಂಫ್ ಕಂಪನಿಯು ತನ್ನ ಜನಪ್ರಿಯ ಮಾದರಿಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಇದರಲ್ಲಿ ಹೊಸ ಬೊನೆವಿಲ್ಲೆ ಟಿ100 ಬ್ಲ್ಯಾಕ್ ಮತ್ತು ಬೊನೆವಿಲ್ಲೆ ಟಿ120 ಬ್ಲ್ಯಾಕ್ ಮಾದರಿಗಳು ಕೂಡ ಸೇರಿವೆ.

More from DriveSpark

Article Published On: Tuesday, June 9, 2020, 10:44 [IST]
English summary
Triumph Bonneville T100 Black, T120 Black Launch Date Revealed. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+