ಐಷಾರಾಮಿ ಟ್ರಯಂಫ್ ರಾಕೆಟ್ 3 ಜಿಟಿ ಬೈಕ್ ಬಿಡುಗಡೆ: ಬೆಲೆ ರೂ.18.40 ಲಕ್ಷ
ಟ್ರಯಂಫ್ ಮೋಟಾರ್‌ಸೈಕಲ್ ತನ್ನ ಐಷಾರಾಮಿ ರಾಕೆಟ್ 3 ಜಿಟಿ ಬೈಕನ್ನು ಕೊನೆಗೂ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಟ್ರಯಂಫ್ ರಾಕೆಟ್ 3 ಜಿಟಿ ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.18 ಲಕ್ಷಗಳಾಗಿದೆ.

ಟ್ರಯಂಫ್ ಮೋಟಾರ್‌ಸೈಕಲ್ ತನ್ನ ರಾಕೆಟ್ 3 ಜಿಟಿ ಬೈಕನ್ನು ಕಳೆದ ವರ್ಷ ನಡೆದ 2019 ಇಂಡಿಯಾ ಬೈಕ್ ವೀಕ್‌ನಲ್ಲಿ ಅನಾವರಣಗೊಳಿಸಿದ್ದರು. ರಾಕೆಟ್ 3 ಜಿಟಿ ಬೈಕ್ ಅನ್ನು ಬ್ರಿಟಿನ್ ಮೂಲದ ಟ್ರಯಂಫ್ ಕಂಪನಿಯ ಹೊಸ ಪ್ಲಾಟ್‍ಫಾರಂ ಆಧಾರದ ಮೇಲೆ ನಿರ್ಮಿಸಲಾಗಿದೆ. 2020ರ ಹೊಸ ಟ್ರಯಂಫ್ ರಾಕೆಟ್ 3 ಜಿಟಿ ಬೈಕಿನಲ್ಲಿ ಮಾಸ್ ಬೈಕುಗಳಲ್ಲಿಯೇ ಅತಿ ದೊಡ್ಡದು ಎನ್ನಲಾದ 2,458 ಸಿಸಿಯ ಇನ್ ಲೈನ್ 3 ಸಿಲಿಂಡರ್ ಲಿಕ್ವಿಡ್ ಕೂಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಈ ಎಂಜಿನ್ 6,000 ಆರ್‍ಪಿಎಂನಲ್ಲಿ 165 ಬಿಹೆಚ್‍ಪಿ ಪವರ್ ಹಾಗೂ 4,000 ಆರ್‍ಪಿಎಂನಲ್ಲಿ 221 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಹೊಸದಾದ ಕ್ರಾಂಕ್‍ಕೇಸ್ ಅಸೆಂಬ್ಲಿ, ಬ್ಯಾಲೆನ್ಸರ್ ಶಾಫ್ಟ್ ಹಾಗೂ ಲ್ಯುಬ್ರಿಕೇಷನ್ ಸಿಸ್ಟಂಗಳನ್ನು ಹೊಂದಿದೆ. ಇದರಿಂದಾಗಿ ಈ ಎಂಜಿನ್‍ನ ತೂಕವು 18 ಕೆ.ಜಿಯಷ್ಟು ಕಡಿಮೆಯಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಟ್ರಯಂಫ್ ಕಂಪನಿಯು ಈ ಬೈಕಿನ ತೂಕವನ್ನು ಹಳೆಯ ತಲೆಮಾರಿನ ಬೈಕಿಗೆ ಹೋಲಿಸಿದರೆ ಸುಮಾರು 40 ಕೆ.ಜಿಯಷ್ಟು ಕಡಿಮೆಗೊಳಿಸಿದೆ. ಟ್ರಯಂಫ್ ರಾಕೆಟ್ 3 ಬೈಕಿನಲ್ಲಿ ಹಲವಾರು ಫೀಚರ್ ಹಾಗೂ ಎಲೆಕ್ಟ್ರಾನಿಕ್ ಎಕ್ವಿಪ್‍ಮೆಂಟ್‍ಗಳಿವೆ.

2020ರ ರಾಕೆಟ್ 3 ಜಿಟಿ ಬೈಕಿನಲ್ಲಿ ಹೀಟೆಡ್ ಗ್ರಿಪ್, ಟಾರ್ಕ್ ಅಸಿಸ್ಟೆಡ್ ಕ್ಲಚ್, ಎಲ್ಇಡಿ ಹೆಡ್‌ಲ್ಯಾಂಪ್, ಟೇಲ್‌ಲೈಟ್, ಎಕ್ಸ್ ಟೆಂಡೆಡ್ ಫ್ಲೈ ಸ್ಕ್ರೀನ್, ಅಡ್ಜಸ್ಟಬಲ್ ಫುಟ್‌ಪೆಗ್, ಹಗುರ ತೂಕದ 20 ಸ್ಪೋಕ್ ಅಲ್ಯೂಮಿನಿಯಂ ವ್ಹೀಲ್ ಸೇರಿದಂತೆ ಹಲವು ಸ್ಟಾಂಡರ್ಡ್ ಫೀಚರ್‍ಗಳಿವೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಟ್ರಯಂಫ್ ರಾಕೆಟ್ 3 ಜಿಟಿ ಬೈಕ್ ಹೊಸ ಅಲ್ಯುಮಿನಿಯಂ ಚಾಸೀಸ್ ಅನ್ನು ಸಹ ಹೊಂದಿದೆ. ಇದು ಬೃಹತ್ ಎಂಜಿನ್‍ನ ಒತ್ತಡ ನಿವಾರಿಸುವಂತೆ ಕಾರ್ಯನಿರ್ವಹಿಸುತ್ತದೆ. ಇದರ ಜೊತೆಗೆ ಸಸ್ಪೆಂಷನ್ ಹಾಗೂ ಬ್ರೇಕ್‍ಗಳನ್ನು ಹೊಂದಿದೆ.

ರಾಕೆಟ್ 3 ಜಿಟಿ ಬೈಕಿನಲ್ಲಿ ಸಸ್ಪೆಂಷನ್‍ಗಳಿಗಾಗಿ ಮುಂಭಾಗದಲ್ಲಿ 47 ಎಂಎಂ ಶೋವಾ ಯುಎಸ್‍ಡಿ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್‍ಗಳಿವೆ. ಮುಂಭಾಗದ ಸಸ್ಪೆಂಷನ್ 120 ಎಂಎಂ ಶೋವಾ ಟ್ರಾವೆಲ್‍ನೊಂದಿಗೆ ಬಂದರೆ, ಹಿಂಭಾಗವು 107 ಎಂಎಂ ಟ್ರಾವೆಲ್‍ನೊಂದಿಗೆ ಬರುತ್ತದೆ.
MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಮುಂಭಾಗದ ಸಸ್ಪೆಂಷನ್ ಕಂಪ್ರೆಷನ್ ಹಾಗೂ ರಿಬೌಂಡ್ ಅಡ್ಜಸ್ಟಬಿಲಿಟಿಯೊಂದಿಗೆ ಬರುತ್ತದೆ. ಹಿಂಭಾಗದ ಸಸ್ಪೆಂಷನ್ ರಿಮೋಟ್ ಅಡ್ಜಸ್ಟರ್ ಹೊಂದಿದೆ. ಟ್ರಯಂಫ್ ರಾಕೆಟ್ 3 ಬೈಕಿನಲ್ಲಿ ಬ್ರೇಕಿಂಗ್‍ಗಳಿಗಾಗಿ ಮುಂಭಾಗದಲ್ಲಿ 320 ಎಂಎಂ ಡ್ಯುಯಲ್ ಡಿಸ್ಕ್ ಹಾಗೂ ಹಿಂಭಾಗದಲ್ಲಿ ಸಿಂಗಲ್ 300 ಎಂಎಂ ಡಿಸ್ಕ್ ಬ್ರೇಕ್ ಗಳಿವೆ.

ಟ್ರಯಂಫ್ ರಾಕೆಟ್ 3 ಜಿಟಿ ಬೈಕಿನಲ್ಲಿ ರೋಡ್, ರೈನ್, ಸ್ಪೋರ್ಟ್ ಮತ್ತು ಸಂಪೂರ್ಣ ಕಾನ್ಫಿಗರ್ ಮಾಡಬಹುದಾದ ರೈಡರ್ ಮೋಡ್‌ಗಳನ್ನು ಹೊಂದಿದೆ. ಇನ್ನು ಈ ಬೈಕಿನಲ್ಲಿ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್) ಮತ್ತು ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಹೊಂದಿದೆ. ಕೀ ಲೆಸ್ ಇಗ್ನೀಷನ್ ಮತು ಹಿಲ್ ಹೋಲ್ಡ್ ಸಿಸ್ಟಂ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ


Click it and Unblock the Notifications








