2020ರ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಟ್ರಯಂಫ್ ಕಂಪನಿಯು ತನ್ನ ದುಬಾರಿ 2020ರ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಟ್ರಯಂಫ್ ಕಂಪನಿಯು ಹೊಸ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕನ್ನು ಬಿಡುಗಡೆಗೊಳಿಸುವ ದಿನಾಂಕ ಬಹಿರಂಗವಾಗಿದೆ.

2020ರ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

2020ರ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕನ್ನು ಕಳೆದ ಮಾರ್ಚ್ 25 ರಂದು ಬಿಡುಗಡೆಗೊಳಿಸಬೇಕಾಗಿತ್ತು. ಆದರೆ ಲಾಕ್‌ಡೌನ್ ಆಗಿರುವುದರಿಂದ ಟ್ರಯಂಫ್ ಕಂಪನಿಯು 2020ರ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕಿನ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿತ್ತು. ಟ್ರಯಂಫ್ ಮೋಟರ್ ಸೈಕಲ್ಸ್ ಇಂಡಿಯಾ ಕಂಪನಿಯು ತನ್ನ 2020ರ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಇದೇ ತಿಂಗಳು 22ರಂದು ಭಾರತದಲ್ಲಿ ಬಿಡುಗಡೆಗೊಳಿಸಲಿದೆ ಎಂದು ಖಚಿತಪಡಿಸಿದೆ.

2020ರ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಈ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಬೈಕ್‍ಗಳಲ್ಲಿ ಒಂದಾಗಿದೆ. ಹೊಸ ಮಿಡ್ ಸರಣಿಯ ಈ ಸ್ಪೋರ್ಟ್ಸ್ ಬೈಕ್ ರಿವೈಸ್ ಮಾಡಲಾದ ಡಿಸೈನ್ ಆಕ್ಸೆಸರೀಸ್, ಆಫ್ ರ್‍ಯಾಕ್ ಟೆಕ್ನಾಲಜಿ ಹಾಗೂ ಮಿಡ್ ಸರಣಿಯ ಬಿ‍ಎಸ್ 6 ಎಂಜಿನ್‍ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

2020ರ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಟ್ರಯಂಫ್ ಕಂಪನಿಯ ಐಷಾರಾಮಿ ಬೈಕುಗಳಲ್ಲಿ ಹೊಸ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಕೂಡ ಒಂದಾಗಿದೆ. ಬಿ‍ಎಸ್ 6 ಎಂಜಿನ್ ಹೊಂದಿರುವ ಹೊಸ ಬೈಕ್, ಮಾರುಕಟ್ಟೆಯಲ್ಲಿರುವ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕಿಗಿಂತ ಹೆಚ್ಚು ರಗಡ್ ಲುಕ್ ಅನ್ನು ಹೊಂದಿದೆ.

2020ರ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

2020ರ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕ್, ಇಂಟಿಗ್ರೇಟೆಡ್ ಟ್ವಿನ್ ಎಲ್‍ಇ‍‍ಡಿ ಹೆಡ್‍‍ಲ್ಯಾಂಪ್ ಹಾಗೂ ಇಂಟಿಗ್ರೇಟೆಡ್ ಡಿ‍ಆರ್‍ಎಲ್‍‍ಗಳನ್ನು ಹೊಂದಿದೆ. ಟ್ರಯಂಫ್ ಕಂಪನಿಯು ಈ ಬೈಕಿನ ಬಾಡಿ ಪ್ಯಾನೆಲ್, ರೇರ್ ಸೀಟ್‍‍ಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ.

MOST READ: ಇತಿಹಾಸ ಪುಟ ಸೇರಿದ ಜನಪ್ರಿಯ ಬಜಾಜ್ ಡಿಸ್ಕವರ್ ಬೈಕುಗಳು

2020ರ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಈ ಬದಲಾವಣೆಗಳಿಂದ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕ್ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಟ್ರಯಂಫ್ ಕಂಪನಿಯು ಈ ಬೈಕಿನ ಟಿ‍ಎಫ್‍‍ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍‍ನಲ್ಲಿ ಹೊಸ ಗ್ರಾಫಿಕ್ಸ್ ಗಳನ್ನು ಅಳವಡಿಸಲಿದೆ. ಈ ಹೊಸ ಬೈಕಿನಲ್ಲಿ ಬ್ಲೂಟೂತ್ ಸೇರಿದಂತೆ ಹಲವಾರು ಫೀಚರ್‍‍ಗಳಿರಲಿವೆ. ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕಿನಲ್ಲಿ 765 ಸಿಸಿಯ ಇನ್‍‍ಲೈನ್ ಎಂಜಿನ್ ಅಳವಡಿಸಲಾಗಿದೆ.

2020ರ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಈ ಎಂಜಿನ್ ಅನ್ನು ಟ್ರಯಂಫ್ ಕಂಪನಿಯ ಮೋಟೊ 2 ಎಂಜಿನ್ ಅಪ್‍‍ಗ್ರೇಡ್ ಮಾಡುತ್ತಿರುವ ತಂಡವು ತಯಾರಿಸಿದೆ. ಈ ಬೈಕ್ ಹೊಸದಾದ ಎಕ್ಸಾಸ್ಟ್ ಸಿಸ್ಟಂ ಅನ್ನು ಹೊಂದಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

2020ರ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಈ ಎಂಜಿನ್ 123 ಬಿ‍ಹೆಚ್‍‍ಪಿ ಪವರ್ ಹಾಗೂ 79 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಟ್ರಯಂಫ್ ಎಂಜಿನಿಯರ್‍‍ಗಳು ಈ ಬೈಕಿನಲ್ಲಿರುವ ರಿಸೆಷನ್ ಸೈಕಲ್ ಅನ್ನು 7%ನಷ್ಟು ಕಡಿಮೆಗೊಳಿಸಿದ್ದಾರೆ. ಇದರಿಂದಾಗಿ ಬೈಕ್ ಸವಾರನು ಲೊ ಹಾಗೂ ಮಿಡ್ ಎಂಬ ಎರಡು ವಿಧದ ಸೈಲೆನ್ಸರ್ ಸೌಂಡ್ ಅನ್ನು ಪಡೆಯಬಹುದು.

2020ರ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಮಾರುಕಟ್ಟೆಯಲ್ಲಿರುವ ಬಿಎಸ್ 4 ಬೈಕಿನಲ್ಲಿ ಅಪ್‍‍ಶಿಫ್ಟ್ ಇದ್ದರೆ, ಹೊಸ ಬೈಕಿನಲ್ಲಿ ಅಪ್ ಅಂಡ್ ಡೌನ್ ಕ್ವಿಕ್ ಶಿಫ್ಟರ್ ಅನ್ನು ಅಳವಡಿಸಲಾಗಿದೆ. ಟ್ರಯಂಫ್ ಆರ್‍ಎಸ್ ಬೈಕ್, ರಾಕೆಟ್ 3 ಬೈಕಿನ ನಂತರ ಟ್ರಯಂಫ್ ಕಂಪನಿಯು ಭಾರತದಲ್ಲಿ ಬಿಡುಗಡೆಗೊಳಿಸುತ್ತಿರುವ ಎರಡನೇ ಬೈಕ್ ಆಗಿದೆ.

Most Read Articles

Kannada
English summary
Coronavirus Lockdown: 2020 Triumph Street Triple RS Launch Date Revealed. Read in Kannada.
Story first published: Friday, April 17, 2020, 21:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X