ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಟಿವಿಎಸ್ ಎನ್‌ಟಾರ್ಕ್ 125 ಸೂಪರ್‌ಸ್ಕ್ವಾಡ್ ಎಡಿಷನ್

ಟಿವಿಎಸ್ ಮೋಟಾರ್ ಕಂಪನಿಯು ತನ್ನ ಜನಪ್ರಿಯ ಎನ್‌ಟಾರ್ಕ್ 125 ಸ್ಕೂಟರ್‌ನ ಹೊಸ ಸ್ಪೆಷಲ್ ಎಡಿಷನ್ 'ಸೂಪರ್‌ಸ್ಕ್ವಾಡ್ ' ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಟಿವಿಎಸ್ ಎನ್‌ಟಾರ್ಕ್ 125 ಸೂಪರ್‌ಸ್ಕ್ವಾಡ್ ಎಡಿಷನ್ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.85,992 ಗಳಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಟಿವಿಎಸ್ ಎನ್‌ಟಾರ್ಕ್ 125 ಸೂಪರ್‌ಸ್ಕ್ವಾಡ್ ಎಡಿಷನ್

ಟಿವಿಎಸ್ ಮೋಟಾರ್ ಕಂಪನಿಯು ಡಿಸ್ನಿ ಇಂಡಿಯಾದ ಗ್ರಾಹಕ ಉತ್ಪನ್ನಗಳ ವ್ಯವಹಾರದೊಂದಿಗೆ ಇತ್ತೀಚಿನ ಒಡನಾಟದ ಭಾಗವಾಗಿ ಎನ್‌ಟಾರ್ಕ್ ಸ್ಕೂಟರ್‌ನ ಹೊಸ 'ಸೂಪರ್‌ಸ್ಕ್ವಾಡ್' ಎಡಿಷನ್ ಅನ್ನು ಬಿಡುಗಡೆಗೊಳಿಸಿದೆ. ಟಿವಿಎಸ್ ಮಾರ್ವೆಲ್ಸ್ ಅವೆಂಜರ್ಸ್‌ನ ಸೂಪರ್ ಹೀರೋಗಳಿಂದ ಪ್ರೇರಿತವಾದ ಸೂಪರ್‌ಸ್ಕ್ವಾಡ್ ಆವೃತ್ತಿಯನ್ನು ಡಿಸ್ನಿ ಇಂಡಿಯಾ ಸಹಯೋಗದೊಂದಿಗೆ ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಳಿಸಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಟಿವಿಎಸ್ ಎನ್‌ಟಾರ್ಕ್ 125 ಸೂಪರ್‌ಸ್ಕ್ವಾಡ್ ಎಡಿಷನ್

ಹೊಸ ಸ್ಪೆಷಲ್ ಎಡಿಷನ್ ಸ್ಕೂಟರ್ ಮೂರು ವಿಶೇಷ ಮಾದರಿಗಳಲ್ಲಿ ಲಭ್ಯವಿರುತ್ತದೆ, ಪ್ರತಿಯೊಂದೂ ವಿಭಿನ್ನ ಮಾರ್ವೆಲ್‌ನ ಅವೆಂಜರ್ಸ್ ಪಾತ್ರದಿಂದ ಪ್ರೇರಿತವಾಗಿದೆ. ಐರನ್ ಮ್ಯಾನ್‌ಗೆ ಇನ್ ವಿಜಿಬಲ್ ರೆಡ್, ಬ್ಲ್ಯಾಕ್ ಪ್ಯಾಂಥರ್‌ಗಾಗಿ ‘ಸ್ಟೆಲ್ತ್ ಬ್ಲ್ಯಾಕ್' ಮತ್ತು ಕ್ಯಾಪ್ಟನ್ ಅಮೆರಿಕದಿಂದ ಪ್ರೇರಿತವಾದ ಕಾಂಬಟ್ ಬ್ಲೂ ಬಣ್ಣದ ಆಯ್ಕೆಯಲ್ಲಿ ಲಭ್ಯವಿರಲಿದೆ.

MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಟಿವಿಎಸ್ ಎನ್‌ಟಾರ್ಕ್ 125 ಸೂಪರ್‌ಸ್ಕ್ವಾಡ್ ಎಡಿಷನ್

ಹೊಸ ಸ್ಪೆಷಲ್ ಎಡಿಷನ್ ಐರನ್ ಮ್ಯಾನ್ ಪಾತ್ರವನ್ನು ಆಧರಿಸಿದ ವಿಜಿಬಲ್ ರೆಡ್ ಮತ್ತು ಗೋಲ್ಡ್ ಡೆಕಲ್‌ಗಳನ್ನು ಒಳಗೊಂಡಿದೆ, ಇದು ಪಾತ್ರದ ಸೂಟ್‌ನಂತೆಯೇ ವಿನ್ಯಾಸವಿದೆ. ಐರನ್ ಮ್ಯಾನ್ ಹೆಲ್ಮೆಟ್ ಅನ್ನು ಲೆಗ್ ಶೀಲ್ಡ್ ಮೇಲೆ ಆರ್ಕ್ ರಿಯಾಕ್ಟರ್ ಅನ್ನು ಸೈಡ್ ಪ್ಯಾನೆಲ್‌ಗಳಲ್ಲಿ ಕಾಣಬಹುದು.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಟಿವಿಎಸ್ ಎನ್‌ಟಾರ್ಕ್ 125 ಸೂಪರ್‌ಸ್ಕ್ವಾಡ್ ಎಡಿಷನ್

ಇದಲ್ಲದೆ ‘ಮಾರ್ಕ್ XXIX' ಮತ್ತು ‘63' ಸಂಖ್ಯೆಯಂತಹ ಸಣ್ಣ ವಿವರಗಳು ಇವೆ. ಮಾರ್ಕ್ XXIX' ಪಾತ್ರದ 29ನೇ ಸೂಟ್ (ಫಿಡ್ಲರ್) ಅನ್ನು ಸೂಚಿಸುತ್ತದೆ, ಆದರೆ 63ನೇ ಸಂಖ್ಯೆ 1963ರಲ್ಲಿ ಪಾತ್ರವನ್ನು ಮೊದಲು ಪರಿಚಯಿಸಿರುವುದನ್ನು ಸೂಚಿಸುತ್ತದೆ.

MOST READ: ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಟೀಸರ್ ಚಿತ್ರ ಬಿಡುಗಡೆ

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಟಿವಿಎಸ್ ಎನ್‌ಟಾರ್ಕ್ 125 ಸೂಪರ್‌ಸ್ಕ್ವಾಡ್ ಎಡಿಷನ್

ಇನ್ನು ಬ್ಲ್ಯಾಕ್ ಪ್ಯಾಂಥರ್‌ನಿಂದ ಸ್ಫೂರ್ತಿ ಪಡೆದ ‘ಸ್ಟೆಲ್ತ್ ಬ್ಲ್ಯಾಕ್' ಪರ್ಪಲ್ ಬಣ್ಣಗಳೊಂದಿಗೆ ಜೆಟ್-ಬ್ಲ್ಯಾಕ್ ಜೆಟ್-ಬ್ಲ್ಯಾಕ್ ಬಣ್ಣವನ್ನು ಒಳಗೊಂಡಿದೆ. ಪಾತ್ರದ ಸಿಗ್ನೇಚರ್ ಸೆಲ್ಯೂಟ್ ‘ವಕಾಂಡಾ ಫಾರೆವರ್' ಮತ್ತು ಸ್ಕೂಟರ್‌ನಲ್ಲಿ ‘66' ಸಂಖ್ಯೆಯು 1966ರ ವರ್ಷವನ್ನು ಸೂಚಿಸುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಟಿವಿಎಸ್ ಎನ್‌ಟಾರ್ಕ್ 125 ಸೂಪರ್‌ಸ್ಕ್ವಾಡ್ ಎಡಿಷನ್

ಕ್ಯಾಪ್ಟನ್ ಅಮೆರಿಕದಿಂದ ಪ್ರೇರಿತವಾದ ಕಾಂಬಟ್ ಬ್ಲೂ ರೆಡ್, ವೈಟ್ ಮತ್ತು ಬ್ಲೂ ಬಣ್ಣಗಳನ್ನು ಒಳಗೊಂಡಿದೆ. ಈ ಈ ಪಾತ್ರವನ್ನು ಮೊದಲು ಪರಿಚಯಿಸಿದ 1941ರ ವರ್ಷವನ್ನು ಪ್ರತಿನಿಧಿಸುವ ‘41' ಸಂಖ್ಯೆಯನ್ನು ನೀಡಿದೆ. ಎನ್‌ಟಾರ್ಕ್ 125 ಮುಂಭಾಗ ಕ್ಯಾಪ್ಟನ್ ಅಮೇರಿಕದ ಶಿಲ್ಡ್ ಅನ್ನು ಸೈಡ್ ಪ್ಯಾನೆಲ್‌ಗಳಲ್ಲಿ ‘ಸೂಪರ್ ಸೋಲ್ಜರ್' ಟ್ಯಾಗ್‌ನೊಂದಿಗೆ ಸಂಯೋಜಿಸಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಟಿವಿಎಸ್ ಎನ್‌ಟಾರ್ಕ್ 125 ಸೂಪರ್‌ಸ್ಕ್ವಾಡ್ ಎಡಿಷನ್

ಹೊಸ ಬಣ್ಣಗಳ ಹೊರತಾಗಿ ಫೀಚರ್ ಮತ್ತು ತಾಂತ್ರಿಕ ಅಂಶಗಳಲ್ಲಿ ಯಾವುದೇ ಬದಲಾವಣೆಗಳಲ್ಲಿ. 125 ಸಿಸಿ ಫ್ಯೂಲ್ ಇಂಜೆಕ್ಷನ್ ಸಿಸ್ಟಂ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 9.4-ಬಿಎಚ್‌ಪಿ ಪವರ್ ಮತ್ತು 10.5-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಟಿವಿಎಸ್ ಎನ್‌ಟಾರ್ಕ್ 125 ಸೂಪರ್‌ಸ್ಕ್ವಾಡ್ ಎಡಿಷನ್

ಡಿಸ್ನಿ ಇಂಡಿಯಾ ಸಹಯೋಗದೊಂದಿಗೆ ಹೊಸ ಟಿವಿಎಸ್ ಕಂಪನಿಯು ಹೊಸ ಎನ್‌ಟಾರ್ಕ್ 125 ಸೂಪರ್‌ಸ್ಕ್ವಾಡ್ ಎಡಿಷನ್ ಅನ್ನು ಬಿಡುಗಡೆಗೊಳಿಸಿದೆ. ಮಾರ್ವೆಲ್ಸ್ ಅವೆಂಜರ್ಸ್ ಪಾತ್ರಗಳ ಜನಪ್ರಿಯತೆಯು ವಿಶೇಷ ಆವೃತ್ತಿಯ ಮಾದರಿಗಳತ್ತ ಸಾಕಷ್ಟು ಯುವ ಗ್ರಾಹಕರನ್ನು ಆಕರ್ಷಿಸಲು ಸಹಾಯ ಮಾಡುತ್ತದೆ

Most Read Articles

Kannada
English summary
New TVS Ntorq 125 ‘SuperSquad’ Edition Scooter Inspired By Avengers Characters. Read In Kannada.
Story first published: Tuesday, October 20, 2020, 16:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X