ಹೊಸ ಬಿಡಬ್ಲ್ಯೂಎಸ್ 125 ಅಡ್ವೆಂಚರ್ ಸ್ಕೂಟರ್ ಅನಾವರಣಗೊಳಿಸಿದ ಯಮಹಾ
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಯಮಹಾ ಕಂಪನಿಯು ತನ್ನ ಬಹುನಿರೀಕ್ಷಿತ ಬಿಡಬ್ಲ್ಯೂಎಸ್ 125 ಅನ್ನು ವಿಯೆಟ್ನಾಂನಲ್ಲಿ ಅನಾವರಣಗೊಳಿಸಲಾಗಿದೆ. ಈ ಹೊಸ ಯಮಹಾ ಬಿಡಬ್ಲ್ಯೂಎಸ್ 125 ಸ್ಕೂಟರ್ ಆಡ್ವೆಂಚರ್ ಮಾದರಿಯಾಗಿದೆ.

ಹೊಸ ಯಮಹಾ ಬಿಡಬ್ಲ್ಯೂಎಸ್ 125 ಸ್ಕೂಟರ್ ಸಖತ್ ರಗಡ್ ಲುಕ್ ಅನ್ನು ಹೊಂದಿದೆ. ಈ ಹೊಸ ಯಮಹಾ ಬಿಡಬ್ಲ್ಯೂಎಸ್ 125 ಸ್ಕೂಟರಿನ ಡ್ಯುಯಲ್ ರೌಂಡ್ ಹೆಡ್‌ಲ್ಯಾಂಪ್‌ಗಳು, ಅಗ್ರೇಸಿವ್ ಸ್ಟೈಲಿಂಗ್, ದೊಡ್ಡ ಬಾಡಿ ಪ್ಯಾನೆಲ್‌ಗಳು ಮತ್ತು ಡ್ಯುಯಲ್-ಪರ್ಪಸ್ ಟಯರ್ ಗಳು ಬಹಳ ಹಳ ವಿಶಿಷ್ಟವಾದ ನೋಟವನ್ನು ನೀಡುತ್ತದೆ. ಈ ಹೊಸ ಯಮಹಾ ಸ್ಕೂಟರ್ ಆಫ್-ರೋಡ್ ಸಾಮರ್ಥ್ಯವನ್ನು ಕೂಡ ಒಳಗೊಂಡಿದೆ.

ಇನ್ನು ಈ ಹೊಸ ಯಮಹಾ ಬಿಡಬ್ಲ್ಯೂಎಸ್ 125 ಸ್ಕೂಟರ್ ಫುಲ್ ಎಲ್ಇಡಿ ಲ್ಯಾಂಪ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಪ್ರೊಟೆಕ್ಷನ್ ಬಾರ್‌ಗಳಂತಹ ಇತರ ಅಂಶಗಳನ್ನು ಸಹ ಬಿಡಬ್ಲ್ಯೂಎಸ್ 125 ನಲ್ಲಿ ಕಾಣಬಹುದು.
MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಇನ್ನು ಈ ಹೊಸ ಯಮಹಾ ಬಿಡಬ್ಲ್ಯೂಎಸ್ 125 ಅಡ್ವೆಂಚರ್ ಸ್ಕೂಟರ್ ಹೃದಯ ಭಾಗ ಎಂದೇ ಹೇಳಬಹುದಾದ ಎಂಜಿನ್ ಬಗ್ಗೆ ಹೇಳುವುದಾದರೆ, ಇದರಲ್ಲಿ 125 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಈ ಎಂಜಿನ್ 7500 ಆರ್‌ಪಿಎಂನಲ್ಲಿ 9.8 ಬಿಹೆಚ್‌ಪಿ ಪವರ್ ಮತ್ತು 6000 ಆರ್‌ಪಿಎಂನಲ್ಲಿ 9.9 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ ಸಿವಿಟಿ ಯುನಿಟ್ ಅನ್ನು ಜೋಡಿಸಲಾಗಿದೆ.
MOST READ: ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಟೀಸರ್ ಚಿತ್ರ ಬಿಡುಗಡೆ

ಇನ್ನು ಈ ಅಡ್ವೆಂಚರ್ ಸ್ಕೂಟರ್ 12 ಇಂಚಿನ ವ್ಹೀಲ್ ಗಳನ್ನು ಹೊಂದಿವೆ. ಅವುಗಳು ಆಫ್-ರೋಡ್ ಟೈರ್‌ಗಳಿಂದ ಕೂಡಿರುತ್ತವೆ. ಇನ್ನು ಈ ಹೊಸ ಸ್ಕೂಟರ್ ನಲ್ಲಿ ಯುಎಸ್‌ಬಿ ಚಾರ್ಜಿಂಗ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಇನ್ನು ಹೊಸ ಯಮಹಾ ಅಡ್ವೆಂಚರ್ ಸ್ಕೂಟರ್ ನಲ್ಲಿ ಹೆಚ್ಚಿನ ಸುರಕ್ಷೆತೆಗಾಗಿ ಎರಡು ಕಡೆಗಳಲ್ಲಿ ಡಿಸ್ಕ್ ಬ್ರೇಕ್ ಗಳನ್ನು ಅಳವಡಿಸಲಾಗಿದೆ. ಯಮಹಾ ಕಂಪನಿಯು ಈ ಹೊಸ ಬಿಡಬ್ಲ್ಯೂಎಸ್ 125 ಅಡ್ವೆಂಚರ್ ಸ್ಕೂಟರಿನ ಬೆಲೆಯನ್ನು ಬಹಿರಂಗಪಡಿಸಿಲ್ಲ.
MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ಆದರೆ ಈ ಹೊಸ ಯಮಹಾ ಬಿಡಬ್ಲ್ಯೂಎಸ್ 125 ಅಡ್ವೆಂಚರ್ ಸ್ಕೂಟರ್ ಇದು ಸ್ವಲ್ಪ ಹೆಚ್ಚು ಪ್ರೀಮಿಯಂ ಬೆಲೆಯನ್ನು ಹೊಂದಿರಬಹುದು ಎಂದು ನಿರೀಕ್ಷಿಸುತ್ತೇವೆ. ಆದರೆ ಈ ಸ್ಕೂಟರ್ ಅನ್ನು ಮಾರುಕಟ್ಟೆಗೆ ಅಭಿವೃದ್ಧಿಪಡಿಸಲಾಗಿದೆ.

ಈ ಕಾರಣದಿಂದಾಗಿ ಹೊಸ ಯಮಹಾ ಬಿಡಬ್ಲ್ಯೂಎಸ್ 125 ಅಡ್ವೆಂಚರ್ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದಿಲ್ಲ. ಆದರೆ ಈ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿರುವ ಯಮಹಾ ಝಡ್ಆರ್ ಸ್ಟ್ರೀಟ್ ರ್ಯಾಲಿ ಮಾದರಿಗೆ ಹೋಲುತ್ತದೆ.


Click it and Unblock the Notifications