ವಾಹನ ಖರೀದಿಸುವವರಿಗೆ ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ ಒಡಿಸ್ಸಿ ಎಲೆಕ್ಟ್ರಿಕ್

ಭಾರತದಲ್ಲಿ ಸಾಲು ಸಾಲು ಹಬ್ಬಗಳು ಬರುತ್ತಿರುವ ಹಿನ್ನೆಲೆಯಲ್ಲಿ ಹಲವಾರು ವಾಹನ ತಯಾರಕ ಕಂಪನಿಗಳು ವಾಹನ ಖರೀದಿದಾರರಿಗೆ ಹಲವಾರು ಕೊಡುಗೆಗಳನ್ನು ಹಾಗೂ ರಿಯಾಯಿತಿಗಳನ್ನು ನೀಡುತ್ತಿವೆ.

ವಾಹನ ಖರೀದಿಸುವವರಿಗೆ ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ ಒಡಿಸ್ಸಿ ಎಲೆಕ್ಟ್ರಿಕ್

ಈಗ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಒಡಿಸ್ಸಿ ಸಹ ಗ್ರಾಹಕರನ್ನು ಆಕರ್ಷಿಸಲು ಹಲವಾರು ಕೊಡುಗೆಗಳನ್ನು ನೀಡುತ್ತಿದೆ. ಒಡಿಸ್ಸಿ ಕಂಪನಿಯು ತನ್ನ ಹಾಕ್, ರೇಜರ್ ಹಾಗೂ ಇವೊಕ್ ವಾಹನಗಳ ಮೇಲೆ ಈ ಕೊಡುಗೆಗಳನ್ನು ನೀಡುತ್ತಿದೆ. ಈ ಕೊಡುಗೆಗಳು ಸೀಮಿತ ಅವಧಿಯವರೆಗೆ ಮಾತ್ರ ಲಭ್ಯವಿರಲಿವೆ.

ವಾಹನ ಖರೀದಿಸುವವರಿಗೆ ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ ಒಡಿಸ್ಸಿ ಎಲೆಕ್ಟ್ರಿಕ್

ಈ ಕೊಡುಗೆಗಳನ್ನು ಅಕ್ಟೋಬರ್ 28ರಿಂದ ನವೆಂಬರ್ 15ರವರೆಗೆ ಮಾಡಲಾಗುವ ಎಲ್ಲಾ ಖರೀದಿಗಳ ಮೇಲೆ ನೀಡಲಾಗುವುದು. ಒಡಿಸ್ಸಿ ಲೋನವಾಲಾದಲ್ಲಿರುವ ಕ್ಯಾಮೆಲಿಯಾ ವಿಲ್ಲಾಸ್‌ನಲ್ಲಿ ರೂ.6,000 ಮೌಲ್ಯದ ಉಚಿತ ರಾತ್ರಿ ವಾಸ್ತವ್ಯವನ್ನು ನೀಡಲಿದೆ. ಈ ಕೊಡುಗೆ ಮಾರ್ಚ್ 2021ರವರೆಗೆ ಮಾನ್ಯವಾಗಿರಲಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ವಾಹನ ಖರೀದಿಸುವವರಿಗೆ ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ ಒಡಿಸ್ಸಿ ಎಲೆಕ್ಟ್ರಿಕ್

ಈ ಕೊಡುಗೆಗಳ ಕುರಿತು ಮಾತನಾಡಿರುವ ಒಡಿಸ್ಸಿ ಎಲೆಕ್ಟ್ರಿಕ್ ವೆಹಿಕಲ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೆಮಿನ್ ವೊರಾ, ಕೋವಿಡ್ 19 ಹಿನ್ನೆಲೆಯಲ್ಲಿ ಜನರು ಸುರಕ್ಷತೆಗೆ ಆದ್ಯತೆ ನೀಡುತ್ತಿರುವ ಕಾರಣ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ವಾಹನ ಖರೀದಿಸುವವರಿಗೆ ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ ಒಡಿಸ್ಸಿ ಎಲೆಕ್ಟ್ರಿಕ್

ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಬೈಕ್‌ಗಳನ್ನು ಖರೀದಿಸಲು ಸಹ ಜನರು ಆಸಕ್ತಿ ತೋರುತ್ತಿದ್ದಾರೆ. ಕಂಪನಿಯು ಈ ಋತುವಿನಲ್ಲಿ ವಾಹನಗಳ ಮಾರಾಟವನ್ನು ಹೆಚ್ಚಿಸಲು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಲು ಬಯಸಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ವಾಹನ ಖರೀದಿಸುವವರಿಗೆ ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ ಒಡಿಸ್ಸಿ ಎಲೆಕ್ಟ್ರಿಕ್

ಈ ಕಾರಣಕ್ಕೆ ಗ್ರಾಹಕರಿಗೆ ಹಲವಾರು ಆಕರ್ಷಕ ಕೊಡುಗೆಗಳನ್ನು ನೀಡುತ್ತಿದ್ದೇವೆ. ಜೊತೆಗೆ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸುವತ್ತ ಗಮನ ಹರಿಸಿದ್ದೇವೆ. ನಮ್ಮ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳು ಹಾಗೂ ಬೈಕ್‌ಗಳು ಚಿಕ್ಕವರಿಂದ ಹಿಡಿದು ದೊಡ್ಡವರೆಗೆ ಎಲ್ಲಾ ರೀತಿಯ ಸವಾರರಿಗೆ ಸೂಕ್ತವಾಗಿವೆ ಎಂದು ಹೇಳಿದರು.

ವಾಹನ ಖರೀದಿಸುವವರಿಗೆ ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ ಒಡಿಸ್ಸಿ ಎಲೆಕ್ಟ್ರಿಕ್

ಪ್ರತಿಯೊಂದು ವಾಹನದ ಬುಕ್ಕಿಂಗ್ ಮೇಲೆ ಒಡಿಸ್ಸಿ ರೂ.3,000 ಮೌಲ್ಯದ ಗಿಫ್ಟ್ ವೋಚರ್ ನೀಡುತ್ತದೆ. ಸದ್ಯಕ್ಕೆ ಭಾರತದಲ್ಲಿ ಆರು ಮಾರಾಟಗಾರರನ್ನು ಹೊಂದಿರುವ ಕಂಪನಿಯು ಮಾರ್ಚ್ 2021ರ ವೇಳೆಗೆ 10 ಹೊಸ ಮಳಿಗೆಗಳನ್ನು ಸ್ಥಾಪಿಸಲು ಮುಂದಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ವಾಹನ ಖರೀದಿಸುವವರಿಗೆ ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ ಒಡಿಸ್ಸಿ ಎಲೆಕ್ಟ್ರಿಕ್

ಕಂಪನಿಯು ಮುಂದಿನ ವರ್ಷದ ಅಂತ್ಯದ ವೇಳೆಗೆ 25 ನಗರಗಳಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳುವ ಯೋಜನೆಯನ್ನು ಹೊಂದಿದೆ. ಒಡಿಸ್ಸಿ ಕಂಪನಿಯ ಎಲ್ಲಾ ಮಾರಾಟಗಾರರು ಸರ್ಕಾರಗಳು ಸೂಚಿಸಿರುವ ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಿದ್ದಾರೆ ಎಂದು ಕಂಪನಿ ಹೇಳಿದೆ.

ವಾಹನ ಖರೀದಿಸುವವರಿಗೆ ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ ಒಡಿಸ್ಸಿ ಎಲೆಕ್ಟ್ರಿಕ್

ಒಡಿಸ್ಸಿ ಕಂಪನಿಯು ಸದ್ಯಕ್ಕೆ ಆರು ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡುತ್ತಿದೆ. ಒಡಿಸ್ಸಿ ಕಂಪನಿಯ ರೇಜರ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಬೆಲೆ ರೂ.59,900ಗಳಾಗಿದ್ದರೆ, ಇವೊಕ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಬೆಲೆ ರೂ.1.5 ಲಕ್ಷಗಳಾಗಿದೆ.

Most Read Articles

Kannada
English summary
Odysse Electric giving attractive offers on the eve of festive season. Read in Kannada.
Story first published: Thursday, October 29, 2020, 17:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X