ಬಿಡುಗಡೆಯಾಗಲಿದೆ ಅತ್ಯುತ್ತಮ ಮೈಲೇಜ್ ಪ್ರೇರಿತ ಇಟ್ರಾನ್ಸ್ ನಿಯೋ ಇವಿ ಸ್ಕೂಟರ್

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಜನಪ್ರಿಯ ಹೊಂದಿರುವ ಪ್ಯೂರ್ ಇವಿ ಕಂಪನಿಯು ಈಗಾಗಲೇ ಗ್ರಾಹಕರ ಬೇಡಿಕೆಯೆಂತೆ ಹಲವಾರು ಇವಿ ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಶೀಘ್ರದಲ್ಲೇ ತನ್ನ ಹೈಸ್ಪೀಡ್ ವೈಶಿಷ್ಟ್ಯತೆಯ ಇಟ್ರಾನ್ಸ್ ನಿಯೋ ಬಿಡುಗಡೆಗೆ ಸಿದ್ದವಾಗಿದೆ.

ಬಿಡುಗಡೆಯಾಗಲಿದೆ ಅತ್ಯುತ್ತಮ ಮೈಲೇಜ್ ಪ್ರೇರಿತ ಇಟ್ರಾನ್ಸ್ ನಿಯೋ ಇವಿ ಸ್ಕೂಟರ್

ಹೈದ್ರಾಬಾದ್ ಮೂಲದ ಪ್ಯೂರ್ ಇವಿ ಕಂಪನಿಯು ಇವಿ ಸ್ಕೂಟರ್ ಮಾರಾಟದಲ್ಲಿ ಹೊಸ ಬದಲಾವಣೆಯ ನೀರಿಕ್ಷೆಯಲ್ಲಿದ್ದು, ಕಳೆದ ತಿಂಗಳ ಹಿಂದಷ್ಟೇ ಸುಧಾರಿತ ತಂತ್ರಜ್ಞಾನ ಪ್ರೇರಿತ ಇಟ್ರಾನ್ಸ್ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಬಿಡುಗಡೆ ಮಾಡಿತ್ತು. ಇದೀಗ ಗ್ರಾಹಕರ ಬೇಡಿಕೆ ಹೊಸ ತಂತ್ರಜ್ಞಾನ ಪ್ರೇರಿತ ಇಟ್ರಾನ್ಸ್ ನಿಯೋ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಸ್ಕೂಟರ್ ಮಾದರಿಯು ಮುಂದಿನ ತಿಂಗಳು ಡಿಸೆಂಬರ್ 1ಕ್ಕೆ ಅಧಿಕೃತವಾಗಿ ಖರೀದಿಗೆ ಲಭ್ಯವಿರಲಿದೆ.

ಬಿಡುಗಡೆಯಾಗಲಿದೆ ಅತ್ಯುತ್ತಮ ಮೈಲೇಜ್ ಪ್ರೇರಿತ ಇಟ್ರಾನ್ಸ್ ನಿಯೋ ಇವಿ ಸ್ಕೂಟರ್

ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೂ ಮುನ್ನ ಸ್ಕೂಟರ್ ಬೆಲೆ ಮತ್ತು ವೈಶಿಷ್ಟ್ಯತೆಗಳನ್ನು ಹಂಚಿಕೊಂಡಿರುವ ಪ್ಯೂರ್ ಇವಿ ಕಂಪನಿಯು ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಸ್ಕೂಟರ್ ಮಾದರಿಯನ್ನು ಸಿದ್ದಪಡಿಸಿದ್ದು, ಸ್ಕೂಟರ್ ವೇಗದಲ್ಲೂ ಗಮನಸೆಳೆಯಲಿದೆ.

ಬಿಡುಗಡೆಯಾಗಲಿದೆ ಅತ್ಯುತ್ತಮ ಮೈಲೇಜ್ ಪ್ರೇರಿತ ಇಟ್ರಾನ್ಸ್ ನಿಯೋ ಇವಿ ಸ್ಕೂಟರ್

ಇಟ್ರಾನ್ಸ್ ನಿಯೋ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 75,999 ಬೆಲೆ ಹೊಂದಿದ್ದು, ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಮಾಡಿದ್ದಲ್ಲಿ ಗರಿಷ್ಠ 120ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಬಿಡುಗಡೆಯಾಗಲಿದೆ ಅತ್ಯುತ್ತಮ ಮೈಲೇಜ್ ಪ್ರೇರಿತ ಇಟ್ರಾನ್ಸ್ ನಿಯೋ ಇವಿ ಸ್ಕೂಟರ್

ಹಾಗೆಯೇ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಕ್ವಿಕ್ ಪಿಕ್ಅಪ್ ವೈಶಿಷ್ಟ್ಯತೆ ಹೊಂದಿದ್ದು, ಕೇವಲ 5 ಸೆಕೆಂಡುಗಳಲ್ಲಿ ಸೊನ್ನೆಯಿಂದ 40 ಕಿ.ಮೀ ವೇಗ ಪಡೆದುಕೊಳ್ಳುತ್ತದೆ. ಆದರೆ ಹೈಸ್ಪೀಡ್ ಸ್ಕೂಟರ್ ಮಾದರಿಯ ಟಾಪ್ ಸ್ಪೀಡ್ ಮಾಹಿತಿಯನ್ನು ಇನ್ನು ಹಂಚಿಕೊಂಡಿಲ್ಲ. ಹೊಸ ಸ್ಕೂಟರ್‌ನಲ್ಲಿ ಹೈಸ್ಪೀಡ್, ನಾರ್ಮಲ್ ಮತ್ತು ಇಕೋ ರೈಡಿಂಗ್ ಮೋಡ್‌ಗಳನ್ನು ಸಹ ನೀಡಲಾಗಿದ್ದು, ಇಕೋ ಮೋಡ್‌ನಲ್ಲಿ ರೈಡಿಂಗ್ ಮಾಡಿದ್ದಲ್ಲಿ ಗರಿಷ್ಠ ಮೈಲೇಜ್ ಪಡೆದುಕೊಳ್ಳಬಹುದು.

ಬಿಡುಗಡೆಯಾಗಲಿದೆ ಅತ್ಯುತ್ತಮ ಮೈಲೇಜ್ ಪ್ರೇರಿತ ಇಟ್ರಾನ್ಸ್ ನಿಯೋ ಇವಿ ಸ್ಕೂಟರ್

ಈ ಮೂಲಕ ಕೈಗೆಟುಕುವ ಬೆಲೆಗಳಲ್ಲಿ ಅತ್ಯುತ್ತಮ ಫೀಚರ್ಸ್‌ವುಳ್ಳ ಸ್ಕೂಟರ್ ಮಾದರಿಯೊಂದಿಗೆ ಸಿದ್ದಪಡಿಸಲು ಯತ್ನಿಸಿರುವ ಪ್ಯೂರ್ ಇವಿ ಕಂಪನಿಯು ಶೀಘ್ರದಲ್ಲೇ ಹೊಸ ಸ್ಕೂಟರ್ ಮಾರಾಟಕ್ಕೆ ಚಾಲನೆ ನೀಡಲಿದ್ದು, ತೆಗೆದುಹಾಕಬಹುದಾದ ಬ್ಯಾಟರಿ ಫೀಚರ್ಸ್ ಲಭ್ಯತೆ ಹಿನ್ನಲೆಯಲ್ಲಿ ಹೆಚ್ಚುವರಿ ಬ್ಯಾಟರಿ ಬ್ಯಾಕ್‌ಪ್ಯಾಕ್ ಹೊಂದಬಹುದಾಗಿದೆ.

ಬಿಡುಗಡೆಯಾಗಲಿದೆ ಅತ್ಯುತ್ತಮ ಮೈಲೇಜ್ ಪ್ರೇರಿತ ಇಟ್ರಾನ್ಸ್ ನಿಯೋ ಇವಿ ಸ್ಕೂಟರ್

ಸದ್ಯ ಮಾರುಕಟ್ಟೆಯಲ್ಲಿ ಕರೋನಾ ವೈರಸ್ ಪರಿಣಾಮ ಬಹುತೇಕರು ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣಕ್ಕೆ ಹಿಂಜರಿಯುತ್ತಿರುವುದಲ್ಲದೆ ಬಜೆಟ್ ಬೆಲೆಯಲ್ಲಿ ಸ್ವಂತ ವಾಹನಗಳನ್ನು ಪರಿಪಾಠ ಹೆಚ್ಚುತ್ತಿದ್ದು, ಈ ಹಿನ್ನಲೆಯಲ್ಲಿ ನಗರ ಪ್ರದೇಶಗಳಲ್ಲಿ ಸಂಚಾರಕ್ಕೆ ತಕ್ಕಂತೆ ಬಜೆಟ್ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವನ್ನು ಹೆಚ್ಚಿಸುವತ್ತ ಬಹುತೇಕ ಆಟೋ ಕಂಪನಿಗಳು ಹೊಸ ಯೋಜನೆಗಳನ್ನು ರೂಪಿಸಿವೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಬಿಡುಗಡೆಯಾಗಲಿದೆ ಅತ್ಯುತ್ತಮ ಮೈಲೇಜ್ ಪ್ರೇರಿತ ಇಟ್ರಾನ್ಸ್ ನಿಯೋ ಇವಿ ಸ್ಕೂಟರ್

ಪ್ಯೂರ್ ಇವಿ ಕೂಡಾ ಹೈದ್ರಾಬಾದ್‌ನ ಐಐಟಿಯೊಂದಿಗಿನ ಸಹಭಾಗಿತ್ವದೊಂದಿಗೆ ಮಾರುಕಟ್ಟೆ ವಿಸ್ತರಣೆಗೆ ಮುಂದಾಗಿದ್ದು, ಸದ್ಯ ಐಐಟಿ ಕ್ಯಾಂಪಸ್‌ನಲ್ಲೇ ತಾತ್ಕಾಲಿಕವಾಗಿ ಸ್ಕೂಟರ್ ಉತ್ಪಾದನಾ ಘಟಕವನ್ನು ತೆರೆದಿದೆ. 2021ರ ವೇಳೆಗೆ ಪ್ರತ್ಯೇಕ ಉತ್ಪಾದನಾ ಘಟಕ ಹೊಂದುವ ಯೋಜನೆಯಲ್ಲಿದ್ದು, ವಾರ್ಷಿಕವಾಗಿ 2 ಲಕ್ಷ ಇವಿ ಸ್ಕೂಟರ್ ಉತ್ಪಾದನಾ ಗುರಿಹೊಂದಿದೆ.

ಬಿಡುಗಡೆಯಾಗಲಿದೆ ಅತ್ಯುತ್ತಮ ಮೈಲೇಜ್ ಪ್ರೇರಿತ ಇಟ್ರಾನ್ಸ್ ನಿಯೋ ಇವಿ ಸ್ಕೂಟರ್

2018ರಿಂದಲೇ ವಿವಿಧ ಮಾದರಿಯ ಇವಿ ಸ್ಕೂಟರ್ ಉತ್ಪಾದನೆ ಮಾಡುತ್ತಿರುವ ಪ್ಯೂರ್ ಇವಿ ಕಂಪನಿಯು ಇಟ್ರಾನ್ಸ್ ನಿಯೋ ಜೊತೆಗೆ ಇಟ್ರಾನ್ಸ್ ಪ್ಲಸ್, ಇಪ್ಯೂಟೊ 7ಜಿ, ಇಟ್ರಾನ್ಸ್, ಇಟ್ರಾನ್ ಪ್ಲಸ್ ಸ್ಕೂಟರ್‌ಗಳನ್ನು ಉತ್ಪಾದನೆ ಹೊಂದಿದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಬಿಡುಗಡೆಯಾಗಲಿದೆ ಅತ್ಯುತ್ತಮ ಮೈಲೇಜ್ ಪ್ರೇರಿತ ಇಟ್ರಾನ್ಸ್ ನಿಯೋ ಇವಿ ಸ್ಕೂಟರ್

ಸದ್ಯಕ್ಕೆ ಸೀಮಿತ ಮಾರುಕಟ್ಟೆಯಲ್ಲಿ ಮಾತ್ರ ಮಾರಾಟ ಸೌಲಭ್ಯ ಹೊಂದಿರುವ ಪ್ಯೂರ್ ಇವಿ ಕಂಪನಿಯು ಮುಂದಿನ ಕೆಲವೇ ತಿಂಗಳುಗಳಲ್ಲಿ 20ಕ್ಕೂ ರಾಜ್ಯಗಳಲ್ಲಿ 100 ಹೊಸ ಮಾರಾಟ ಮಳಿಗೆಗಳನ್ನು ತೆರೆಯುತ್ತಿದ್ದು, ಹೊಸದಾಗಿ ಬಿಡುಗಡೆಯಾಗಿರುವ ಇಟ್ರಾನ್ಸ್ ನಿಯೋ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಿದೆ.

More from DriveSpark

Article Published On: Tuesday, November 17, 2020, 20:09 [IST]
English summary
Pure EV Launches A New High-Speed Electric Scooter. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+