ಲಾಕ್‌ಡೌನ್ ಎಫೆಕ್ಟ್: ಹೊಸ ಸೇವೆಗೆ ಚಾಲನೆ ನೀಡಿದ ರಾಪಿಡೋ
ರಾಪಿಡೋವನ್ನು ಭಾರತದ ಅತಿದೊಡ್ಡ ಬೈಕ್ ಟ್ಯಾಕ್ಸಿ ಎಂದು ಕರೆಯಲಾಗುತ್ತದೆ. ಈಗ ರಾಪಿಡೊ ಕಂಪನಿಯು ರಾಪಿಡೋ ಬಾಕ್ಸ್ ಎಂಬ ಹೊಸ ಸೇವೆಯನ್ನು ಆರಂಭಿಸಿದೆ. ಈ ಸೇವೆಯಡಿಯಲ್ಲಿ ಬೇಡಿಕೆಗೆ ಅನುಗುಣವಾಗಿ ಅಗತ್ಯ ವಸ್ತುಗಳನ್ನು ವಿತರಣೆ ಮಾಡಲಾಗುವುದು.

ಈ ಅಗತ್ಯ ವಸ್ತುಗಳಲ್ಲಿ ಆಹಾರ, ದಿನಸಿ ಹಾಗೂ ಔಷಧಿಗಳು ಸೇರಿರಲಿವೆ. ಈ ಸೇವೆಯಡಿಯಲ್ಲಿ ಲಾಕ್‌ಡೌನ್ ಕಾರಣಕ್ಕೆ ಮನೆಯಿಂದ ಹೊರಬರಲು ಸಾಧ್ಯವಾಗದೇ ತಮ್ಮ ಸ್ನೇಹಿತರಿಗೆ, ಕುಟುಂಬದವರಿಗೆ ಆಹಾರ, ದಿನಸಿ ಹಾಗೂ ಔಷಧಿಗಳನ್ನು ಕಳುಹಿಸಲು ಬಯಸುವ ಜನರಿಗೆ ಪರ್ಸನ್ಸ್-ಟು-ಪರ್ಸನ್ಸ್ (ಪಿ2ಪಿ) ಅಂದರೆ ಮುಖಾಮುಖಿ ಸೇವೆಯನ್ನು ನೀಡಲಾಗುವುದು.

ರಾಪಿಡೋ ಆಪ್ ಮೂಲಕ, ಗ್ರಾಹಕರು ಎಲ್ಲಿಂದ ಬೇಕಾದರೂ ಈ ಅಗತ್ಯ ವಸ್ತುಗಳನ್ನು ಆರ್ಡರ್ ಮಾಡಿ ಎಲ್ಲಿಗೆ ಬೇಕಾದರೂ ಕಳುಹಿಸಬಹುದು. ಈ ಸೇವೆಗಾಗಿ ಕಂಪನಿಯು ಈಗಾಗಲೇ ಬೆಂಗಳೂರು, ಕೋಲ್ಕತಾ ಮತ್ತು ಹೈದರಾಬಾದ್‌ಗಳಲ್ಲಿ ಅಸ್ತಿತ್ವದಲ್ಲಿರುವ ತನ್ನ ಸವಾರರನ್ನು ಬಳಸಿಕೊಳ್ಳಲಿದೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಈ ಹೊಸ ಸೇವೆಯ ಮೂಲಕ ರಾಪಿಡೋ ಕಂಪನಿಯು ತನ್ನ ಸವಾರರನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಲು ಮುಂದಾಗಿದೆ. ಈ ಲಾಕ್‌ಡೌನ್ ಸಮಯದಲ್ಲಿ ತನ್ನ ಸವಾರರ ಗಳಿಕೆ ಹೆಚ್ಚಾಗಲಿ ಎಂಬುದು ರಾಪಿಡೋ ಕಂಪನಿಯ ಆಶಯ.

ಈ ಬಗ್ಗೆ ಮಾತನಾಡಿರುವ ರಾಪಿಡೊ ಸಹ-ಸಂಸ್ಥಾಪಕ ಅರವಿಂದ್ ಶಂಕಾರವರು ಲಾಕ್‌ಡೌನ್ ಜನರ ದೈನಂದಿನ ಚಟುವಟಿಕೆಯನ್ನು ಸ್ಥಗಿತಗೊಳಿಸಿದೆ. ಜನರಿಗೆ ನೆರವಾಗಲು ಹಾಗೂ ನಮ್ಮ ಸವಾರರ ಆದಾಯವನ್ನು ಹೆಚ್ಚಿಸಲು ಮುಂದಾಗಿದ್ದೇವೆ ಎಂದು ಹೇಳಿದರು.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಈ ಸಂಕಷ್ಟದ ಸಂದರ್ಭದಲ್ಲಿ ಗ್ರಾಹಕರಿಗೆ ಸುರಕ್ಷಿತವಾಗಿ ವಸ್ತುಗಳನ್ನು ತಲುಪಿಸಲು ಈ ಹೊಸ ಸೇವೆಯನ್ನು ಆರಂಭಿಸಿದ್ದೇವೆ. ಗ್ರಾಹಕರು ನಮ್ಮ ಹೊಸ ಸೇವೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯಲಿದ್ದಾರೆಂಬ ನಂಬಿಕೆಯಿದೆ ಎಂದು ಅವರು ಹೇಳಿದರು.

ಈ ಸೇವೆಯನ್ನು ನೀಡಲು ರಾಪಿಡೋ ಕಂಪನಿಯು ಮೊದಲ 2 ಕಿ.ಮೀಗಳಿಗೆ ರೂ.35 ನಿಗದಿಪಡಿಸಿದೆ. ಮೊದಲ 2 ಕಿ.ಮೀ ವ್ಯಾಪ್ತಿಯ ನಂತರ, ಪ್ರತಿ ಕಿ.ಮೀಗೆ ಹೆಚ್ಚುವರಿ ರೂ.15 ನಿಗದಿಪಡಿಸಲಾಗಿದೆ.


Click it and Unblock the Notifications