ಲಾಕ್‌ಡೌನ್ ವಿನಾಯಿತಿ: ಕಾರ್ಯಾಚರಣೆ ಪುನರಾರಂಭಿಸಿದ ರಾಪಿಡೋ
ರಾಪಿಡೋ ಕಂಪನಿಯು ಸಹ ಇತರ ಕಂಪನಿಗಳಂತೆ ಲಾಕ್‌ಡೌನ್ ಅವಧಿಯಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು. ಈಗ ರಾಪಿಡೋ ಕಂಪನಿಯು ದೇಶದ 100 ನಗರಗಳಲ್ಲಿ ಕಾರ್ಯಾಚರಣೆಯನ್ನು ಪುನರಾರಂಭಿಸಿದೆ. ಕಂಪನಿಯು ಗ್ರೀನ್ ಹಾಗೂ ಆರೆಂಜ್ ಝೋನ್‌ಗಳಲ್ಲಿ ಸೇವೆಗಳನ್ನು ಪುನರಾರಂಭಿಸಿದೆ.

ಈ ವಲಯಗಳಲ್ಲಿ ರಾಪಿಡೋ ಸುರಕ್ಷತಾ ಕ್ರಮಗಳೊಂದಿಗೆ ಕಾರ್ಯಾಚರಣೆಯನ್ನು ಪುನರಾರಂಭಿಸಿದೆ. ರಾಪಿಡೋ ಸೇವೆಗಳು ಸ್ಥಗಿತಗೊಂಡಿದ್ದ ಕಾರಣಕ್ಕೆ ಕಂಪನಿಯ 3 ಲಕ್ಷ ರೈಡರ್ ಪಾಲುದಾರರಮೇಲೆ ಪರಿಣಾಮ ಉಂಟಾಗಿತ್ತು. ಈಗ ಸರ್ಕಾರದಿಂದ ಅನುಮತಿ ಪಡೆದ ನಂತರ ಸೇವೆಗಳನ್ನು ಪುನರಾರಂಭಿಸಿದ್ದು, ಸರ್ಕಾರವು ಹೊರಡಿಸಿರುವ ಎಲ್ಲಾ ಸುರಕ್ಷತಾ ಮಾನದಂಡಗಳನ್ನು ಅನುಸರಿಸಲಾಗುತ್ತಿದೆ.

ರಾಪಿಡೋ ಸವಾರರಿಗೆ ಸುರಕ್ಷತಾ ಮಾನದಂಡಗಳನ್ನು ಅನುಸರಿಸುವಂತೆ ಸೂಚನೆ ನೀಡಲಾಗಿದೆ. ಇವುಗಳಲ್ಲಿ ಫೇಸ್ ಮಾಸ್ಕ್ ಧರಿಸುವುದು, ವಾಹನವನ್ನು ಸ್ವಚ್ವಗೊಳಿಸುವುದು, ಪ್ರಯಾಣಿಕರಿಗೆ ಪ್ರತ್ಯೇಕ ಹೆಲ್ಮೆಟ್ ನೀಡುವುದು ಸೇರಿವೆ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಇದರ ಜೊತೆಗೆ ಈ ಸವಾರರು ಕರ್ತವ್ಯದಲ್ಲಿರುವಾಗ ಆರೋಗ್ಯ ಸೇತು ಆ್ಯಪ್ ಅನ್ನು ಕಡ್ಡಾಯವಾಗಿ ಬಳಸಬೇಕಾಗುತ್ತದೆ. ಕಂಪನಿಯ ಆ್ಯಪ್‌ನಿಂದಾಗಿ ಸವಾರನು ಕಾರ್ಯಾಚರಣೆ ವೇಳೆಯಲ್ಲಿ ರೆಡ್ ಝೋನ್ ಅಥವಾ ಕಂಟೇನ್ಮೆಂಟ್ ಝೋನ್‌ನಿಂದ ಹೊರಗುಳಿಯಲು ಸಾಧ್ಯವಾಗಲಿದೆ. ಈ ಆ್ಯಪ್‌ನಲ್ಲಿ ಈ ಸ್ಥಳಗಳ ಬಗ್ಗೆ ಅವರಿಗೆ ಸೂಚನೆ ನೀಡಲಾಗುವುದು.

3 ಲಕ್ಷ ಸವಾರರಿರುವ ಕಾರಣಕ್ಕೆ ಕಾರ್ಯಾಚರಣೆಯನ್ನು ಪುನರಾರಂಭಿಸುವುದು ಮುಖ್ಯವೆಂದು ರಾಪಿಡೊ ಹೇಳಿದೆ. ಈ ಪೈಕಿ ಹೆಚ್ಚಿನವರಿಗೆ ಇದು ಆದಾಯದ ಏಕೈಕ ಮೂಲವಾಗಿದೆ. ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ತನ್ನ ಕಾರ್ಯಾಚರಣೆಯನ್ನು ಪುನರಾರಂಭಿಸಿದೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಈ ಬೈಕ್ ಟ್ಯಾಕ್ಸಿ ಸೇವೆಯು, ಇತರ ಸಾರಿಗೆ ವಿಧಾನಗಳಿಗಿಂತ ಉತ್ತಮವಾಗಿದೆ ಎಂದು ರಾಪಿಡೋ ಹೇಳಿದೆ. ಇದರಲ್ಲಿ ಸಾಮಾಜಿಕ ಅಂತರವನ್ನು ಸಹ ಪಾಲಿಸಲಾಗುತ್ತದೆ. ತಲುಪಬೇಕಾಗಿರುವ ಸ್ಥಳವನ್ನು ಜನಸಮೂಹದ ಗೊಂದಲವಿಲ್ಲದೆ ಸುರಕ್ಷಿತವಾಗಿ ತಲುಪಬಹುದು.

ರಾಪಿಡೋ ಕಂಪನಿಯು ಇತ್ತೀಚೆಗೆ ರಾಪಿಡೋ ಬಾಕ್ಸ್ ಎಂಬ ಹೊಸ ಸೇವೆಯನ್ನು ಆರಂಭಿಸಿದೆ. ಈ ಸೇವೆಯಡಿಯಲ್ಲಿ ಆಹಾರ, ದಿನಸಿ ಹಾಗೂ ಔಷಧಿಗಳನ್ನು ವಿತರಣೆ ಮಾಡಲಾಗುವುದು. ತಮ್ಮ ಸ್ನೇಹಿತರು ಅಥವಾ ಕುಟುಂಬ ಸದಸ್ಯರಿಗೆ ಆಹಾರ, ದಿನಸಿ ಹಾಗೂ ಔಷಧಿಗಳನ್ನು ಕಳುಹಿಸಲು ಬಯಸುವವರಿಗೆ ಈ ಸೇವೆಯಿಂದ ಅನುಕೂಲವಾಗಲಿದೆ.


Click it and Unblock the Notifications