ಮಾರುಕಟ್ಟೆ ವಿಸ್ತರಣೆಯೊಂದಿಗೆ ಮತ್ತಷ್ಟು ಹೊಸ ಇವಿ ಬೈಕ್ ಬಿಡುಗಡೆ ಮಾಡಲಿದೆ ರಿವೋಲ್ಟ್

ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆಯು ಹೆಚ್ಚುತ್ತಿದ್ದು, ಹಲವಾರು ಸ್ಟಾರ್ಟ್‌ಅಪ್ ಕಂಪನಿಗಳು ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನ ಮಾದರಿಗಳೊಂದಿಗೆ ಗ್ರಾಹಕರ ಆಕರ್ಷಣೆ ಕಾರಣವಾಗಿವೆ. ಇವುಗಳಲ್ಲಿ ರಿವೋಲ್ಟ್ ಕೂಡಾ ಒಂದಾಗಿದ್ದು, ಇವಿ ಬೈಕ್ ಬಿಡುಗಡೆ ಮಾಡಿದ ಕೆಲವೇ ದಿನಗಳಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ.

ಮತ್ತಷ್ಟು ಹೊಸ ಇವಿ ಬೈಕ್ ಬಿಡುಗಡೆ ಮಾಡಲಿದೆ ರಿವೋಲ್ಟ್

ಪುಣೆ ಮೂಲದ ರಿವೋಲ್ಟ್ ಕಂಪನಿಯು ಸದ್ಯಕ್ಕೆ ಪುಣೆ ಮತ್ತು ದೆಹಲಿಯಲ್ಲಿ ಮಾತ್ರವೇ ಹೊಸ ಎಲೆಕ್ಟ್ರಿಕ್ ಬೈಕ್‌ಗಳನ್ನು ಮಾರಾಟ ಮಾಡುತ್ತಿದ್ದು, ಇದೀಗ ಹೊಸದಾಗಿ ಮುಂಬೈ ಮಹಾನಗರದಲ್ಲೂ ಇವಿ ಬೈಕ್ ಮಾರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಿದೆ. 2021ರ ಅಂತ್ಯಕ್ಕೆ ದೇಶದ 20 ಪ್ರಮುಖ ನಗರಗಳಲ್ಲಿ ಹೊಸ ವಾಹನ ಮಾರಾಟ ಮಳಿಗೆ ತೆರೆಯುವ ಯೋಜನೆಯಲ್ಲಿರುವ ರಿವೋಲ್ಟ್ ಕಂಪನಿಯು ಮತ್ತಷ್ಟು ಹೊಸ ಮಾದರಿಯ ಇವಿ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡುವ ತವಕದಲ್ಲಿದೆ.

ಮತ್ತಷ್ಟು ಹೊಸ ಇವಿ ಬೈಕ್ ಬಿಡುಗಡೆ ಮಾಡಲಿದೆ ರಿವೋಲ್ಟ್

ಇದಕ್ಕಾಗಿ ಈಗಾಗಲೇ ವಿವಿಧ ಸುತ್ತಿನ ಮಾರುಕಟ್ಟೆ ಅಧ್ಯಯನ ನಡೆಸಿರುವ ರಿವೋಲ್ಟ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಮತ್ತಷ್ಟು ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉತ್ಪನ್ನ ಸಿದ್ದಪಡಿಸುತ್ತಿದ್ದು, ಮುಂಬೈ ನಂತರ ನಮ್ಮ ಬೆಂಗಳೂರಿನಲ್ಲೂ ದೊಡ್ಡ ಮಟ್ಟದ ಮಾರಾಟ ಮಳಿಗೆ ಆರಂಭಿಸುವ ಯೋಜನೆಯಲ್ಲಿದೆ.

ಮತ್ತಷ್ಟು ಹೊಸ ಇವಿ ಬೈಕ್ ಬಿಡುಗಡೆ ಮಾಡಲಿದೆ ರಿವೋಲ್ಟ್

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ರಿವೋಲ್ಟ್ ಕಂಪನಿಯು ಸದ್ಯ ಆರ್‌ವಿ300 ಮತ್ತು ಆರ್‌ವಿ400 ಎನ್ನುವ ಎರಡು ಎಲೆಕ್ಟ್ರಿಕ್ ಬೈಕ್‌ಗಳನ್ನು ಮಾರಾಟ ಮಾಡುತ್ತಿದ್ದು, ಅತ್ಯುತ್ತಮ ಮೈಲೇಜ್ ಪ್ರೇರಣೆಯೊಂದಿಗೆ ಬೆಲೆಯಲ್ಲೂ ಆಕರ್ಷಕವಾಗಿವೆ.

ಮತ್ತಷ್ಟು ಹೊಸ ಇವಿ ಬೈಕ್ ಬಿಡುಗಡೆ ಮಾಡಲಿದೆ ರಿವೋಲ್ಟ್

ಹೊಸ ಬೈಕ್‌ಗಳನ್ನು ಸಬ್‌ಸ್ಕೈಬ್ ಆಧಾರದ ಮೇಲೆ ಬಿಡುಗಡೆ ಮಾಡಿದ್ದು, 37 ತಿಂಗಳ ಅವಧಿಗೆ ಪ್ರತಿ ತಿಂಗಳು ಆರಂಭಿಕವಾಗಿ ರೂ.2999(ಆರ್‌ವಿ300), ರೂ.3499(ಆರ್‌ವಿ400 ಬೆಸ್) ಮತ್ತು ರೂ.3999(ಆರ್‌ವಿ400 ಪ್ರೀಮಿಯಂ) ದರ ನಿಗದಿ ಮಾಡಲಾಗಿದೆ.

ಮತ್ತಷ್ಟು ಹೊಸ ಇವಿ ಬೈಕ್ ಬಿಡುಗಡೆ ಮಾಡಲಿದೆ ರಿವೋಲ್ಟ್

ಸಬ್‌ಸ್ಕೈಬ್ ಆಯ್ಕೆ ಬೇಡ ಎನ್ನುವ ಗ್ರಾಹಕರು ಎಕ್ಸ್‌ಶೋರೂಂ ದರದಲ್ಲೂ ಬೆಲೆ ಪಾವತಿ ಮಾಡಬಹುದಾಗಿದ್ದು, ಹೊಸ ಇವಿ ಬೈಕ್ ಬೆಲೆಯು ಆರ್‍‍‍ವಿ 300 ಮಾದರಿಗೆ ರೂ.84,999 ಹಾಗೂ ಆರ್‍‍ವಿ 400 ಪ್ರೀಮಿಯಂ ಬೈಕ್ ಮಾದರಿಗೆ ರೂ.98,999 ದರ ನಿಗದಿಪಡಿಸಲಾಗಿದೆ.

MOST READ: ಲಾಕ್‌ಡೌನ್ ಅವಧಿಯಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದ ಬೈಕ್ ಸವಾರನಿಗೆ ಭರ್ಜರಿ ದಂಡ ವಿಧಿಸಿದ ಬೆಂಗಳೂರು ಪೊಲೀಸರು

ಮತ್ತಷ್ಟು ಹೊಸ ಇವಿ ಬೈಕ್ ಬಿಡುಗಡೆ ಮಾಡಲಿದೆ ರಿವೋಲ್ಟ್

ಆರ್‌ವಿ300 ಬೈಕಿನಲ್ಲಿ 2.7kW ಲಿಥೀಯಂ-ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ 1.5kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಪ್ರತಿ ಗಂಟೆಗೆ 65 ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಸಿಂಗಲ್ ಚಾರ್ಜ್‌ನಲ್ಲಿ ಗರಿಷ್ಠ 180 ಕಿ.ಮಿ ಮೈಲೇಜ್ ಹಿಂದಿರುಗಿಸುತ್ತದೆ.

ಮತ್ತಷ್ಟು ಹೊಸ ಇವಿ ಬೈಕ್ ಬಿಡುಗಡೆ ಮಾಡಲಿದೆ ರಿವೋಲ್ಟ್

ಹಾಗೆಯೇ ಆರ್‌ವಿ400 ಬೈಕಿನಲ್ಲಿ 3.24kW ಲಿಥೀಯಂ-ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ 3kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಪ್ರತಿ ಗಂಟೆಗೆ 85 ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಸಿಂಗಲ್ ಚಾರ್ಜ್‌ನಲ್ಲಿ 156ಕಿ.ಮಿ ಮೈಲೇಜ್ ನೀಡುತ್ತದೆ.

MOST READ: ದ್ವಿಚಕ್ರ ವಾಹನಗಳ ಖರೀದಿ ಮೇಲೆ ಹೊಸ ಲೋನ್ ಆಫರ್ ಘೋಷಿಸಿದ ಹೋಂಡಾ

ಮತ್ತಷ್ಟು ಹೊಸ ಇವಿ ಬೈಕ್ ಬಿಡುಗಡೆ ಮಾಡಲಿದೆ ರಿವೋಲ್ಟ್

ಹೊಸ ಇವಿ ಬೈಕ್‌ಗಳಲ್ಲಿ ಸಿಟಿ, ಇಕೋ ಮತ್ತು ಸ್ಪೋರ್ಟ್ ರೈಡಿಂಗ್ ಮೋಡ್‌ಗಳನ್ನು ನೀಡಲಾಗಿದ್ದು, ಜೀಯೋ ಫೆನ್ಸಿಂಗ್, ಲೈವ್ ವೆಹಿಕಲ್ ಟ್ರ್ಯಾಕಿಂಗ್, ಟರ್ನ್ ಬೈ ಟರ್ನ್ ನೆವಿಗೆಷನ್, ರಿಯಲ್ ಟೈಮ್ ವೆಹಿಕಲ್ ಮತ್ತು ಬ್ಯಾಟರಿ ನಿರ್ವಹಣಾ ಸೌಲಭ್ಯಗಳು ಕೂಡಾ ರಿವೋಲ್ಟ್ ಹೊಸ ಬೈಕಿನಲ್ಲಿವೆ.

ಮತ್ತಷ್ಟು ಹೊಸ ಇವಿ ಬೈಕ್ ಬಿಡುಗಡೆ ಮಾಡಲಿದೆ ರಿವೋಲ್ಟ್

ಬೈಕಿನ ತಾಂತ್ರಿಕ ಸೌಲಭ್ಯಗಳ ನಿರ್ವಹಣೆಗಾಗಿ ಪ್ರತ್ಯೇಕವಾಗಿ ಆ್ಯಪ್ ಕೂಡಾ ನೀಡಲಾಗಿದ್ದು, ಆ್ಯಪ್ ಮೂಲಕವೇ ಹೊಸ ಬೈಕಿನ ವೇಗ, ಶಬ್ದ, ಬ್ಯಾಟರಿ ಲಭ್ಯತೆ ಸೇರಿದಂತೆ ಸಂಪೂರ್ಣ ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಣ ಮಾಡಬಹುದಾಗಿದೆ.

MOST READ: 300 ಕಿ.ಮೀ ಸ್ಪೀಡ್‌ನಲ್ಲಿ ಬೈಕ್ ರೈಡ್ ಮಾಡಿದವನನ್ನು ಕೊನೆಗೂ ಲಾಕ್ ಮಾಡಿದ ಬೆಂಗಳೂರು ಪೊಲೀಸರು

ಮತ್ತಷ್ಟು ಹೊಸ ಇವಿ ಬೈಕ್ ಬಿಡುಗಡೆ ಮಾಡಲಿದೆ ರಿವೋಲ್ಟ್

ಆರ್‌ವಿ300 ಹಾಗೂ ಆರ್‌ವಿ400 ಬೈಕ್‌ಗಳನ್ನು ಖರೀದಿಸುವ ಗ್ರಾಹಕರಿಗೆ ಮತ್ತೊಂದು ವಿಶೇಷ ಸೌಲಭ್ಯ ನೀಡಿರುವ ರಿವೋಲ್ಟ್ ಸಂಸ್ಥೆಯು, ಮನೆಯಲ್ಲಿಯೇ ಚಾರ್ಜಿಂಗ್ ಮಾಡಿಕೊಳ್ಳಲು ಮಾತ್ರವಲ್ಲದೇ, ತೆಗೆದು ಹಾಕಬಹುದಾದ ಬ್ಯಾಟರಿ ಜೊತೆಗೆ ಬ್ಯಾಟರಿ ಚಾರ್ಜಿಂಗ್ ಸ್ಟೆಷನ್‌ಗಳ ಮೂಲಕ ನಿಮ್ಮ ಅಗತ್ಯ ಸ್ಥಳಗಳಿಗೆ ಬ್ಯಾಟರಿ ಸೇವೆಗಳನ್ನು ಕೂಡಾ ಒದಗಿಸುತ್ತಿರುವುದು ಗ್ರಾಹಕರ ಬೇಡಿಕೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

More from DriveSpark

Article Published On: Saturday, August 29, 2020, 20:54 [IST]
English summary
Revolt To Expand Its Portfolio In 2021. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+