11 ತಿಂಗಳಿನಲ್ಲಿ 101 ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದವನಿಗೆ ಬೆಂಗಳೂರು ಪೊಲೀಸರಿಂದ ಭರ್ಜರಿ ದಂಡ

ದೇಶಾದ್ಯಂತ ವಾಹನ ಸಂಖ್ಯೆ ಹೆಚ್ಚುತ್ತಿದ್ದಂತೆ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳು ಕೂಡಾ ದ್ವಿಗುಣಗೊಳ್ಳುತ್ತಿವೆ. ದುಬಾರಿ ದಂಡದ ನಡುವೆಯೂ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುತ್ತಿರುವವರ ಸಂಖ್ಯೆ ಹೆಚ್ಚಿದ್ದು, ನಮ್ಮ ಬೆಂಗಳೂರಿನಲ್ಲೂ ಬೈಕ್ ಸವಾರನೊಬ್ಬ ದಾಖಲೆ ಪ್ರಮಾಣದಲ್ಲಿ ದಂಡತೆತ್ತಿದ್ದಾನೆ.

101 ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದವನಿಗೆ ಭರ್ಜರಿ ದಂಡ

ದೇಶದ ಪ್ರಮುಖ ಮಾಹಾನಗರಗಳ ಪೈಕಿ ಅತಿ ಹೆಚ್ಚು ಸಾರಿಗೆ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗುವ ಪಟ್ಟಿಯಲ್ಲಿ ನಮ್ಮ ಬೆಂಗಳೂರು ಕೂಡಾ ಮುಂಚೂಣಿಯಲ್ಲಿದ್ದು, ದಿನಂಪ್ರತಿ ಸಾವಿರಾರು ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತಿವೆ. ಟ್ರಾಫಿಕ ದಟ್ಟಣೆಯಿಂದಾಗಿ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಿದ್ದು, ಇಲ್ಲೊಬ್ಬ ಬೈಕ್ ಸವಾರ ಒಂದಲ್ಲಾ, ಎರಡಲ್ಲಾ ಬರೋಬ್ಬರಿ 101ರ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಸಿಕ್ಕಿಬಿದ್ದಿದ್ದಾನೆ.

101 ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದವನಿಗೆ ಭರ್ಜರಿ ದಂಡ

11 ತಿಂಗಳ ಅವಧಿಯಲ್ಲಿ ಬರೋಬ್ಬರಿ 101 ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ಸವಾರನನ್ನು ಬೆಂಗಳೂರಿನ ಆಡುಗೋಡಿ ಟ್ರಾಫಿಕ್ ಪೊಲೀಸರು ಕೊನೆಗೂ ಪತ್ತೆಹಚ್ಚಿದ್ದು, ವಾಹನ ಪರಿಶೀಲನೆ ವೇಳೆ ಬೈಕ್ ಮೇಲಿದ್ದ ಪ್ರಕರಣಗಳನ್ನು ನೋಡಿ ಟ್ರಾಫಿಕ್ ಪೊಲೀಸರೇ ಆಶ್ಚರ್ಯಗೊಂಡಿದ್ದಾರೆ.

101 ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದವನಿಗೆ ಭರ್ಜರಿ ದಂಡ

ಕೊರಮಂಗಲದ ಮೊದಲ ಬ್ಲ್ಯಾಕ್‌ನಲ್ಲಿರುವ ವಿಪ್ರೋ ಜಂಕ್ಷನ್ ಬಳಿ ಸಿಗ್ನಲ್ ಜಂಪ್ ಮಾಡುವಾಗ ಟ್ರಾಫಿಕ್ ಪೊಲೀಸರು ರಾಯಲ್ ಎನ್‌ಫೀಲ್ಡ್ ಬೈಕ್ ಸವಾರನನ್ನು ವಶಕ್ಕೆ ಪಡೆದಿದ್ದು, 2019 ಸೆಪ್ಟೆಂಬರ್‌ನಿಂದ ಇದುವರೆಗೆ ಒಟ್ಟು 101 ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ.

101 ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದವನಿಗೆ ಭರ್ಜರಿ ದಂಡ

101 ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ 41 ಹೆಲ್ಮೆಟ್ ರಹಿತ ಬೈಕ್ ಚಾಲನೆ, 28 ಹೆಲ್ಮೆಟ್ ಇಲ್ಲದೆ ಹಿಂಬದಿ ಬೈಕ್ ಸವಾರಿ, 10 ಬೈಕ್ ಚಾಲನೆ ವೇಳೆ ಮೊಬೈಲ್ ಬಳಕೆ, 6 ನೋ ಎಂಟ್ರಿ, 5 ಸಿಗ್ನಲ್ ಜಂಪ್, 3 ರಾಂಗ್ ಪಾರ್ಕಿಂಗ್ ಮತ್ತು 3 ಇತರೆ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ.

101 ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದವನಿಗೆ ಭರ್ಜರಿ ದಂಡ

ದಾಖಲಾದ ಒಟ್ಟು 101 ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಬರೋಬ್ಬರಿ ರೂ. 57,200 ದಂಡ ವಿಧಿಸಿದ್ದು, ದಂಡ ಪಾವತಿ ಮಾಡಲು ಸಮಯ ಕೇಳಿರುವ ಹಿನ್ನಲೆಯಲ್ಲಿ ಬೈಕ್ ಅನ್ನು ಸೀಜ್ ಮಾಡಲಾಗಿದೆ.

MOST READ: 300 ಕಿ.ಮೀ ಸ್ಪೀಡ್‌ನಲ್ಲಿ ಬೈಕ್ ರೈಡ್ ಮಾಡಿದವನನ್ನು ಕೊನೆಗೂ ಲಾಕ್ ಮಾಡಿದ ಬೆಂಗಳೂರು ಪೊಲೀಸರು

101 ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದವನಿಗೆ ಭರ್ಜರಿ ದಂಡ

ದಂಡ ಪಾವತಿ ಮಾಡಿದ ನಂತರವೇ ಬೈಕ್ ಮರಳಿ ನೀಡುವುದಾಗಿ ಸ್ಪಷ್ಟನೆ ನೀಡಿರುವ ಆಡುಗೋಡಿ ಟ್ರಾಫಿಕ್ ಪೊಲೀಸರು ಬೈಕ್ ಸವಾರನ ಹೆಸರನ್ನು ಸಹ ಬಹಿರಂಗಪಡಿಸಿದ್ದು, ರಾಜೇಶ್ ಎಂಬಾತನೇ ಟ್ರಾಫಿಕ್ ನಿಯಮ ಉಲ್ಲಂಘಿಸಿ ಭಾರೀ ಪ್ರಮಾಣದ ದಂಡ ಗುರಿಯಾಗಿದ್ದಾನೆ.

101 ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದವನಿಗೆ ಭರ್ಜರಿ ದಂಡ

ಟ್ರಾಫಿಕ್ ಪೊಲೀಸರು ನೀಡಿರುವ ಮಾಹಿತಿಯಲ್ಲಿ ಗಮನಸಬೇಕಾದ ಮತ್ತೊಂದು ಪ್ರಮುಖ ಅಂಶ ಏನೆಂದರೆ ಸಂಚಾರಿ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದಿರುವ ರಾಜೇಶ್ ಲಾಕ್‌ಡೌನ್ ಸಂದರ್ಭದಲ್ಲೇ ಅತಿಹೆಚ್ಚು ನಿಯಮ ಉಲ್ಲಂಘನೆ ಮಾಡಿದ್ದಾನಂತೆ.

MOST READ: ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!

101 ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದವನಿಗೆ ಭರ್ಜರಿ ದಂಡ

ಲಾಕ್‌ಡೌನ್ ನಂತರ ಸುಮಾರು ಐದು ತಿಂಗಳ ಅವಧಿಯಲ್ಲಿ 60ಕ್ಕೂ ಹೆಚ್ಚು ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, ಪದೇ ಪದೇ ಸಂಚಾರಿ ಉಲ್ಲಂಘಿಸುವ ಮೂಲಕ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದವನಿಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ಭರ್ಜರಿಯಾಗಿಯೇ ದಂಡ ಜಡಿದಿದ್ದಾರೆ.

Most Read Articles

Kannada
English summary
Bengaluru Biker Fined Rs 57,200 For 101 Traffic Violations. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X