ಟ್ವಿನ್ ಬೈಕ್‌ಗಳಲ್ಲಿ ಅಲಾಯ್ ವೀಲ್ಹ್ ಆಯ್ಕೆ ನೀಡಲಿದೆ ರಾಯಲ್ ಎನ್‌ಫೀಲ್ಡ್

ಸ್ಪೋಕ್ ವೀಲ್ಹ್‌ಗಳ ಮೂಲಕವೇ ವಿಭಿನ್ನತೆ ಹೊಂದಿರುವ ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಬಹುತೇಕ ಬೈಕ್ ಮಾದರಿಗಳು ಇದೀಗ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಪ್ರಮುಖ ಬದಲಾವಣೆಗಳನ್ನು ಪಡೆದುಕೊಳ್ಳುತ್ತಿದ್ದು, ಟ್ವಿನ್ ಬೈಕ್ ಮಾದರಿಗಳಲ್ಲಿ ಮೊದಲ ಬಾರಿಗೆ ಅಲಾಯ್ ವೀಲ್ಹ್ ಆಯ್ಕೆ ನೀಡಲಾಗುತ್ತಿದೆ.

ಟ್ವಿನ್ ಬೈಕ್‌ಗಳಲ್ಲಿ ಅಯಾಲ್ ವೀಲ್ಹ್ ಆಯ್ಕೆ ನೀಡಲಿದೆ ರಾಯಲ್ ಎನ್‌ಫೀಲ್ಡ್

ಹೊಸ ಬೈಕ್ ಖರೀದಿಸುವ ಮುನ್ನ ಆನ್‌ಲೈನ್ ಕಾನ್ಫಿಗ್ರೆಷನ್ ಮೂಲಕ ಆಕ್ಸೆಸರಿಸ್‌ಗಳನ್ನು ಜೋಡಣೆ ಮಾಡಿಕೊಳ್ಳಬಹುದಾದ ಸೌಲಭ್ಯವನ್ನು ಹೊಂದಿರುವ ರಾಯಲ್ ಎನ್‌ಫೀಲ್ಡ್ ಕಂಪನಿಯು ಆಕ್ಸೆಸರಿಸ್ ಪಟ್ಟಿಯಲ್ಲಿ ಅಲಾಯ್ ವೀಲ್ಹ್‌ಗಳನ್ನು ಸಹ ಸೇರ್ಪಡೆಗೊಳಿಸಲಾಗುತ್ತಿದ್ದು, ಮುಂದಿನ ವರ್ಷದಿಂದ ಟ್ವಿನ್ ಬೈಕ್‌ಗಳಲ್ಲಿ ಸ್ಟ್ಯಾಂಡರ್ಡ್ ಸ್ಪೋಕ್ ವೀಲ್ಹ್ ಹೊರತುಪಡಿಸಿ ಆಸಕ್ತ ಗ್ರಾಹಕರು ಅಲಾಯ್ ವೀಲ್ಹ್‌‌ಗಳನ್ನು ಆಯ್ಕೆ ಮಾಡಬಹುದಾಗಿದೆ.

ಟ್ವಿನ್ ಬೈಕ್‌ಗಳಲ್ಲಿ ಅಯಾಲ್ ವೀಲ್ಹ್ ಆಯ್ಕೆ ನೀಡಲಿದೆ ರಾಯಲ್ ಎನ್‌ಫೀಲ್ಡ್

ಟ್ವಿನ್ ಬೈಕ್ ಮಾದರಿಗಳಾದ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಮಾದರಿಯಲ್ಲಿ ಅಲಾಯ್ ವೀಲ್ಹ್ ನೀಡುವ ಕುರಿತು ರಾಯಲ್ ಎನ್‌ಫೀಲ್ಡ್ ಕಂಪನಿಯೇ ದೃಡಪಡಿಸಿದ್ದು, ಹೊಸ ಮಾದರಿ ಅಲಾಯ್ ವೀಲ್ಹ್‌ಗಳ ಕಾರ್ಯಕ್ಷಮತೆ ಕುರಿತಂತೆ ವಿವಿಧ ಹಂತದ ಟೆಸ್ಟಿಂಗ್ ನಡೆಸುತ್ತಿರುವುದಾಗಿ ಗ್ರಾಹಕರೊಬ್ಬರ ಪ್ರಶ್ನೆಗೆ ಉತ್ತರಿಸಿದೆ.

ಟ್ವಿನ್ ಬೈಕ್‌ಗಳಲ್ಲಿ ಅಯಾಲ್ ವೀಲ್ಹ್ ಆಯ್ಕೆ ನೀಡಲಿದೆ ರಾಯಲ್ ಎನ್‌ಫೀಲ್ಡ್

ಟ್ವಿನ್ ಬೈಕ್‌ಗಳಲ್ಲಿ 2021 ಫೆಬ್ರುವರಿ ಹೊತ್ತಿಗೆ ಅಲಾಯ್ ವೀಲ್ಹ್‌ಗಳನ್ನು ಆಯ್ಕೆ ನೀಡುವುದಾಗಿ ಖಚಿತಪಡಿಸಿದ್ದು, ಗ್ರಾಹಕರು ತಮ್ಮ ಆಯ್ಕೆಗೆ ಅನುಗುವಾಗಿ ಸ್ಪೋಕ್ ವೀಲ್ಹ್ ಮತ್ತು ಅಲಾಯ್ ವೀಲ್ಹ್ ಆಯ್ಕೆ ಮಾಡಬಹುದು.

ಟ್ವಿನ್ ಬೈಕ್‌ಗಳಲ್ಲಿ ಅಯಾಲ್ ವೀಲ್ಹ್ ಆಯ್ಕೆ ನೀಡಲಿದೆ ರಾಯಲ್ ಎನ್‌ಫೀಲ್ಡ್

ಸ್ಪೋಕ್ ವೀಲ್ಹ್‌ಗಳು ಆಫ್ ರೋಡ್‌ಗಳಲ್ಲಿ ಬಳಕೆಗೆ ಹೆಚ್ಚು ಸೂಕ್ತವಾಗಿದ್ದು, ಅಲಾಯ್ ವೀಲ್ಹ್‌ಗಳು ಸ್ಟೈಲಿಷ್ ಜೊತೆಗೆ ನಿರ್ವಹಣೆಗೆ ಅನುಕೂಲಕರ ಎನ್ನಬಹುದು. ಇದೇ ಕಾರಣಕ್ಕೆ ಆಟೋ ಕಂಪನಿಗಳು ವಿವಿಧ ವಾಹನ ಮಾದರಿಗಳಲ್ಲಿ ಬಳಕೆಗೆ ಅನುಗುಣವಾಗಿ ಅಲಾಯ್ ಮತ್ತು ಸ್ಪೋಕ್ ವೀಲ್ಹ್‌ಗಳನ್ನು ಬಳಕೆ ಮಾಡುತ್ತವೆ. ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಬಹುತೇಕ ಬೈಕ್ ಮಾದರಿಗಳು ಸ್ಪೋಕ್ ವೀಲ್ಹ್ ಹೊಂದಿದ್ದು, ಇದೀಗ ಗ್ರಾಹಕರ ಬೇಡಿಕೆಯೆಂತೆ ಅಲಾಯ್ ವೀಲ್ಹ್‌ಗಳ ಆಯ್ಕೆ ಗಮನಹರಿಸುತ್ತಿದೆ.

ಟ್ವಿನ್ ಬೈಕ್‌ಗಳಲ್ಲಿ ಅಯಾಲ್ ವೀಲ್ಹ್ ಆಯ್ಕೆ ನೀಡಲಿದೆ ರಾಯಲ್ ಎನ್‌ಫೀಲ್ಡ್

ಇನ್ನು ಕ್ಲಾಸಿಕ್ ಬೈಕ್ ಮಾದರಿಯಾಗಿರುವ ರಾಯಲ್ ಎನ್‌ಫೀಲ್ಡ್ ಬೈಕ್ ಖರೀದಿ ನಂತರ ಕಸ್ಟಮೈಜ್ಡ್‌ಗೆ ಹೆಚ್ಚು ಬೇಡಿಕೆಯಿದ್ದು, ಕಂಪನಿಯೇ ಇದೀಗ ಅಧಿಕೃತವಾಗಿ ಮಾಡಿಫೈ ಸೌಲಭ್ಯಕ್ಕಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ತೆರೆದಿದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಬಿಎಸ್ಐ ಸರ್ಟಿಫೈಡ್ ಟ್ರೆಡ್ ಹೆಲ್ಮೆಟ್ ಬಿಡುಗಡೆ

ಟ್ವಿನ್ ಬೈಕ್‌ಗಳಲ್ಲಿ ಅಯಾಲ್ ವೀಲ್ಹ್ ಆಯ್ಕೆ ನೀಡಲಿದೆ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಕಂಪನಿಯು ತೆರೆದಿರುವ ಎಂಐವೈ(ಮೇಕ್ ಇಟ್ ಯುವರ್ಸ್) ಪ್ಲ್ಯಾಟ್‌ಫಾರ್ಮ್ ಅಡಿ ಹೊಸ ಬೈಕ್ ಖರೀದಿ ವೇಳೆಯೇ ಆನ್‌ಲೈನ್ ಕಸ್ಟಮೈಜ್ಡ್ ಮಾಡಬಹುದಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಕಂಪನಿಯೇ ಹೊಸ ಬೈಕಿನ ಮಾಡಿಫೈ ಸೌಲಭ್ಯಗಳನ್ನು ಸಿದ್ದಪಡಿಸಲಿದೆ.

ಟ್ವಿನ್ ಬೈಕ್‌ಗಳಲ್ಲಿ ಅಯಾಲ್ ವೀಲ್ಹ್ ಆಯ್ಕೆ ನೀಡಲಿದೆ ರಾಯಲ್ ಎನ್‌ಫೀಲ್ಡ್

ಮೇಕ್ ಇಟ್ ಯುವರ್ಸ್ ಪ್ಲ್ಯಾಟ್‌ಫಾರ್ಮ್‌ನಲ್ಲಿ ಗ್ರಾಹಕರು ಬೈಕ್ ಖರೀದಿಗೆ ಬುಕ್ಕಿಂಗ್ ಸಲ್ಲಿಸಿದ ನಂತರ ಆಫ್ಟರ್ ಮಾರ್ಕೆಟ್ ಮಾಡಿಫೈ ಸೌಲಭ್ಯಗಳನ್ನು ಆನ್‌ಲೈನ್ ಮೂಲಕವೇ ನಿಮ್ಮ ನೆಚ್ಚಿನ ಬೈಕಿಗೆ ಜೋಡಿಸುವ ಮೂಲಕ 3ಡಿ ವ್ಯೂ ಮಾಡಬಹುದಾಗಿದ್ದು, ಕಂಪನಿಯ ಮಾಡಿಫೈ ಸೌಲಭ್ಯಗಳು ಇಷ್ಟವಾದಲ್ಲಿ ಮುಂದುವರಿಸಬಹುದು.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಟ್ವಿನ್ ಬೈಕ್‌ಗಳಲ್ಲಿ ಅಯಾಲ್ ವೀಲ್ಹ್ ಆಯ್ಕೆ ನೀಡಲಿದೆ ರಾಯಲ್ ಎನ್‌ಫೀಲ್ಡ್

ಕಸ್ಟಮೈಜ್ಡ್ ಪ್ಲ್ಯಾಟ್‌ಫಾರ್ಮ್‌ನಲ್ಲಿ ಗ್ರಾಹಕರು ತಮ್ಮ ವಾಹನಗಳಿಗೆ ವಿವಿಧ ಬಣ್ಣಗಳ ಆಯ್ಕೆ, ಎಂಜಿನ್ ಗಾರ್ಡ್ ಆಯ್ಕೆಗೆ ಅವಕಾಶ ನೀಡಲಾಗಿದ್ದು, ಕಸ್ಟಮೈಜ್ಡ್ ಸೌಲಭ್ಯಗಳಿಗೆ ಬೆಲೆ ಕೂಡಾ ಆಫ್ಟರ್ ಮಾರ್ಕೆಟ್ ಬೆಲೆಗಳಿಂತಲೂ ಆಕರ್ಷಕವಾಗಿವೆ.

Most Read Articles

Kannada
English summary
Royal Enfield 650-Twins To Receive Alloy Wheels Soon. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X