ಡ್ಯುಯಲ್ ಟೋನ್‍ ಬಣ್ಣದಲ್ಲಿ ಮಿಂಚಿದ ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್ 650

ರಾಯಲ್ ಎನ್‍ಫೀಲ್ಡ್ ಯುವಕರ ಕನಸಿನ ಬೈಕ್. ತನ್ನ ವಿಶಿಷ್ಟವಾದ ಲುಕ್ ಮತ್ತು ಆಕರ್ಷಕ ವಿನ್ಯಾಸದಿಂದ ಎಲ್ಲರ ಗಮನಸೆಳೆದ ಬೈಕ್. ಈ ಬೈಕಿಗೆ ಕೇವಲ ಯುವಕರು ಮಾತ್ರ ಫಿದಾ ಆಗಿಲ್ಲ, ಯುವತಿಯರು ಕೂಡ ಈ ಬೈಕಿನ ಸೌಂಡ್ ಮತ್ತು ಲುಕ್‍‍ಗೆ ಕ್ಲಿನ್ ಬೂಲ್ಡ್ ಆಗಿದ್ದಾರೆ.

ಡ್ಯುಯಲ್ ಟೋನ್‍ ಬಣ್ಣದಲ್ಲಿ ಮಿಂಚಿದ ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್ 650

ಆಕರ್ಷಕ ಲುಕ್ ಅನ್ನು ಹೊಂದಿರುವ ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಬೈಕ್ ಅನ್ನು ನೋಡುಗರನ್ನು ಮನ ಸೆಳೆಯುವಂತೆ ಮಾಡಿಫೈ ಮಾಡಲಾಗಿದೆ. ಹೈದರಾಬಾದ್ ಮೂಲದ ಎಮೊರ್ ಕಸ್ಟಮ್ಸ್ ಅವರು ಇಂಟರ್‍‍ಸೆಪ್ಟರ್ 650 ಬೈಕ್ ಅನ್ನು ಮಾಡಿಫೈಗೊಳಿಸಿದ್ದಾರೆ. ವಿಶೇಷವೆಂದರೆ ಈ ಬೈಕಿನಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿಲ್ಲ. ಕೆಲವು ಸಣ್ಣ ಬದಲಾವಣೆಗಳನ್ನು ಮಾಡಿದ್ದರೂ ಈ ಬೈಕ್ ಹೆಚ್ಚು ಪ್ರೀಮಿಯಂ ಆಗಿ ಕಾಣುವಂತೆ ಮಾಡಿಫೈ ಮಾಡಲಾಗಿದೆ.

ಡ್ಯುಯಲ್ ಟೋನ್‍ ಬಣ್ಣದಲ್ಲಿ ಮಿಂಚಿದ ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್ 650

ಮಾಡಿಫೈ ಮಾಡಲಾದ ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಬೈಕಿನ ಮುಂಭಾಗದಲ್ಲಿ ಹೊಸ ಹೆಡ್‍‍ಲ್ಯಾಂಪ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಪ್ರೊಜೆಕ್ಟರ್ ಯುನಿಟ್‍ ಮತ್ತು ಎಲ್‍ಇಡಿ ಡಿ‍ಆರ್‍ಎಲ್‍ಗಳನ್ನು ಅಳವಡಿಸಲಾಗಿದೆ.

ಡ್ಯುಯಲ್ ಟೋನ್‍ ಬಣ್ಣದಲ್ಲಿ ಮಿಂಚಿದ ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್ 650

ಫ್ಯುಯಲ್ ಟ್ಯಾಂಕ್ ಅನ್ನು ಬದಲಾವಣೆ ಮಾಡಲಾಗಿಲ್ಲ. ಆದರೆ ಕಸ್ಟಮ್ ಸಿಲ್ವರ್ ಬಣ್ಣವನ್ನು ನೀಡಲಾಗಿದೆ. ಫ್ಯುಯಲ್ ಟ್ಯಾಂಕ್ ಮೇಲೆ ಹೊಸ ಡೆಕಲ್ಸ್ ಅನ್ನು ಸಹ ಅಳವಡಿಸಲಾಗಿದೆ. ಮಾಡಿಫೈ ಮಾಡಲಾದ ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಬೈಕಿನಲ್ಲಿ ಕಸ್ಟಮ್ ಸೀಟು‍‍ಗಳನ್ನು ಅಳವಡಿಸಲಾಗಿದೆ.

ಡ್ಯುಯಲ್ ಟೋನ್‍ ಬಣ್ಣದಲ್ಲಿ ಮಿಂಚಿದ ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್ 650

ಈ ಬೈಕಿನ ಸೈಡ್ ಪ್ಯಾನಲ್ ಫ್ಯುಯಲ್ ಟ್ಯಾಂಕ್‍‍ನಂತೆ ಹೊಸ ಬಣ್ಣವನ್ನು ಹೊಂದಿದೆ. ಇದಲ್ಲದೆ ಹೊಸ ಎಕ್ಸಾಸ್ಟ್ ಪೈಪ್ ಬ್ಲ್ಯಾಕ್ ಫಿನಿಶಿಂಗ್ ಅನ್ನು ಹೊಂದಿದೆ. ಇನ್ನೂ ಬೈಕಿನ ಕೆಳ ಭಾಗದಲ್ಲಿ ಬ್ಲ್ಯಾಕ್ ಬಣ್ಣವನ್ನು ಅಳವಡಿಸಲಾಗಿದೆ.

ಡ್ಯುಯಲ್ ಟೋನ್‍ ಬಣ್ಣದಲ್ಲಿ ಮಿಂಚಿದ ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್ 650

ಈ ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಡ್ಯುಯಲ್ ಟೋನ್ ಸಿಲ್ವರ್ ಬ್ಲ್ಯಾಕ್ ಟ್ರೇಟ್‍‍ಮೆಂಟ್ ಅನ್ನು ಹೊಂದಿದೆ. ಎಂಜಿನ್ ಫ್ರೇಮ್ ಮತ್ತು ಸಸ್ಪೆಂಕ್ಷನ್ ಯುನಿ‍‍ಟ್‍ ಕೂಡ ಬ್ಲ್ಯಾಕ್ ಬಣ್ಣವನ್ನು ಹೊಂದಿದೆ. ಈ ಬೈಕ್ ಆರ್ಟ್ ಡೆಕಲ್ಸ್ ಮತ್ತು ಮುಂಭಾಗದ ಮಡ್ಗಾರ್ಡ್‍ನಲ್ಲಿ ಸ್ಕುಲ್ ಆಕಾರದ ಡೆಕಾಲ್ ಅನ್ನು ಹೊಂದಿದೆ.

ಡ್ಯುಯಲ್ ಟೋನ್‍ ಬಣ್ಣದಲ್ಲಿ ಮಿಂಚಿದ ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್ 650

ಮಾಡಿಫೈ ಮಾಡಲಾದ ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಬೈಕಿನ ಎಂಜಿನ್‍ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಕಾಂಟಿ‍ನೆಂಟಲ್ ಜಿಟಿ 650 ಬೈಕ್‍ 649 ಸಿಸಿ ಏರ್/ಆಯಿಲ್ -ಕೂಲ್ಡ್ ಪ್ಯಾರೆಲೆಲ್-ಟ್ವಿನ್ ಎಂಜಿನ್ ಅನ್ನು ಹೊಂದಿವೆ.

ಡ್ಯುಯಲ್ ಟೋನ್‍ ಬಣ್ಣದಲ್ಲಿ ಮಿಂಚಿದ ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್ 650

ಈ ಎಂಜಿನ್ 47 ಬಿ‍ಹೆಚ್‍ಪಿ ಪವರ್ ಮತ್ತು 52 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ ಸ್ಟ್ಯಾಂಡರ್ಡ್ ಅಸಿಸ್ಟ್ ಕ್ಲಚ್‍‍‍ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಡ್ಯುಯಲ್ ಟೋನ್‍ ಬಣ್ಣದಲ್ಲಿ ಮಿಂಚಿದ ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್ 650

ಬೈಕ್ ಸವಾರರ ಸುರಕ್ಷತೆಗಾಗಿ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕಿನ ಮುಂಭಾಗದಲ್ಲಿ 320ಎಂಎಂ ಮತ್ತು ಹಿಂಭಾಗದಲ್ಲಿ 240ಎಂಎಂನ ಡಿಸ್ಕ್ ಬ್ರೇಕ್‍‍ಗಳನ್ನು ಅಳವಡಿಸಲಾಗಿದ್ದು, ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಡ್ಯುಯಲ್ ಟೋನ್‍ ಬಣ್ಣದಲ್ಲಿ ಮಿಂಚಿದ ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್ 650

ಇಂಟರ್‍‍ಸೆಪ್ಟರ್ 650 ಬೈಕಿನ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.2.51 ಲಕ್ಷಗಳಾಗಿದೆ. ಈ ಬೈಕ್ ಆಧುನಿಕ ಕ್ಲಾಸಿಕ್ ಲುಕ್ ಅನ್ನು ಹೊಂದಿದೆ. ಮಾಡಿಫೈ ಮಾಡಲಾದ ಬೈಕಿನ ಚಿತ್ರಗಳು ಫೇಸ್‍‍ಬುಕ್‍ನಲ್ಲಿ ಪ್ರಕಟವಾಗಿವೆ.

ಡ್ಯುಯಲ್ ಟೋನ್‍ ಬಣ್ಣದಲ್ಲಿ ಮಿಂಚಿದ ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್ 650

ಇಂಟರ್‍‍ಸೆಪ್ಟರ್ 650 ಸ್ಕ್ರ್ಯಾಂಬ್ಲರ್ ಶೈಲಿಯ ವಿನ್ಯಾಸವನ್ನು ಆಧರಿಸಿದೆ. ಈ ಬೈಕ್ 41ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಮತ್ತು ಹಿಂಭಾಗದಲ್ಲಿ 110ಎಂಎಂ ಟ್ವಿನ್ ಕಾಯಿಲ್-ಕವರ್, 650 ಟ್ವಿನ್ ಬೈಕ್‍ಗಳು 18 ಇಂಚಿನ 360 ಸ್ಪೋಕ್ ಅಲ್ಯುಮಿನಿಯಂ ಅಲಾಯ್ ವ್ಹೀಲ್‍‍ಗಳನ್ನು ಹೊಂದಿವೆ.

ಡ್ಯುಯಲ್ ಟೋನ್‍ ಬಣ್ಣದಲ್ಲಿ ಮಿಂಚಿದ ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್ 650

ರಾಯಲ್ ಎನ್‍ಫೀಲ್ಡ್ ಕಂಪನಿಯ ಹಳೆಯ ತಲೆಮಾರಿನ ಬೈಕ್‍‍ಗಳಾದ ದಿ ಕ್ಲಾಸಿಕ್, ಬುಲೆಟ್ ಮತ್ತು ಥಂಡರ್ ಬರ್ಡ್ ಇವುಗಳು ಹೊಸ ಅಲೆಯನ್ನು ಸೃಷ್ಟಿಸಿದ ಬೈಕ್‍‍ಗಳಾಗಿವೆ. ಕಂಪನಿಯು ಅದೇ ಹಳೆಯ ಪ್ರಸಿದ್ದಿಯನ್ನು ಪಡೆಯಲು ಈ ರಾಯಲ್ ಎನ್‍‍ಫೀಲ್ಡ್ ಬೈಕ್ ಅನ್ನು ಬಿಡುಗಡೆಗೊಳಿಸಿತ್ತು.

Most Read Articles

Kannada
English summary
Latest Modified Royal Enfield Interceptor 650 Looks Sleek And Sporty - Read in Kannada
Story first published: Tuesday, January 14, 2020, 17:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X