ಹೊಸ ರೈಡಿಂಗ್ ಜಾಕೆಟ್‌ಗಳನ್ನು ಬಿಡುಗಡೆಗೊಳಿಸಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಭಾರತದಲ್ಲಿ ತನ್ನ ಗ್ರಾಹಕರಿಗೆ ಹೊಚ್ಚಹೊಸ ರೈಡಿಂಗ್ ಜಾಕೆಟ್‌ಗಳನ್ನು ಪರಿಚಯಿಸಿದೆ. ಗ್ರಾಹಕರ ವಿವಿಧ ಅಗತ್ಯತೆಗಳು, ವಿಭಿನ್ನ ಹವಾಮಾನ ಮತ್ತು ಭೂಪ್ರದೇಶದ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಇತ್ತೀಚಿನ ರೈಡಿಂಗ್ ಜಾಕೆಟ್‌ಗಳನ್ನು ವಿನ್ಯಾಸಗೊಳಿಸಿದೆ ಎಂದು ಕಂಪನಿ ಹೇಳಿದೆ.

ಹೊಸ ರೈಡಿಂಗ್ ಜಾಕೆಟ್‌ಗಳನ್ನು ಬಿಡುಗಡೆಗೊಳಿಸಿದ ರಾಯಲ್ ಎನ್‌ಫೀಲ್ಡ್

ಹೊಸ ರಾಯಲ್ ಎನ್‌ಫೀಲ್ಡ್ 7 ವಿಭಿನ್ನ ರೀತಿಯ ರೈಡಿಂಗ್ ಜಾಕೆಟ್‌ಗಳನ್ನು ಪರಿಚಯಿಸಿದೆ. ಇದರ ಬೆಲೆಯು ರೂ.4,950 ರಿಂದ ಪ್ರಾರಂಭವಾಗಿ ರೂ.14,950 ಗಳಾವರಿಗಿದೆ. ಹೊಸ ರಾಯಲ್ ಎನ್‌ಫೀಲ್ಡ್ ರೈಡಿಂಗ್ ಜಾಕೆಟ್‌ಗಳನ್ನು ಸಿಇ ಪ್ರಮಾಣೀಕರಿಸಿದೆ. ಸಿಇ ಲೆವೆಲ್ 1 ಮತ್ತು ಸಿಇ ಲೆವೆಲ್ 2 ರೇಟಿಂಗ್‌ಗಳೊಂದಿಗೆ ಡಿ30 ಮತ್ತು ನಾಕ್ಸ್ ಬಾಡಿ ರಕ್ಷಾಕವಚವನ್ನು ಸಹ ಪಡೆಯುತ್ತದೆ.

ಹೊಸ ರೈಡಿಂಗ್ ಜಾಕೆಟ್‌ಗಳನ್ನು ಬಿಡುಗಡೆಗೊಳಿಸಿದ ರಾಯಲ್ ಎನ್‌ಫೀಲ್ಡ್

ಈ ರೈಡಿಂಗ್ ಜಾಕೆಟ್‌ಗಳನ್ನು ಇಂಪ್ಯಾಕ್ಟ್ ಪ್ರೊಟೆಕ್ಷನ್, ಎಗಾನೊಮಿಕ್ಸ್, ಟಿಯರ್ ಸ್ಟ್ರೇತ್, ಸೀಮ್ ಸ್ಟ್ರೇತ್ ಮತ್ತು ಡೈಮೆನ್ಷನ್ ಸ್ಟೆಬಿಲಿಟಿಗಳನು ಸಂಪೂರ್ಣವಾಗಿ ಪರೀಕ್ಷಿಸಲಾಗಿದೆ ಎಂದು ಚೆನ್ನೈ ಮೂಲದ ದ್ವಿಚಕ್ರ ವಾಹನ ದೈತ್ಯ ರಾಯಲ್ ಎನ್‌ಫೀಲ್ಡ್ ಹೇಳಿದೆ.

MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಹೊಸ ರೈಡಿಂಗ್ ಜಾಕೆಟ್‌ಗಳನ್ನು ಬಿಡುಗಡೆಗೊಳಿಸಿದ ರಾಯಲ್ ಎನ್‌ಫೀಲ್ಡ್

ಇನ್ನು ಈ ಹೊಸ ರೈಡಿಂಗ್ ಜಾಕೆಟ್‌ಗಳನ್ನು ಬಿಡುಗಡೆಗೊಳಿಸಿ ರಾಯಲ್ ಎನ್‌ಫೀಲ್ಡ್ ಅಪ್ಯಾರಲ್ ಬಿಸಿನೆಸ್ ಮುಖ್ಯಸ್ಥ ಪುನೀತ್ ಸೂದ್ ಅವರು ಮಾತನಾಡಿ, ರಾಯಲ್ ಎನ್‌ಫೀಲ್ಡ್ ಕಂಪನಿಯು ಸದಾ ಸವಾರರ ಸುರಕ್ಷತೆಯ ಬಗ್ಗೆ ಸ್ಪಷ್ಟ ಗಮನವನ್ನು ಇಟ್ಟುಕೊಂಡು ಸವಾರರಿಗೆ ಒಟ್ಟಾರೆ ಮೋಟರ್ ಸೈಕ್ಲಿಂಗ್ ಅನುಭವವನ್ನು ಹೆಚ್ಚಿಸುವತ್ತ ಗಮನ ಹರಿಸಿದೆ.

ಹೊಸ ರೈಡಿಂಗ್ ಜಾಕೆಟ್‌ಗಳನ್ನು ಬಿಡುಗಡೆಗೊಳಿಸಿದ ರಾಯಲ್ ಎನ್‌ಫೀಲ್ಡ್

ಹೊಸದಾಗಿ ಪ್ರಾರಂಭಿಸಲಾದ ರೈಡಿಂಗ್ ಜಾಕೆಟ್‌ಗಳ ಕಾರ್ಯಕ್ಷಮತೆ ಮತ್ತು ಕಂಫರ್ಟ್ ಅನ್ನು ರೈಡರಿಗೆ ಆರಾಮದಾಯಕ ಮತ್ತು ಸೊಗಸಾದ ಅನುಭವನ್ನು ನೀಡುವಂತೆ ರಚಿಸಲಾಗಿದೆ. ಹೊಸ ಸಿಇ ಪ್ರಮಾಣೀಕೃತ ರೈಡಿಂಗ್ ಜಾಕೆಟ್‌ಗಳು ಜಾಗತಿಕ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿರುತ್ತವೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ರೈಡಿಂಗ್ ಜಾಕೆಟ್‌ಗಳನ್ನು ಬಿಡುಗಡೆಗೊಳಿಸಿದ ರಾಯಲ್ ಎನ್‌ಫೀಲ್ಡ್

ಇದು ಕೈಗೆಟುಕುವ, ಸುಲಭವಾಗಿ ಬಳಸುವಂತೆ ಮತ್ತು ಸವಾರರ ವೈವಿಧ್ಯಮಯ ಅಗತ್ಯಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಸವಾರರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಆ ಮೂಲಕ ಅವರ ಉತ್ತಮ ರೈಡಿಂಗ್ ಅನುಭವನ್ನು ನೀಡುತ್ತದೆ ಎಂದು ಹೇಳಿದರು.

New Royal Enfield Jacket Collection Prices
Streetwind V2 (City Range) ₹4,950
Windfarer (City Range) ₹6,950
Explorer V3 (Highway Touring Range) ₹8,950 (CE-rated)
Stormraider (Highway Touring Range) ₹9,950 (CE-rated)
Sanders (Highway Touring Range) ₹11,950 (CE-rated)
Khardung La V2 (All-Terrain Range) ₹12,950 (CE-rated)
Nirvik (All-Terrain Range) ₹14,950 (CE-rated)
ಹೊಸ ರೈಡಿಂಗ್ ಜಾಕೆಟ್‌ಗಳನ್ನು ಬಿಡುಗಡೆಗೊಳಿಸಿದ ರಾಯಲ್ ಎನ್‌ಫೀಲ್ಡ್

ಹೊಸ ರಾಯಲ್ ಎನ್‌ಫೀಲ್ಡ್ 7 ವಿಭಿನ್ನ ರೀತಿಯ ರೈಡಿಂಗ್ ಜಾಕೆಟ್‌ಗಳು ಬೈಕ್ ರೈಡರ್ ಗಳಿಗೆ ದೂರ ಪ್ರಯಾಣ ಮಾಡುವಾಗ ಇದು ಉತಮ ಆಯ್ಕೆಯಾಗಿದೆ. ನೋಡಲು ಫ್ಯಾಶನ್ ಬಲ್ ಆಗಿರುವ ಜಾಕೆಟ್‌ಗಳು ಸವಾರಿ ವೇಳೆ ಆರಾಮದಾಯಕ ಅನುಭವ ಮತ್ತು ಹೆಚ್ಚಿನ ಸುರಕ್ಷತೆಯನ್ನು ನೀಡುತ್ತದೆ.

ಹೊಸ ರೈಡಿಂಗ್ ಜಾಕೆಟ್‌ಗಳನ್ನು ಬಿಡುಗಡೆಗೊಳಿಸಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಕಂಪನಿಯು ಮೆಟಿಯೊರ್ 350 ಬೈಕ್ ಟೀಸರ್ ಮೂಲಕ ಹೊಸ ಮೆಟಿಯೊರ್ 350 ಬೈಕಿನ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದೆ. ಈ ಹೊಸ ರಾಯಲ್ ಎನ್‌ಫೀಲ್ಡ್ ಮೆಟಿಯೊರ್ 350 ಬೈಕ್ಲ್ ಮುಂದಿನ ತಿಂಗಳು ನವೆಂಬರ್ 6ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ.

ಹೊಸ ರೈಡಿಂಗ್ ಜಾಕೆಟ್‌ಗಳನ್ನು ಬಿಡುಗಡೆಗೊಳಿಸಿದ ರಾಯಲ್ ಎನ್‌ಫೀಲ್ಡ್

ಹೊಸ ರಾಯಲ್ ಎನ್‌ಫೀಲ್ಡ್ ರೈಡಿಂಗ್ ಜಾಕೆಟ್ ಕಲೆಕ್ಷನ್ ಈಗ ದೇಶದ ಎಲ್ಲ ಡೀಲರ್ ಗಳ ಬಳಿ ಲಭ್ಯವಿರಲಿದೆ. ಗ್ರಾಹಕರು ಕಂಪನಿಯ ಆನ್‌ಲೈನ್ ಸ್ತೋರ್ ಮತ್ತು ಅಮೆಜಾನ್‌ನಿಂದ ಖರೀದಿಸಬಹುದು ಅದೇ ರೀತಿ ಸೆಂಟ್ರಲ್ ಮತ್ತು ಶಾಪರ್ಸ್ ಸ್ಟಾಪ್ ಮಳಿಗೆಗಳಲ್ಲಿಯು ಖರೀದಿಸಬಹುದಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

Most Read Articles

Kannada
English summary
Brand-new Royal Enfield Riding Jacket Collection launched in India. Read In kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X