ಹೊಸ ಸೈಲೆನ್ಸರ್ ಹೊಂದಲಿವೆ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕುಗಳು

ರಾಯಲ್ ಎನ್‌ಫೀಲ್ಡ್ ಬೈಕುಗಳ ಸರಣಿಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಮಾದರಿಗಳಲ್ಲಿ ಕ್ಲಾಸಿಕ್ 350 ಅಗ್ರಾಸ್ಥಾನದಲ್ಲಿದೆ. ಅಲ್ಲದೇ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಬೈಕುಗಳಲ್ಲಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಕೂಡ ಒಂದಾಗಿದೆ.

ಹೊಸ ಸೈಲೆನ್ಸರ್ ಹೊಂದಲಿವೆ ಕ್ಲಾಸಿಕ್ 350 ಬೈಕುಗಳು

ಭಾರತದಲ್ಲಿ ಆರೇಳು ದಶಕಗಳಿಂದಲೂ ಅದೇ ಕ್ರೇಜ್‌, ಅದೇ ಟ್ರೆಂಡ್‌ ಉಳಿಸಿಕೊಂಡು ಬಂದಿರುವುದು ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳ ಹೆಗ್ಗಳಿಕೆ. ರಾಯಲ್‌ ಎನ್‌ಫೀಲ್ಡ್‌ ಬೈಕ್ ತನ್ನ ಆಕರ್ಷಕ್ ಲುಕ್ ಮತ್ತು ಸೌಂಡ್ ನಿಂದಲ್ಲೇ ಎಲ್ಲರ ಗಮನಸೆಳೆದ ಬೈಕ್. ಇದೀಗ ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ಸರಣಿಯಲ್ಲಿರುವ ಜನಪ್ರಿಯ ಕ್ಲಾಸಿಕ್ 350 ಬೈಕ್‍ಗಾಗಿ ಆಫ್ಟರ್ ಮಾರ್ಕೆಟ್ ಸೈಲೆನ್ಸರ್‌ಗಳನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಬರೊಬ್ಬರಿ 16 ವಿಭಿನ್ನ ಸೈಲೆನ್ಸರ್‌ಗಳಿವೆ.

ಹೊಸ ಸೈಲೆನ್ಸರ್ ಹೊಂದಲಿವೆ ಕ್ಲಾಸಿಕ್ 350 ಬೈಕುಗಳು

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿನ ಸೈಲೆನ್ಸರ್‌ಗಳ ಬೆಲೆ ರೂ.3,300 ದಿಂದ ರೂ.3,600 ಗಳಾಗಿದೆ. ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕಿನ ಮಾಲೀಕರು ಈಗ ವಿವಿಧ ರೀತಿಯ ಸೈಲೆನ್ಸರ್‌ಗಳನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಹೊಸ ಸೈಲೆನ್ಸರ್ ಹೊಂದಲಿವೆ ಕ್ಲಾಸಿಕ್ 350 ಬೈಕುಗಳು

ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ವೆಬ್‌ಸೈಟ್ ನಲ್ಲಿ ಹೂಸ ಸೈಲೆನ್ಸರ್‌ಗಳ ಬಗ್ಗೆ ಮಾಹಿತಿ ನೀಡಿದೆ. ಸೈಲೆನ್ಸರ್‌ಗಳ ಆಯ್ಕೆಯಲ್ಲಿ ಸ್ಟ್ರೈಟ್ ಕಟ್, ಸ್ಲ್ಯಾಷ್ ಕಟ್ ಮತ್ತು ಟ್ಯಾಪರ್ಡ್ ಎಕ್ಸಾಸ್ಟ್‌ಗಳನ್ನು ಒಳಗೊಂಡಿವೆ.

ಹೊಸ ಸೈಲೆನ್ಸರ್ ಹೊಂದಲಿವೆ ಕ್ಲಾಸಿಕ್ 350 ಬೈಕುಗಳು

ಬಿ‍ಎಸ್ 6 ಕ್ಲಾಸಿಕ್ 350 ಬೈಕ್ ಹೊಸ ಎಂಜಿನ್‍‍ನೊಂದಿಗೆ ಹಲವಾರು ಅಪ್‍‍ಡೇಟ್‍‍ಗಳನ್ನು . ಇವುಗಳಲ್ಲಿ ಹೊಸ ಫೀಚರ್‍‍ಗಳು, ಎಕ್ವಿಪ್‍‍ಮೆಂಟ್‍‍ಗಳು, ಹೊಸ ಬಣ್ಣಗಳು ಸೇರಿವೆ. ಪ್ರಮುಖ ಬದಲಾವಣೆಯೆಂದರೆ ಹೊಸ ಬೈಕಿನಲ್ಲಿ 346 ಸಿಸಿಯ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ.

ಹೊಸ ಸೈಲೆನ್ಸರ್ ಹೊಂದಲಿವೆ ಕ್ಲಾಸಿಕ್ 350 ಬೈಕುಗಳು

ಹೊಸ ಕ್ಲಾಸಿಕ್ 350 ಬೈಕಿನಲ್ಲಿರುವ 346 ಸಿಸಿಯ ಎಂಜಿನ್ 19.8 ಬಿ‍‍ಹೆಚ್‍‍ಪಿ ಪವರ್ ಹಾಗೂ 28 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡಿನ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಹೊಸ ಸೈಲೆನ್ಸರ್ ಹೊಂದಲಿವೆ ಕ್ಲಾಸಿಕ್ 350 ಬೈಕುಗಳು

ಹಳೆಯ ಬೈಕಿನಲ್ಲಿ ಕಾರ್ಬುರೇಟರ್‍‍ಗಳನ್ನು ಅಳವಡಿಸಲಾಗಿದ್ದರೆ, ಹೊಸ ಬೈಕಿನಲ್ಲಿ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅಳವಡಿಸಲಾಗಿದೆ. ಇದರಿಂದಾಗಿ ಬಿ‍ಎಸ್ 6 ಮಾಲಿನ್ಯ ನಿಯಮಗಳಿಗೆ ಹೊಂದಿಕೊಳ್ಳಲು ಸಹಾಯವಾಗಲಿದೆ. ಎಂಜಿನ್‍‍ನ ಹೊರತಾಗಿ ಹೊಸ ಬೈಕ್ ಅಲಾಯ್ ವ್ಹೀಲ್‍, ಸ್ಟೀಲ್ತ್ ಬ್ಲಾಕ್ ಹಾಗೂ ಕ್ರೋಮ್ ಬ್ಲಾಕ್‍ ಎಂಬ ಎರಡು ಹೊಸ ಬಣ್ಣಗಳನ್ನು ಹೊಂದಿದೆ.

MOST READ: ಹೊಸ ಮಹೀಂದ್ರಾ ಮೊಜೊ 300 ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಹೊಸ ಸೈಲೆನ್ಸರ್ ಹೊಂದಲಿವೆ ಕ್ಲಾಸಿಕ್ 350 ಬೈಕುಗಳು

ಹೊಸ ಬಣ್ಣಗಳ ಜೊತೆಗೆ ಬಿಎಸ್ 6 ಕ್ಲಾಸಿಕ್ 350 ಬೈಕ್ ಅನ್ನು ಸಿಗ್ನಲ್ಸ್ ಏರ್ ಬೋರ್ನ್ ಬ್ಲೂ, ಸಿಗ್ನಲ್ಸ್ ಸ್ಟಾರ್ಮ್ ರೈಡರ್ ಸ್ಯಾಂಡ್, ಗನ್ ಮೆಟಲ್ ಗ್ರೇ ಹಾಗೂ ಕ್ಲಾಸಿಕ್ ಬ್ಲ್ಯಾಕ್ ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತಿವೆ.

ಹೊಸ ಸೈಲೆನ್ಸರ್ ಹೊಂದಲಿವೆ ಕ್ಲಾಸಿಕ್ 350 ಬೈಕುಗಳು

ಕ್ಲಾಸಿಕ್ 350 ಬೈಕಿನ ಗ್ರಾಹಕರು ಆಫ್ಟರ್ ಮಾರ್ಕೆಟ್ ಸೈಲೆನ್ಸರ್‌ಗಳಿಗಾಗಿ ರಾಯಲ್ ಎನ್‌ಫೀಲ್ಡ್ ಡೀಲರ್ ಬಳಿ ತೆರಳಿ ಆರ್ಡರ್ ಮಾಡಬಹುದಾಗಿದೆ. ಇನ್ನು ಈ ಆಫ್ಟರ್ ಮಾರ್ಕೆಟ್ ಸೈಲೆನ್ಸರ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ವೆಬ್‌ಸೈಟ್ ನಲ್ಲಿ ನೀಡಲಾಗಿದೆ.

Most Read Articles

Kannada
English summary
Royal Enfield Launches Silencers For Classic 350 Starting St Rs 330. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X