ಕ್ಲೌಡ್ ಸ್ಟೋರೆಜ್ ಸಿಸ್ಟಂ ಹೊಂದಿದೆ ಸ್ಮಾರ್ಟ್ರಾನ್ ಕಂಪನಿಯ ಈ ಸ್ಮಾರ್ಟ್ ಸೈಕಲ್
ಸ್ಮಾರ್ಟ್ರಾನ್ ಇಂಡಿಯಾ ಕಂಪನಿಯು ತನ್ನ ಟಿ ಬೈಕ್ ಒನ್ ಪ್ರೊ ಎಲೆಕ್ಟ್ರಿಕ್ ಸೈಕಲ್ ಅನ್ನು ಭಾರತದಲ್ಲಿ ಅನಾವರಣಗೊಳಿಸಿದೆ. ರೈಡ್ ಶೇರ್ ಅಪ್ಲಿಕೇಶನ್ ಮೂಲಕ 14 ನಗರಗಳಲ್ಲಿ ಸವಾರಿ ಮಾಡಲು ಕಂಪನಿಯು ಈ ಬೈಕನ್ನು ನಿಯೋಜಿಸಲಿದೆ.

ಇದಕ್ಕಾಗಿ ಕಂಪನಿಯು ಬೆಲೈವ್ ರೈಡ್ ಬುಕಿಂಗ್ ಪ್ಲಾಟ್‌ಫಾರಂನೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ. ಟಿ ಬೈಕ್ ಒನ್ ಪ್ರೊ ಅನ್ನು ವಿತರಣಾ ಪಾಲುದಾರ ಹಾಗೂ ಇ-ಕಾಮರ್ಸ್ ಮತ್ತು ರೈಡ್ ಶೇರಿಂಗ್ ಪ್ಲಾಟ್‌ಫಾರಂ ಆಗಿ ತರಲಾಗಿದೆ. ಈ ಎಲೆಕ್ಟ್ರಿಕ್ ಸೈಕಲ್ ಹಗುರವಾಗಿರುವುದರಿಂದ ಅದನ್ನು ನಿರ್ವಹಿಸುವುದು ತುಂಬಾ ಸುಲಭವೆಂದು ಕಂಪನಿ ಹೇಳಿದೆ.

ಟ್ರಾಫಿಕ್ ಜಾಮ್ ಹೊಂದಿರುವ ನಗರಗಳಲ್ಲಿ ಈ ಸೈಕಲ್ ಅನ್ನು ಸುಲಭವಾಗಿ ಸವಾರಿ ಮಾಡಬಹುದು. ಈ ಸೈಕಲ್ ಕೊನೆಯ ಮೈಲಿ ಸಂಪರ್ಕವನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ನೀಡುತ್ತದೆ ಎಂದು ಹೇಳಲಾಗಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಈ ಸೈಕಲ್ ಅನ್ನು ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಬೈಕ್‌ಗಳ ರೀತಿಯಲ್ಲಿ ಚಾಲನೆ ಮಾಡುವುದು ಸುಲಭವೆಂದು ಕಂಪನಿ ಹೇಳಿದೆ. ಈ ಸೈಕಲ್‌ನಲ್ಲಿ ಗೇರುಗಳಿರುವುದರಿಂದ ಬೇರೆ ಬೇರೆ ವೇಗದಲ್ಲಿ ಚಾಲನೆ ಮಾಡಬಹುದು. ಟ್ರಾನ್-ಎಕ್ಸ್ ಪ್ಲಾಟ್‌ಫಾರಂನಲ್ಲಿ ಕಂಪನಿಯು ಹೊಸ ವಾಹನಗಳನ್ನು ಸಿದ್ಧಪಡಿಸುತ್ತಿದೆ ಎಂದು ಸ್ಮಾರ್ಟ್ರಾನ್‌ನ ಸಂಸ್ಥಾಪಕ ಹಾಗೂ ಸಿಇಒ ಮಹೇಶ್ ಲಿಂಗರೆಡ್ಡಿ ಹೇಳಿದ್ದಾರೆ.

ಕಂಪನಿಯು ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಸೈಕಲ್ ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ ವಿದೇಶಿ ಮಾರುಕಟ್ಟೆಯಲ್ಲಿಯೂ ಬಿಡುಗಡೆಗೊಳಿಸಲಿದೆ. ಕಂಪನಿಯು ಸದ್ಯಕ್ಕೆ ತನ್ನ ವಾಹನಗಳನ್ನು ಭೂತಾನ್, ಮೆಕ್ಸಿಕೊ ಹಾಗೂ ಅಮೆರಿಕಾಗಳಲ್ಲಿ ಮಾರಾಟ ಮಾಡುತ್ತಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಟಿ ಬೈಕ್ ಒನ್ ಪ್ರೊನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತವಾದ ಕೆಲವು ಸ್ಮಾರ್ಟ್ ಫೀಚರ್'ಗಳಿವೆ. ಇದರಿಂದ ರೈಡ್ ಪಾಲುದಾರರಿಗೆ ಅನುಕೂಲವಾಗಲಿದೆ. ಈ ಸೈಕಲ್ ಕ್ಲೌಡ್ ಸ್ಟೋರೆಜ್ ಸಿಸ್ಟಂ ಅನ್ನು ಆಧರಿಸಿದೆ. ಈ ಸಿಸ್ಟಂ ಸೈಕಲಿಗೆ ಸಂಬಂಧಿಸಿದ ಪ್ರತಿಯೊಂದು ಚಟುವಟಿಕೆಯನ್ನು ದಾಖಲಿಸುತ್ತದೆ.

ಈ ಸಿಸ್ಟಂ ಸೈಕಲ್ ಸ್ಪೀಡ್, ಲೋಕೇಷನ್, ಡ್ರೈವ್ ಶ್ರೇಣಿ, ಬ್ಯಾಟರಿ ಲೆವೆಲ್, ರೈಡ್'ನ ಇತಿಹಾಸಕ್ಕೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುತ್ತದೆ. ಈ ಸೈಕಲ್ ಅನ್ನು ದೇಶದ ಅನೇಕ ನಗರಗಳಲ್ಲಿ ರೈಡಿಂಗ್ ಪಾಲುದಾರರಿಗಾಗಿ ತಯಾರಿಸಲಾಗುತ್ತಿದೆ.


Click it and Unblock the Notifications