ಥಂಡರ್ ಡಿ7 ಡಿಕೋರ್ ಫುಲ್-ಫೇಸ್ ಹೆಲ್ಮೆಟ್ ಬಿಡುಗಡೆ ಮಾಡಿದ ಸ್ಟಡ್ಸ್
ಸ್ಟಡ್ಸ್ ಕಂಪನಿಯು ತನ್ನ ಜನಪ್ರಿಯ ಥಂಡರ್ ಡಿ ಸರಣಿಯಲ್ಲಿ ಹೊಸದಾಗಿ ಥಂಡರ್ ಡಿ7 ಡಿಕೋರ್ ಹೆಲ್ಮೆಟ್ ಬಿಡುಗಡೆ ಮಾಡಿದ್ದು, ಹೊಸ ವಿನ್ಯಾಸ ಹೊಂದಿರುವ ಥಂಡರ್ ಡಿ7 ಹೆಲ್ಮೆಟ್ ಮಾದರಿಯು ಬಿಎಸ್ಐ ಸ್ಟ್ಯಾಂಡರ್ಡ್ ನಿಯಮಾನುಸಾರವಾಗಿ ಅಭಿವೃದ್ದಿ ಹೊಂದಿದೆ.

ಸ್ಟಡ್ಸ್ ಕಂಪನಿಯ ಥಂಡರ್ ಡಿ ಸರಣಿಯಲ್ಲಿರುವ ಪ್ರಮುಖ ಹೆಲ್ಮೆಟ್ ಮಾದರಿಗಳಲ್ಲೇ ತುಸು ವಿಭಿನ್ನ ವಿನ್ಯಾಸ ಹೊಂದಿರುವ ಥಂಡರ್ ಡಿ7 ಡಿಕೋರ್ ಹೆಲ್ಮೆಟ್ ಮಾದರಿಯು ಬೈಕ್ ಸವಾರರಿಗೆ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸಿದ್ದು, ಹೆಲ್ಮೆಟ್ ಬಳಕೆಯು ಸುಲಭವಾಗಿಸಲು ಒಳಭಾಗದ ವಿನ್ಯಾಸದಲ್ಲಿ ಸಾಕಷ್ಟು ಹೊಸತನ ಪರಿಚಯಿಸುವ ಮೂಲಕ ಬೈಕ್ ಸವಾರರನ್ನು ಸೆಳೆಯುತ್ತಿದೆ.

ಸ್ಟಡ್ಸ್ ಕಂಪನಿಯ ಥಂಡರ್ ಡಿ ಸರಣಿಯಲ್ಲಿರುವ ಪ್ರಮುಖ ಹೆಲ್ಮೆಟ್ ಮಾದರಿಗಳಲ್ಲೇ ತುಸು ವಿಭಿನ್ನ ವಿನ್ಯಾಸ ಹೊಂದಿರುವ ಥಂಡರ್ ಡಿ7 ಡಿಕೋರ್ ಹೆಲ್ಮೆಟ್ ಮಾದರಿಯು ಬೈಕ್ ಸವಾರರಿಗೆ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸಿದ್ದು, ಹೆಲ್ಮೆಟ್ ಬಳಕೆಯು ಸುಲಭವಾಗಿಸಲು ಒಳಭಾಗದ ವಿನ್ಯಾಸದಲ್ಲಿ ಸಾಕಷ್ಟು ಹೊಸತನ ಪರಿಚಯಿಸುವ ಮೂಲಕ ಬೈಕ್ ಸವಾರರನ್ನು ಸೆಳೆಯುತ್ತಿದೆ.

ಮತ್ತೊಂದು ಪ್ರಮುಖ ವಿಚಾರವೆಂದರೆ ಥಂಡರ್ ಡಿ ಸರಣಿಯಲ್ಲಿ ಥಂಡರ್ ಡಿ6 ಡಿಕೋರ್ ಹೆಲ್ಮೆಟ್ ಮಾದರಿಯಂತೆಯೇ ಬೆಲೆ ಹೊಂದಿರುವ ಥಂಡರ್ ಡಿ7 ಡಿಕೋರ್ ಹೆಲ್ಮೆಟ್ ಮಾದರಿಯು ಡಿ6 ಮಾದರಿಗಿಂತಲೂ ಕೆಲವು ಹೆಚ್ಚುವರಿ ಫೀಚರ್ಸ್ ಪಡೆದುಕೊಂಡಿದೆ.

ಸ್ಟಡ್ಸ್ ಕಂಪನಿಯು ಥಂಡರ್ ಡಿ7 ಡಿಕೋರ್ ಹೆಲ್ಮೆಟ್ ಮಾದರಿಯನ್ನು ಮೀಡಿಯಂ, ಲಾರ್ಜ್ ಮತ್ತು ಎಕ್ಸ್ಟಾ ಲಾರ್ಜ್ ವಿನ್ಯಾಸದಲ್ಲಿ ಬಿಡುಗಡೆ ಮಾಡಿದ್ದು, ಬೈಕ್ ಸವಾರರು ತಮ್ಮ ಬೇಡಿಕೆಗೆ ಅನುಗುಣವಾಗಿ ಮೀಡಿಯಂ(570-ಎಂಎಂ), ಲಾರ್ಜ್(580-ಎಂಎಂ) ಮತ್ತು ಎಕ್ಸ್ಟಾ ಲಾರ್ಜ್(600-ಎಂಎಂ) ಮಾದರಿಗಳನ್ನು ಖರೀದಿ ಮಾಡಬಹುದಾಗಿದೆ.

ಜೊತೆಗೆ ಥಂಡರ್ ಡಿ7 ಹೆಲ್ಮೆಟ್ ಒಟ್ಟು ಏಳು ವಿವಿಧ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ನಿಯೊನ್ ಯೆಲ್ಲೊ, ರೆಡ್, ಮ್ಯಾಟೆ ಟಾರ್ಕೋಸ್, ಮ್ಯಾಟೆ ಬ್ಲ್ಯೂ, ಮ್ಯಾಟೆ ನಿಯೊನ್ ಯೆಲ್ಲೊ ಮತ್ತು ಮ್ಯಾಟೆ ನಿಯೊನ್ ಗ್ರಿನ್ ಬಣ್ಣಗಳನ್ನು ಹೊಂದಿದೆ. ಥಂಡರ್ ಡಿ7 ಡಿಕೋರ್ ಹೆಲ್ಮೆಟ್ ಮಾದರಿಯು ಫುಲ್ ಫೇಸ್ ಹೆಲ್ಮೆಟ್ ಮಾದರಿಯಾಗಿದ್ದು, ಕ್ವಿಕ್ ರಿಲೀಸ್ ಮಾಡಬಹುದಾದ ಬಕಲ್ ಹೊಂದಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಥಂಡರ್ ಡಿ7 ಡಿಕೋರ್ ಹೆಲ್ಮೆಟ್‌ನಲ್ಲಿ ಮಿರರ್ ವಿಸರ್, ಯುವಿ ರೆಸಿಸ್ಟೆಂಟ್ ಪೇಂಟ್, ವಿಸ್ತೃತ ಪಾಲಿಸ್ಟೈರೀನ್, ಮೇಲ್ಭಾಗ ಎರಡು ವೆಂಟಿಲೆೇಷನ್ ಸಿಸ್ಟಂ, ಹಿಂಬದಿಯಲ್ಲಿ ಹಾಟ್ ಏರ್ ಎಕ್ಸಾಸ್ಟ್ ಮತ್ತು ಚಿನ್ ಸ್ಟ್ಯಾಪ್‌ನೊಂದಿಗೆ ಗಲ್ಲದ ಭಾಗಕ್ಕೆ ಪೂರ್ಣ ಪ್ರಮಾಣದ ಸುರಕ್ಷತೆ ನೀಡುತ್ತದೆ.

ಇದರೊಂದಿಗೆ ಹೆಲ್ಮೆಟ್ ಒಳಭಾಗದಲ್ಲಿ ಪ್ರೀಮಿಯಂ ಫ್ರ್ಯಾಬಿಕ್ ಬಟ್ಟೆಯನ್ನು ಬಳಕೆ ಮಾಡಲಾಗಿದ್ದು, ಬೇಸಿಗೆ ಮತ್ತು ಮಳೆಗಾಲದ ಸಂದರ್ಭದಲ್ಲೂ ಯಾವುದೇ ಕಿರಿಕಿರಿಯಿಲ್ಲದೆ ಈ ಹೆಲ್ಮೆಟ್ ಅನ್ನು ಬಳಕೆ ಮಾಡಬಹುದಾಗಿದೆ.
MOST READ: ಅತಿ ಕಡಿಮೆ ಬೆಲೆಯಲ್ಲಿ ಬಿಎಸ್ಐ ಸರ್ಟಿಫೈಡ್ ಟ್ರೆಡ್ ಹೆಲ್ಮೆಟ್ ಬಿಡುಗಡೆ

ಈ ಮೂಲಕ ಗುಣಮಟ್ಟ, ವಿಶ್ವಾಸಾರ್ಹತೆಯೊಂದಿಗೆ ಮತ್ತೊಮ್ಮೆ ಗ್ರಾಹಕರ ಆಯ್ಕೆ ಮುಂಚೂಣಿ ಸಾಧಿಸಲು ಸಿದ್ದವಾಗಿರುವ ಸ್ಟಡ್ಸ್ ಕಂಪನಿಯು ಈಗಾಗಲೇ ಹಲವಾರು ಮಾದರಿಯ ಹೆಲ್ಮೆಟ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಇತ್ತೀಚೆಗೆ ಬಿಎಸ್ಐ(ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ಸೂಚಿಸಿರುವ ಹೊಸ ಸುರಕ್ಷಾ ಮಾರ್ಗಸೂಚಿಯೊಂದಿಗೆ ಥಂಡರ್ ಡಿ7 ಡಿಕೋರ್ ಹೆಲ್ಮೆಟ್ ಸಿದ್ದಪಡಿಸಿದೆ.


Click it and Unblock the Notifications








