ಹೊಸ ಸುಜುಕಿ ಬರ್ಗ್‍ಮನ್ 200 ಸ್ಕೂಟರ್ ಬಿಡುಗಡೆ
ಸುಜುಕಿ ಮೋಟಾರ್‌ಸೈಕಲ್ ಸಂಸ್ಥೆಯು ಬರ್ಗ್‍ಮನ್ 200 ಪ್ರೀಮಿಯಂ ಸ್ಕೂಟರ್ ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಬರ್ಗ್‍ಮನ್ 200 ಸ್ಕೂಟರ್ ಅನ್ನು ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಳಿಸಲಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬರ್ಗ್‍ಮನ್ 200 ಪ್ರೀಮಿಯಂ ಸ್ಕೂಟರ್ ಮ್ಯಾಟ್ ಫೈಬ್ರೊಯಿನ್ ಗ್ರೇ ಮೆಟಾಲಿಕ್, ಮ್ಯಾಟ್ ಬ್ಲ್ಯಾಕ್ ಮೆಟಾಲಿಕ್ ಮತ್ತು ಬ್ರಿಲಿಯಂಟ್ ವೈಟ್ ಎಂಬ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿತ್ತು. ಮೊದಲ ಎರಡು ಬಣ್ಣಗಳ ಆಯ್ಜೆ ಬದಲಾಗಿ ಟೈಟಾನ್ ಬ್ಲ್ಯಾಕ್ ಮತ್ತು ಮ್ಯಾಟ್ ಪ್ಲಾಟಿನಂ ಸಿಲ್ವರ್ ಮೆಟಾಲಿಕ್ ಎಂಬ ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಳಿಸಿದೆ.

ಬಿಡುಗಡೆಯಾದ ಬರ್ಗ್‍ಮನ್ 200 ಪ್ರೀಮಿಯಂ ಸ್ಕೂಟರ್‍ನಲ್ಲಿ ಹೊಸ ಬಣ್ಣಗಳ ಹೊರತುಪಡಿಸಿ ಹೆಚ್ಚಿನ ಬದಲಾವಣೆಗಳನ್ನು ಮಾಡಲಾಗಿಲ್ಲ. ಹೊಸ ಬರ್ಗ್‍ಮನ್ 200 ಸ್ಕೂಟರ್‍ನಲ್ಲಿ ಎರಡು ಡ್ಯುಯಲ್ ಸೆಟಪ್ ಮತ್ತು ಮುಂಭಾಗದಲ್ಲಿ ವಿಂಡ್‌ಸ್ಕ್ರೀನ್ ಅನ್ನು ಹೊಂದಿದೆ.
MOST READ: ಬಿಎಸ್-6 ಎಂಜಿನ್‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ಹೊಸ ಬರ್ಗ್‍ಮನ್ 200 ಸ್ಕೂಟರ್‍ನಲ್ಲಿ ದೊಡ್ಡ ಸೀಟ್ ಅನ್ನು ಹೊಂದಿರುವುದರಿಂದ ಸವಾರನಿಗೆ ಮತ್ತು ಪಿಲಿಯನ್‍ಗೂ ಆರಾಮದಾಯಕವಾಗಿ ಸಂಚರಿಸಬಹುದು. ಸೀಟಿನ ಒಳಭಾಗದಲ್ಲಿ 41-ಲೀಟರ್ ಸ್ಪೇಸ್ ಅನ್ನು ಹೊಂದಿದೆ.

ಇಷ್ಟು ದೊಡ್ಡ ಸ್ಪೇಸ್ ಇರುವುದರಿಂದ ಎರಡು ಹೆಲ್ಮೆಟ್ ಅನ್ನು ಇದರ ಒಳಗಡೆ ಇಡಬಹುದಾಗಿದೆ. ಹೊಸ ಬರ್ಗ್‍ಮನ್ 200 ಸ್ಕೂಟರ್‍ನಲ್ಲಿ ಮುಂಭಾಗದ ಪಾಕೆಟ್ ಸಹ ಸಾಕಷ್ಟು ಸ್ಪೇಸ್ ಅನ್ನು ಹೊಂದಿದೆ. ಇನ್ನು ಇದರಲ್ಲಿ 12 ವಿ ಡಿಸಿ ಸಾಕೆಟ್ ಅನ್ನು ಸಹ ಹೊಂದಿದೆ.
MOST READ: ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಹೊಸ ಬರ್ಗ್‍ಮನ್ 200 ಸ್ಕೂಟರ್ 199 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಈ ಎಂಜಿನ್ 18 ಬಿಹೆಚ್‍ಪಿ ಪವರ್ ಮತ್ತು 16 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಬಹುದು. ಹೊಸ ಬರ್ಗ್‍ಮನ್ 200 ಸ್ಕೂಟರ್ ಪ್ರತಿ ಲೀಟರ್ ಗೆ 36 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಈ ಎಂಜಿನ್ ನಲ್ಲಿ ಫ್ಯೂಲ್ ಇಂಜೆಕ್ಷನ್ ಸಿಸ್ಟಂ ಅನ್ನು ಹೊಂದಿದೆ.

ಹೊಸ ಬರ್ಗ್‍ಮನ್ 200 ಸ್ಕೂಟರ್ ಬೆಲೆಯು ರೂ.3.40 ಲಕ್ಷಗಳಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬರ್ಗಮನ್ ಸ್ಟ್ರೀಟ್ 125 ಸ್ಕೂಟರ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.77,900 ಗಳಾಗಿದೆ.
MOST READ: ಇತಿಹಾಸ ಪುಟ ಸೇರಿದ ಜನಪ್ರಿಯ ಬಜಾಜ್ ಡಿಸ್ಕವರ್ ಬೈಕುಗಳು

124 ಸಿಸಿ ಫೋರ್ ಸ್ಟ್ರೋಕ್ ಎಂಜಿನ್ ಹೊಂದಿರುವ ಬರ್ಗಮನ್ ಸ್ಟ್ರೀಟ್ 125 ಸ್ಕೂಟರ್ ಮಾದರಿಯು ಫ್ಯೂಲ್ ಇಂಜೆಕ್ಷನ್ ಸಿಸ್ಟಂನೊಂದಿಗೆ ಮಾಲಿನ್ಯ ಹೊರಸೂಸುವಿಕೆಯಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದು, ಹೊಸ ಸ್ಕೂಟರ್ ಪ್ರತಿ ಲೀಟರ್‌ಗೆ 54 ಕಿ.ಮೀ ಮೈಲೇಜ್ ನೀಡುತ್ತದೆ.

ಹೊಸ ಸುಜುಕಿ ಬರ್ಗ್‍ಮನ್ 200 ಪ್ರೀಮಿಯಂ ಸ್ಕೂಟರ್ ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಹೊಸ ಬರ್ಗ್‍ಮನ್ 200 ಪ್ರೀಮಿಯಂ ಸ್ಕೂಟರ್ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.


Click it and Unblock the Notifications








