ಅನಾವರಣವಾಯ್ತು ಸುಜುಕಿ ವಿ-ಸ್ಟ್ರೋಮ್ 1050 ಎಕ್ಸ್‌ಟಿ ಪ್ರೊ ಬೈಕ್
ಸುಜುಕಿ ತನ್ನ ಜನಪ್ರಿಯ ಅಡ್ವೆಂಚರ್ ಟೂರರ್ ವಿ-ಸ್ಟ್ರೋಮ್ 1050 ಎಕ್ಸ್‌ಟಿ ಪ್ರೊ ಎಂಬ ಹೊಸ ಬೈಕನ್ನು ಇಟಲಿಯಲ್ಲಿ ಅನಾವರಣಗೊಳಿಸಿದೆ. ಈ ಹೊಸ ಸುಜುಕಿ ವಿ-ಸ್ಟ್ರೋಮ್ 1050 ಎಕ್ಸ್‌ಟಿ ಪ್ರೊ ಬೈಕ್ ಆಫ್-ರೋಡ್ ಸಾಮರ್ಥ್ಯದ ಅಕ್ಸೆಸರೀಸ್ ಕಿಟ್ ಅನ್ನು ಒಳಗೊಂಡಿದೆ.

ಹೊಸ ಸುಜುಕಿ ವಿ-ಸ್ಟ್ರೋಮ್ 1050 ಎಕ್ಸ್‌ಟಿ ಪ್ರೊ ಬೈಕನ್ನು ಆಫ್-ರೋಡ್ ಗಾಗಿ ವಿಶೇಷವಾಗಿ ಅಭಿವೃದ್ದಿ ಪಡಿಸಿದ್ದಾರೆ. ಇದರಿಂದಾಗಿ ಈ ಬೈಕಿನಲ್ಲಿ ಗಟ್ಟಿಮುಟ್ಟಾದ ಬ್ಯಾಷ್ ಪ್ಲೇಟ್, ಎಂಜಿನ್ ಗಾರ್ಡ್‌ಗಳು, ಹೊಂದಾಣಿಕೆ ಮಾಡಬಹುದಾದ ಫುಟ್‌ಪೆಗ್‌ಗಳು ಮತ್ತು ಬೈಕ್‌ನೊಂದಿಗೆ ಅಡ್ವೆಂಚರ್ ರೈಡರ್ ಗಳಿಗಾಗಿ ಹಾರ್ಡ್ ಕೇಸ್ ಪ್ಯಾನಿಯರ್‌ಗಳನ್ನು ಹೊಂದಿದೆ.

ಸುಜುಕಿ ವಿ-ಸ್ಟ್ರೋಮ್ 1050 ಎಕ್ಸ್‌ಟಿ ಪ್ರೊ ಬೈಕಿನಲ್ಲಿ 1,037 ಸಿಸಿ, ನಾಲ್ಕು-ಸ್ಟ್ರೋಕ್, ಲಿಕ್ವಿಡ್-ಕೂಲ್ಡ್, 90 ಡಿಗ್ರಿ ವಿ-ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8,500 ಆರ್‌ಪಿಎಂನಲ್ಲಿ 106 ಬಿಹೆಚ್‌ಪಿ ಪವರ್ ಮತ್ತು 6,000 ಆರ್‌ಪಿಎಂನಲ್ಲಿ 100 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಇನ್ನು ಅಲ್ಯೂಮಿನಿಯಂ ಎಂಜಿನ್ ಬ್ಯಾಷ್ ಪ್ಲೇಟ್ ಬಂಡೆಗಳಿಂದ ರಕ್ಷಣೆ ನೀಡುವುದರ ಜೊತೆಗೆ ಇತರ ಸಾಮಾನ್ಯ ಅಡೆತಡೆಗಳಲ್ಲಿಯು ಎಂಜಿನ್‌ಗೆ ರಕ್ಷಣೆಯನ್ನು ಒದಗಿಸುತ್ತದೆ. ಇದು ಎಂಜಿನ್‌ಗೆ ವಿಶೇಷವಾದ ರಕ್ಷಣೆಯನ್ನು ನೀಡುತ್ತದೆ ಎಂದು ಹೇಳಬಹುದು.

ಅದರಲ್ಲಿಯು ವಿಶೇಷವಾಗಿ ಮುಂಭಾಗದ ಸಿಲಿಂಡರ್ ಮತ್ತು ಆಯಿಲ್ ಫಿಲ್ಟರ್ ಮತ್ತು ಎಕ್ಸಾಸ್ಟ್ ಸಿಸ್ಟಂಗೆ ರಕ್ಷಣೆ ನೀಡುತ್ತದೆ. ಇನ್ನು ಈ ಆಫ್-ರೋಡ್ ಬೈಕಿನಲ್ಲಿ ಹೆಚ್ಚಿನ ಎಂಜಿನ್ ಗಾರ್ಡ್ ಬಾರ್‌ಗಳು ರೇಡಿಯೇಟರ್ ಅನ್ನು ಸುತ್ತುತ್ತವೆ.
MOST READ: ಆಗಸ್ಟ್ ತಿಂಗಳ ಮಾರಾಟ ವರದಿ ಪ್ರಕಟಿಸಿದ ಸುಜುಕಿ ಮೋಟಾರ್‌ಸೈಕಲ್

ಇನ್ನು ಸುಜುಕಿ ವಿ-ಸ್ಟ್ರೋಮ್ 1050 ಎಕ್ಸ್‌ಟಿ ಪ್ರೊ ಬೈಕಿನಲ್ಲಿರುವ ಫುಟ್‌ರೆಸ್ಟ್‌ಗಳು ಸವಾರನಿಗೆ ಎದ್ದುನಿಂತು ಆರಾಮದಾಯಕವಾಗಿ ಆಫ್-ರೋಡ್ ರೈಡ್ ಮಾಡಲು ಹೆಚ್ಚಿನ ಸಹಕಾರಿಯಾಗಿದೆ.

ಪ್ರತಿ ಪ್ಯಾನಿಯರ್‌ನಲ್ಲಿ 37 ಲೀಟರ್ ಜಾಗವನ್ನು ಹೊಂದಿರುವ ಅಲ್ಯೂಮಿನಿಯಂ ಪ್ಯಾನಿಯರ್‌ಗಳಿಂದ ಲಗೇಜ್ ಸಾಗಿಸುವ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಇನ್ನು ನೀರು ಮತ್ತು ಧೂಳಿನಿಂದ ರಕ್ಷಿಸುವ ಗ್ಯಾಸ್ಕೆಟ್ ಸಿಸ್ಟಂ ಅನ್ನು ಅಳವಡಿಸಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಇಟಲಿಯಲ್ಲಿ ಸುಜುಕಿ ವಿ-ಸ್ಟ್ರೋಮ್ 1050 ಎಕ್ಸ್‌ಟಿ ಪ್ರೊ ಬೈಕಿನ ಬೆಲೆಯು ಭಾರತೀಯ ಕರೆನ್ಸಿಗೆ ಅನುವಾದ ಮಾಡಿದಾಗ ಅಂದಾಜು ರೂ. 13.31 ಲಕ್ಷಗಳಾಗಿದೆ. ಈ ಆಫ್-ರೋಡ್ ಬೈಕ್ ಬ್ಲ್ಯಾಕ್, ಯೆಲ್ಲೋ ಮತ್ತು ಆರೇಂಜ್ ಜೊತೆ ವೈಟ್ ಲಿವೆರಿ ಎಂಬ ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರಲಿದೆ.

ಈ ಹೊಸ ಸುಜುಕಿ ವಿ-ಸ್ಟ್ರೋಮ್ 1050 ಎಕ್ಸ್‌ಟಿ ಪ್ರೊ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಬೈಕನ್ನು ವಿಶೇಷವಾಗಿ ಆಫ್-ರೋಡ್ ಪ್ರಿಯರಿಗಾಗಿ ಇಟಲಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುತ್ತಿದೆ. ಶೀಘ್ರದಲ್ಲೇ ಈ ಹೊಸ ಸುಜುಕಿ ವಿ-ಸ್ಟ್ರೋಮ್ 1050 ಎಕ್ಸ್‌ಟಿ ಪ್ರೊ ಬೈಕ್ ಇಟಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ.


Click it and Unblock the Notifications