ಭಾರತದ ಅತಿ ವೇಗದ ರಾಯಲ್‍ ಎನ್‍ಫೀಲ್ಡ್ ಬೈಕಿದು

ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳು ಭಾರತದಲ್ಲಿರುವ ಜನಪ್ರಿಯ ಬೈಕ್‍‍ಗಳಲ್ಲಿ ಒಂದಾಗಿವೆ. ರೆಟ್ರೋ ಶೈಲಿಯ ವಿನ್ಯಾಸದಿಂದಾಗಿ ಈ ಬೈಕ್‍‍ಗಳು ಹೆಚ್ಚು ಜನಪ್ರಿಯವಾಗಿವೆ. ರೆಟ್ರೋ ಶೈಲಿಯನ್ನು ಹೊಂದಿದ್ದರೂ ಈ ಬೈಕ್‍‍ಗಳು ಆಧುನಿಕವಾಗಿವೆ.

ಭಾರತದ ಅತಿ ವೇಗದ ರಾಯಲ್‍ ಎನ್‍ಫೀಲ್ಡ್ ಬೈಕಿದು

ರಾಯಲ್ ಎನ್‍‍ಫೀಲ್ಡ್ ಕಂಪನಿಯು ಕೆಲ ವರ್ಷಗಳ ಹಿಂದೆ ಇಂಟರ್‍‍ಸೆಪ್ಟರ್ 650 ಹಾಗೂ ಕಾಂಟಿನೆಂಟಲ್ ಜಿಟಿ 650 ಎಂಬ ಟ್ವಿನ್ ಸಿಲಿಂಡರ್ ಬೈಕ್‍‍ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಟ್ವಿನ್ ಬೈಕ್‍‍ಗಳು ಅತಿ ಕಡಿಮೆ ಅವಧಿಯಲ್ಲಿಯೇ ಸಾಕಷ್ಟು ಜನಪ್ರಿಯತೆಯನ್ನು ಪಡೆದಿವೆ.

ಭಾರತದ ಅತಿ ವೇಗದ ರಾಯಲ್‍ ಎನ್‍ಫೀಲ್ಡ್ ಬೈಕಿದು

ಈ ಬೈಕ್‍‍ಗಳು ರಾಯಲ್ ಎನ್‍ಫೀಲ್ಡ್ ಕಂಪನಿಯು ಇದುವರೆಗೂ ಉತ್ಪಾದಿಸಿರುವ ಪವರ್‍‍ಫುಲ್ ಬೈಕ್‍‍ಗಳೆಂಬ ಹೆಗ್ಗಳಿಕೆಯನ್ನು ಪಡೆದಿವೆ. ಭಾರತದಲ್ಲಿ ಈ ಟ್ವಿನ್ ಬೈಕ್‍‍ಗಳನ್ನು ಹಲವೆಡೆ ಮಾಡಿಫೈಗೊಳಿಸಲಾಗಿದೆ.

ಭಾರತದ ಅತಿ ವೇಗದ ರಾಯಲ್‍ ಎನ್‍ಫೀಲ್ಡ್ ಬೈಕಿದು

ಇದೇ ರೀತಿಯಾಗಿ ಮಾಡಿಫೈಗೊಂಡಿರುವ ಭಾರತದ ವೇಗದ ಇಂಟರ್‍‍ಸೆಪ್ಟರ್ 650 ಬೈಕ್ ಎಂದು ಹೇಳಲಾಗಿರುವ ಬೈಕಿನ ವಿವರವನ್ನು ಈ ಲೇಖನದಲ್ಲಿ ನೋಡೋಣ. ಮಾಡಿಫೈಗೊಂಡಿರುವ ಈ ಬೈಕಿನ ವೀಡಿಯೊವನ್ನು ಅಭಿನವ್ ಭಟ್‍‍ರವರು ತಮ್ಮ ಯುಟ್ಯೂಬ್‍ ಚಾನೆಲ್‍ನಲ್ಲಿ ಅಪ್‍‍ಲೋಡ್ ಮಾಡಿದ್ದಾರೆ.

ಭಾರತದ ಅತಿ ವೇಗದ ರಾಯಲ್‍ ಎನ್‍ಫೀಲ್ಡ್ ಬೈಕಿದು

ಬೈಕಿಗೆ ಮಾಡಲಾಗಿರುವ ಮಾಡಿಫಿಕೇಶನ್ ವಿವರಣೆಯೊಂದಿಗೆ ಈ ವೀಡಿಯೊ ಆರಂಭವಾಗುತ್ತದೆ. ಮೊದಲಿಗೆ ಈ ಬೈಕಿನ ಫ್ರಂಟ್ ಫೋರ್ಕ್‍‍ನಲ್ಲಿ ಮಾಡಿಫೈ ಮಾಡಲಾಗಿದೆ. ಈ ಬೈಕಿನಲ್ಲಿ ಹೆಚ್ಚು ವೇಗದಲ್ಲಿ ಚಲಿಸಲು ಅನುಕೂಲವಾಗಲೆಂದು ಬಜಾಜ್ ಡೊಮಿನಾರ್ ಬೈಕಿನಲ್ಲಿರುವ ಅಪ್‍‍‍ಸೈಡ್ ಡೌನ್ ಫೋರ್ಕ್ ಅಳವಡಿಸಲಾಗಿದೆ.

ಭಾರತದ ಅತಿ ವೇಗದ ರಾಯಲ್‍ ಎನ್‍ಫೀಲ್ಡ್ ಬೈಕಿದು

ಇದರ ಜೊತೆಗೆ ಕಸ್ಟಮ್ ಮ್ಯಾಪ್ ಹೊಂದಿರುವ ಪವರ್‍‍ಟ್ರಾನಿಕ್ ಪಿಗ್ಗಿಬ್ಯಾಕ್ ಇಸಿಯು, ಎಸ್‍ಎಸ್ ಮೊಟೊ ಸ್ಟೈನ್‍‍ಲೆಸ್ ಸ್ಟೀಲ್ ಎಕ್ಸಾಸ್ಟ್, ಸ್ಟೇಜ್ 2 ಪ್ಲೇಟ್ ಹೊಂದಿರುವ ಡಿ‍‍ಎನ್‍ಎ ಏರ್‍‍ಲಿಫ್ಟರ್‍‍ಗಳನ್ನು ಬದಲಿಸಲಾಗಿದೆ.

ಭಾರತದ ಅತಿ ವೇಗದ ರಾಯಲ್‍ ಎನ್‍ಫೀಲ್ಡ್ ಬೈಕಿದು

ಈ ಬೈಕಿನಲ್ಲಿರುವ ವ್ಹೀಲ್‍‍ಗಳನ್ನು ಸಹ ಬದಲಿಸಲಾಗಿದೆ. ಇದರ ಜೊತೆಗೆ ತೈವಾನ್‍‍ನಿಂದ ಆಮದು ಮಾಡಿಕೊಂಡಿರುವ ಅಲ್ಯುಮಿನಿಯಂ ರಿಮ್‍‍ಗಳನ್ನು ಅಳವಡಿಸಲಾಗಿದೆ. ಗೇರ್ ಬದಲಾವಣೆಗೆ ಅನುಕೂಲವಾಗುವಂತೆ ಸ್ಪ್ರಾಕೆಟ್‍‍ಗಳನ್ನು ಬದಲಿಸಲಾಗಿದೆ.

ಭಾರತದ ಅತಿ ವೇಗದ ರಾಯಲ್‍ ಎನ್‍ಫೀಲ್ಡ್ ಬೈಕಿದು

ಈ ಬೈಕ್ ಅನ್ನು ಆಕರ್ಷಕವಾಗಿಸಲು ಗ್ರೇ ಹಾಗೂ ಬ್ಲಾಕ್ ಬಣ್ಣವನ್ನು ನೀಡಲಾಗಿದೆ. ಮಾಡಿಫೈ ಮಾಡಲಾಗಿರುವ ಈ ಬೈಕ್ ಮಾರುಕಟ್ಟೆಯಲ್ಲಿರುವ ಬೈಕಿಗಿಂತ 20 ಕೆ.ಜಿ ಕಡಿಮೆ ತೂಕವನ್ನು ಹೊಂದಿದೆ. ಮಾಡಿಫೈಗೊಂಡಿರುವ ಕಾರಣಕ್ಕೆ ಹೆಚ್ಚು ಪವರ್ ಉತ್ಪಾದಿಸುತ್ತದೆ.

ಭಾರತದ ಅತಿ ವೇಗದ ರಾಯಲ್‍ ಎನ್‍ಫೀಲ್ಡ್ ಬೈಕಿದು

ಮಾರುಕಟ್ಟೆಯಲ್ಲಿರುವ ಬೈಕ್ 36 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸಿದರೆ, ಮಾಡಿಫೈಗೊಂಡಿರುವ ಈ ಬೈಕ್ 42.7 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸುತ್ತದೆ. ಈ ಬೈಕ್ 0 -100 ಕಿ.ಮೀ ವೇಗವನ್ನು ಕೇವಲ 5 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ.

ವೀಡಿಯೊದಲ್ಲಿ ಕೇವಲ 6.8 ಸೆಕೆಂಡುಗಳಲ್ಲಿ ಈ ಬೈಕ್ 120 ಕಿ.ಮೀ ವೇಗವನ್ನು ಕ್ರಮಿಸಿದೆ. ಇದರ ಜೊತೆಗೆ 10.4 ಸೆಕೆಂಡುಗಳಲ್ಲಿ 140 ಕಿ.ಮೀ ವೇಗವನ್ನು ಹಾಗೂ 7,500 ಆರ್‍‍ಪಿ‍ಎಂನಲ್ಲಿ 29.3 ಸೆಕೆಂಡುಗಳಲ್ಲಿ 180 ಕಿ.ಮೀ ವೇಗವನ್ನು ಕ್ರಮಿಸಿದೆ.

ಭಾರತದ ಅತಿ ವೇಗದ ರಾಯಲ್‍ ಎನ್‍ಫೀಲ್ಡ್ ಬೈಕಿದು

ಇದರಿಂದಾಗಿ ಈ ಬೈಕ್ ಭಾರತದಲ್ಲಿರುವ ಅತಿ ವೇಗದ ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್ ಬೈಕ್ ಆಗಿ ಹೊರಹೊಮ್ಮಿದೆ. ಇದರ ಜೊತೆಗೆ ಇತ್ತೀಚಿಗಷ್ಟೇ ರಾಯಲ್ ಎನ್‍‍ಫೀಲ್ಡ್ ಕಂಪನಿಯು ಇಂಟರ್‍‍ಸೆಪ್ಟರ್ ಬೈಕ್ ಅನ್ನು ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಳಿಸಿದೆ.

More from DriveSpark

Article Published On: Monday, February 3, 2020, 15:34 [IST]
English summary
This is India's fastest Royal Enfield Interceptor. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+