ಭಾರತದಲ್ಲಿ ಮಾರಾಟವಾಗುತ್ತಿರುವ ಅತಿ ದುಬಾರಿ ಬೈಕುಗಳಿವು

ಆಕರ್ಷಕ ಮತ್ತು ದುಬಾರಿ ಬೈಕುಗಳನ್ನು ಕೊಂಡು ಕೊಳ್ಳುವ ಕ್ರೇಜ್‌ ಇಂದು ಹೆಚ್ಚಾಗುತ್ತಿದೆ. ಅದರಲ್ಲಿಯು ಸೆಲೆಬ್ರಿಟಿಗಳಿಗೆ ದುಬಾರಿ ಬೈಕುಗಳ ಮೇಲೆ ಹೆಚ್ಚು ಕ್ರೇಜ್ ಹೊಂದಿರುತ್ತಾರೆ. ಕೆಲವು ಸೆಲೆಬ್ರಿಟಿಗಳಿಗೆ ಎಲ್ಲರ ಬಳಿ ಇರುವ ಬೈಕುಗಳಿಗಿಂತ ದುಬಾರಿ ಬೈಕು ಹೊಂದಬೇಕೆಂಬ ಬಯಕೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಅತಿ ದುಬಾರಿ ಬೈಕುಗಳಿವು

ಭಾರತೀಯ ಮಾರುಕಟ್ಟೆಯಲ್ಲಿಯು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಸೂಪರ್ ಬೈಕುಗಳಿವೆ. ಭಾರತೀಯ ಮಾರುಕಟ್ಟೆಯಲ್ಲಿ ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗಿರುವುದರಿಂದ ಕೆಲವು ದುಬಾರಿ ಬೈಕುಗಳು ಸ್ಥಗಿತಗೊಳಿಸಲಾಗಿದೆ. ಇನ್ನು ಕೆಲವು ದ್ವಿಚಕ್ರ ವಾಹನ ತಯಾರಕರು ತಮ್ಮ ದುಬಾರಿ ಬೈಕುಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಲಾಗಿದೆ. ಹಲವರಿಗೆ ಭಾರತದಲ್ಲಿರುವ ದುಬಾರಿ ಬೈಕುಗಳ ಬಗ್ಗೆ ತಿಳಿದುಕೊಳ್ಳಲು ಕುತೂಹಲವಿರುತ್ತದೆ. ಇಂತಹವರಿಗಾಗಿ ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬಿಎಸ್-6 ದುಬಾರಿ ಬೈಕುಗಳ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಅತಿ ದುಬಾರಿ ಬೈಕುಗಳಿವು

2020ರ ಹಾರ್ಲೆ ಡೇವಿಡ್ಸನ್ ಫ್ಯಾಟ್ ಬಾಯ್

ಹಾರ್ಲೆ ಡೇವಿಡ್ಸನ್ ಇಂಡಿಯಾ ಕಂಪನಿಯು ತನ್ನ 2020ರ ಫ್ಯಾಟ್ ಬಾಯ್ ಅನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಗೊಳಿಸಿತು. ಹೆಚ್ಚು ಪವರ್‌ಫುಲ್ ಎಂಜಿನ್ ಹೊಂದಿರುವ ಸ್ಟ್ಯಾಂಡರ್ಡ್ ರೂಪಾಂತರದ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.20.10 ಲಕ್ಷಗಳಾಗಿದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಭಾರತದಲ್ಲಿ ಮಾರಾಟವಾಗುತ್ತಿರುವ ಅತಿ ದುಬಾರಿ ಬೈಕುಗಳಿವು

2020ರ ಹಾರ್ಲೆ ಡೇವಿಡ್ಸನ್ ಫ್ಯಾಟ್ ಬಾಯ್ ಬೇಸ್ ವೆರಿಯೆಂಟ್‍ನಲ್ಲಿ 1.745 ಸಿಸಿ ವಿ-ಟ್ವಿನ್ ಏರ್-ಕೂಲ್ಡ್, ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 3000 ಆರ್‌ಪಿಎಂನಲ್ಲಿ 144 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 2020ರ ಫ್ಯಾಟ್ ಬಾಯ್ ಸ್ಟ್ಯಾಂಡರ್ಡ್ ವೆರಿಯೆಂಟ್‍ನಲ್ಲಿ 1,868 ಸಿಸಿ ವಿ-ಟ್ವಿನ್ ಏರ್-ಕೂಲ್ಡ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 156 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಅತಿ ದುಬಾರಿ ಬೈಕುಗಳಿವು

ಹೊಸ ಬಿಎಂಡಬ್ಲ್ಯು ಎಸ್1000 ಆರ್‍ಆರ್

ಬಿಎಂಡಬ್ಲ್ಯು ಮೋಟೊರಾಡ್ ಇಂಡಿಯಾ ಕಂಪನಿಯ ಎಸ್1000 ಆರ್‍ಆರ್ ಬೈಕಿನ ಬೆಲೆಯು ರೂ.18.50 ಲಕ್ಷಗಳಾಗಿದೆ. ಬಿಎಂಡಬ್ಲ್ಯು ಎಸ್1000 ಆರ್‍ಆರ್ ಬೈಕ್, ಸ್ಟ್ಯಾಂಡರ್ಡ್, ಪ್ರೊ ಹಾಗೂ ಪ್ರೊ ಎಂ ಸ್ಪೋರ್ಟ್ ಎಂಬ ಮೂರು ಮಾದರಿಗಳಲ್ಲಿ ಲಭ್ಯವಿದೆ. ಈ ಬೈಕ್ 999 ಸಿಸಿ ಇನ್-ಲೈನ್ 4 ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಹೊಂದಿದ್ದು, ಈ ಎಂಜಿನ್ 13,500 ಆರ್‌ಪಿಎಂನಲ್ಲಿ 207 ಬಿಹೆಚ್‌ಪಿ ಪವರ್ ಮತ್ತು 11,000 ಆರ್‌ಪಿಎಂನಲ್ಲಿ 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಭಾರತದಲ್ಲಿ ಮಾರಾಟವಾಗುತ್ತಿರುವ ಅತಿ ದುಬಾರಿ ಬೈಕುಗಳಿವು

ಟ್ರಯಂಫ್ ರಾಕೆಟ್ 3ಆರ್

ಟ್ರಯಂಫ್ ಮೋಟಾರ್‌ಸೈಕಲ್‌ ಕಂಪನಿಯು ತನ್ನ ರಾಕೆಟ್ 3ಆರ್ ಬೈಕಿನ ವಿತರಣೆಯನ್ನು ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಪ್ರಾರಂಭಿಸಿದ್ದರು. ಟ್ರಯಂಫ್ ರಾಕೆಟ್ 3ಆರ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.18 ಲಕ್ಷಗಳಾಗಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಅತಿ ದುಬಾರಿ ಬೈಕುಗಳಿವು

2020ರ ಹೊಸ ಟ್ರಯಂಫ್ ರಾಕೆಟ್ 3ಆರ್ ಬೈಕ್ 2,500 ಸಿಸಿಯ ಇನ್ ಲೈನ್ 3 ಸಿಲಿಂಡರ್ ಲಿಕ್ವಿಡ್ ಕೂಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 6,000 ಆರ್‍‍ಪಿ‍ಎಂನಲ್ಲಿ 167 ಬಿ‍‍ಹೆಚ್‍‍ಪಿ ಪವರ್ ಮತ್ತು 4,000 ಆರ್‍‍ಪಿ‍ಎಂನಲ್ಲಿ 221 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ಭಾರತದಲ್ಲಿ ಮಾರಾಟವಾಗುತ್ತಿರುವ ಅತಿ ದುಬಾರಿ ಬೈಕುಗಳಿವು

ಹೋಂಡಾ ಆಫ್ರಿಕಾ ಟ್ವಿನ್ ಸಿಆರ್‍ಎಫ್ 1100ಎಲ್

ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ತನ್ನ ಹೊಸ ಆಫ್ರಿಕಾ ಟ್ವಿನ್ ಸಿಆರ್‍ಎಫ್ 1100ಎಲ್ ಬೈಕ್ ಅನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಗೊಳಿಸಿತು. ಈ ಹೊಸ ಆಫ್ರಿಕಾ ಟ್ವಿನ್ ಸಿಆರ್‍ಎಫ್ 1100ಎಲ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.15.35 ಲಕ್ಷಗಳಾಗಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಅತಿ ದುಬಾರಿ ಬೈಕುಗಳಿವು

2020ರ ಆಫ್ರಿಕಾ ಟ್ವಿನ್ ಸಿಆರ್‍ಎಫ್ 1100ಎಲ್ ಹೆಚ್ಚು ಪವರ್ ಫುಲ್ ಬೈಕ್ ಆಗಿದೆ. ಹೊಸ ಹೋಂಡಾ ಆಫ್ರಿಕಾ ಟ್ವಿನ್ ಸಿಆರ್‍ಎಫ್ 1100ಎಲ್ ಬೈಕ್ 1048ಸಿಸಿ ಎಂಜಿನ್ 101 ಬಿ‍‍ಹೆಚ್‍‍ಪಿ ಪವರ್ ಮತ್ತು 105 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಅತಿ ದುಬಾರಿ ಬೈಕುಗಳಿವು

2020ರ ಹಾರ್ಲೆ-ಡೇವಿಡ್ಸನ್ ಲೋರೈಡರ್ ಎಸ್

2020ರ ಹಾರ್ಲೆ-ಡೇವಿಡ್ಸನ್ ಲೋರೈಡರ್ ಎಸ್ ಬೈಕಿನ ಬೆಲೆಯು ರೂ,14.69 ಲಕ್ಷಗಳಾಗಿದೆ. ಈ ಬೈಕಿನಲ್ಲಿ 1868 ಸಿಸಿ ಮಿಲ್ವಾಕೀ-8, 114 ಏರ್-ಕೂಲ್ಡ್ ವಿ-ಟ್ವಿನ್ ಎಂಜಿನ್ ಹೊಂದಿದ್ದು, ಇದು 3,250 ಆರ್‍ಪಿಎಂನಲ್ಲಿ 155 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

Most Read Articles

Kannada
English summary
These Are The 5 most Expensive BS6 Bikes On Sale In India. Read in Kannada.
Story first published: Wednesday, May 13, 2020, 15:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X