ಎರಡು ಜಿಲ್ಲೆಗಳಲ್ಲಿ ಹೀರೋ ಹಾಗೂ ಹೋಂಡಾ ಕಂಪನಿ ವಾಹನಗಳ ಮಾರಾಟವನ್ನು ನಿಷೇಧಿಸಿದ ಸಾರಿಗೆ ಇಲಾಖೆ
ಹಿಂದೆ ಜೊತೆಯಾಗಿ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುತ್ತಿದ್ದ ಹೀರೋ ಹಾಗೂ ಹೋಂಡಾ ಕಂಪನಿಗಳು ಈಗ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿವೆ. ಕೆಲವು ನಿರ್ದಿಷ್ಟ ಕಾರಣಗಳಿಗಾಗಿ ಈ ಎರಡೂ ಕಂಪನಿಗಳು ಬೇರೆ ಬೇರೆಯಾದವು.

ಎರಡು ಕಂಪನಿಗಳು ಬೇರೆ ಬೇರೆಯಾಗಿದ್ದರೂ ಸಹ ವಾಹನಗಳ ಮಾರಾಟದಲ್ಲಿ ಉತ್ತಮ ಸಾಧನೆಯನ್ನೇ ತೋರುತ್ತಿವೆ. ಭಾರತದ ಎರಡು ಜಿಲ್ಲೆಗಳಲ್ಲಿ ಹೀರೋ ಹಾಗೂ ಹೋಂಡಾ ಕಂಪನಿಯ ದ್ವಿಚಕ್ರ ವಾಹನಗಳ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ವರದಿಯಾಗಿದೆ.

ಛತ್ತೀಸ್‌ಗಢ ರಾಜ್ಯದ ಸಾರಿಗೆ ಇಲಾಖೆಯು ಈ ರೀತಿ ನಿಷೇಧ ಹೇರಿದೆ. ಹೋಂಡಾ ಹಾಗೂ ಹೀರೋ ಮೋಟೊಕಾರ್ಪ್‌ನ ಡೀಲರ್'ಗಳು ಹೊಸ ವಾಹನಗಳನ್ನು ರಾಯ್‌ಪುರ ಹಾಗೂ ಕರಿಯಾಬಂದ್ ಜಿಲ್ಲೆಗಳಲ್ಲಿ ಮಾರಾಟ ಮಾಡದಂತೆ ನಿಷೇಧ ಹೇರಲಾಗಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ರಾಜ್ಯ ಸಾರಿಗೆ ಇಲಾಖೆಯಿಂದ ಹೊಸ ಮಾದರಿಗಳ ಮಾರಾಟಕ್ಕೆ ಈ ಎರಡೂ ಕಂಪನಿಗಳು ಅನುಮೋದನೆಯನ್ನು ಪಡೆಯದ ಹಿನ್ನೆಲೆಯಲ್ಲಿ ಈ ನಿಷೇಧ ಹೇರಲಾಗಿದೆ. ಈ ಎರಡೂ ಜಿಲ್ಲೆಗಳಲ್ಲಿ ಸುಮಾರು 8 ಡೀಲರ್'ಗಳು ಈ ಕಂಪನಿಯ ವಾಹನಗಳನ್ನು ಮಾರಾಟ ಮಾಡುತ್ತಾರೆ.

ಹೊಸ ಮಾದರಿಯನ್ನು ಮಾರಾಟ ಮಾಡಲು ರಾಜ್ಯ ಸಾರಿಗೆ ಇಲಾಖೆಯಿಂದ ಅನುಮೋದನೆ ಪಡೆಯುವುದು ಕಡ್ಡಾಯ. ಆದರೆ ಈ ಕಂಪನಿಗಳು ಅಲ್ಲಿನ ಸಾರಿಗೆ ಇಲಾಖೆಯಿಂದ ಅನುಮೋದನೆಯನ್ನು ಪಡೆದಿಲ್ಲ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕೆಲ ತಿಂಗಳ ಹಿಂದಷ್ಟೇ ಹೊಸ ಬಿಎಸ್ -6 ಮಾಲಿನ್ಯ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಬಿಎಸ್ 6 ವಾಹನಗಳ ಮಾರಾಟಕ್ಕೆ ಪರವಾನಗಿ ಪಡೆಯಲು ಈ ಕಂಪನಿಗಳು ವಿಫಲವಾಗಿವೆ ಎಂದು ಹೇಳಲಾಗಿದೆ.

ಛತ್ತೀಸ್‌ಗಢ ಸಾರಿಗೆ ಇಲಾಖೆಯು ಹೋಂಡಾ ಹಾಗೂ ಹೀರೋ ಮೋಟೊಕಾರ್ಪ್ ಕಂಪನಿಗಳ ದ್ವಿಚಕ್ರ ವಾಹನಗಳ ಮಾರಾಟದ ಮೇಲೆ ಹೇರಿರುವ ನಿಷೇಧವು ದೇಶಾದ್ಯಂತ ಕೋಲಾಹಲವನ್ನುಂಟು ಮಾಡಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಈ ಬಗ್ಗೆ ಇಟಿ ಆಟೋ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ಫಾಡಾ ಅಧ್ಯಕ್ಷ ವಿಂಗೇಶ್ ಗುಲಾಟಿ, ಛತ್ತೀಸ್‌ಗಢ ಸಾರಿಗೆ ಇಲಾಖೆಯ ನಿರ್ಧಾರವು ನಮಗೆ ಆಶ್ಚರ್ಯವನ್ನುಂಟು ಮಾಡಿದೆ. ಇದರಿಂದಾಗಿ ಈ ಎರಡೂ ಕಂಪನಿಯ ಡೀಲರ್'ಗಳಿಗೆ ತೊಂದರೆಯಾಗಲಿದೆ ಎಂದು ಹೇಳಿದರು.

ಛತ್ತೀಸ್‌ಗಢ ಸಾರಿಗೆ ಇಲಾಖೆಯ ಈ ನಿರ್ಧಾರದ ವಿರುದ್ಧ ಹೀರೋ ಮೋಟೊಕಾರ್ಪ್ ಹಾಗೂ ಹೋಂಡಾ ಕಂಪನಿಗಳು ಯಾವ ನಿರ್ಧಾರವನ್ನು ಕೈಗೊಳ್ಳುತ್ತವೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications