ಶೀಘ್ರದಲ್ಲೇ ಬಿಡುಗಡೆಯಾಲಿದೆ ಟ್ರಯಂಫ್ ಟೈಗರ್ 900 ಬೈಕ್

ಬ್ರಿಟಿಷ್ ದ್ವಿಚಕ್ರ ತಯಾರಕ ಕಂಪನಿಯಾದ ಟ್ರಯಂಫ್ ಮೋಟರ್‌ಸೈಕಲ್ ತನ್ನ ಹೊಸ ಟ್ರಯಂಫ್ ಟೈಗರ್ 900 ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಟೈಗರ್ 900 ಬೈಕನ್ನು ಮುಂದಿನ ಮೇ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಿದೆ ಎಂದು ಟ್ರಯಂಫ್ ಇಂಡಿಯಾ ಖಚಿತ ಪಡಿಸಿದೆ.

ಶೀಘ್ರದಲ್ಲೇ ಬಿಡುಗಡೆಯಾಲಿದೆ ಟ್ರಯಂಫ್ ಟೈಗರ್ 900 ಬೈಕ್

ಟ್ರಯಂಫ್ ಟೈಗರ್ 900 ಬೈಕ್ ಜಿಟಿ ಮತ್ತು ರ‌್ಯಾಲಿ ಪ್ರೊ ಎಂಬ ಎರಡೂ ರೂಪಾಂರಗಳಲ್ಲಿ ಲಭ್ಯವಿರಲಿದೆ. ಟ್ರಯಂಫ್ ಮೋಟಾರ್‍‍ಸೈಕಲ್ಸ್, ಹೊಸ ಟೈಗರ್ 900 ಬೈಕ್ ಅನ್ನು ಅಂತರರಾಷ್ಟೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಟ್ರಯಂಫ್ ಟೈಗರ್ 900 ಬೈಕ್ ಅನ್ನು ನವೀಕರಿಸಿದ ಚಾಸಿಸ್, ಸಸ್ಪೆಂಷನ್, ಹೊಸ ಎಂಜಿನ್ ಮತ್ತು ಹೊಸ ಎಂಜಿನ್‍‍‍ನೊಂದಿಗೆ ಬಿಡುಗಡೆಗೊಳಿಸಿದ್ದರು. ಭಾರತದಲ್ಲಿ ಟೈಗರ್ 800 ಬೈಕ್, ಅಡ್ವೆಂಚರ್ ಬೈಕ್‍‍ಗಳ ಸರಣಿಯಲ್ಲಿ ಉತ್ತಮ ಬೈಕ್ ಆಗಿದೆ.

ಶೀಘ್ರದಲ್ಲೇ ಬಿಡುಗಡೆಯಾಲಿದೆ ಟ್ರಯಂಫ್ ಟೈಗರ್ 900 ಬೈಕ್

ಹೊಸ ಟೈಗರ್ 900 ಬೈಕ್ ಹೆಚ್ಚು ಪವರ್‍‍ಫುಲ್ ಎಂಜಿನ್ ಅನ್ನು ಹೊಂದಿದೆ. ಹೊಸ ಟೈಗರ್ 900 ಬೈಕಿನಲ್ಲಿ ಬೋಲ್ಡ್ - ಆನ್ ಸಬ್ ಫ್ರೇಮ್, ಹೊಸ ಅಲ್ಯೂಮಿನಿಯಂ ಸ್ವಿಂಗಾರ್ಮ್, ಹೊಸ ಎಲ್‍ಇ‍ಡಿ ಹೆಡ್‍‍ಲ್ಯಾಂಪ್, ಡಿ‍ಆರ್‍ಎಲ್ ಮತ್ತು ಟಿಎಫ್‍ಟಿ ಸ್ಕ್ರೀನ್ ಅನ್ನು ಅಳವಡಿಸಲಾಗಿದೆ.

MOST READ: ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ಶೀಘ್ರದಲ್ಲೇ ಬಿಡುಗಡೆಯಾಲಿದೆ ಟ್ರಯಂಫ್ ಟೈಗರ್ 900 ಬೈಕ್

ಹೊಸ ಬೈಕ್ ಟೈಗರ್ 800 ಬೈಕ್‍‍ಗಿಂತ ಹಗುರವಾಗಿದೆ. ಟೈಗರ್ 900 ಬೈಕ್ ಟೈಟರ್ ಫ್ಯೂಯಲ್ ಟ್ಯಾಂಕ್ ಹೊಂದಿರುವುದರಿಂದ ಬೈಕ್ ಅನ್ನು ಸುಲಭವಾಗಿ ರೈಡ್ ಮಾಡಲು ಸಹಕಾರಿಯಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಲಿದೆ ಟ್ರಯಂಫ್ ಟೈಗರ್ 900 ಬೈಕ್

ಇದು ಟೈಗರ್ 800 ಮಾದರಿಯ ಅಲ್ಯೂಮಿನಿಯಂ ಫಿನಿಶ್‍‍ಗೆ ಹೋಲಿಸಿದರೆ ಪ್ಲಾಸ್ಟಿಕ್‍‍ನಿಂದ ಮಾಡಲ್ಪಟ್ಟ ನವೀಕರಿಸಿದ ಫ್ರಂಟ್ ಫೆಂಡರ್, ವಿಂಡ್‍‍ಸ್ಕ್ರೀನ್ ಮತ್ತು ಸಂಪ್ ಗಾರ್ಡ್ ಅನ್ನು ಹೊಂದಿದೆ. ಟ್ರಯಂಫ್ ಟೈಗರ್ 800 ಬೈಕಿನ ಎಕ್ಸ್‌ಆರ್ ಮತ್ತು ಎಕ್ಸ್‌ಸಿ ರೂಪಾಂತರಗಳನ್ನು ಟ್ರೈಗರ್ 900ನಲ್ಲಿ ಜಿಟಿ ಮತ್ತು ರ್‍ಯಾಲಿ ಮಾದರಿಗಳೊಂದಿಗೆ ಬದಲಾಯಿಸಿದೆ.

MOST READ: ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಶೀಘ್ರದಲ್ಲೇ ಬಿಡುಗಡೆಯಾಲಿದೆ ಟ್ರಯಂಫ್ ಟೈಗರ್ 900 ಬೈಕ್

ಟ್ರಯಂಫ್ ಟೈಗರ್ 900 ಬೈಕಿನಲ್ಲಿ 888 ಸಿಸಿ ಇನ್‍‍ಲೈನ್ 3 ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಯುರೋ 5 ಮತ್ತು ಬಿಎಸ್-6 ಮಾಲಿನ್ಯ ನಿಯಮದ ಅನುಸಾರವಾಗಿದೆ. ಈ ಎಂಜಿನ್ 94 ಬಿ‍‍ಹೆಚ್‍‍ಪಿ ಪವರ್ ಮತ್ತು 86 ಎನ್‍‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಶೀಘ್ರದಲ್ಲೇ ಬಿಡುಗಡೆಯಾಲಿದೆ ಟ್ರಯಂಫ್ ಟೈಗರ್ 900 ಬೈಕ್

ಜಿಟಿ ರೂಪಾಂತರದಲ್ಲಿ ಸಸ್ಪೆಂಷನ್ ಮತ್ತು ಬ್ರೇಕಿಂಗ್ ಅನ್ನು 180 ಎಂಎಂ ಫ್ರಂಟ್ ಮತ್ತು 170 ರೇರ್ ಬ್ರೇಕ್‍ನೊಂದಿಗೆ ಅಡ್ಜೆಂಸ್ಟ್ ಮಾಡಬಹುದಾದ ಮೊನೊಶಾಕ್ ಹೊಂದಿದೆ. ಪ್ರೊ ಟ್ರೀಮ್ 9 ಹಂತದ ಡ್ಯಾಂಪಿಂಗ್ ಮತ್ತು 4 ಫ್ರೀಪಿಕ್ಸ್ ಪ್ರೀ ಲೋಡ್ ಸೆಟ್ಟಿಂಗ್‍‍ಗಳೊಂದಿಗೆ ಎಲೆಕ್ಟ್ರಾನಿಕ್ ಅಡ್ಜೆಂಸ್ಟ್ ಬಲ್ ಹೊಂದಿರುವ ಮೊನೊಶಾಕ್ ಅನ್ನು ಹೊಂದಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಶೀಘ್ರದಲ್ಲೇ ಬಿಡುಗಡೆಯಾಲಿದೆ ಟ್ರಯಂಫ್ ಟೈಗರ್ 900 ಬೈಕ್

ಈ ಬೈಕಿನಲ್ಲಿ ಮೆಟ್ಜೆಲರ್ ಟೂರನ್ಸ್ ನೆಕ್ಸ್ಟ್ ಟಯರ್‍‍ಗಳೊಂದಿಗೆ 19/17 ಅಲಾಯ್ ವ್ಹೀಲ್‍‍ಗಳನ್ನು ಹೊಂದಿದೆ. ಸ್ಟೈಲ್ಮಾ ಕ್ಯಾಲಿಪರ್‍‍ಗಳ ಮೂಲಕ ಬ್ರೇಕಿಂಗ್ ಹೊಂದಿದೆ.ಈ ಹೊಸ ಬೈಕ್ ಭಾರತದಲ್ಲಿ ರೂ.16 ಲಕ್ಷಗಳಿಂದ 16.5 ಲಕ್ಷಗಳಿಗೆ ಮಾರಾಟವಾಗಬಹುದು.

ಶೀಘ್ರದಲ್ಲೇ ಬಿಡುಗಡೆಯಾಲಿದೆ ಟ್ರಯಂಫ್ ಟೈಗರ್ 900 ಬೈಕ್

ಹೊಸ ಟ್ರಯಂಫ್ ಟೈಗರ್ 900 ಬೈಕ್ ಭಾರತದಲ್ಲಿ ಬಿಡುಗಡೆಯಾದ ಬಳಿಕ ಬಿಎಂಡಬ್ಲ್ಯು ಎಫ್ 850 ಜಿಎಸ್, ಹೊಸ ತಲೆಮಾರಿನ ಹೋಂಡಾ ಆಫ್ರಿಕಾ ಟ್ವಿನ್ ಮತ್ತು ಡುಕಾಟಿ ಮಲ್ಟಿಸ್ಟ್ರಾಡಾ 950 ಬೈಕ್‍ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Triumph To Launch The All-New Tiger 900 Soon In India. Read in Kannada.
Story first published: Thursday, April 23, 2020, 10:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more