ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಟಿವಿಎಸ್ ಸ್ಕೂಟಿ ಜೆಸ್ಟ್ 110 ಸ್ಕೂಟರ್

ಚೆನ್ನೈ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿ ಟಿವಿಎಸ್ ಮೋಟಾರ್ ಶೀಘ್ರದಲ್ಲೇ ಬಿಎಸ್-6 ಸ್ಕೂಟಿ ಜೆಸ್ಟ್ 110 ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಹೊಸ ಸ್ಕೂಟಿ ಜೆಸ್ಟ್ 110 ಸ್ಕೂಟರ್‌ನ ಟೀಸರ್ ಅನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆಗೊಳಿಸಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಸ್ಕೂಟಿ ಜೆಸ್ಟ್ 110 ಸ್ಕೂಟರ್

ಹಿಂದಿನ ಮಾದರಿಗಿಂತ ಹೊಸ ಬಿಎಸ್-6 ಸ್ಕೂಟಿ ಜೆಸ್ಟ್ 110 ಸ್ಕೂಟರ್‌ಗೆ ಸರಿಸುಮಾರು ರೂ.6,000 ರಿಂದ ರೂ.8,000 ಗಳವರೆಗೆ ಬೆಲೆಯನ್ನು ಹೆಚ್ಚಿಸುವ ಸಾಧ್ಯತೆಗಳಿದೆ. ಈ ಸ್ಕೂಟರ್‌ನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.52,525 ಗಳಾಗಿದೆ. ಸ್ಕೂಟರ್‌ನ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಬಿಎಸ್-6 ಸ್ಕೂಟಿ ಜೆಸ್ಟ್ 110 ಸ್ಕೂಟರ್‌ನಲ್ಲಿ ನವೀಕರಿಸಿದ ಎಲ್ಇಡಿ ಡಿಆರ್ಎಲ್, ಎಲ್ಇಡಿ ಹೆಡ್ ಲೈಟ್ ಅನ್ನು ಹೊಂದಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಸ್ಕೂಟಿ ಜೆಸ್ಟ್ 110 ಸ್ಕೂಟರ್

ಈ ಹೊಸ ಸ್ಕೂಟರ್‌ನಲ್ಲಿ ಯುಎಸ್ಬಿ ಚಾರ್ಜಿಂಗ್ ಪೋರ್ಟ್ ಮತ್ತು ಡ್ಯುಯಲ್-ಟೋನ್ ಸೀಟ್ ಕವರ್ ನಂತಹ ಫೀಚರ್‍ಗಳನ್ನು ಹೊಂದಿದೆ. ಸದ್ಯ ಮಾರುಕಟ್ಟೆಯಲ್ಲಿ ಮ್ಯಾಟೆ ಬ್ಲೂ, ಮ್ಯಾಟ ರೆಡ್, ಮ್ಯಾಟೆ ಯಲ್ಲೋ ಮತ್ತು ಮ್ಯಾಟೆ ಬ್ಲಾಕ್ ಎಂಬ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ.

MOST READ: ದುಬಾರಿಯಾಯ್ತು ಬಿಎಸ್-6 ಹೀರೋ ಸ್ಪ್ಲೆಂಡರ್ ಐಸ್ಮಾರ್ಟ್ ಬೈಕ್

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಸ್ಕೂಟಿ ಜೆಸ್ಟ್ 110 ಸ್ಕೂಟರ್

ಹೊಸ ಸ್ಕೂಟಿ ಜೆಸ್ಟ್ 110 ಸ್ಕೂಟರ್ ಅನ್ನು ಹೊಸ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಸ್ಕೂಟಿ ಜೆಸ್ಟ್ 110 ಸ್ಕೂಟರ್‌ಗನಲ್ಲಿ 109 ಸಿಸಿ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಫ್ಯೂಯಲ್-ಇಂಜೆಕ್ಷನ್ ಸಿಸ್ಟಂ ಅನ್ನು ಹೊಂದಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಸ್ಕೂಟಿ ಜೆಸ್ಟ್ 110 ಸ್ಕೂಟರ್

ಈ ಎಂಜಿನ್ 7.8 ಬಿಹೆಚ್‌ಪಿ ಪವರ್ ಮತ್ತು 8.4 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದ ಬಳಿಕ ಬಿಎಸ್ 4 ಮಾದರಿಗೆ ಹೋಲಿಸಿದರೆ ಪವರ್ ಮತ್ತು ಟಾರ್ಕ್ ಕಡಿಮೆ ಉತ್ಪಾದಿಸುತ್ತದೆ.

MOST READ: ಇತಿಹಾಸ ಪುಟ ಸೇರಿದ ಜನಪ್ರಿಯ ಬಜಾಜ್ ಡಿಸ್ಕವರ್ ಬೈಕುಗಳು

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಸ್ಕೂಟಿ ಜೆಸ್ಟ್ 110 ಸ್ಕೂಟರ್

ನಗರಪ್ರದೇಶದ ಮಹಿಳಾ ಗ್ರಾಹಕರ ನೆಚ್ಚಿನ ಆಯ್ಕೆಗಳಲ್ಲಿ ಸ್ಕೂಟಿ ಜೆಸ್ಟ್ 110 ಮಾದರಿಯು ಒಂದಾಗಿದೆ. ಸ್ಕೂಟರ್‌ನ ಡ್ಯುಯಲ್ ಟೋನ್ ಸೀಟುಗಳು ಕೂಡ ಆಕರ್ಷಕವಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಸ್ಕೂಟಿ ಜೆಸ್ಟ್ 110 ಸ್ಕೂಟರ್

ಬಿಎಸ್-6 ಸ್ಕೂಟಿ ಜೆಸ್ಟ್ 110 ಸ್ಕೂಟರ್‌ನಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹೈಡ್ರಾಲಿಕ್ ರಿಯರ್ ಮೊನೊ-ಶಾಕ್ ಅನ್ನು ಒಳಗೊಂಡಿದೆ. ಹೊಸ ಸ್ಕೂಟಿ ಜೆಸ್ಟ್ 110 ಸ್ಕೂಟರ್‌ನ ಬ್ರೇಕ್ ಸಿಸ್ಟಂ ಬಗ್ಗೆ ಹೇಳುದಾದರೆ ಮುಂಭಾಗದಲ್ಲಿ 110 ಎಂಎಂ ಡ್ರಮ್ ಬ್ರೇಕ್ ಮತ್ತು ಹಿಂಭಾಗದಲ್ಲಿ 130 ಎಂಎಂ ಡ್ರಮ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

MOST READ: ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಸ್ಕೂಟಿ ಜೆಸ್ಟ್ 110 ಸ್ಕೂಟರ್

ಟಿವಿಎಸ್ ಕಂಪನಿಯ ಇತರ ಮಾದರಿಗಳಾದ ಟಿವಿಎಸ್ ರೇಡಿಯನ್, ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್, ಅಪಾಚೆ ಆರ್ಟಿಆರ್ 180, ಮತ್ತು ಅಪಾಚೆ ಆರ್ಆರ್ 310 ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಟಿವಿಎಸ್ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಆದ ಐಕ್ಯೂಬ್ ಅನ್ನ್ ಬಿಡುಗಡೆಗೊಳಿಸಲಾಗಿದೆ. ಈ ಸ್ಕೂಟರ್ ನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.15 ಲಕ್ಷಗಳಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಸ್ಕೂಟಿ ಜೆಸ್ಟ್ 110 ಸ್ಕೂಟರ್

ಹೊಸ ಟಿವಿಎಸ್ ಸ್ಕೂಟಿ ಜೆಸ್ಟ್ 110 ಸ್ಕೂಟರ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಹೊಸ ಹೊಸ ಟಿವಿಎಸ್ ಸ್ಕೂಟಿ ಜೆಸ್ಟ್ 110 ಸ್ಕೂಟರ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

Most Read Articles

Kannada
English summary
TVS To Launch The BS6 Scooty Zest 110 Soon In India. Read in Kannada.
Story first published: Tuesday, April 21, 2020, 19:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X