ಪ್ರೀಮಿಯಂ ಬೈಕ್ ಬಿಡುಗಡೆಗೊಳಿಸಲಿದೆ ಟಿವಿ‍ಎಸ್

ಟಿವಿ‍ಎಸ್ ಕಂಪನಿಯು ಜರ್ಮನಿ ಮೂಲದ ಬಿಎಂ‍‍ಡಬ್ಲ್ಯು ಮೋಟೊರಾಡ್ ಕಂಪನಿಯ ಜೊತೆಗಿನ ಸಹಭಾಗಿತ್ವದಲ್ಲಿ ಮೊದಲ ಬೈಕ್ ಆಗಿ ಅಪಾಚೆ ಆರ್‍ಆರ್ 310 ಬೈಕ್ ಅನ್ನು ಬಿಡುಗಡೆಗೊಳಿಸಿತ್ತು. ಮೂರು ವರ್ಷಗಳ ನಂತರ ಈ ಎರಡೂ ಕಂಪನಿಗಳು ಜೊತೆಗೂಡಿ ತಮ್ಮ ನಾಲ್ಕನೇ ಬೈಕ್ ಅನ್ನು ಪ್ರೀಮಿಯಂ ಬೈಕ್ ಸೆಗ್‍ಮೆಂಟಿನಲ್ಲಿ ಬಿಡುಗಡೆಗೊಳಿಸಲು ಮುಂದಾಗಿವೆ.

ಪ್ರೀಮಿಯಂ ಬೈಕ್ ಬಿಡುಗಡೆಗೊಳಿಸಲಿದೆ ಟಿವಿ‍ಎಸ್

ಈ ಸಹಭಾಗಿತ್ವದಲ್ಲಿ ಬಿಎಂ‍‍ಡಬ್ಲ್ಯು ಮೋಟೊರಾಡ್‍‍ಗಾಗಿ ಜಿ310ಜಿ‍ಎಸ್ ಹಾಗೂ ಜಿ310 ಆರ್ ಎಂಬ ಎರಡು ಬೈಕ್‍‍ಗಳನ್ನು ತಯಾರಿಸಲಾಗಿದೆ. ಈ ಬೈಕ್‍‍ಗಳನ್ನು ಪ್ರಪಂಚದ 90ಕ್ಕೂ ಅಧಿಕ ದೇಶಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ಪ್ರೀಮಿಯಂ ಬೈಕ್ ಬಿಡುಗಡೆಗೊಳಿಸಲಿದೆ ಟಿವಿ‍ಎಸ್

ಈ ಇಂಡೋ ಜರ್ಮನ್ ಸಹಭಾಗಿತ್ವವು ಮಧ್ಯಮ ಸಾಮರ್ಥ್ಯದ ಬೈಕ್ ಸೆಗ್‍‍ಮೆಂಟ್ ಅನ್ನು ಗುರಿಯಾಗಿರಿಸಿಕೊಂಡು 2013ರಲ್ಲಿ ಅಸ್ತಿತ್ವಕ್ಕೆ ಬಂತು. ಭಾರತದಲ್ಲಿ ಮಧ್ಯಮ ಸಾಮರ್ಥ್ಯದ ಸೆಗ್‍‍ಮೆಂಟ್‍‍ಗಳಿಗೆ ಇರುವ ಬೇಡಿಕೆಯನ್ನು ಮನಗೊಂಡು ಬಿ‍ಎಂ‍‍ಡಬ್ಲ್ಯು ಈ ಸೆಗ್‍‍ಮೆಂಟ್ ಅನ್ನು ಪ್ರವೇಶಿಸಿತು.

ಪ್ರೀಮಿಯಂ ಬೈಕ್ ಬಿಡುಗಡೆಗೊಳಿಸಲಿದೆ ಟಿವಿ‍ಎಸ್

ಜಿ 310 ಆರ್ ಹಾಗೂ ಜಿ 310 ಜಿ‍ಎಸ್ ಬೈಕ್‍‍ಗಳ ವಿನ್ಯಾಸವನ್ನು ಬಿ‍ಎಂ‍‍ಡಬ್ಲ್ಯು ಅಭಿವೃದ್ಧಿಪಡಿಸಿದರೆ, ಇವುಗಳನ್ನು ತಮಿಳುನಾಡಿನಲ್ಲಿರುವ ಟಿವಿ‍ಎಸ್ ಕಂಪನಿಯ ಉತ್ಪಾದನಾ ಘಟಕದಲ್ಲಿ ಉತ್ಪಾದಿಸಲಾಗುತ್ತಿದೆ. ಬಿ‍ಎಂ‍‍ಡಬ್ಲ್ಯು ಉಳಿದ ಸೆಗ್‍ಮೆಂಟ್‍‍ಗಳನ್ನು ಪ್ರವೇಶಿಸಲು ನಿರ್ಧರಿಸಿದ್ದರೂ ಇನ್ನೂ ಅಂತಿಮವಾಗಿಲ್ಲ.

ಪ್ರೀಮಿಯಂ ಬೈಕ್ ಬಿಡುಗಡೆಗೊಳಿಸಲಿದೆ ಟಿವಿ‍ಎಸ್

ಕಳೆದ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಹೊಸೂರಿನಲ್ಲಿರುವ ಟಿವಿ‍ಎಸ್ ಕಂಪನಿಯ ಉತ್ಪಾದನಾ ಘಟಕದಲ್ಲಿ ಬಿ‍ಎಂ‍‍ಡಬ್ಲ್ಯು ಜಿ 310 ಆರ್ ಹಾಗೂ ಜಿ310 ಜಿ‍ಎಸ್ ಬೈಕ್‍‍ಗಳ 50,000 ಕ್ಕೂ ಹೆಚ್ಚು ಯುನಿಟ್‍‍ಗಳನ್ನು ಉತ್ಪಾದಿಸಲಾಗಿದೆ.

ಪ್ರೀಮಿಯಂ ಬೈಕ್ ಬಿಡುಗಡೆಗೊಳಿಸಲಿದೆ ಟಿವಿ‍ಎಸ್

ಟಿವಿ‍ಎಸ್ ಮೋಟಾರ್ ಕಂಪನಿಯ ಅಧ್ಯಕ್ಷ, ಸಿಇ‍ಒ ಹಾಗೂ ಹೆಚ್ಚುವರಿ ನಿರ್ದೇಶಕರಾದ ಕೆ ಎನ್ ರಾಧಾಕೃಷ್ಣರವರು ಮಾತನಾಡಿ, ಬಿ‍ಎಂ‍‍ಡಬ್ಲ್ಯು ಬಗ್ಗೆ ಹೇಳುವುದಾದರೆ, ಬಿ‍ಎಂ‍ಡಬ್ಲ್ಯು ಕಂಪನಿಯು ನಮ್ಮ ಸಹಭಾಗಿತ್ವದ ಖುಷಿಯಾಗಿದೆ. ಈ ಎರಡೂ ಬೈಕ್‍‍ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ.

ಪ್ರೀಮಿಯಂ ಬೈಕ್ ಬಿಡುಗಡೆಗೊಳಿಸಲಿದೆ ಟಿವಿ‍ಎಸ್

ಇದೇ ಪ್ಲಾಟ್‍‍ಫಾರಂನಲ್ಲಿ ನಮ್ಮ ಆರ್‍ಆರ್ 310 ಬೈಕ್ ಅನ್ನು ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಳಿಸಲಾಗಿದೆ. ಮುಂದಿನ ವರ್ಷದ ವೇಳೆಗೆ ಮತ್ತೊಂದು ಹೊಸ ಬೈಕ್ ಅನ್ನು ಟಿವಿ‍ಎಸ್ ಮೋಟಾರ್ ಕಂಪನಿ ಬಿಡುಗಡೆಗೊಳಿಸಲಿದೆ ಎಂದು ಹೇಳಿದರು.

ಪ್ರೀಮಿಯಂ ಬೈಕ್ ಬಿಡುಗಡೆಗೊಳಿಸಲಿದೆ ಟಿವಿ‍ಎಸ್

ಟಿವಿ‍ಎಸ್ ಕಂಪನಿಯ ಹೊಸ ಬೈಕಿನ ವಿನ್ಯಾಸ ಹಾಗೂ ಪವರ್ ಪರ್ಫಾಮೆನ್ಸ್ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗದೇ ಇದ್ದರೂ, ಹೊಸ ಬೈಕ್ ಅಡ್ವೆಂಚರ್ ಸ್ಟೈಲ್ ಹೊಂದಿರಲಿದ್ದು, ಟೂರಿಂಗ್ ಹಾಗೂ ಆಫ್ ರೋಡ್‍‍ಗಳಿಗೆ ಹೊಂದಿಕೊಳ್ಳುವಂತಿರುವ ಸಾಧ್ಯತೆಗಳಿವೆ.

ಪ್ರೀಮಿಯಂ ಬೈಕ್ ಬಿಡುಗಡೆಗೊಳಿಸಲಿದೆ ಟಿವಿ‍ಎಸ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಟಿವಿ‍ಎಸ್ ಕಂಪನಿಯು ಒಳ್ಳೆಯ ಹೆಜ್ಜೆಯನ್ನಿಟ್ಟಿದೆ. ಟಿವಿ‍ಎಸ್ ಕಂಪನಿಯು ಅಪಾಚೆ ಆರ್‍ಆರ್ 310 ಬೈಕ್ ಅನ್ನು ಬಿಡುಗಡೆಗೊಳಿಸಿದಾಗಲೇ ಈ ಹೆಜ್ಜೆಯನ್ನಿಡ ಬೇಕಿತ್ತು. ರಾಯಲ್ ಎನ್‍‍ಫೀಲ್ಡ್, ಕೆಟಿ‍ಎಂ ಹಾಗೂ ಹೀರೊ ಮೋಟೊ‍‍ಕಾರ್ಪ್‍‍ಗಳು ಅಡ್ವೆಂಚರ್ ಬೈಕ್ ಬಿಡುಗಡೆಗೊಳಿಸಿದ್ದರೂ, ಟಿವಿ‍ಎಸ್ ಕಂಪನಿಯು ಬಿಡುಗಡೆಗೊಳಿಸಿರಲಿಲ್ಲ. ಈಗ ಇದರತ್ತ ಗಮನಹರಿಸಿದೆ.

Most Read Articles

Kannada
English summary
TVS to launch new premium motorcycle in 2021. Read in Kannada.
Story first published: Tuesday, February 11, 2020, 17:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X