ಕರೋನಾ ವಾರಿಯರ್‌ಗಳನ್ನು ನಿಯೋಜಿಸಿದ ಟಿವಿಎಸ್

ಲಾಕ್‌ಡೌನ್ ಹಿನ್ನೆಲೆಯಲ್ಲಿ ಟಿವಿಎಸ್ ಮೋಟಾರ್ ಗ್ರೂಪ್ ಅಡಿಯಲ್ಲಿ ಕಾರ್ಯನಿರ್ವಹಿಸುವ ಟಿವಿಎಸ್ ಸಪ್ಲೈ ಚೈನ್ ಸೊಲ್ಯೂಷನ್ಸ್, ದೇಶದಲ್ಲಿ ಅಗತ್ಯವಿರುವ ಸಾಮಗ್ರಿಗಳನ್ನು ಪೂರೈಸಲು ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿದೆ.

ಕರೋನಾ ವಾರಿಯರ್‌ಗಳನ್ನು ನಿಯೋಜಿಸಿದ ಟಿವಿಎಸ್

ಕಂಪನಿಯು ಈ ಸಪ್ಲೈ ಚೈನ್ ಮೂಲಕ ದೇಶಾದ್ಯಂತವಿರುವ ತನ್ನ 65 ಕೇಂದ್ರಗಳಿಂದ ಕಾರ್ಯನಿರ್ವಹಿಸುತ್ತಿದೆ. ಈ ಸಪ್ಲೈ ಚೈನ್ ಮೂಲಕ ಟಿ‌ವಿ‌ಎಸ್ ಕಂಪನಿಯು 1000 ಉದ್ಯೋಗಿಗಳನ್ನು ಕರೋನಾ ವಾರಿಯರ್‌ಗಳನ್ನಾಗಿ ನಿಯೋಜಿಸಿದೆ. ಇದರಲ್ಲಿ ಟಿ‌ವಿ‌ಎಸ್ ಕಪನಿಯಲ್ಲಿ ಕೆಲಸ ನಿರ್ವಹಿಸುವ ನೌಕರರು, ಚಾಲಕರು ಹಾಗೂ ವಿತರಣಾ ಸಿಬ್ಬಂದಿ ಸೇರಿದ್ದಾರೆ.

ಕರೋನಾ ವಾರಿಯರ್‌ಗಳನ್ನು ನಿಯೋಜಿಸಿದ ಟಿವಿಎಸ್

ಈ ಉದ್ಯೋಗಿಗಳು ಕರೋನಾ ವಾರಿಯರ್ಸ್ ಆಗಿ ಕೆಲಸ ನಿರ್ವಹಿಸುತ್ತಾರೆ ಹಾಗೂ ಈ ಸಂಕಷ್ಟದ ಸಮಯದಲ್ಲಿ ಅಗತ್ಯ ವಸ್ತುಗಳನ್ನು ಪೂರೈಸುತ್ತಾರೆ ಎಂದು ಟಿ‌ವಿ‌ಎಸ್ ಕಂಪನಿಯು ಹೇಳಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕರೋನಾ ವಾರಿಯರ್‌ಗಳನ್ನು ನಿಯೋಜಿಸಿದ ಟಿವಿಎಸ್

ಟಿವಿಎಸ್ ಮೋಟಾರ್‌, ಸಿಎಸ್‌ಆರ್ ಸಖಾ ಅಡಿಯಲ್ಲಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ತಾಲ್ಲೂಕು, ಜಿಲ್ಲಾ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿನ ಆರೋಗ್ಯ ಸಾಧನಗಳ ಸೇವೆಗಳ ಹಾಗೂ ಭಾಗಗಳ ನಿರ್ವಹಣೆಯಲ್ಲಿ ಕರ್ನಾಟಕ ಸರ್ಕಾರದೊಂದಿಗೆ ಕಾರ್ಯನಿರ್ವಹಿಸುತ್ತಿದೆ.

ಕರೋನಾ ವಾರಿಯರ್‌ಗಳನ್ನು ನಿಯೋಜಿಸಿದ ಟಿವಿಎಸ್

ಕರೋನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಟಿ‌ವಿ‌ಎಸ್ ಕಂಪನಿಯು ಪ್ರೋಟೆಕ್ಟಿವ್ ಸೂಟ್ ಹಾಗೂ ಮಾಸ್ಕ್‌ಗಳನ್ನು ಪೂರೈಸುತ್ತಿದೆ. ಇದರ ಜೊತೆಗೆ ಕಂಪನಿಯು ಆಸ್ಪತ್ರೆಗಳಿಗೆ ವೆಂಟಿಲೇಟರ್ ಹಾಗೂ ಐಸಿಯುಗಳನ್ನು ಪೂರೈಸುತ್ತಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಕರೋನಾ ವಾರಿಯರ್‌ಗಳನ್ನು ನಿಯೋಜಿಸಿದ ಟಿವಿಎಸ್

ಟಿವಿಎಸ್ ಮೋಟಾರ್ ಹಾಗೂ ಅದರ ಅಂಗಸಂಸ್ಥೆಗಳು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ (ಪಿಎಂ-ಕೇರ್ಸ್) ರೂ. 25 ಕೋಟಿ ದೇಣಿಗೆ ನೀಡಿವೆ. ಇದರ ಜೊತೆಗೆ 5 ಕೋಟಿ ರೂಪಾಯಿಗಳನ್ನು ತಮಿಳುನಾಡು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿವೆ.

ಕರೋನಾ ವಾರಿಯರ್‌ಗಳನ್ನು ನಿಯೋಜಿಸಿದ ಟಿವಿಎಸ್

ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ದೇಶದ ದೊಡ್ಡ ದೊಡ್ಡ ಆಟೋಮೊಬೈಲ್ ಕಂಪನಿಗಳು ಸರ್ಕಾರದೊಂದಿಗೆ ಕೈಜೋಡಿಸಿವೆ. ಕರೋನಾ ವಿರುದ್ಧ ಹೋರಾಡಲು ಟಾಟಾ ಸಮೂಹವು ರೂ.1,500 ಕೋಟಿ ದೇಣಿಗೆ ನೀಡಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕರೋನಾ ವಾರಿಯರ್‌ಗಳನ್ನು ನಿಯೋಜಿಸಿದ ಟಿವಿಎಸ್

ಟಿ‌ವಿ‌ಎಸ್ ಕಂಪನಿಯು ಲಾಕ್‌ಡೌನ್‌ನಿಂದಾಗಿ ಮಾರ್ಚ್ 21ರಿಂದ ಏಪ್ರಿಲ್ 15ರವರೆಗೆ ಇದ್ದ ವಾರಂಟಿ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಿದೆ.

Most Read Articles

Kannada
English summary
TVS deploys 1000 Corona Warriors to support logistic activities. Read in Kannada.
Story first published: Thursday, April 16, 2020, 18:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X